ನುಡಿಗಟ್ಟು ಎಂದರೆ ಒಂದು ವಿಶಿಷ್ಟಾರ್ಥ ನೀಡುವ ಸಂಕ್ಷಿಪ್ತ ಶಬ್ದ. ನುಡಿಗಟ್ಟಿಗೆ ಪಡೆನುಡಿ, ವಾಲ್ಮೀತಿ, ವಾಗ್ದಾರೆ, ಪ್ರಯುಕ್ತತೆ ಎಂಬ ಸಂವಾದಿ ಶಬ್ದಗಳಿವೆ ನುಡಿಗಟ್ಟುಗಳು ಜನತೆಯ ಆಲೋಚನೆ ಮತ್ತು ಭಾವನೆಯ ಪ್ರತೀಕವಾಗಿದೆ. ಇವು ಜನಸಾಮಾನ್ಯರ ಆಡುನುಡಿಯಲ್ಲಿ ಪರಂಪರೆಯಾಗಿ ಬಂದಿವೆ.
ಭಾಷೆಯಲ್ಲಿ ಸಮಯೋಚಿತವಾಗಿ ಬಳಸುವ ನುಡಿಗಟ್ಟು, ನಾಣ್ಣುಡಿಗಳು ದೇವಗಂಗೆಯಂತೆ ಪಾವಿತ್ರ್ಯ, ಪರಿಶುದ್ಧತೆ ಕಾಯ್ದುಕೊಂಡು ಬಂದಂತವುಗಳು. ಸುರಲೋಕದ ಕಲ್ಪವೃಕ್ಷ ಕಾಮಧೇನುಗಳಂತೆ ಆಶಾಪೂರ್ತಿ ಆಗರಗಳು ಎಂದು ಸುನೀತಿಕುಮಾರ ಚಟರ್ಜಿಯವರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡದಲ್ಲಿರುವ ನುಡಿಗಟ್ಟುಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.
| ಅಂತರ್ಲಾಗ ಹಾಕು | ಬಹಳ ಪ್ರಯತ್ನ ಪಡು |
| ಅಗ್ರ ತಾಂಬೂಲ | ಮೊದಲ ಮರ್ಯಾದೆ |
| ಅಜ್ಜಿ ಕತೆ | ಕಟ್ಟುಕತೆ |
| ಅಡಕೆಲೆ ಕೊಡು | ಬೀಳ್ಕೊಡು |
| ಅನ್ನ ಕಿತ್ತುಕೋ | ಜೀವನ ಮಾರ್ಗವನ್ನು ಕೆಡಿಸು |
| ಅವತಾರ ಮುಗಿ | ಶಕ್ತಿ ಪ್ರಭಾವ ಕುಂಠಿತ |
| ಅಳಲೆಕಾಯಿ ಪಂಡಿತ | ನಕಲಿ ವೈದ್ಯ |
| ಅಳೆದು ಸುರಿದು | ಹಿಂದೆ, ಮುಂದೆ ಯೋಚಿಸಿ |
| ಅರೆದು ಕುಡಿಸು | ತಿಳಿಯುವಂತೆ ಹೇಳು |
| ಅನ್ನದ ದಾರಿ | ಬದುಕುವ ಮಾರ್ಗ |
| ಆಟನಡೆ | ಪ್ರಭಾವ ಬೀರು |
| ಆಹುತಿಯಾಗು | ಬಲಿಯಾಗು |
| ಆಕಾಶಕ್ಕೆ ಹಾರು | ಆತ್ಮಾನಂದ ಪಡು |
| ಇಕ್ಕಳ ಹಾಕು | ಒತ್ತಾಯದ ಪ್ರಚೋದನೆ ಮಾಡು |
| ಇತಿಶ್ರೀ | ಮುಕ್ತಾಯದ,ಕೊನೆ |
| ಉರಿ ಹೊತ್ತಿಸು | ತುಂಬಾ ಗಿರಿಸು |
| ಉಪ್ಪಿಲ್ಲ ಹುಳಿಯಿಲ್ಲ | ನೀರಸವಾದುದು |
| ಎಂಜಲಿಗೆ ಕೈಯೊಡ್ಡು | ಹಂಗಿಗೆ ಒಳಗಾಗು |
| ಎತ್ತಿದವರು ಕೈಗೂಸು | ಸ್ವಬುದ್ಧಿಯಿಲ್ಲದ |
| ಎಕ್ಕುಟ್ಟಿ ಹೋಗು | ಹಾಳಾಗು |
100 Nudigattugalu in Kannada PDF Click here
FAQ
Q.1 ನುಡಿಗಟ್ಟು ಎಂದರೇನು?
ನುಡಿಗಟ್ಟು ಎಂದರೆ ಒಂದು ವಿಶಿಷ್ಟಾರ್ಥ ನೀಡುವ ಸಂಕ್ಷಿಪ್ತ ಶಬ್ದ. ನುಡಿಗಟ್ಟಿಗೆ ಪಡೆನುಡಿ, ವಾಲ್ಮೀತಿ, ವಾಗ್ದಾರೆ, ಪ್ರಯುಕ್ತತೆ ಎಂಬ ಸಂವಾದಿ ಶಬ್ದಗಳಿವೆ ನುಡಿಗಟ್ಟುಗಳು ಜನತೆಯ ಆಲೋಚನೆ ಮತ್ತು ಭಾವನೆಯ ಪ್ರತೀಕವಾಗಿದೆ.




