ನಾಮಪದಗಳು ಸಂಪೂರ್ಣ ಮಾಹಿತಿ | Naamapada in Kannada FDA, SDA, KAS, All EXAMES

Naamapada in Kannada : ನಾಮಪದಗಳು ಭಾಷಾ ಬಳಕೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ನಾಮ ಎಂದರೆ ಗುರುತು ಅಥವಾ ಹೆಸರು ಎಂದರ್ಥ. ಹೆಸರನ್ನು ಸೂಚಿಸುವ ಪದಕ್ಕೆ ನಾಮಪದ ಎನ್ನುವರು. ನಾಮಪದ- ಗಳನ್ನುಂಟುಮಾಡುವ ಮೂಲರೂಪವನ್ನು ನಾಮಪ್ರಕೃತಿ ಅಥವಾ ಪ್ರಾತಿಪದಿಕ ಎನ್ನುವರು. ಇಂತಹ ಪ್ರಾತಿಪದಿಕದ ಮುಂದೆ ನಾಮವಿಭಕ್ತಿ ಪ್ರತ್ಯಯಗಳು ಸೇರಿದಾಗ ನಾಮಪದಗಳಾಗುತ್ತವೆ. ನಾಮಪದಗಳು ಪ್ರಾಣಿ, ವಸ್ತು, ಮನುಷ್ಯ ಮೊದಲಾದವುಗಳ ಹೆಸರು ಹೇಳುವ ಶಬ್ದಗಳಾಗಿವೆ.

Naamapada in Kannada

ನಾಮಪದಗಳ ವಿಧಗಳು

  • ವಸ್ತುವಾಚಕ ನಾಮಪದಗಳು
  • ಗುಣವಾಚಕ (ವಿಶೇಷಣಗಳು) ನಾಮಪದಗಳು
  • ಸಂಖ್ಯಾವಾಚಕ ನಾಮಪದಗಳು
  • ಭಾವನಾಮಗಳು

ವಸ್ತುವಾಚಕ ನಾಮಪದಗಳು

ವಸ್ತುವಿನ ಹೆಸರನ್ನು ಸೂಚಿಸುವ ನಾಮಪದಕ್ಕೆ ವಸ್ತುವಾಚಕ ನಾಮಪದಗಳು ಎಂದು ಕರೆಯುತ್ತಾರೆ. ಇದರಲ್ಲಿ ಸಜೀವ ಮತ್ತು ನಿರ್ಜೀವ ವಸ್ತುಗಳೆಲ್ಲವು ಸೇರಿಕೊಳ್ಳುತ್ತವೆ. ರಾಮ, ಕೃಷ್ಣ, ಕೋಳಿ, ಬೆಕ್ಕು, ಕಾವೇರಿ, ಗಂಗಾ, ಆಕಳು, ಎತ್ತು, ಹುಲಿ, ಆನೆ ಇತ್ಯಾದಿಗಳು ಸಜೀವ ವಸ್ತುಗಳಿಗೆ ಉದಾಹರಣೆಗಳಾಗಿವೆ. ಕಲ್ಲು, ನಿರ್ಜಿವ ವಸ್ತುಗಳಿಗೆ ಕಟ್ಟಿಗೆ, ಮಣ್ಣು, ಗುಡ್ಡ – ಇತ್ಯಾದಿ ನಿರ್ಜಿವ ಉದಾಹರಣೆಗಳಾಗಿವೆ.

ವಸ್ತುವಾಚಕ ನಾಮಪದಗಳಲ್ಲಿನ ವಿಧಗಳು

  • ರೂಢನಾಮ
  • ಅಂಕಿತನಾಮ
  • ಅನ್ವರ್ಥನಾಮ

ರೂಢನಾಮ

ಹಿಂದಿನಿಂದಲೂ ರೂಢಿಗತವಾಗಿ ಬಳಕೆಯಲ್ಲಿರುವ ವಸ್ತುಗಳ ಮತ್ತು ಪ್ರಾಣಿಗಳ ಹೆಸರುಗಳಿಗೆ ರೂಢನಾಮ ಎನ್ನುವರು.

ರೂಢನಾಮ ಉದಾಹರಣೆಗಳು :ಊರು, ಕಡಲು, ದೇಶ, ನಕ್ಷತ್ರ, ಮರ, ಹಣ್ಣು, ಮನೆ, ಜಾತ್ರೆ, ದೇವಾಲಯ, ಶಾಲೆ ಇತ್ಯಾದಿ

ಅಂಕಿತನಾಮ

ಒಂದೇ ಜಾತಿಯ ಹಲವು ವಸ್ತುಗಳಲ್ಲಿ, ಪ್ರಾಣಿಗಳಲ್ಲಿ, ವ್ಯಕ್ತಿಗಳಲ್ಲಿ ಒಂದನ್ನೇ ಬೇರೆ ಬೇರೆ ಮಾಡಿ ತೋರಿಸಲು ಇಟ್ಟ ಹೆಸರುಗಳಿಗೆ ಅಂಕಿತನಾಮ ಎನ್ನುವರು. ನದಿ ಎಂಬುದು ರೂಢಿತನಾಮ ಪದವಾದರೆ ಯಾವ ನದಿ, ಗಂಗೆಯೋ. ತುಂಗೆಯೋ, ಗೋದಾವರಿಯೋ ಯಾವುದೆಂಬುದನ್ನು ನಿರ್ದಿಷ್ಟವಾಗಿ ಗುರ್ತಿಸುವ ಹೆಸರನ್ನು ಅಂಕಿತನಾಮ ಎನ್ನುವರು.

ಅಂಕಿತನಾಮ ಉದಾಹರಣೆಗಳು ರಮೇಶ, ಗಿರೀಶ, ಸದಾನಂದ, ಬೆಂಗಳೂರು, ಶಿವಮೊಗ್ಗ, ಭಾಗ್ಯ, ಶಿಲ್ಪಾ, ಸುಧಾರಾಣಿ ಮುಂತಾದವು

ಅನ್ವರ್ಥನಾಮ

ಅರ್ಥಕ್ಕೆ ಅನುಗುಣವಾಗಿ ಉದ್ಯೋಗ, ಗುಣ ಮೊದಲಾದವುಗಳಿಂದ ವಸ್ತುವಿಗೆ ಇಲ್ಲವೆ ವ್ಯಕ್ತಿಗಳಿಗೆ ಬಂದ ಅನ್ವರ್ಥನಾಮಗಳೆನ್ನುವರು. ಹೆಸರುಗಳನ್ನು

ಅನ್ವರ್ಥನಾಮ ಉದಾಹರಣೆಗಳು : ಇಂಜೀನಿಯರ್, ಡಾಕ್ಟರ್, ಕುಂಟ, ಕಿವುಡ, ಜ್ಯೋತಿಷಿ, ವ್ಯಾಪಾರಿ, ಡ್ಯಾನ್ಸರ್, ಸಿಂಗರ್ ಇತ್ಯಾದಿ.

ಗುಣವಾಚಕ ವಿಶೇಷಣಗಳು

ವಸ್ತು, ಪ್ರಾಣಿ, ವ್ಯಕ್ತಿಗಳ ಗುಣ-ಸ್ವಭಾವ-ರೀತಿಗಳನ್ನು ವರ್ಣಿಸುವ ಅಥವಾ ವಿಶೇಷಿಸುವ ಶಬ್ದಗಳನ್ನು ಗುಣವಾಚಕ ವಿಶೇಷಣಗಳೆಂದು ಹೇಳುವರು.
ಗುಣವಾಚಕ ಉದಾಹರಣೆಗಳು : ಕರಿಯ, ಬಿಳಿಯ, ಒಳ್ಳೆಯ, ಕೆಟ್ಟ, ದೊಡ್ಡ, ಚಿಕ್ಕ, ಹಳೆಯ, ಹೊಸತು, ಹಿರಿಯ, ಕಿರಿಯ ಮುಂತಾದವು.

ಸಂಖ್ಯಾವಾಚಕ ವಿಶೇಷಣಗಳು

ಸಂಖ್ಯೆಯನ್ನು ಸೂಚಿಸುವ ಶಬ್ದಗಳನ್ನು ಸಂಖ್ಯಾವಾಚಕಗಳೆಂದು ಕರೆಯುವರು.

ಉದಾ: ಒಂದು ಊರು, ಲಕ್ಷ ದೀಪಗಳು, ಡಜನ್ ಹಣ್ಣು, ನವ ಗ್ರಹಗಳು, ಸಪ್ತರ್ಷಿಗಳು, ಅಷ್ಟದಿಕ್ಷಾಲಕರು ಮುಂತಾದವು.

ಪರಿಮಾಣವಾಚಕ ವಿಶೇಷಣಗಳು

ವಸ್ತುಗಳ ಪ್ರಾಣಿಗಳ ತೂಕ-ಅಳತೆ-ಗಾತ್ರ, ಪರಿಮಾಣಗಳನ್ನು ವರ್ಣಿಸುವ ಶಬ್ದಗಳೇ ಪರಿಮಾಣವಾಚಕಗಳಾಗಿವೆ.
ಪರಿಣಾಮ ವಾಚಕ ಉದಾಹರಣೆಗಳು ಹಲವು, ಕೆಲವು, ಅಷ್ಟು, ಇಷ್ಟು, ಸಣ್ಣದು, ದೊಡ್ಡದು, ಸಮೀಪ, ದೂರ ಮುಂತಾದವು.

ಪ್ರಕಾರವಾಚಕ ವಿಶೇಷಣಗಳು

ವಸ್ತುಗಳ ನಿಜಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳನ್ನು ಪ್ರಕಾರ ವಾಚಕಗ- ಳೆನ್ನುವರು.
ಪ್ರಕಾರವಾಚಕ ಉದಾಹರಣೆಗಳು : ಅಂಥ, ಇಂಥ, ಎಂಥ, ಅಂತವನು, ಇಂತವನು, ಎಂತವನು ಮುಂತಾದವು.

ದಿಗ್ವಾಚಕ ವಿಶೇಷಣಗಳು

ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳನ್ನು ದ್ವಿಗ್ವಾಚಕಗಳೇನ್ನುವರು.
ದಿಗ್ವಾಚಕ ಉದಾಹರಣೆಗಳು: ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ವಾಯುವ್ಯ, ಆತ್ಮೀಯ, ನೈರುತ್ಯ, ಮೇಲೆ, ಕೆಳಗೆ, ಎಡ, ಬಲ, ಹಿಂದೆ, ಮುಂದೆ ಮುಂತಾದವು.

Leave a Reply

Your email address will not be published. Required fields are marked *