Kannada Prabandhagalu [ಕನ್ನಡ ಪ್ರಬಂಧ]
Kannada Prabandhagalu PDF ಪ್ರಬಂಧವು ಗದ್ಯ ಸಾಹಿತ್ಯದ ಒಂದು ಪಕಾರವಾಗಿದೆ. ಪ್ರಬಂಧಗಳನ್ನು ಓದುವುದರಿಂದ ಹಾಗೂ ಬರೆಯುವುದ ರಿಂದ ವಿಷಯ ಮತ್ತು ಭಾಷೆಗಳೆರಡರ ಜ್ಞಾನ ಏಕಕಾಲದಲ್ಲಿ ಲಭಿಸುತ್ತದೆ, ಪ್ರಬಂಧ ಸಾಹಿತ್ಯವು ಸರಳವೂ ಉಪಯುಕ್ತವೂ ಆಗಿದ್ದು, ಸಮಕಾಲೀನ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿ. ಕನ್ನಡದಲ್ಲಿ ಪ್ರಬಂಧ ಬರವಣಿಗೆಯು ಅದರೊಳಗೆ ಮಹತ್ವದ ಸ್ಥಾನವನ್ನು ಹೊಂದಿದೆ. ಈ ಲೇಖನದಲ್ಲಿ, ನಾವು ಕನ್ನಡ ಪ್ರಬಂಧಗಳ ಸಾರ ಮತ್ತು ಪ್ರಾಮುಖ್ಯತೆಯನ್ನು ಅನ್ವೇಷಿಸುತ್ತೇವೆ, ಅವುಗಳ ಸಾಂಸ್ಕೃತಿಕ ಮೌಲ್ಯವನ್ನು ಎತ್ತಿ ತೋರಿಸುತ್ತೇವೆ, ಭಾಷಾ ಪ್ರಾವೀಣ್ಯತೆಯನ್ನು ಬೆಳೆಸುತ್ತೇವೆ ಮತ್ತು ಕನ್ನಡ ಪರಂಪರೆಯ ಸಂರಕ್ಷಣೆಗೆ ಕೊಡುಗೆ ನೀಡುತ್ತೇವೆ. ನೀವು ವಿದ್ಯಾರ್ಥಿಯಾಗಿರಲಿ, ಭಾಷಾಭಿಮಾನಿಯಾಗಿರಲಿ ಅಥವಾ ಕನ್ನಡ ಸಾಹಿತ್ಯದ ಪ್ರಪಂಚವನ್ನು ಅಧ್ಯಯನ ಮಾಡಲು ಉತ್ಸುಕರಾಗಿರುವವರಾಗಿರಲಿ, ನಿಮ್ಮ ಕನ್ನಡ ಪ್ರಬಂಧ ಬರವಣಿಗೆಯ ಪ್ರಯಾಣವನ್ನು ಪ್ರಾರಂಭಿಸಲು ಪ್ರೇರೇಪಿಸಲು, ಶಿಕ್ಷಣ ನೀಡಲು ಮತ್ತು ನಿಮ್ಮನ್ನು ಸಬಲಗೊಳಿಸಲು ಈ ಮಾರ್ಗದರ್ಶಿ ಇಲ್ಲಿದೆ.
ಕನ್ನಡ ಪ್ರಬಂಧದ ಅರ್ಥ :
Kannada Prabandhagalu PDF ಪಬಂಧವು ತರ್ಕಬದ್ಧ ವಾಕ್ಯ ಹಾಗೂ ವಿಚಾರಗಳಿಂದ ಸುಸಂಬದ್ಧವಾಗಿ ಬರೆಯಲ್ಪಟ್ಟ ಬಂಧವೇ ಪ್ರಬಂಧ. ಅಂದರೆ ವಿಚಾರಗಳನ್ನು ಕ್ರಮಬದ್ಧವಾಗಿ ಅರ್ಥಪೂರ್ಣ ವಾಗಿ ಬರೆಯುವುದನ್ನು ಪ್ರಬಂಧ ಎನ್ನುತ್ತೇವೆ. ಒಂದು ನಿರ್ದಿಷ್ಟ ವಿಷಯವನ್ನು ಕುರಿತು ಮಾಹಿತಿಯನ್ನು ಸಂಗ್ರಹಿಸಿ ತನ್ನ ಅನುಭವ ಕಲ್ಪನೆ ಹಾಗೂ ವಿಚಾರಗಳನ್ನು ಬೆರೆಸಿ ಸುಸಂಬದ್ಧ ರೀತಿಯ ಪ್ರೌಢ ಬರವಣಿಗೆಯನ್ನು ಪ್ರಬಂಧ ಎನ್ನಬಹುದು.
ಪ್ರಬಂಧ ರಚನೆಯ ಹಂತಗಳು :
1. ವಿಷಯದ ಆಯ್ಕೆ :
ಪ್ರಬಂಧ ರಚಿಸಲು ಒಂದು ವಸ್ತು ವಿಷಯ ಇರಲೇ ಬೇಕು. ನಮ್ಮ ಆಸಕ್ತಿ ಹಾಗೂ ಅನುಭವಗಳಿಗೆ ನಿಲುಕುವ ವಸ್ತು ವಿಚಾರಗಳನ್ನು ಆಯ್ಕೆಮಾಡಿಕೊಂಡು ಪುಬಂಧವನ್ನು ಬರೆಯಲು ಮುಂದಾಗಬೇಕು. ಪ್ರಬಂಧಕ್ಕೆ ವಿಷಯ ಇಂತಹದೇ ಇರಬೇಕು ಎಂದೇನಿಲ್ಲ. ವ್ಯಕ್ತಿ, ವಸ್ತು, ಪ್ರಾಣಿ, ಪಕ್ಷಿ, ನೆಲ, ಜಲ ಭಾವನೆಗಳು, ಮೌಲ್ಯಗಳು, ಪ್ರಚಲಿತ ಘಟನೆಗಳು, ಸಮಸ್ಯೆಗಳು, ಇತಿಹಾಸ, ವಿಜ್ಞಾನ, ಸಮಾಜ ಯಾವುದಾದರೂ ಆಗಿರಬಹುದು.
2. ಮಾಹಿತಿಯ ಸಂಗ್ರಹಣೆ :
Kannada Prabandhagalu PDF ಪ್ರಬಂಧ ಬರೆಯಲು ವಿಷಯ ಆಯ್ಕೆ ಮಾಡಿಕೊಂಡ ನಂತರ ವಿಷಯಕ್ಕೆ ಪೂರಕವಾದ ಮಾಹಿತಿಗಳನ್ನು ಪುಸ್ತಕಗಳು ಪತ್ರಿಕೆಗಳು, ಅಂತರ್ಜಾಲ, ಸಂದರ್ಶನ ಇಲ್ಲದೆ ಬಿದ್ದು ಸ್ಥಳಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬೇಕು. ಇದರಿಂದ ನಮ್ಮ ವಿಚಾರಗಳಿಗೆ ಇನ್ನೂ ಹೆಚ್ಚಿನ ಪತ್ನಿ ಸಿಕವಾಗುತ್ತದೆ.
3. ವಿಷಯವನ್ನು ಕ್ರಮಬದ ವಾಗಿ ಜೋಡಿಸುವುದು.
Kannada Prabandhagalu PDF ಪ್ರಬಂಧವನ್ನು ಮಾರಕತಿಗಳು ಲಭ್ಯವಾದ ನಂತರ ನಮ್ಮದೇ ಆದ ಶೈಲಿಯಲ್ಲಿ ವಿಚಾರಗಳನ್ನು, ವಿರೂಪಿಸಬೇಕು, ಭಾವ ಮತ್ತು ವಿಷಯಗಳ ಸಮಾಗಮ ಆಗಬೇಕು, ಬರಗುವ ಸಂದರ್ಭದಲ್ಲಿ ಗಾದೆ ಮಾತುಗಳನ್ನು ನುಡಿಗಟ್ಟುಗಳನ್ನು ಹೇಳಿಕೆಗಳನ್ನು ಹಾಗೂ ಚಿಕ್ಕ ಕಥೆ ಹಾಗೂ ಘಟನೆಗಳನ್ನು ಸಂದರ್ಭಾನುಸಾರ ಬಳಸಿಕೊಳ್ಳ ಬೇಕು. ‘ಕಿಡಿ ಪುಬಂಧ ತಮ್ಮ ಸಮ್ಮತ ವಿಚಾರಾನುಭವಗಳನ್ನ ಒಳಗೊಂಡಿರಬೇಕು. ಯಾರೋ ಬರೆದ ಪ್ರಬಂಧವನ್ನು ಕಂಠಪಾಠ ಮಾಡಿ ಬರೆಯುವುದು ಪ್ರಬಂಧ ಅನ್ನಿಸುವುದಿಲ್ಲ, ವರೀಕ್ಷೆಗೂ ಮುನ್ನ ಹಲವು ಸೋಲು ಗೆಲುವುಗಳನ್ನು ಎದುರಿಸುವುದನ್ನು ಕಲಿಯುತ್ತಾರೆ. ಮುಂದೆ ಅವರ ಜೀವನಕ್ಕೆ ಸಹಕಾರಿಯಾಗುತ್ತದೆ. ಯಾವುದಾದರು ಕ್ರೀಡೆಯಲ್ಲಿ ಮಗುವಿಗೆ ಆಸಕ್ತಿಯಿದ್ದರೆ ಆ ನಿಟ್ಟಿನ ಪ್ರೋತ್ಸಾಹ ನೀಡಿದರೆ,ತರಬೇತಿ ಕೊಟ್ಟರೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕೀರ್ತಿಗೂ ಭಾಜನರಾಗುತ್ತಾರೆ.
Kannada AIDS Essays Example – 1
ಏಡ್ಸ್ ಎಂಬ ಮಾರಿ ಪ್ರಬಂದ ಮಾದರಿ -1 ಏಡ್ಸ್ ಎಂದರೆ ಅರ್ಜಿತ ರೋಗ ನಿರೋಧಕ ಶಕ್ತಿಯ ಕೊರತೆಯ ಲಕ್ಷಣ ಕೂಟ’ (Acquired immune Deficinency Syndrome) ಗುಣಪಡಿಸಲಾಗದ ಈ ಕಾಯಿಲೆಗೆ ತುತ್ತಾಗುವವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ. ಈ ಭಯಾನಕ ರೋಗವು ತನ್ನ ಕರಾಳ ಹಸ್ತವನ್ನೂ ಎಲ್ಲೆಲ್ಲೂ ಚಾಚುತ್ತ ಮುಖ್ಯವಾಗಿ ಯುವ ಜನತೆಯನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ. ಪ್ರತಿ ನಿಮಿಷದಲ್ಲಿ ಈ ವ್ಯಾಧಿಗೆ ತುತ್ತಾಗುವವರ ಸಂಖ್ಯೆ ಏರುತ್ತಿದೆಯೆಂದರೆ ಇದೆಂತಹ ಭಯಂಕರ ರೋಗವೆಂಬುದರ ಅರಿವಾಗುತ್ತದೆ. ಪ್ರಪಂಚದಾದ್ಯಂತ ಗಮನಿಸಿದಾಗ ನಮ್ಮ ಭಾರತ ದೇಶ ಈ ವ್ಯಾಧಿ ಪೀಡಿತ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಇದು ನಿಜಕ್ಕೂ ಅಘಾತಕಾರಿಯಾದ ಸಂಗತಿ. ದೇಶದ ಮುಖ್ಯ ಸಂಪನ್ಮೂಲವಾಗಿರುವ ಯುವ ಜನತೆಯು ಅತ್ಯಧಿಕ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದ ವಿಷಾದನೀಯ. ಏಡ್ಸ್ ಒಂದು ಸಾಮಾಜಿಕ ಪಿಡುಗು. ಹೀಗಾಗಿ ಇಡೀ ದೇಶವೇ ಈ ಸಮಸ್ಯೆಯ ನಿವಾರಣೆಗೆ ಪಣ ತೊಟ್ಟು ನಿಲ್ಲಬೇಕಾಗಿದೆ. ಜನಸಂಪರ್ಕದ ವ್ಯಾಪ್ತಿ ದೊಡ್ಡದಾದಷ್ಟೂ ಜೀವನವಿಧಾನದ ಪರಸ್ಪರ ವಿನಿಯಮವೂ ಸಹಜವಾಗುತ್ತದೆ. ಈ ಸಂದರ್ಭದಲ್ಲಿ ವಿವೇಚನೆಯಿಲ್ಲದ ಅನುಸರಣೆ, ಅವಿವೇಕದ ಆಚರಣೆಗಳು ಅನೇಕ ದುರಂತಗಳಿಗೆ ಕಾರಣವಾಗುತ್ತವೆ. ಅವುಗಳಲ್ಲಿ ಮುಖ್ಯವಾದ ‘ಏಡ್ಸ್’ ಬಗೆಗೆ ವಿವರವಾಗಿ ತಿಳಿದುಕೊಳ್ಳಬೇಕಾದುದು ಅತ್ಯವಶ್ಯವಾಗಿದೆ.
“ಏಡ್ಸ್’ – ರೋಗ ಮನುಷ್ಯನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಯನ್ನು ನಾಶ ಮಾಡುತ್ತದೆ. ಅದೂ ನಿಗದಿತ ಅವಧಿಯಲ್ಲಿ ಇದು ನಡೆಯುತ್ತದೆ. ಈ ರೋಗಕ್ಕೆ ಕಾರಣವಾಗುವ ವೈರಸ್‌ಗಳನ್ನು ಹೂಮನ್ ಇಮ್ಯುನ ಡಿಫಿಶಿಯನ್ಸಿ ವೈರಸ್ (ಎಚ್.ಐ.ವಿ.) ಎನ್ನುತ್ತಾರೆ. 1981 ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೊದಲ ಏಡ್ಸ್ ರೋಗಿಯ ಪತ್ತೆಯಾಯಿತು. ಭಾರತದಲ್ಲಿ ಈ ರೋಗ 1986 ರಲ್ಲಿ. ತಮಿಳುನಾಡಿನಲ್ಲಿ ಬೆಳಕಿಗೆ ಬಂದಿತು.
ನಮ್ಮ ದೇಹದಲ್ಲಿನ ರೋಗ ನಿರೋಧಕ ವ್ಯವಸ್ಥೆಯಲ್ಲಿ ಟಿ-ಲಿಂಪೋಸೈಟ್ಸ್ ಮತ್ತು ಬಿ-ಲಿಂಪೋಸೈಟ್ಸ್ ಎಂಬ ಅಂಶಗಳಿರುತ್ತವೆ. ಇವು ದೇಹಕ್ಕೆ ರೋಗವ ನ್ನುಂಟು ಮಾಡುವ ಬ್ಯಾಕ್ಟಿರಿಯಾ, ವೈರಸ್ ಮುಂತಾದ ಕ್ರಿಮಿಗಳನ್ನು ನಾಶಪಡಿಸಿ ನಮ್ಮ ದೇಹವನ್ನು ಗೋಗ ನಿರೋಧಕ ಶಕ್ತಿಯನ್ನು ನೀಡುತ್ತವೆ. ಅಂದರೆ ಹೆಚ್.ಐ.ವಿ.ಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ ಈ ಲಿಂಫೋಸೈಟ್ಸ್‌ಗಳನ್ನು ಒಂದು ಗೊತ್ತಾದ ಅವಧಿಯಲ್ಲಿ ನಾಶಪಡಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ನಷ್ಟವಾಗುತ್ತದೆ. ಸಹಜವಾಗಿಯೇ ಆಗ ಶರೀರ ಯಾವುದೇ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಏಡ್ಸ್ ರೋಗ ಲೈಂಗಿಕ ಸಂಪರ್ಕದಿಂದ ಬರುತ್ತದೆ. ಮುಖ್ಯವಾಗಿ ಸಲಿಂಗಕಾಮಿ ಗಳಲ್ಲಿ ಇದು ಹೆಚ್ಚು. ಎಚ್.ಐ.ವಿ. ಪೀಡಿತ ವ್ಯಕ್ತಿಯ ರಕ್ತ ಮತ್ತು ವೀರ್ಯಗಳಲ್ಲಿ ಈಗ ವೈರಸ್‌ಗಳಿರುತ್ತವೆ. ಹಾಗಾಗಿ ಇಂತಹ ವ್ಯಕ್ತಿಯೊಂದಿಗೆ ಬೇರೆ ವ್ಯಕ್ತಿಯ ರಕ್ತವು ಸೋಂಕಿದಾಗ ಈ ರೋಗ ವರ್ಗಾವಣೆಯಾಗುತ್ತದೆ.
ಏಡ್ಸ್ ರೋಗ ಹರಡುವ ಮತ್ತೊಂದು ಸಾಧ್ಯತೆ ಚಿಕಿತ್ಸಾಲಯಗಳಲ್ಲಿ, ಇಂಜೆಕ್ಸನ್ ಸಿರಿಂಜ್‌ಗಳನ್ನು ‘ಸೈರಿಲೈಸ್’ ಮಾಡದೇ ಬಳಸುವುದರಿಂದ, ಏಡ್ಸ್ ಪೀಡಿತ ರೋಗಿಗಳಿಂದ ರಕ್ತವನ್ನು ತೆಗೆದು ಬೇರೆಯವರಿಗೆ ಕೊಡುವುದರಿಂದ ಕೂಡ ಈ ರೋಗ ಹರಡುತ್ತದೆ.
ಸಲೂನ್‌ಗಳಲ್ಲಿ ಒಂದೇ ಬೇಡನ್ನು ಅನೇಕರಿಗೆ ಬಳಸುವ ಅವೈಜ್ಞಾನಿಕ ಪದ್ಧತಿಯಲ್ಲಿ ಕೂಡ ಈ ಸಂಭವ ಇರುತ್ತದೆ. ರೋಗಪೀಡಿತ ತಾಯಿ, ಗರ್ಭಸ್ಥ ಶಿಶುವಿಗೆ ರೋಗ ವರ್ಗಾವಣೆಗೆ ಕಾರಣಳಾಗುತ್ತಾಳೆ.
ಪದೇ ಪದೇ ಜ್ವರ ಬರುವುದು, ಡಯೇರಿಯಾ, ಶಕ್ತಿ ಹೀನತೆ ಮುಂತಾದ ವಿಶಿಷ್ಟ ಲಕ್ಷಣಗಳಿಂದ ಏಡ್ಸ್ ರೋಗ ತನ್ನನ್ನು ಗುರುತಿಸಿಕೊಳ್ಳುತ್ತದೆ. ಈ ಪಿಡುಗಿನಿಂದ ನಮ್ಮ ಯುವಜನತೆಯನ್ನು ಪಾರು ಮಾಡಲು ನಾವು ಅನೇಕ ಕ್ರಮಗಳನ್ನು ಕೈಕೊಳ್ಳಬೇಕಾಗಿದೆ. ಮೊದಲನೆಯದಾಗಿ ಮುಕ್ತ ಲೈಂಗಿಕ ಜೀವನದ ಅಪಾಯಗಳನ್ನು ಕುರಿತು ಈ ಸೂಕ್ತ ತಿಳುವಳಿಕೆ ನೀಡಬೇಕು. ಈ ನಿಟ್ಟಿನಲ್ಲಿ ಲೈಂಗಿಕ ಶಿಕ್ಷಣವನ್ನು ಶಾಲಾ ಕಾಲೇಜುಗಳಲ್ಲಿ, ಮನೆಗಳಲ್ಲಿ, ಸಮೂಹ ಮಾಧ್ಯಮಗಳಲ್ಲಿ ಒಂದುಮಿತಿಗೆ ಒಳಪಟ್ಟು, ಆದರೆ ಅಗತ್ಯವಿರುವಷ್ಟು ನೀಡುವುದು ಅತ್ಯವಶ್ಯ. ಇಲ್ಲಿ ಯಾವುದೇ ಸಂಕೋಚ ಪಡಬೇಕಾದ ಅಗತ್ಯವಿಲ್ಲ..
ಏಕೆಂದರೆ ಲೈಂಗಿಕ ಸ್ವಚ್ಛಾಚಾರದ ಅನಾಹುತದ ಕಲ್ಪನೆಯಿಲ್ಲದ ಯುವಜನಾಂಗ, ಅಂಧಕಾರದ ಭವಿಷ್ಯದತ್ತ ನಡೆಯು ವುದನ್ನು ತಪ್ಪಿಸುವುದು ಇಲ್ಲಿ ಬಹಳ ಮುಖ್ಯವಾಗಿದೆ. ನಮ್ಮ ಸಮೂಹ ಮಾಧ್ಯಮ ಗಳು ಅನವಶ್ಯಕವಾಗಿ – ಪ್ರೊಚದನಕಾರೀ ಜಾಹೀರಾತುಗಳನ್ನು, ಅಶ್ಲೀಲ ಚಿತ್ರಗಳನ್ನು, ಅಶ್ಲೀಲ ಮಾತುಗಳನ್ನು, ಅಸಭ್ಯ ಉಡುಪುಗಳನ್ನು ಪ್ರದರ್ಶಿಸುವುದನ್ನು ನಿಲ್ಲಿಸಬೇಕು. ಯುವಜನರು ಮುಕ್ತ ಲೈಂಗಿಕ ವ್ಯವಹಾರದತ್ತ ಆಕರ್ಷಿತರಾಗಲು ಇದು ಕಾರಣವಾಗುತ್ತಿದೆ. ಇದು ತಪ್ಪಬೇಕು. ಏಡ್ಸ್ ಒಮ್ಮೆ ಬಂದಿತೆಂದರೆ ಅದಕ್ಕೆ ಚಿಕಿತ್ಸೆಯಿಲ್ಲ. ಅಂದರೆ ಅದರಿಂದ ಬಿಡುಗಡೆಯಿಲ್ಲ. ಆದರೆ ಕ್ರಮಬದ್ಧ ಜೀವನದಿಂದ ಅಂದರೆ ಲೈಂಗಿಕ ಸಂಯಮದಿಂದ, ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡುವುದರಿಂದ ರೋಗ ಉಲ್ಬಣಗೊಳ್ಳುವುದನ್ನು ಮುಂದೂಡಬಹುದು. ರೋಗಿಯ ಜೊತೆಯಲ್ಲಿ ರುವುದರಿಂದ ರೋಗ ಖಂಡಿತ ಬರುವುದಿಲ್ಲ. ಅವರನ್ನು ಪ್ರೀತಿಯಿಂದ ಗಮನಿಸುವ ಕ್ರಿಯೆ ಬಹು ಮುಖ್ಯ. ಇಂಥವರ ಸಂಪರ್ಕದಿಂದ ರೋಗ ಹರಡುವುದಿಲ್ಲ.
ಏಡ್ಸ್ ಎಂಬ ಈ ಭಯಂಕರ ರೋಗದಿಂದ ದೂರವಾಗಲು ಜಗತ್ತಿನಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿ ವರ್ಷ ‘ವಿಶ್ವ ಏಡ್ಸ್ ದಿನ’ ಎಂದು ಡಿಸೆಂಬರ ಒಂದನೇ ದಿನಾಂಕದಂದು ನೆನಪು ಮಾಡಿಕೊಳ್ಳುತ್ತ ಭಾವೀ ಜನಾಂಗವನ್ನು ಈ ಪಿಡುಗಿನಿಂದ ದೂರವಿರಿಸುವ ಎಚ್ಚರಿಕೆಯನ್ನು ವಹಿಸಲಾಗುತ್ತಿದೆ.
ಪ್ರಬಂದ ಮಾದರಿ -2 [ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂದ]
ಪೀಠಿಕೆ : ಒಂದು ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಭಾರತದರತಹ ವೈವಿಧ್ಯತೆಯುಳ್ಳ ರಾಷ್ಟ್ರಗಳಲ್ಲಿ ಏಕತೆಯನ್ನು ತರುವುದು ಇಂತಹ ರಾಷ್ಟ್ರೀಯ ಹಬ್ಬಗಳ ಮೂಲಕ ಸಾಧ್ಯವಿದೆ. “ಇಡಿ ರಾಷ್ಟ್ರದ ಜನರೆಲ್ಲರೂ ಯಾವುದೇ ಭೇಧಭಾವವಿಲ್ಲದೆ, ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆಯನ್ನು ತೊರೆದು ಒಟ್ಟಾಗಿ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳು ಎಂದು ಕರೆಯಬಹುದು.” ನಮ್ಮ ದೇಶದಲ್ಲಿಮೂರು ರಾಷ್ಟ್ರೀಯ ಹಬ್ಬಗಳೆಂದು ಘೋಸಿಸಲಾಗಿದೆ. ಅವುಗಳೆಂದರೆ
- ಸ್ವಾತಂತ್ರ್ಯ ದಿನಾಚರಣೆ
- ಗಣರಾಜ್ಯೋತ್ಸವ
- ಗಾಂಧಿ ಜಯಂತಿ. ವಿಷಯ
1) ಸ್ವಾತಂತ್ರ್ಯ ದಿನಾಚರಣೆ:
ಭಾರತ ಸುಮಾರು ಎರಡು ನೂರು ವರ್ಷಗಳ ಕಾಲ ಬ್ರಿಟೀಷರ ಅಳ್ವಿಕೆಗೆ ಒಳಪಟ್ಟಿತ್ತು. ವ್ಯಾಪಾರದ ಉದ್ದೇಶದಿಂದ ಬಂದ ಬ್ರಿಟೀಷರು ಭಾರತೀಯ ಅರಸರುಗಳ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಭಾರತ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು.ಭಾರತಿಯರಿಗೆ ಸ್ವಾತಂತ್ರ ಎನ್ನುವುದೇ ಇರಲಿಲ್ಲ.ಹಾಗಾಗಿ ಭಾರತೀಯರೆಲ್ಲರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದರಣಕಹಳೆಯನ್ನು ಊದಿ ಕೊನೆಗೆ 1947 ನೇ ಆಗಸ್ಟ್ 15 ರಂದು ಸ್ವಾತಂತ್ರ್ಯವನ್ನು ಪಡೆದರು.ಆ ದಿನವನ್ನು ಪ್ರತಿವರ್ಷ ಭಾರತೀಯರೆಲ್ಲರೂ ಒಟ್ಟಾಗಿ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ ರಾಷ್ಟ್ರೀಯ ಐಕ್ಯತೆಯನ್ನು ಮೆರೆಯುತ್ತಾರೆ. ಅಂದು ಶಾಲಾ-ಕಾಲೇಜು- ಕಛೇರಿಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ ದೇಶಭಕ್ತಿ ಸಾರುವ ಕಾಠ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ.
2) ಗಣರಾಜ್ಯೋತ್ಸವ :
ಭಾರತದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ ಆಡಳಿತದ ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತದೆ. ಆ ರೂಪುರೇಷಗಳನ್ನು ಒಳಗೊಂಡಿರುವುದೇ ನಮ್ಮ ಸಂವಿಧಾನ. ಎಲ್ಲ ರಾಜ್ಯಗಳನ್ನು ಗಣಗಳನ್ನಾಗಿ ಮಾಡಿ (ಒಟ್ಟುಗೂಡಿಸಿ) ಉತ್ತಮವಾದ ಆಡಳಿತ ನಡೆಸಲು ಕಾನೂನುರೂಪ ಪಡೆದ ಸಂವಿಧಾನವನ್ನು ಜನೇವರಿ 26,1950 ರಲ್ಲಿ ಜಾರಿಗೆ ತರಲಾಯಿತು. ಆ ದಿನವೇ ಗಣರಾಜ್ಯ ದಿನ. ಇದನ್ನು ಕೂಡ ನಮ್ಮ ದೇಶದ ಪ್ರಜೆಗಳೆಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಾರೆ.ಈ ದಿನದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಸಂವಿಧಾನದ ನಿರ್ಮಾತೃಗಳು ಹಾಗೂ ತತ್ವಗಳನ್ನು ಸ್ಮರಿಸಿಕೊಳ್ಳುತ್ತಾರೆ. ಪ್ರತಿಯೊಬ್ಬರು ಸಂವಿಧಾನ ಪಾಲಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳುವ ಆಶಯನ್ನು ಪಡೆಯುತ್ತಾರೆ. ಹಾಗೆಯೇ ದೇಶಭಕ್ತಿ ಸಾರುವ ಕಾರ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ.
3) ಗಾಂಧಿ ಜಯಂತಿ :
ಯಾವುದೇ ಒಂದು ದೇಶದ ಜನರೆಲ್ಲರೂ ಒಟ್ಟಾಗಿ ಸೇರಲು ನಾಯಕತ್ವ ಬೇಕು.”ನಾಯಕರಿಲ್ಲದ ನಾವೆ ದಡಸೇರಲಾರದು” ಅಂತೆಯೇ ನಮ್ಮ ದೇಶದ ಸ್ವಾತಂತ್ರ್ಯ ಪಡೆಯಲು ಬಹುಮುಖ್ಯ ನಾಯಕತ್ವವಹಿಸಿಕೊಂಡವರು ನಮ್ಮ ದೇಶದ ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧೀಜಿಯವರು. ಅವರ ಹುಟ್ಟಿದ ದಿನವೇ ಆಕ್ಟೋಬರ್ 2. ಆ ದಿನವನ್ನು ಗಾಂಧಿಜಯಂತಿಯೆಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ.ಏಕೆಂದರೆ ಗಾಂಧೀಜಿವರು ಸ್ವಾತಂತ್ರ್ಯ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡು ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡರು. ಆದ್ದರಿಂದ ಅವರ ಆದರ್ಶಗಳನ್ನು ನೆನೆಯುತ್ತ.ಅವರನ್ನು ಸ್ಮರಿಸುತ್ತಾಸ್ವಾತಂತ್ರ್ಯದ ಮಹತ್ವದಬಗ್ಗೆ ಕೊಂಡಾಡುವ ದಿನವಾಗಿದೆ.
ಉಪಸಂಹಾರ :ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಿಂದ ಪ್ರತಿಯೊಬ್ಬ ನಾಗರಿಕರಲ್ಲಿ ಏಕತೆ. ದೇಶಭಕ್ತಿ, ಸಂವಿಧಾನದ ಮಹತ್ವ, ನಾಯಕತ್ವದ ಮಹತ್ವ ಮುಂತಾದ ವಿಚಾರಗಳನ್ನು ತಿಳಿಯಲು ಮತ್ತು ನಾವು ಅದೇ ರೀತಿ ನಡೆದುಕೊಳ್ಳಲು ನೆರವಾಗುತ್ತದೆ ಎಂಬ ಆಶಯವನ್ನು ಇಟ್ಟುಕೊಳ್ಳೋಣ.
ಪ್ರಬಂದ ಮಾದರಿ -3[ಗ್ರಂಥಾಲಯಗಳ ಮಹತ್ವ ಪ್ರಬಂದ]
ಪೀಠಿಕೆ : “ಗ್ರಂಥಗಳಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ” ನಾಣ್ಣುಡಿಯಂತೆ ಪ್ರತಿಯೊಬ್ಬರು ಗ್ರಂಥಗಳನ್ನು ಹೊಂದಿ ತಮ್ಮಲ್ಲಿ ಆತ್ಮವನ್ನು ಇಟ್ಟುಕೊಳ್ಳಬೇಕು. ಇಂದಿನ ಯುಗದಲ್ಲಿ ಜ್ಞಾನಭಿವೃದ್ಧಿಗೆ ಮತ್ತು ಅಮೂಲ್ಯವಾದ ಸಮಯ ಸದುಪಯೋಗಕ್ಕೆ ಗ್ರಂಥಾಲಯಗಳು ಬಹಳ ಮುಖ್ಯ ಎನಿಸುತ್ತವೆ. ಜ್ಞಾನಾರ್ಜನೆಗೆ ಅಗತ್ಯವಾದ ಗ್ರಂಥಗಳಿರುವ ಆಲಯವೇ ಗ್ರಂಥಾಲಯ. ಅದಕ್ಕೆಂದೇ ಶಾಲಾ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಗ್ರಂಥಾಲಯಗಳು ತೆರೆಯಲ್ಪಟ್ಟಿವೆ.
ವಿಷಯ ವಿವರಣೆ :
ಮಾನವನ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ.ಮನುಷ್ಯನ ದೇಹಕ್ಕೆ ಅನ್ನ, ನೀರು, ಗಾಳಿ ಎಷ್ಟು ಮುಖ್ಯವೋ ಹಾಗೆಯೇ ಮಾನವನ ಮನಸ್ಸಿನ ವಿಕಾಸಕ್ಕೆಪುಸ್ತಕಗಳು ಅವಶ್ಯಕವಾಗಿರುತ್ತವೆ. ಪುಸ್ತಕಗಳು ಆತ್ಮೀಯ ಮಿತ್ರರಿದ್ದಂತೆ ಸದಾ ಒಳ್ಳೆಯ ಯೋಚನೆಗಳಿಗೆ ದಾರಿ ಮಾಡಿಕೊಡುತ್ತವೆ. ಜ್ಞಾನವಿಕಾಸಕ್ಕಾಗಿಯೇ ಸಾರ್ವಜನಿಕವಾಗಿಯು ಮತ್ತು ಶಾಲಾ ಕಾಲೇಜುಗಳಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಇಲ್ಲಿ ಪ್ರತಿಯೊಂದು ವಿಷಯಗಳ ಅಂದರೆ ಸಾಹಿತ್ಯ, ಇತಿಹಾಸ, ಪುರಾಣ, ವಿಜ್ಞಾನ, ತಂತ್ರಜ್ಞಾನ, ಮಕ್ಕಳ ಸಾಹಿತ್ಯ, ಮೊದಲಾದ ವಿಷಯಗಳ ಗ್ರಂಥಗಳನ್ನು ಇಟ್ಟಿರುತ್ತಾರೆ. ಗ್ರಂಥಾಲಯಗಳು ಜ್ಞಾನದ ನಿಧಿಗಳಿದ್ದಂತೆ ಅಂತಹ ಜ್ಞಾನ ನಿಧಿಗೆ ಕೈ ಹಾಕಿ ನಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಓದುವ ಹವ್ಯಾಸವುಳ್ಳವುಳ್ಳವರು ಗ್ರಂಥಾಲಯಗಳನ್ನು ದೇವಾಲಯದಂತೆ ಕಾಣುತ್ತಾರೆ. ಉನ್ನತ ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿಗಳಿಗಂತೂ ಜ್ಞಾನದಾಸೋಹದ ಮನೆಗಳಿದ್ದಂತೆ. ಅಲ್ಲಿ ಜ್ಞಾನವೆಂಬ ಆಹಾರ ಸೇವಿಸುವವರಿಗೆ ಅದರ ರುಚಿ ಅರಿವಾಗುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳಬಹುದು. ಅದಕ್ಕೆಂದೇ ಇ- ಲೈಬ್ರೆರಿಗಳನ್ನು ತೆರೆಯಲಾಗಿದೆ. ಎಲ್ಲ ಪುಸ್ತಕಗಳನ್ನು ಅಂತರ್ಜಾಲಕ್ಕೆ ಸೇರಿಸಲಾಗುತ್ತಿದೆ.
ಉಪಸಂಹಾರ : ಒಟ್ಟಾರೆಯಾಗಿ ಜೀವನದ ನಿಜವಾದ ಮೌಲ್ಯ ಮತ್ತು ಸಾರ್ಥಕತೆಯನ್ನು ತಿಳಿಸಿಕೊಡುವಲ್ಲಿ, ಜೀವನದ ಬಗೆಗೆ ಭರವಸೆಯನ್ನು ತುಂಬುವಲ್ಲಿ ಮತ್ತು ಚಾರಿತ್ರ್ಯವನ್ನು ನಿರ್ವಹಿಸುವಲ್ಲಿ ಪುಸ್ತಕಗಳ ಪಾತ್ರ ಹಿರಿದು. ಇಂತಹ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯದ ಸದ್ಬಳಕೆಯಿಂದ ಸ್ವಯಂ ವ್ಯಕ್ತಿತ್ವ ವಿಕಾಸ ಹಾಗೂ ಶೈಕ್ಷಣಿಕ ಪ್ರಕ್ರಿಯೆಗಳ ಉತ್ತಮ ನಿರ್ವಹಣೆ ಸಾಧ್ಯವಾಗುತ್ತದೆ. ಆದ್ದರಿಂದ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಿ ಕಾಲಕಾಲಕ್ಕೆ ಅದನ್ನು ವಾಸ್ತವಿಕ ನೆಲೆಗಟ್ಟಿಗೆ ತಕ್ಕಂತೆ ವಿಸ್ತ್ರತಗೊಳಿಸುವುದು ನಮ್ಮ ಕರ್ತವ್ಯವಾಗಬೇಕು.
ಪ್ರಬಂದ ಮಾದರಿ -3[ಸಾಮಾಜಿಕ ಪಿಡುಗುಗಳು ಪ್ರಬಂದ]
ಪೀಠಿಕೆ: ಇಂದು ಮಾನವನಿಗೆ ಅತಿ ಅವಶ್ಯಕವಿರುವ ಪರಿಸರ ಹಾಳಾಗುತ್ತಿರುವುದಕ್ಕೆ ವಿವಿಧ ಕಾರಣಗಳಿದ್ದು ಅದರಲ್ಲಿ ಮುಖ್ಯವಾದ ಕಾರಣ ಮಿತಿಮೀರಿದ ಜನಸಂಖ್ಯೆ. ಇದನ್ನಾಧರಿಸಿ ಹುಟ್ಟುವ ಸಮಸ್ಯೆಗಳಲ್ಲಿ “ಸಾಮಾಜಿಕ ಪಿಡುಗುಗಳು” ಮುಖ್ಯವಾಗಿವೆ. ಅಥವಾ ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಅಡ್ಡಿಯನ್ನು ಉಂಟುಮಾಡುವ ಶಕ್ತಿಗಳನ್ನು “ಸಾಮಾಜಿಕ ಪಿಡುಗುಗಳು” ಎನ್ನುವರು. ಸಮಾಜದ ಪ್ರಗತಿಗೆ
ವಿಷಯ ವಿವರಣೆ : ಸಾಮಾಜಿಕ ಪಿಡುಗುಗಳು: ಸಾಮಾಜಿಕ ಪಿಡುಗುಗಳಲ್ಲಿ ಮುಖ್ಯವಾದವುಗಳೆಂದರೆ ಬಡತನ, ನಿರುದ್ಯೋಗ, ಅಜ್ಞಾನ.ಅನಕ್ಷರತೆ,ಜಾತೀಯತೆ, ಸ್ತ್ರೀಶೋಷಣೆ, ಮಾದಕವಸ್ತುಗಳ ಸೇವನೆ” ಮೊದಲಾದವುಗಳು. ಆಜ್ಞಾನಕ್ಕೆ ಆನಕ್ಷರತೆಯೇ ಮುಖ್ಯ ಕಾರಣ. ಅಜ್ಞಾನ ಮತ್ತು ಅನಕ್ಷರತೆಗಳು ಒಂದು ನಾಣ್ಯದ ಎರಡು ಮುಖಳಿದ್ದಂತೆ” ಆಜ್ಞಾನವು ಸಮಾಜವನ್ನು ಅಧಃಪತನದತ್ತ ಕೊಂಡೊಯ್ಯುತ್ತದೆ. ಇವೆರಡು ಇದ್ದ ಕಡೆಗೆ- ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳು ತಲೆದೋರುತ್ತವೆ. ನಮ್ಮ ದೇಶವು ಪುರುಷ ಪ್ರಧಾನ ರಾಷ್ಟ್ರವಾಗಿರುವುದರಿಂದ ಸ್ತ್ರೀ ಭ್ರೂಣಹತ್ಯೆ, ದೇವದಾಸಿ ಪದ್ಧತಿ, ವೇಶ್ಯಾವಾಟಿಕೆ ಮುಂತಾದ ರೂಪದಲ್ಲಿ ಶೋಷಣೆ ಮಾಡುತ್ತಿದ್ದಾರೆ. ಇಂದು ಜಾತೀಯತೆಯ ಆಖಂಡವಾದ ಭಾರತಕ್ಕೆ ಧಕ್ಕೆಯನ್ನುಂಟುಮಾಡುತ್ತಿದೆ. ಇದರಿಂದ ಜನತೆಯಲ್ಲಿ ಅಶಾಂತಿ, ದ್ವೇಷ, ಆರಾಜಕತೆ ಉಂಟಾಗಿ ಐಕ್ಯತೆಗೆ ಧಕ್ಕೆ ಉಂಟಾಗುತ್ತಿದೆ. ಅಸ್ಪೃಶ್ಯತೆಯು ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ಘೋರ ಶಾಪವಾಗಿದೆ. ಜಾತಿಪದ್ಧತಿಯ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿರುವ ಇದು ಸುಲಭವಾಗಿ ನಿರ್ಮೂಲನೆ ಮಾಡಲಾಗದ ಅಂಟುರೋಗವಾಗಿದೆ.
ನಿವಾರಣೋಪಾಯಗಳು : ಯುವಕ-ಯುವತಿಯರು ಮಾದಕ ಪೇಯಗಳ ಹಾನಿಯನ್ನು ಜನರಿಗೆ ತಿಳಿಸುವುದು. ಅವುಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವುದು. ಜನಸಂಖ್ಯಾ ಸ್ಪೋಟವನ್ನು ತಡೆಗಟ್ಟುವುದರಿಂದ ಬಡತನ ದಾರಿದ್ರವನ್ನು ಕಡಿಮೆ ಮಾಡಬಹುದು. ಸ್ತ್ರೀಶೋಷಣೆಯನ್ನು ನಿಲ್ಲಿಸಬೇಕಾದರೆ, ಸ್ತ್ರೀಯರಿಗೆ ಯೋಗ್ಯ ಶಿಕ್ಷಣ ನೀಡಬೇಕು. ಸ್ತ್ರೀಯರಿಗೆ ಪುರುಷರಷ್ಟೆ ಸಮಾನ ಸ್ಥಾನ ಸಿಗುವಂತಾಗಬೇಕು. ಜಾತೀಯತೆಯನ್ನು ಹೋಗಲಾಡಿಸಲು ಶಿಕ್ಷಣ ಸಂಸ್ಥೆಗಳು ಧಾತ್ಮಿಕ ಸಂಘಗಳು ಮಾನವೀಯತೆಯನ್ನು ಬೆಳೆಸುವ ಕಾಠ್ಯಕ್ರಮಗಳನ್ನು ಏರಡಿಸಬೇಕು.
ಉಪಸಂಹಾರ : “ಸಮಾಜದ ಹಿತವೇ ತನ್ನ ಹಿತ” ವೆಂದು ಬದುಕಬೇಕಾದ ಮಾನವನು ಇಂದು ಸಾಮಾಜಿಕ ಪಿಡುಗುಗಳ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ನಲುಗಿ ಹೋಗುತ್ತಿದ್ದಾನೆ. ಇದರಿಂದ ದೇಶದ ಅಭಿವೃದ್ಧಿಗೆ ಮಾರಕಗಳಾಗುತ್ತಿವೆ.ಆದ್ದರಿಂದ ಸಮಾಜ, ಸರಕಾರ, ಮುಖ್ಯವಾಗಿ ಯುವ ಜನಾಂಗವು ಎಚ್ಚೆತ್ತುಕೊಳ್ಳಬೇಕು. ಈ ಪಿಡುಗುಗಳಿಂದ ಆಗುತ್ತಿರುವ ಕೆಡುಕುಗಳನ್ನು ಗ್ರಹಿಸಿ ನಿಗ್ರಹಿಸಲು ಉದ್ಯುಕ್ತರಾಗಬೇಕು. ಹಾಗಾದಾಗ ಮಾತ್ರ ಸ್ವಾಸ್ಥ್ಯ ಸಮಾಜವು ನಿಲ್ದಾಣವಾಗುತ್ತದೆ.
ಪ್ರಬಂದ ಮಾದರಿ -4[ಸ್ವಚ್ಚ ಭಾರತ ಅಭಿಯಾನ ಪ್ರಬಂದ]
ಪೀಠಿಕೆ : ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದು ನಮ್ಮ ಮನೆ ಪರಿಸರದಿಂದಲೇ ಪ್ರಾರಂಭಿಸಬೇಕು.
ವಿಷಯ ವಿವರಣೆ : ಇದು ಕೇಂದ್ರ ಸರರ್ಕಾರದ ಕಾರ್ಯಕ್ರಮವಾಗಿದೆ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರು ಗಂಧೀಜಿಯವರ 145 ನೇ ಜಯಂತಿಯಂದು 2014 ರ ಅಕ್ಟೋಬರ 2 ರಂದು ತಾವೇ ಕಸಗೂಡಿಸುವ ಮೂಲಕ ರಾಜ್ ಘಾಟ್‌ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು 2019 ಅಕ್ಟೋಬರ್ 2 ಒಳಗೆ ಭಾರತವನ್ನು ಕಸಮುಕ್ತಗೊಳಿಸಲು ನಿರ್ಧರಿಸಲಾಗಿದೆ. ನಮ್ಮ ಓಣಿ, ಶಾಲೆ ಕಛೇರಿ ಕಟ್ಟಡ,ಊರು, ನಗರ ಮೊದಲಾದವುಗಳನ್ನು ಸ್ವಚ್ಛಗೊಳಿಸುದು, ಬಯಲು ಶೌಚ ನಿರ್ಮೂಲನೆ ಮಲ ಹೊರುವ ಪದ್ಧತಿಯ ನಿರ್ಮೂಲನೆ, 100% ತ್ಯಾಜ್ಯ ವಸ್ತುವಿನ ನಿರ್ವಹಣೆ ಸಂಪೂರ್ಣ ಕೊಳಗೇರಿಗಳ ನಿರ್ಮೂಲನೆ, ಜನರಲ್ಲಿ ನಿರ್ಮಲೀಕರಣಕ್ಕಗಿ ಮನಸಿಕ ಬದಲಾವಣೆ ಹೀಗೆ ಮೊದಲಾದ ಉದ್ದೇಶಗಳನ್ನು ಇಟ್ಟುಕೊಂಡು ಈ ಅಭಿಯಾನವನ್ನು ಜಾರಿಗೆ ತರಲಾಗಿದೆ.
ಮಾನವನು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸಿ ಬಿಸಾಡುವ ನಿರುಪಯುಕ್ತ ವಸ್ತುಗಳೇ ತ್ಯಾಜ್ಯವಸ್ತುಗಳು. ಇವುಗಳಲ್ಲಿ ಮೂರು ವಿಧ. ಘನತ್ಯಾಜ್ಯವಸ್ತುಗಳು, ದ್ರವತ್ಯಾಜ್ಯವಸ್ತುಗಳು ಮತ್ತು ಅನಿಲತ್ಯಾಜ್ಯ ವಸ್ತುಗಳು, ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಿದ್ದರೆ ಪರಿಸರ ನಾಶವಾಗುತ್ತದೆ.ಮೊದಲ ಹಂತದಲ್ಲಿ ಮನೆ, ಕಚೇರಿ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಲು, ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಲು ಸೂಕ್ತವಾದ ವ್ಯವಸ್ಥೆ ಮಾಡಿಕೊಳ್ಳಬೇಕು.ಮರುಬಳಕೆಗೆ ಯೋಗ್ಯವಾದ ತ್ಯಾಜ್ಯವಸ್ತುಗಳನ್ನು ಮರುಬಳಕೆಗೂ ಮರುಬಳಕೆ ಮಾಡಲಾಗದ ತ್ಯಾಜ್ಯವಸ್ತುಗಳನ್ನು ವೈಜ್ಞಾನಿಕ ರೀತಿಯಲ್ಲಿ ದಹಿಸಿಬೇಕು ಅಥವಾ ಭೂಮಿಯಲ್ಲಿ ಹೂಳಬೇಕು. ಅಮೆರಿಕದಲ್ಲಿ ಪ್ರತಿವರ್ಷ ರಿಸೈಕಲಿಂಗ್ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ.ತ್ಯಾಜ್ಯವಸ್ತುಗಳಿಂದ ಸುಂದರ ಕಲಾಕೃತಿಗಳನ್ನು ತಯಾರಿಸುತ್ತಾರೆ.ನದಿಗಳನ್ನು ದತ್ತು ತೆಗೆದುಕೊಂಡು ತ್ಯಾಜ್ಯವಸ್ತುಗಳು ನದಿಗೆ ಸೇರದಂತೆ ನಿಗವಹಿಸುತ್ತಾರೆ.ವಿಯೆನ್ನಾದಲ್ಲಿ ದಹನಕ್ರಿಯಾ ಸ್ಥಾವರ ನಿರ್ಮಿಸಿರುತ್ತಾರೆ.
ಈ ಪ್ರಬಂದದ ಪಿಡಿಎಫ್ [PDF] ಪಡೆಯಲು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಪ್ರಬಂಧದ ಪಿಡಿಎಫ್ ಫೈಲ್ [PDF] | ಇಲ್ಲಿ ಕ್ಲಿಕ್ ಮಾಡಿ |