Basavanna Vachanagalu in Kannada

Basavanna Vachanagalu in Kannada  ಬಸವಣ್ಣ ಭಾರತೀಯ ಇತಿಹಾಸದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದು, ಅವರ ಆಳವಾದ ತಾತ್ವಿಕ ಬೋಧನೆಗಳಿಗೆ ಮತ್ತು ಸಾಮಾಜಿಕ ಸುಧಾರಣೆಯನ್ನು ಪ್ರತಿಪಾದಿಸುವಲ್ಲಿ ಗಮನಾರ್ಹ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ.

ಭಾರತದಲ್ಲಿ ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ಜನಿಸಿದ ಬಸವಣ್ಣನವರ ಜೀವನ ಮತ್ತು ಪರಂಪರೆಯು ಅವರ ಕ್ರಾಂತಿಕಾರಿ ವಿಚಾರಗಳು ಮತ್ತು ಆಧ್ಯಾತ್ಮಿಕತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಕೊಡುಗೆಗಳೊಂದಿಗೆ ಪೀಳಿಗೆಗೆ ಸ್ಫೂರ್ತಿ ಸ್ಪೂರ್ತಿ ನೀಡುವವರು

<yoastmark class=

ಬಸವಣ್ಣನವರ ಜೀವನ ಪ್ರಾರಂಭವಾದದ್ದು ಬಾಗೇವಾಡಿ ಪಟ್ಟಣದಲ್ಲಿ, ಅವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಅವರು ತೀಕ್ಷ್ಣ ಬುದ್ಧಿಶಕ್ತಿ ಮತ್ತು ಜ್ಞಾನದ ದಾಹವನ್ನು ಪ್ರದರ್ಶಿಸಿದರು, ಧಾರ್ಮಿಕ ಗ್ರಂಥಗಳು ಮತ್ತು ತಾತ್ವಿಕ ಚರ್ಚೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರ ಸಹಜ ಕುತೂಹಲವು ಅಂತಿಮವಾಗಿ ಅಸ್ತಿತ್ವದಲ್ಲಿರುವ ಸಾಮಾಜಿಕ ಶ್ರೇಣಿ ವ್ಯವಸ್ಥೆಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸಲು ಕಾರಣವಾಯಿತು, ಆಧ್ಯಾತ್ಮಿಕ ಪರಿಶೋಧನೆ ಮತ್ತು ಸುಧಾರಣೆಗೆ ಕಿಡಿ ಹೊತ್ತಿಸಿತು.

ಬಸವಣ್ಣನವರ ಆಧ್ಯಾತ್ಮಿಕ ಪಯಣವು ನಿರ್ಣಾಯಕ ತಿರುವು ಪಡೆಯಿತು, ಅವರು ಅಲ್ಲಮಪ್ರಭು ಎಂಬ ಅಲೆದಾಡುವ ಮಾರ್ಮಿಕನನ್ನು ಎದುರಿಸಿದರು. ಈ ಮುಖಾಮುಖಿಯು ಪರಿವರ್ತಕವನ್ನು ಸಾಬೀತುಪಡಿಸಿತು, ಬಸವಣ್ಣನನ್ನು ದೈವಿಕ ಸತ್ಯಗಳ ಆಳವಾದ ಆತ್ಮಾವಲೋಕನದ ಪರಿಶೋಧನೆ ಮತ್ತು ಧಾರ್ಮಿಕ ಸಿದ್ಧಾಂತದ ನಿರಾಕರಣೆಗೆ ಪ್ರೇರೇಪಿಸಿತು. ಅವರ ಅನುಭವಗಳು ಭಗವಾನ್ ಶಿವನ ಮೇಲಿನ ಭಕ್ತಿ ಮತ್ತು ಅವರ ಆಳವಾದ ಒಳನೋಟಗಳನ್ನು ತಿಳಿಸಲು ವಚನ (ಗದ್ಯ-ಕವಿತೆ) ಅಭಿವ್ಯಕ್ತಿಯ ರೂಪವನ್ನು ಅಳವಡಿಸಿಕೊಂಡಿದ್ದರು

ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ, ತಂದೆ
“ಅಮೂಲ್ಯವನ್ನು ಆ ಪ್ರಮಾಣನು ಅಗೋಚರ ಲಿಂಗವು
ಆದಿಮಧ್ಯಂತರವಿಲ್ಲದ ಲಿಂಗವು ಸ್ವಾತಂತ್ರ್ದಿಂದ ಸ್ವಾತಂತ್ರಲಿಂಗವು;
ಸುತ್ತಿಸುಳಿದು ನೋಡದಂತೆ ಕುರುಡನ ಮಾಡಯ್ಯಾ, ತಂದೆ ;
ಮತ್ತೋಂದ ಕೇಳಂದತೆ ಕಿವುಡನ ಮಾಡಯ್ಯಾ ತಂದೆ ;
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ;
ಇರಿಸು ಕೂಡಲ ಸಂಗಮದೇವಾ”

ವಚನದ ಅರ್ಥ :

ಕೂಡಲಸಂಗಮ ದೇವರನ್ನು ಯೋನಿಯಲ್ಲಲ್ಲ ಸ್ವತಂತ್ರವಾಗಿ ಜನಿಸಿದವನು ಎಂಬುವನು ಈ ವಚನದಲ್ಲಿ ಅಣ್ಣ ಅರುಹಿದ್ದಾರೆ “ಕೂಡಲಸಂಗಮದೇವ ನೀನು ಅಮೂಲ್ಯನು ಅಂದರೆ ಅತ್ಯಂತ ಬೆಳೆ ಉಳ್ಳವನು ಅಳತೆ ಮೀರಿದ ಅಸೀಮ ಲಿಂಗನು, ಆದಿ ಮಧ್ಯ, ಅಂತ್ಯ ಯಾವುದಕ್ಕೂ ನಿಲುಕದ ಸ್ವತಂತ್ರ ಲಿಂಗನು, ನಿತ್ಯನಿರ್ಮಲ ಲಿಂಗ ಎನಿಸಿದ ನೀನು ಯೋನಿಯಿಂದ ಜನಿಸಿ ಬಂದವನಲ್ಲ. ಸ್ವತಂತ್ರವಾಗಿ ಜನಿಸಿ ಬಂದವನು ”

ವೇದಕ್ಕೆ ಒರೆಯಕ ಟ್ಟುವೆ. ಶಾಸ್ತ್ರಕ್ಕೆ ನಿಗಳವ ನಿಕ್ಕುವೆ

“ವೇದಕ್ಕೆ ಒರೆಯ ಶಾಸ್ತ್ರಕ್ಕೆ ನಿಗಳವನಿಕ್ಕುವೆ. ತರ್ಕದ ಬೆನ್ನ ಬಾರನೆತ್ತುವೆ.

ಅಗಮದ ಮೂಗ ಕೊಯ್ದ ನೋಡಯ್ಯ ಮಹಾದಾನಿ 

ಕೂಡಲಸಂಗಮದೇವಾ, ಮಾದರ ಚೆನ್ನಯ್ಯ ಮನೆಯ ನಾನಯ್ಯ 

 

ವಚನದ ಅರ್ಥ : 

ವೇದಕ್ಕೆ ಅರ್ಥವನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇದ್ದ ಹಲವರು ವೈದಿಕರ ವಾದವನ್ನು ಕಂಡು, ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾ “ಅಣ್ಣ” ನವರು ಹೀಗೆ ನಡಿದ್ದಾರೆ “ ವೇದಕ್ಕೆ ಕತ್ತಿ ಒರೆಯನ್ನ ಕಟ್ಟುವೆ. ಶಾಸ್ತ್ರಕ್ಕೆ ಸಂಕೋಲೆಯನ್ನು ಬಂಧಿಸುಂವೆ. ತರ್ಕಶಾಸ್ತ್ರದ ಬೆನ್ನ ಭಾರವನ್ನೆತ್ತವೆ. ಆಗಮದ ಮೂಗನ್ನೇ ಕೊಯ್ದುಹಾಕುವೆ. ಕೂಡಲಸಂಗಮದೇವಾ, ನಾನು ಎಷ್ಟಾದರೂ ಮಾದಾರ ಚೆನ್ನಯ್ಯನ (ಪರಮಶಿವಶರಣನ  ಮನೆಯ ಮಹನಲ್ಲವಾ ?”

ನೀನೊಲಿಯಿತ್ತೇ ಪುಣ್ಯ, ನೀನೊಲ್ಲದುದೇ ಪಾಪ ಕಂಟಯ್ಯಾ.

ನೀನೊಲಿಯಿತ್ತೇ ಪುಣ್ಯ, ನೀನೊಲ್ಲದುದೇ ಪಾಪ ಕಂಟಯ್ಯಾ 

ಸಕಲ ಜಗದೊಳಗೆ ಅನುಶೃತವಾಗಿಪ್ಪೆನಯ್ಯಾ; ನೀನೊ  

 

ವಚನದ ಅರ್ಥ : 

ವೇದಕ್ಕೆ ಅರ್ಥವನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇದ್ದ ಹಲವರು ವೈದಿಕರ ವಾದವನ್ನು ಕಂಡು, ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾ “ಅಣ್ಣ” ನವರು ಹೀಗೆ ನಡಿದ್ದಾರೆ “ ವೇದಕ್ಕೆ ಕತ್ತಿ ಒರೆಯನ್ನ ಕಟ್ಟುವೆ. ಶಾಸ್ತ್ರಕ್ಕೆ ಸಂಕೋಲೆಯನ್ನು ಬಂಧಿಸುಂವೆ. ತರ್ಕಶಾಸ್ತ್ರದ ಬೆನ್ನ ಭಾರವನ್ನೆತ್ತವೆ. ಆಗಮದ ಮೂಗನ್ನೇ ಕೊಯ್ದುಹಾಕುವೆ. ಕೂಡಲಸಂಗಮದೇವಾ, ನಾನು ಎಷ್ಟಾದರೂ ಮಾದಾರ ಚೆನ್ನಯ್ಯನ (ಪರಮಶಿವಶರಣನ  ಮನೆಯ ಮಹನಲ್ಲವಾ ?”

ಗುರುಲಿಂಗ ಜಂಗಮದಿಂದೆ ಪಾದೋದಕ ಪ್ರಸಾದವಾಯಿತು

ಗುರುಲಿಂಗ ಜಂಗಮದಿಂದೆ ಪಾದೋದಕ ಪ್ರಸಾದವಾಯಿತ್ತು.

ಆ ಭಾವನೆ ಮಹಾನುಭಾವನಾಗಿ ಎನಗೆ ಮತ್ತೆ ಬೇರೆ ಪ್ರಸಾದವೆಂಬುದಿಲ್ಲ

ಕೂಡಲಸಂಗಮದೇವಾ.  

 

ವಚನದ ಅರ್ಥ : 

ನಿಜವಾದ ಪ್ರಸಾದವು ಶಿವಶರಣನಿಗೆ ಯಾವುದು ?ಎಂಬುವುದರ ಬಗ್ಗೆ ಹೀಗೆ ತಿಳಿಯುತ್ತಿದ್ದಾರೆ. “ಗುರುದೇವರು,  ಜಂಗಮದೇವರು, ಲಿಂಗದೇವರು, ಕೃಪೆಯಿಂದ ನನಗೆ ಪಾದೋದಕ ಪ್ರಸಾದ ಲಭ್ಯವೆನಿಸಿತು. ಕೂಡಲಸಂಗಯ್ಯನ ಈ ಭಾವವೇ ನನ್ನಲ್ಲಿ “ಮಹಾನುಭಾವ” ಆಗಿದೆ ಇದೇ ಅತಿ ಶ್ರೇಷ್ಠ ರೀತಿಯ ಪ್ರಸಾದ ಇದರಲ್ಲಿ ವಿನಃ ನನಗೆ ಬೇರೆ ಯಾವ ಪ್ರಸಾದವು ರುಚಿಸದು” 

 

ಉರಿತಾಗದ ಮೃಗವು ಒಂದಡಿಯ ನೀಡುವುದೆ ಅಯ್ಯ ?

“ಉರಿತಾಗದ ಮೃಗವು ಒಂದಡಿಯ ನೀಡುವುದ ಅಯ್ಯ ?

ತಾನು ತಾಗಿದ ಸುಖವು ಹಗಲುವುದೇ ?

ಕೂಡಲ ಸಂಗಮ ಶರಣ ಅನುಭವ ಅರಿದವರ ಮರಳಿ ಮರ್ತ್ಯರೆನ್ನಬಹುದು ?

 

ವಚನದ ಅರ್ಥ : 

ಶರಣರ ಅನುಭಾವದ ಅರಿವನ್ನು ಅತಿ ಸೂಕ್ಷ್ಮ ರೀತಿಯಲ್ಲಿ ಚಿಂತನಾರ್ಹ ರೀತ್ಯ ‘ಅಣ್ಣ’ನವರು ತಿಳಿದಿದ್ದಾರೆ. “ ಕೂಡಲಸಂಗಮದೈವಾ, ಬೆಂಕಿಯ ಉರಿ ತೆಗಿಲಿದ ಪ್ರಾಣಿ ಬಂದು ಹೆಜ್ಜೆ ಯಾದರೂ ಮುಂದಿಡಲು ಸಾಧ್ಯವೇ ? (ಎಂದಗೂ ಇಲ್ಲ) ಶರೀರ ಸಂಪರ್ಕದಿಂದ ಪ್ರಾಪ್ತವಾದ ಶಾಶ್ವತ ಸುಖವು ಅಗಲಿ ಹೋಗುವುದೇ ? (ಎಂದಿಗೂ ಇಲ್ಲ) ಹಾಗೆಯೆ ಶರಣರ ಅನುಚಾರವನ್ನು ಅರಿತವರನ್ನು ಮತ್ತೆ ಮರ್ತ್ಯಲೋಕದವರೆನ್ನಲೂ ಸಹ ಸಾಧ್ಯವಿಲ್ಲ (ಶಿವನ ಸನ್ನಿಧಿಯಲ್ಲೇ ಅಂತಹವರು ನೆಲೆಸುವರು) ”

 

ಶ್ವಾನಜ್ಞನ

“ನೂರು ನೂದಿ ನೂರು ಕೇಳಿದರೇನು ?

ಆಸೆ ಹರಿಯದು, ರೋಷ ಬಡದು.

ಮಜ್ಜಕ್ಕೆರೆದು ಫಲವೇನು ?

ಮಾತಿನಂತೆ ಮನವಿಲ್ಲದ ಜಾತಿ ಡೊಂಬರ ನೋಡಿ,

ನಗುವ ನಮ್ಮ ಕೂಡಲಸಂಗಮ ದೇವಾ

 

ವಚನದ ಅರ್ಥ : 

ನೂರಾರು ಶಾಸ್ತ್ರಪುರಾಣಗಳನ್ನು ಎಷ್ಷೇ ಓದಿದರೆ ತ್ತಾನೆ ಎನು ? ಕೇಳಿದರೆ ತಾನೆ ಏನು ? , ಯಾವ ಸತ್ಫಲವೂ ಲಭಿಸದು. ಅಂತ ಕಾರ್ಯದಿಂದ ಅಳಿಯದು,  ಕೋಪ ಕುಂದದು. ಕೆಲವು ಅಭ್ಯಂಜನ ಸ್ನಾನಕ್ಕಾಗಿ ನೆರೆ ನೀರೆರೆದರೆ  ಏನು ತಾನಿ ಸುಖ 

 

ಕರಿಫನ ಅಂಕುಶ ಕಿರಿದೆನ್ನಬಹುದೇ ? ಬಾರದಯ್ಯಾ, ಗಿರಿಘನವಜ್ರ 

ಕಿರಿದೆನ್ನಬಹುದೆ ? ಬಾರದಯ್ಯಾ. ತಮ೦ದ ಘನಜ್ಯೋತಿ

ಕಿರಿದೆನ್ನಬಹುದೆ ? ಬಾರದಯ್ಯಾ, ಮರಹುಘನ ನಿಮ್ಮ ನೆನೆವ ಮನ 

ಕಿರಿದೆನ್ನಬಹುದೆ ? ಬಾರದಯ್ಯ, ಕೂಡಲ ಸಂಗಮದೇವಾ.”

 

ವಚನದ ಅರ್ಥ : ಮನಸ್ಸೆಂಬ ಮದಗಜವನ್ನು ದೇವನೆಂಬ ಮಾವುತನ ಕೈಲಿರುವ ಅಂಕುಶವು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಹಾಗನ್ನಲಾಗದು. ಪರ್ವತವನ್ನೇ ಸೀಳುವ ವಜ್ರವನ್ನು ಕಿರಿದು ಅಂದರೆ ಅಲ್ಲ ಎಂದು ಭಾವಿಸಲಾಗುವುದೆ ? ಆಗದು. ದೇವಾ, ನೀನು ಅಜ್ಞಾನ ಎಂಬ ಕಾರ್ಗತ್ತಲೆಯನ್ನು ಹೋಗಲಾಡಿಸುವ ದೀಪ, ನಿನ್ನನ್ನು ಕಿರಿದು ಎಂದು ಕಡೆಗಣಿಸಲು ಸಾಧ್ಯವೇ ? ಎಂದಿಗೂ ಇಲ್ಲ. ಇನ್ನು ಮೈಮರೆಯುವಿಕೆಯ ಕಾರಣ ಉಂಟಾಗುವ ಮಾಯೆಯ ಉಪಟಳದಿಂದ ದೂರಮಾಡುವ, ನಿನ್ನನ್ನೇ ಸ್ಮರಿಸುವ ಮನಸ್ಸನ್ನು ಕಿರಿದೆನ್ನಲು ಸಾಧ್ಯವೇ ? ಎಂದಿಗೂ ಸಾಧ್ಯವಿಲ್ಲ. ತಂದೆ !

”ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ, ತಂದೆ; 

ಸುತ್ತಿಸುಳಿದು ನೋಡದಂತೆ ಕುರುಡನ ಮಾಡಯ್ಯಾ, ತಂದೆ.

ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ, ನಿಮ್ಮ ಶರಣರ 

ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಸು ಸಂಗಮದೇವಾ” ಕೂಡಲ 

 

ವಚನದ ಅರ್ಥ : 

ದೇವರ ನೆಲೆಯಿಂದ ದೂರವಾಗಲು ಪಂಚೇಂದ್ರಿಯಗಳಿಂದ ಕೂಡಿದ ಮಾನಸಿಕ ವಿಕಾಂತಗಳೇ ಕಾರಣ, ಆದ್ದರಿಂದ ಮನೋನಿಗ್ರಹ ಶಕ್ತಿಯನ್ನು ಸಮರ್ಥರೂಪದಲ್ಲಿ ದಯಪಾಲಿಸಲು ಬಸವಣ್ಣನವರು ಬಸವಳಿದು ಪ್ರಾರ್ಥಿಸುತ್ತಿದ್ದಾರೆ.

‘ಅಯ್ಯಾ, ನನ್ನ ಮುದ್ದು ಸಂಗಯ್ಯಾ, ಮನಸ್ಸು ಚಾಂಚಲ್ಯದಿಂದ ಕಣ್ಣುಗಳ ಮೂಲಕ ಮಾಯೆಯ ಅತ್ತಿತ್ತ ನೋಡುತ್ತಾ, ನಿನ್ನ ನೆಲೆಯಿಂದ ಅಲುಗದಂತೆ ಕುರುಡನನ್ನಾಗಿ ಮಾಡು. ಅತ್ತಿತ್ತ ಮನೋವಿಕಾರತೆಗಳು ಮೂಡುವ ವಿಷಯಲಾಲಸೆಗಳೆಡೆಗೆ ಕಾಲುಗಳು ಹೋಗದಂತೆ ನನ್ನನ್ನು ಕುಂಟನನ್ನಾಗಿ ಮಾಡು. ನಿನ್ನ ಸ್ಮರಣೆಯ ಧ್ವನಿಯನ್ನಲ್ಲದೆ ಬೇರೇನನ್ನೂ ಕೇಳದಂತೆ ನನ್ನನ್ನು ಕಿವುಡನನ್ನಾಗಿ ಮಾಡು. ಹೀಗೆ ನಿನ್ನ ಧ್ಯಾನದಲ್ಲಿ ಭಂಗತರುವ ವಿಕಾರಗಳಾವುವೂ ಉಂಟಾಗದ ರೀತಿಯಲ್ಲಿ ಹಿಂಗಟ್ಟು -ಮುಂಗಟ್ಟು ಬಿಗಿದು, ನಿನ್ನಲ್ಲೇ ನನ್ನ ಚಾಂಚಲ್ಯ ಚಿತ್ರವು ಸದಾ ಸ್ಥಿರಗೊಂಡಿರುವಂತೆ, ಕೂಡಲಸಂಗಯ್ಯಾ, ಮಾಡಯ್ಯಾ,

“ನೀನೊಲಿದರೆ ಕೊರಡು ಕೊನರುವುದಯ್ಯಾ; 

ನೀನೊಲಿದರೆ ಬರಡು ಹಯನಹುದಯ್ಯಾ. 

ನೀನೊಲಿದರೆ ವಿಷವೇ ಅಮೃತವಹುದಯ್ಯಾ,

ನೀನೊಲಿದರೆ ಸಕಲ ಪಡಿಪದಾರ್ಥ ಇದರಲ್ಲಿರ್ಪುವು ಕೂಡಲ ಸಂಗಮದೇವಾ.”

 

ವಚನದ ಅರ್ಥ :

“ಮೂಕಂ ಕರೋತಿ ವಾಚಾಳಂ, ಪಂಘಂ ಲಂಘ ಗಿರಿ’ ಎಂಬ ಸಂಸ್ಕೃತ ಸುಭಾಷಿತದ ಅಂತರಾರ್ಥವನ್ನು ಬಸವಣ್ಣನವರು ಈ ವಚನದಲ್ಲಿ ದೇವರ ಕೃಪೆ ಒದಗಿದರೆ ಏನೆಲ್ಲಾ ಸುಲಭರೂಪದಲ್ಲಿ ಸಾಧ್ಯ ಆಗುವುದು ಎಂಬುದನ್ನು ಆಡುಮಾತಿನಲ್ಲಿ ಹೃದ್ಯವೆನಿಸುವಂತೆ ಹೀಗೆ ತಿಳಿಸಿದ್ದಾರೆ.

“ನನ್ನ ಅಚ್ಚುಮೆಚ್ಚಿನ ಆರಾಧ್ಯದೇವನಾದ ಕೂಡಲ ಸಂಗಯ್ಯನೇ, ನಿನ್ನ ಈ ಶಂಕರನಿಗೆ ಒಲಿದರೆ ಅಂದರೆ ಮೆಚ್ಚುಗೆ ಆದರೆ ಒಣಗಿದ ಮರದ ತುಂಡೂ ಸಹ ಜೀವಂತಗೊಂಡು, ಚಿಗುರೊಡೆಯುವುದು, ನಿನ್ನ ಕರುಣೆಯ ಕೃಪಾಕಟಾಕ್ಷ ಉಂಟಾದರೆ ಗೊಡ್ಡು ಅಂದರೆ ಬಂಜೆಯಾದ ಹಸುವೂ ಸಹ ಕರು ಹಾಕಿ, ಅಮೃತದಂತಹ ಹಾಲಿನ ಧಾರೆ ಹರಿಸುವುದು, ನಿನ್ನ ಮೆಚ್ಚುಗೆಗೆ ನನ್ನಂತಹ ದೀನನು ಪಾತ್ರನಾದರೆ ಅವನ ಪಾಲಿಗೆ ವಿಷವೂ ಅಮೃತ ಆಗುವುದು. ಆದ್ದರಿಂದ ಐಹಿಕ-ಪಾರಮಾರ್ಥಿಕ ಸಕಲ ಸಂಪತ್ತೂ ನಿನ್ನ ಒಲುಮೆಯಿಂದಲೇ ಎಂತಹವರಿಗೂ ಲಭ್ಯ.”

ಇಂದಿಗೆಂತು ನಾಳೆಗೆಂದು ಎಂದು ಬೆಂದೊಡಲ ಹೊರೆಯ ಹೋಯಿತೆನ್ನ ಸಂಸಾರ ! 

ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲಾ. ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿ ಇಲ್ಲಾ.

ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೇ ಕೊಂದುದಯ್ಯಾ ಈ ಮಾಯೆ ಕೂಡಲ ಸಂಗಮದೇವಾ” 

 

ವಚನದ ಅರ್ಥ 

ಮಾಯೆಯ ಹಿಡಿತದಲ್ಲಿ ಮಾನವನು ಇಳಿಯುವ ದುಸ್ಥಿತಿಯ ಬಗ್ಗೆ ಬಸವಣ್ಣನವರು ಈ ರೀತಿ ತಮ್ಮನ್ನೇ ಉದಾಹರಣೆಯಾಗಿ ತೆಗೆದುಕೊಂಡು ಈ ರೀತಿ ಬಣ್ಣಿಸಿದ್ದಾರೆ

“ದಿನಗಳು ಕಳೆದಂತೆಲ್ಲಾ ಆಯುಷ್ಯವು ಕ್ಷೀಣಿಸುತ್ತಿದ್ದರೂ ಬೆಂದ ಹೊಟ್ಟೆಯನ್ನು ತುಂಬಿಸಿಕೊಳ್ಳುವ ತವಕಪದ ವ್ಯಸನದಲ್ಲಿ ಇಂದು ಹೊಟ್ಟೆಹೊರೆಯುವುದು ಹೇಗೆ ? ನಾಳೆ ಹೇಗೆ ? ಎಂದು ತೋಳಾಡುವುದರಲ್ಲೇ ಆಯುಷ್ಯವೆಲ್ಲಾ ಕಳೆದುಹೋಯಿತು. ಎಷ್ಟೋ ಯೋನಿಗಳಲ್ಲಿ ಹುಟ್ಟಿ ಬಂದಿದ್ದರೂ, ಈ ಲೌಕಿಕ ಪಿಪಾಸೆಗೆ ಅಸಹ್ಯಪಡದೆ, ಮುಕ್ತಿ-ಮೋಕ್ಷದ ಬಗ್ಗೆಯೇ ಒಂದಿನಿತೂ ಚಿಂತಿಸಲು ಬಿಡದೆ, ಈ ಮಾಯ ಹಿಂಸಿಸುತ್ತಿದೆ. ಪರಶಿವನನ್ನು ಸ್ಮರಿಸಲೂ ಅವಕಾಶ ಕೊಡದೆ ನನ್ನನ್ನು ಒಂದೇ ಸಮನೆ ಕಾಡುತ್ತಾ ಕೊಲ್ಲುವುದೇ ಕೂಡಲ ಸಂಗಮದೇವಾ, ಈಗ ಇಂತಹ ಅಸಹಾಯಕತೆಯಲ್ಲಿ ನಾನೇನು ಮಾಡಲಿ ? ಮುಕ್ತಿ ಮಂಟಪಕ್ಕೆ ನನ್ನನ್ನು ಕೊಂಡೊಯ್ಯುವವನು ನೀನೇ ತಾನೇ ?”

 

”ಆಸೆ ಎಂಬ ಪಾಶದಲ್ಲಿ ಭವಬಂಧನವಾಗಿರ್ದೆನಯ್ಯಾ, 

ಸಕ್ಕತು ನಿಮ್ಮ ನೆನೆಯಲೆನಗೆ ತೆರಹಿಲ್ಲವಯ್ಯಾ! 

ಕರುಣಾಕರಾ, ಅಭಯಕರಾ ವರದಾನಿ ಕರುಣಿಸಯ್ಯಾ,

ಸಂಸಾರ ಬಂಧನವನು ಮಾಣಿಸೆನಗೆ ಕೃಪೆ ಮಾಡಿ 

ನಿಮ್ಮ ಶ್ರೀಪಾದ ಪದ್ಯದಲ್ಲಿ ಭ್ರಮರನಾಗಿರಿಸು ಭಕ್ತಜನ ಮನೋವಲ್ಲಭಾ, 

ಕೂಡಲಸಂಗಮದೇವಾ” 

 

ವಚನದ ಅರ್ಥ

ಪ್ರಾಪಂಚಿಕ ಆಶೆ ಎಂಬ ಪಾಠದಿಂದ ಸಂಸಾರದಲ್ಲಿ ಸಿಕ್ಕಿಬಿದ್ದಾಗ ನೋವನ್ನು ಮನೋಜ್ಞ ರೀತಿಯಲ್ಲಿ ಬಸವಣ್ಣನವರು ಆಗುವ ಬಣ್ಣಿಸಿದ್ದಾರೆ

“ಅಯ್ಯಾ, ಕೂಡಲ ಸಂಗಮದೇವಾ, ನಾನು ಈ ಪ್ರಪಂಚವೆಂಬ ಆಸೆಯ ಸರಪಳಿಯಿಂದ ಬಿಗಿಯಾಗಿ ಬಂಧಿಸಲ್ಪಟ್ಟಿದ್ದೇನೆ. ತಡೆಯಲಾರದ ಮನೋವ್ಯಥೆಯ ವಿಕಾರತೆಯ ಕಾರಣ ನಿಮ್ಮನ್ನು ಸ್ಮರಿಸಲೂ ಸಹ ನನಗೆ ಕಿಂಚಿತ್ತೂ ಅವಕಾಶವೇ ಇಲ್ಲ. ಕರುಣಾಕರನೇ, ಭಯ ನಿವಾರಕನೇ, ಬೇಡಿದ ವರವನ್ನು ನೀಡುವವನೇ, ಈ ಪ್ರಾಪಂಚಿಕ ಬಂಧನದಿಂದ ಮುಕ್ತಗೊಳಿಸು ಭಕ್ತಜನಮನ ಹರನೆನಿಸಿರುವ ಕೂಡಲ ಸಂಗಮದೇವಾ, ಕೃಪೆ ತೋರಿ ನನ್ನನ್ನು ನಿಮ್ಮ ಪಾದಕಮಲಗಳಲ್ಲಿ ಭ್ರಮರವನ್ನಾಗಿರಿಸಿಕೊಳ್ಳಿ.

 

“ಅಕಟಕಟಾ ! ಶಿವ, ನಿನಗಿನಿತು ಕರುಣವಿಲ್ಲಾ! 

ಅಕಟಕಟಾ ! ನಿನಗಿನಿತು ಕೃಪೆ ಇಲ್ಲಾ, ಏಕೆ ಹುಟ್ಟಿಸಿದೆ ? 

ಇಹಲೋಕ ದುಃಖಿಯ, ಪರಲೋಕ ದೂರನ ? ಏಕೆ ಹುಟ್ಟಿಸಿದೆ ? 

ಕೂಡಲಸಂಗಮದೇವಾ, ಕೇಳಯ್ಯಾ, ಎನಗಾಗಿ ಮತ್ತೊಂದು ತರುಮರ ನಿಲ್ಲವೇ ?’

 

ವಚನದ ಅರ್ಥ :

ಭಗವತ್‌ ಸಾಕ್ಷಾತ್ಕಾರ ಲಭಿಸುವುದು “ಅಣ್ಣ”ನವರಿಗೆ ಭಕ್ತಿ-ತತ್ಪರತೆಯಲ್ಲಿ ಮುಳುಗಿದ್ದಾಗಲೂ ನಿಧಾನವಾಗಿದ್ದಿರಬಹುದು. ಅವರು ಇದಕ್ಕಾಗಿ ಭಗವಂತನ ಬಗ್ಗೆ ಮಗುವಿನಂತೆ ಮೊರೆ ಇಡುತ್ತಾ ಹೀಗೆ ತಿಳಿಸಿದ್ದಾರೆ

ಅಕಟಕಟಾ! ಪರಶಿವನೇ, ನಿನಗೆ ನಿನ್ನ ಭಕ್ತನಾದ ನನ್ನ ಬಗ್ಗೆ ಒಂದಿಷ್ಟೂ ಅಂತಃಕರಣವೇ ಇಲ್ಲವೇ ? ದಯಾರ್ದ ಮನಸ್ಸೇ ಬಾರದೇ? ಹಾಗಿದ್ದಲ್ಲಿ ನನ್ನನ್ನು ನೀನೇಕೆ ಸೃಷ್ಟಿಸಿದೆ ? ಇಹಲೋಕದಲ್ಲಿ ದುಃಖಿಯಾಗಿ, ಪರಲೋಕದಲ್ಲಿ ತಿರಸ್ಕೃತನಾಗುವಂತೆ ಏಕೆ ಮಾಡಿದೆ ? ನನ್ನನ್ನು ಉಪಯೋಗಕ್ಕೆ ಬರುವ ಯಾವುದಾದರೂ ತರುಲತೆಯ ರೂಪದಲ್ಲಿ ಸೃಷ್ಟಿಸಬಾರದಿತ್ತಾ ?”

“ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ ಅಂದೇ ಅಂಬೇ” 

ಎಂದು ಒರಲುತ್ತಲಿದ್ದೇನೆ. ಕೂಡಲ ಸಂಗಮದೇವಾ, ಬಾಳು ಬಾಳೆಂಬೆನ್ನಕ್ಕ”

ವಚನದ ಅರ್ಥ :ದೇವದರ್ಶನಕ್ಕಾಗಿ ಭಕ್ತಿಯ ಭಗವಂತನನ್ನು ಪ್ರಾರ್ಥಿಸುತ್ತಿದ್ದಾರೆ – ”ಅಣ್ಣ’ನವರು ಚರಮಸೀಮೆಯ ಎತ್ತರದಲ್ಲಿ ಅನುನಯ-ವಿನಯದೊಂದಿಗೆ “ಕೂಡಲ ಸಂಗಯ್ಯನೇ, ಕಾಡಿನಲ್ಲಿ ಮೇಯಲು ಬಂದ ಕರು ಹಸಿರು ಹುಲ್ಲನ್ನು ತಿನ್ನುವ ಭರದಲ್ಲಿ ದಾರಿ ತಪ್ಪಿ (ಭಕ್ತಿಮಾರ್ಗದಿಂದ ದೂರವಾಗಿ) ‘ಅಂಬೇ ಅಂಬೇ’ ಎನ್ನುತ್ತಿರುವೆನಯ್ಯಾ, ಅಂಬೇ ಅಂದೇ ಎಂದು ಒಂದೇ ಸಮನೆ ನಿನ್ನ ನೆರವಿಗಾಗಿ ಒರಳುತ್ತಿರುವೆನಯ್ಯಾ-ಈ ‘ಸಂಸಾರ ಎನ್ನುವವರೆಗೂ ಕೂಗುತ್ತಲೇ ಇದ್ದೇನೆ. ಕೃಪೆತೋರಿ ಈಗಲಾದರೂ ಈ ಜೀವನದ ನಿಜವಾದ ಗುರಿ ಏನೆಂಬುದನ್ನು ಅರುಹಯಾ.?

“ಅಯ್ಯಾ ಅಯ್ಯಾ ಎಂದು ಕರೆಯುತ್ತಿದ್ದೇನೆ.

ಅಯ್ಯಾ ಅಯ್ಯಾ ಎಂದು ಒರಲುತ್ತಿದ್ದೇನೆ,

‘ಓ’ ಎನ್ನಲಾಗದೇ ಅಯ್ಯಾ ?

ಆಗಳೂ ನಿಮ್ಮನ್ನು ಕರೆಯುತ್ತಲಿದ್ದೇನೆ. ಮನವೇ ? ಕೂಡಲ ಸಂಗಮದೇವಾ.”

ವಚನದ ಅರ್ಥ : ಭಕ್ತಿ ಚರಮ ವೇದನೆಯ ರೋದವನ್ನು ಭಗವತ್ ಸಾಕ್ಷಾತ್ಕಾರದ ಸಲುವಾಗಿ ‘ಅಣ್ಣ ನವರು ಮಾಡುತ್ತಿರುವ ಕರುಣಾಜನಕ, ಹೃದ್ಯ ವರ್ಣನೆಯನ್ನು ಇಲ್ಲಿ ಕಾಣಬಹುದು. ಕೂಡಲ ಸಂಗಮದೇವಾ, ನಿನ್ನನ್ನು ಕಾಣುವ

ಸಲುವಾಗಿ ಹಗಲಿರುಳೂ ಒಂದೇ ಸಮನೆ ಹಸುಕೂಸಿನಂತೆ ಅಯಾ -ಅಯ್ಯಾ’ ಎಂದು ಕೂಗುತ್ತಿದ್ದೇನೆ. “ಅಯ್ಯಾ ಅಯ್ಯಾ” ಎಂದು ಚೀತ್ಕಲಿಸುತ್ತಿದ್ದೇನೆ.“ಅಪ್ಪಾ, ಅನಾಥ ಬಂಧು” ಎಂದು ಗೋಗರೆಯುತ್ತಿದ್ದೇನೆ. ಈಗಲೂ ‘ಓ’ ಎನ್ನಲು ನಿನಗೆ ಮನ ಬಾರದಾ? ಒಂದು ಸಲವಾದರೂ ಓ’ ಎನ್ನದೆ ಮೌನದ ಇಂತಹ ಬಿಗಿಪಟ್ಟನ್ನು ಹಿಡಿದು ಏಕೆ ಹೀಗೆ ಕುಳಿತಿದ್ದೀ ?”

‘ಆಸೆಯಾಮಿಷ ತಾಮಸ, ಹುಸಿ, ವಿಷಯ, ಕುಟಿಲ, ಕುಹಕ,

ಕ್ರೋಧಿ, ಕ್ಷುದ್ರ, ಮಿಲ್ಫ್ ಇವನ್ನೆಲ್ಲಾ ನಾಲಿಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ !

ಅದೇಕೆಂದೊಡೆ ನಿಮ್ಮತ್ತಲೆನ್ನ ಬರಲೀಯವು; ಇದು ಕಾರಣ ಇವೆಲ್ಲವ ಕಳೆದು

ಎನ್ನ ಪಂಚಯ್ಯವರು ಭಕ್ತನ ಮಾಡು ಕೂಡಲಸಂಗಮದೇವಾ?

ವಚನದ ಅರ್ಥ :

ನಾಲಿಗೆಯು ಹಲವಾರು ಕುಪ್ರವೃತ್ತಿಗಳ ಬಲೆಗೆ ಬಲಿಯಾಗಿ, ದೇವರ ಸನ್ನಿಧಿಯಿಂದ ಸ್ಥಾನಪಲ್ಲಟಗೊಳಿಸುತ್ತಿದೆ. ಆದ್ದರಿಂದ ನಾಲಿಗೆಯ ಯಾವ ವಿಕೃತವಾಣಿಯನ್ನೂ ಮೂಡಿಸದಿರುವಂತೆ ಮಾಡಲು, ತನ್ನ ಆರಾಧ್ಯ ದೇವನಾದ ಕೂಡಲ ಸಂಗಮ ದೇವನನ್ನು ‘ಅಣ್ಣ’ನವರು ಬೇಡುತ್ತಾರೆ-

ಕೂಡಲಸಂಗಮದೇವಾ, ಆಸೆ-ಆಮಿಷಗಳು, ತಾಮಸ, ಹುಸಿ ಅಂದರೆ ಸುಳ್ಳು, ವಿಷಯ, ವಂಚನೆ, ಮಾಯೆ, ಕೋಪ, ಕ್ಷುದ್ರತೆ (ಸಣ್ಣತನದ ಬುದಿ), ಮಿಥ್ಯ ಇವುಗಳು ನಾಲಿಗೆಯ ಮೇಲೆ ಕುಳಿತಾಗ, ಅಂದರೆ ಇವುಗಳ ಪ್ರೇರಣೆಯಿಂದ ವಾಣಿ ಹೊರಬಂದಾಗ, ದೇವರ ಕಡೆ ಮನಹರಿಯಲು ಅಡ್ಡಿ ಆಗುವುದು ಸಹಜ. ಆದುದರಿಂದ ಇವು ಯಾವುವೂ ನಾಲಿಗೆಯ ಮೇಲೆ ಕುಳಿತು, ವಾಗ್ವಿಕಾರತೆಗೆ ಅವಕಾಶ ಆಗದಂತೆ ಕೂಡಲಸಂಗಮದೇವಾ, ಅನುಗೋಸು.

“ಸುಡಲೀಮನವೆನ್ನನುಡುಹನ ಮಾಡಿತ್ತು !

ನಡೆವಲ್ಲಿ ನುಡಿವಲ್ಲಿಯೂ ಅಧಿಕವೆಂದೆನಿಸಿತ್ತು.

ಬೆಡಗಿನ ಕೀಲು ಕಳೆದು ಕೆಡದ ಬಳಿಕ ಕಡುಗೂರ್ವ ಮಡದಿ ತಾ ಮುಟ್ಟಲಮ್ಮಳು.

ಒಡಲಮರಿ ಕೊಂಬುದು, ಒಡವೆ ನರಹಿಕೊಂಬ,

ಕಡುಗೂರ್ಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ !

ಮುನ್ನ ಮಾಡಿದುದು ತನ್ನ ಬೆನ್ನ ಬಿಡದನ್ನಕ್ಕ.

ಇನ್ನು ಮಾಡಿದೊಡೊಳವೆ, ಕೂಡಲ ಸಂಗಮದೇವಾ”

ವಚನದ ಅರ್ಥ :

ನಶ್ವರ ಲೋಕ, ನಶ್ವರ ದೇಹ ಎರಡರ ರಹಸ್ಯವನ್ನೂ ಅರಿಯದೆ ಎರಡು ದಿನದ ಕ್ಷಣಿಕ ಸುಖಕ್ಕಾಗಿ ಹಲುಬಿದರೆ ಸುಖವಿಲ್ಲವೆಂಬ ಅಂಶವನ್ನು ಪರಿಗಣನೆಗೆ ತಂದುಕೊಂಡು, ಮಾಡಿದ ತಪ್ಪನ್ನೇ ಮತ್ತೆ ಮಾಡದಿರಲು ಪರಶಿವನಲ್ಲಿ ‘ಅಣ್ಣನವರು ಹೀಗೆ ವಿನಂತಿಸಿಕೊಳ್ಳುತ್ತಾರೆ

”ಕೂಡಲ ಸಂಗಮದೇವಾ, ನನ್ನ ಜೀವಸತ್ವವನ್ನೇ ಸುಡಲು ಈ ಮನಸ್ಸು ಚಾಂಚಲ್ಯದಿಂದ ನಿನ್ನಡೆಯಿಂದ ನನ್ನನ್ನು ಬೇರೆ ಮಾಡಿತ್ತು. ನಡೆ-ನುಡಿಯಲ್ಲಿ ಅಧಿಕ ಪ್ರಸಂಗಿಯನ್ನಾಗಿ ಮಾಡಿತ್ತು. ಬೆಡಗು-ಬಿನ್ನಾಣದಿಂದ ಕೂಡಿರುವ ಈ ದೇಹವನ್ನು ಜೀವವನ್ನು ಕಳೆದುಕೊಳ್ಳುತ್ತಲೇ, ಕೈಹಿಡಿದವಳೂ ಈ ನಿರ್ಜಿವ ದೇಹವನ್ನು ಮುಟ್ಟದೆ ಕಡೆಗಣಿಸುವಳು. ಎಲ್ಲರೂ ಅಷ್ಟೊಂದು ಆದರಿಸುತ್ತಿದ್ದ ಈ ದೇಹವನ್ನು ಬೆಂಕಿ ನಿರ್ದಯೆಯಿಂದ ಸುಟ್ಟುಹಾಕುವುದು. ಅಮೂಲ್ಯವೆನಿಸಿದೆ ವಸ್ತ್ರಾಭರಣಗಳೆಲ್ಲಾ ರಾಜನ ಪಾಲಾಗುವುದು. ಅಷ್ಟೊಂದು ಪ್ರೀತಿಸುತ್ತಿದ್ದ ಹೆಂಡತಿ, ಮತ್ತೊಬ್ಬ ಸುಂದರ ಪುರುಷನೊಂದಿಗೆ ಹೋಗುವಳು. ಪ್ರಾರಂಭದಲ್ಲಿಯೇ ನಿನ್ನನ್ನು ಮರೆತು, ಅಕ್ರಮತನದ ತಪ್ಪು ಮಾಡಿದುದರ ಕಾರಣ ಇಷ್ಟೊಂದು ಈತಿಬಾಧೆಗಳಿಗೆ ಒಳಗಾಗಬೇಕಾಯಿತು. ಆದ್ದರಿಂದ ಕೂಡಲ ಸಂಗಮದೇವಾ, ಮತ್ತೆ ಇಂತಹ ತಪ್ಪು ನನ್ನಿಂದಾಗದಂತೆ (ನಿನ್ನ ಸ್ಮರಣೆಯನ್ನು ಎಂದಿಗೂ ಮರೆಯದಂತೆ) ನನ್ನಲ್ಲಿ ನವಜಾಗೃತಿಯನ್ನು ಮೂಡಿಸುತ್ತಲೇ ಇರು,

“ನೋಡಿ ನೋಡಿ ಮಾಡುವ ನೇಮ ಸಲ್ಲವು ! ಸಲ್ಲವು !!

ತನುವುದ್ದೇಶ ಮನವುದ್ದೇಶವಾಗಿ ಮಾಡುವ ನೇಮ ಸಲ್ಲವು ! ಸಲ್ಲವು !!

ಗುರುಪಥವ ಮೀರಿ ಮಾಡುವ ನೇಮ ಸಲ್ಲವು ! ಸಲ್ಲವು !!

ಕೂಡಲಸಂಗಮ ದೇವಯ್ಯಾ, ಇವು ನಿಮ್ಮ ನಿಜದೊಳಗೆ ನಿಲ್ಲವು ! ನಿಲ್ಲವು !!”

ವಚನದ ಅರ್ಥ :

ಮತ್ತೊಬ್ಬರು ಮಾಡುವುದನ್ನು ನೋಡಿ ಅನುಕರಿಸುವ ವ್ರತಕಾರ್ಯಗಳನ್ನು ಕಂಡು “ಅಣ್ಣನವರಿಗೆ ನಗು ಬಂದಿರಬೇಕು. ಈ ಬಗೆ ಸರಿ ರೀತಿಯಲ್ಲಿ ಈ ವಚನದ ಮೂಲಕ ತಿಳಿ ಹೇಳಲು ಯತ್ನಿಸಿದ್ದಾರೆ-

ನಮ್ಮ ಅಂತರಂಗ ಸತ್ವವನ್ನು ನಾವು ಕಾಪಾಡಿಕೊಳ್ಳಲಾರದೆ ಇತರರು ಮಾಡುವ ಮುಕ್ತಿ ಮಾರ್ಗದ ವ್ರತಗಳಲ್ಲಿ ಮೂಲ್ಯತೆ ಮಾಂದ್ಯ, ಆದ್ದರಿಂದ ಇವು ಭಗವಂತನ ದೃಷ್ಟಿಯಲ್ಲಿ ಯೋಗ್ಯ ಎನಿಸಲಾರವು. ತಮ್ಮ ಶರೀರ ಸೌಖ್ಯದ ಅಂದರೆ ಸ್ವಾರ್ಥ ಸುಖದ ಸಲುವಾಗಿ ಮನ ಬಯಕೆಯನ್ನು ದೇವರು ಈಡೇರಿಸಲೆಂದು ಮಾಡುವ ವ್ರತದಲ್ಲಿ ಮಹತ್ವವಿರದು. ಇದಕ್ಕಾಗಿ ಗುರುವಿನ ಒಂದು ಗೊತ್ತಾದ ಉಪದೇಶ ಮಾರ್ಗ ಇದೆ. ಅದನ್ನು ಮೀರಿ ಮಾಡುವ ಯಾವುದೇ ವ್ರತವನ್ನು ಕೂಡಲಸಂಗಮದೇವನು ಮೆಚ್ಚನು, ಒಪ್ಪನು. ಇಂತಹ ವ್ರತಗಳು ಕೃತ್ರಿಮವೆನಿಸುವುದರಿಂದ, ನೈಜಸತ್ವದಿಂದಲೇ ದೂರ ನಿಲ್ಲುವುದರಿಂದ ಯೋಗ್ಯವೆನಿಸಲಾರವು. ಕೂಡಲಸಂಗಮದೇವನು ಕೃತ್ರಿಮವಲ್ಲದ ಶೀಲಸಂವರ್ಧನೆಯಲ್ಲಿ ನಿಲ್ಲಲು ಯೋಗ್ಯವೆನಿಸಲಾರ

‘ಓಂ ನಮಶಿವಾಯ ಎಂಬ ಮಂತ್ರದ ಮೀರಲಮ್ಮದೆ ನಿಂದುದು ವೇದ !’

‘ಓಂ ನಮಶಿವಾಯ’ ಎಂಬ ಮಂತ್ರವ ಮೀರಲಮ್ಮದೆ ಎಂದುದು ಶಾಸ್ತ್ರ !

‘ಓಂ ನಮವಾಯ’ ಎಂಬ ಮಂತ್ರದ ಮಾರಲಮ್ಮದೆ ನಿಂದುದು ತರ್ಕ !

ಭಯಂಕರ ಭ್ರಮೆಗೊಂಡಿತ್ತುಮಂತ್ರ ತಂತ್ರ !

ಶಿವನಂತವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,

ಕೂಡಲಸಂಗಮದೇವ’ ಶ್ವಪಚನ ಮೆರೆದೊಡೆ ಜಾತಿ ಭೇದವ ಮಾಡಲಮ್ಮವು.”

ವಚನದ ಅರ್ಥ

ವೇದ ಶಾಸ್ತ್ರಾದಿಗಳ ತತ್ವ ಸತ್ವಗಳನ್ನು ಪೂರ್ಣ ರೂಪದಲ್ಲಿ ಅರ್ಥಮಾಡಿಕೊಳ್ಳದ ವೈದಿಕ ಧರ್ಮಿಯರ ದಬ್ಬಾಳಿಕೆಯನ್ನು ಕಂಡು ಬೇಸರಗೊಂಡ “ಅಣ್ಣನವರು ಈ ಬಗ್ಗೆ ಈ ವಚನದಲ್ಲಿ ಈ ರೀತಿ ಅರುಹಿದ್ದಾರೆ-

‘ಓಂ ನಮಶಿವಾಯ’ ಎಂಬ ಷಡಾಕ್ಷರಿ ಮಂತ್ರ ವೇದ, ಶಾಸ್ತ್ರ, ತರ್ಕಗಳೆಲ್ಲವನ್ನೂ ಮೀರಿ ನಿಂತಿರುವ ಮಂತ್ರ, ಕಾರಣ ಶಿವದೇವನ ಅನಂತ ಸ್ವರೂಪವೇ ಇದರಲ್ಲಿ ಹುದುಗಿದೆ. ಆದ್ದರಿಂದ ಜಾತಿ-ಧರ್ಮಗಳೆಂದು ಭೇದವೆಣಿಸಿ, ಜನರಲ್ಲಿ ಮೇಲು-ಕೀಳು ಭಾವನೆಯನ್ನು ತೋರುವುದು ಕೂಡಲಸಂಗಮ ದೇವನಿಗೆ ಎಂದಿಗೂ ಹಿಡಿಸದು.”

“ಅರ್ಥರೇಖೆ ಇದ್ದಲ್ಲಿ ಫಲವೇನು ? ಆಯುಷ್ಕ ರೇಖೆ ಇಲ್ಲದನ್ನಕ್ಕ !

ಹಂದೆಯ ಕೈಯಲ್ಲಿ ಚಂದ್ರಾಯುದ್ಧವಿದ್ದು ಫಲವೇನು ?

ಅಂಧಕನ ಕೈಲಿ ದರ್ಪಣವಿರ್ದು ಫಲವೇನು ?

ಮರ್ಕಟನ ಕೈಲಿ ಮಾಣಿಕ್ಯವಿರ್ದು ಫಲವೇನು ?

ನಮ್ಮ ಕೂಡಲ ಸಂಗನ ಶರಣನರಿಯದವರ ಕೈಯಲ್ಲಿ ಲಿಂಗವಿರ್ದು ಫಲವೇನು ?

ಶಿವಪದವನರಿಯದನ್ನಕ್ಕ?

ವಚನದ ಅರ್ಥ :

ಶಿವಶರಣರ ಮಹಿಮೆಯನ್ನು ಅರಿಯದಂತಹವರ ಕೈಯಲ್ಲಿ ಲಿಂಗವಿದ್ದು ಯಾವ ಸಾರ್ಥಕವೂ ಇಲ್ಲ ಎಂಬುದನ್ನು ಅಣ್ಣನವರು ಹಲವು ದೃಷ್ಟಾಂತಗಳನ್ನು ನೀಡಿ, ಸ್ಪಷ್ಟಪಡಿಸಿದ್ದಾರೆ-

“ಆಯುಷ್ಯ ರೇಖೆಯೇ ಇಲ್ಲದಿರುವಾಗ ಅರ್ಥರೇಖೆ ಇದ್ದು ಏನು ತಾನೇ ಸುಖ ? ಅಂದರೆ ಮೃತ್ಯುದೇವತೆ ಸಮೀಪಿಸುತ್ತಿರುವಾಗ ಧನದೇವತೆಯು ಬಂದು ಅಭಯ ನೀಡಿದರೆ ಯಾವ ಸುಖ ಪ್ರಾಪ್ತಿಯನ್ನು ತಾನೇ ಪಡೆಯಲು ಸಾಧ್ಯ ಆದೀತು ? ಅದೇ ರೀತಿ ವೀರನ ಕೈಯಲ್ಲಿ ಸುಶೋಭಿಸುವ ಚಂದ್ರಾಯುಧವು ಹೇಡಿಯ ಕೈಯಲ್ಲಿದ್ದು ಏನು ಸುಖ? ಕಣ್ಣು ಕಾಣದ ಕುರುಡನು ತನ್ನ ಮುಖದ ಮುಂದೆ ಕನ್ನಡಿಯನ್ನು ಹಿಡಿದಿದ್ದರೆ ಏನು ತಾನೇ ಲಾಭ ? ಕೋತಿಯ ಕೈಗೆ ಮಾಣಿಕ್ಯವನ್ನು ಕೊಟ್ಟರೆ, ಅದು ಮಾಣಿಕ್ಯದ ಬೆಲೆಯನ್ನು ಅರಿತೀತೇ ? ಹಾಗೆಯೇ ಕೂಡಲ ಸಂಗಮದೇವಾ, ನಿನ್ನ ಶರಣರ ಮಹಿಮೆಯನ್ನು ಅರಿಯದವರ ಕೈಯಲ್ಲಿ ಲಿಂಗವಿದ್ದರೇನು ? ಇಲ್ಲದಿದ್ದರೇನು ?”

“ಗಂಡ ಶಿವಲಿಂಗ ದೇವರ ಭಕ್ತ, ಹೆಂಡತಿ ಮಾರಿ-ಮಸಣಿಯ ಭಕ್ತಿ!

ಗಂಡ ಕೊಂಬುದು ಪಾದೋದಕ ಪ್ರಸಾದ, ಹೆಂಡತಿ ಕೊಂಬುದು ಸುರೆ-ಮಾಂಸ !

ಭಾಂಡ ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡಿರ ಮಡಿಕೆಯನು ಹೊರಗೆ ತೊಳೆದಂತೆ ಕೂಡಲಸಂಗಮದೇವಾ”

ವಚನದ ಅರ್ಥ

ಆಚಾರ-ವಿಚಾರಗಳು ಪವಿತ್ರ ದಂಪತಿಗಳಂತೆ ಪರಿಶುದ್ಧವಿರ ಬೇಕೆಂಬುದನ್ನು ಪರಿಹಾಸ್ಯದ ಹೋಲಿಕೆಯ ಮೂಲಕ `ಅಣ್ಣನವರು ಈ ವಚನದಲ್ಲಿ ಆರುಹಿದ್ದಾರೆ

“ಈ ಭುವಿಯಲ್ಲಿ ಹಲವೆಡೆ ಒಂದೇ ಮನೆಯ ಗಂಡ-ಹೆಂಡಿರ ವ್ಯವಹಾರವೇ ಬೇರೆ ಬೇರೆ ಗಂಡ ಶಿವಲಿಂಗ ದೇವರ ಭಕ್ತನಾದರೆ ಹೆಂಡತಿ ಮಾರಿ-ಮಸಣಿಯ ಭಕ್ತಿ ಆಗಿರುತ್ತಾಳೆ. ಗಂಡ ಶಿವಪಾದೋದಕವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿದರೆ, ಹೆಂಡತಿ ಸುರ, ಮಾಂಸವನ್ನು ಪ್ರಸಾದರೂಪದಲ್ಲಿ ಸ್ವೀಕರಿಸುತ್ತಿರುತ್ತಾಳೆ. ಅದೇ ರೀತಿ ಭಕ್ತಿ ಇಲ್ಲದವರ ದೇಹದ ಭಾಂಡೆ ಪಾತ್ರೆಯೂ ಸಹ ಕೂಡಲಸಂಗಮದೇವಾ, ಹೀಗೆಯೇ ಪರಿಶುದ್ಧವಿಲ್ಲದ ಭಕ್ತರ ಭಕ್ತಿಯು ಹೆಂಡವನ್ನು ತುಂಬಿದ ಮಣ್ಣಿನ ಪಾತ್ರೆಯನ್ನು ಕೇವಲ ಹೊರಗೆ ಮಾತ್ರ ತೊಳೆದಂತೆ ಅನುಪಯುಕ್ತ ಎನಿಸುವುದು.”

” ಎನಿಸು ಕಾಲ ಕಲ್ಲು ನೀರೊಳಗಿರ್ದೊಡೇನು ?

ನೆನೆದು ಮೃದುವಾಗಬಲ್ಲುದೇ ?

ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ ?

ಮನದಲ್ಲಿ ದೃಢವಿಲ್ಲದನ್ನಕ್ಕ?

ನಿಧಾನವ ಕಾಯ್ದಿರ್ದ ಬೆಂತರನಂತೆ ಅದರ ವಿಧಿ

ಎನಗಾಯಿತ್ತು ಕೂಡಲ ಸಂಗಮದೇವಾ’

 

ವಚನದ ಅರ್ಥ :

ಮಾನವನ ಮನಸ್ಸು ಪರಿಪಕ್ವಗೊಂಡು, ಮೆದುವಾಗದಿದ್ದರೆ, ಪಾಷಾಂಡ (ಕಲ್ಲು)ದಂತೆ ಜೀವವಿದ್ದ ನಿರ್ಜೀವ ವಸ್ತುವಿನಂತೆಯೇ ಇರುವುದೆಂಬ ಪಾರಮಾರ್ಥಿಕ ತತ್ವವನ್ನು ಅಣ್ಣನವರು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ-

“ಕೂಡಲ ಸಂಗಮದೇವ, ಕಲ್ಲು ನೀರಿನಲ್ಲಿಯೇ ಏಷ್ಟೇ ಕಾಲ ಮುಳುಗಿದ್ದರೂ ಮೆದುವಾಗಲಾರದು. ಅಂದರ ದಯೆಯನ್ನು ಅರಿಯಲಾರದು. ಅದೇ ರೀತಿ ಮನಸ್ಸಿನಲ್ಲಿ ದೃಢಭಕ್ತಿ ಇಲ್ಲದೆ ಎಷ್ಟೇ ಕಾಲ ಪೂಜಿಸಿದರೂ, ಭಕ್ತನು ಬಯಸುವ ಪ್ರತಿಫಲ, (ಮುಕ್ತಿ) ದೊರೆಯಲಾರದು. ಅಗ ಅಂತಹವನ . ಗತಿ ನಿಧಿಯನ್ನು ಕಾಯ್ದುಕೊಂಡಿರುವ ಭೂತನಂತಾಗುವುದು.”

“ದಯವಿಲ್ಲದ ಧರ್ಮ ಅದಾವುದಯ್ಯಾ ?

ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ. ದಯವೇ ಧರ್ಮದ ಮೂಲವಯ್ಯಾ,

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ!

ವಚನದ ಅರ್ಥ :

“ಸಕಲ ಧರ್ಮಗಳ ಮೂಲವೇ ‘ದಯೆ’ ಎಂಬ ತತ್ವವನ್ನು ಜೀವನ ಪರ್ಯಂತ ಪ್ರತಿಪಾದಿಸಿದವನು, ಬೋಧಿಸಿದವನು “ಭಕ್ತ ಭಂಡಾರಿ ಬಸವಣ್ಣ ನವರು. ಅವರ ಅಭಿಮತದಂತೆ ಅಂತಃಕರಣ (ದಯೆ) ಇಲ್ಲದ ಧರ್ಮವೇ ಯಾವುದೂ ಇಲ್ಲ. ಲೋಕದ ಸಕಲ ಪ್ರಾಣಿಗಳಿಗೂ ಈ ಅಂತಃಕರಣ (ದಯೆ)ಯ ಅತ್ಯವಶ್ಯಕತೆ ಇದ್ದೇ ಇದೆ. ಧರ್ಮದ ತಳಹದಿಯೇ ‘ದಯೆ’ ಹಾಗೆ ದಯವಿಲ್ಲದಿರುವವರನ್ನು ಕೂಡಲ ಸಂಗಮದೇವನು ನಿರಾಕರಿಸುವನು.?

 

“ಹತ್ತು ಮತ್ತರದ ಭೂಮಿ, ಬತ್ತುವ ಹಯನ,

ನಂದಾದೀವಿಗೆಯ ನಡೆಸಿಹೆವೆಂಬುವರ ಮುಖವ ನೋಡಲಾಗದು.

ಅವರ ನುಡಿಯ ಕೇಳಲಾಗದು, ಅಂಡಜ, ಸ್ವದಜ, ಉದ್ವಿಜ,

ಜರಾಯುಜರೆಂಬ ಪ್ರಾಣಿಗಳಿಗೆ ಭವಿತವ್ಯವ ಕೊಟ್ಟವರಾರೋ

ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ ಎನ್ನಿಂದಲೇ ಆಯಿತ್ತು,

ಎನ್ನಿಂದಲೇ ಹೋಯಿತ್ತು ಎಂಬುವನ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾನೇ

ಕೂಡಲಸಂಗಮದೇವಾ’

ವಚನದ ಅರ್ಥ

ನೈಜ ಭಕ್ತಿ ನೈಜ ವಿಶ್ವಾಸವನ್ನು ನಿಸ್ವಾರ್ಥ, ಬುದ್ಧಿ, ನಿರ್ಮೋಹಭಾವದೊಂದಿಗೆ ವ್ಯಕ್ತಪಡಿಸಬೇಕೆಂಬ “ಅಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ- ವಿಚಾರವನ್ನು ಹತ್ತು ಮೊಳದ ಅಳತೆಯುಳ್ಳ ಭೂಮಿ, ಸ್ವಲ್ಪ ದಿನಗಳಲ್ಲಿಯೇ ಬತ್ತಿ ಹೋಗುವ ಹಯನು ಹಾಗೂ ನಂದಾದೀವಿಗೆಯನ್ನು ಸಾಗಿಸುವನು ಎನ್ನುವವರ ಮುಖವನ್ನು ನಾವು ನೋಡಬಾರದು. ಅವರ ಮಾತನ್ನು ಆಲಿಸಲು ಕಿವಿಕೊಡಬಾರದು. ಮೊಟ್ಟೆಯಿಂದ ಉದ್ಭವಿಸಿದ, ಬೆವರಿನಿಂದ ಹುಟ್ಟಿದ, ಭೂಮಿಯಲ್ಲಿ ಹುಟ್ಟಿದ, ಗರ್ಭಕೋಶದಿಂದ ಹೊರಬಂದ ಪ್ರಾಣಿಜೀವಿಗಳಿಗೆ ಅದೃಷ್ಟವನ್ನು ಕೊಟ್ಟವರು ಯಾರೋ ಇದ್ದರೂ, ಎಲ್ಲಾ ಜೀವಕೋಟಿಗಳನ್ನೂ ಕಾಪಾಡುವ ರಕ್ಷಕನಿಗೆ ಬೇಯಿಸಿದ ಕಡುಬನ್ನು ಮುಂದಿಟ್ಟ ಹಾಗೆ, ನನ್ನಿಂದಲೇ ಆಯಿತು, ನನ್ನಿಂದಲೇ ಹೋಯಿತು, ನಾನೇ ಎಲ್ಲವನ್ನೂ ಮಾಡಿ, ನೀಡಿದವನೆಂದು ಗರ್ವಪಡುವವನ ಬಾಯಲ್ಲಿ ಕೂಡಲಸಂಗಮದೇವನು ಅವನನ್ನು ತುಳಿದು, ಅವನ ಬಾಯಲ್ಲಿ ಹುಡಿಮಣ್ಣನ್ನು ಹಾಕದಿರುತ್ತಾನೆಯೇ ?”

”ಹಸಿದು ಬಂದ ಗಂಡನಿಗೆ ಉಣಲಿಕ್ಕದೆ ಬಡವಾದನೆಂದು

ಮರುಗುವ ಸತಿಯ ಸ್ನೇಹದಂತೆ ಬಂದುದನರಿಯಳು,

ಇದ್ದುದ ಸವಿಯಳು, ದುಃಖವಿಲ್ಲದ ಅಕ್ಕೆ. ಹಗರಣಿಗನ ತೆರನಂತೆ ಕೂಡಲಸಂಗಮದೇವಾ”

ವಚನದ ಅರ್ಥ :

ಅಂತರಂಗದಲ್ಲಿ ಕರುಣೆಯೇ ಇಲ್ಲದೆ ಬಹಿರಂಗದಲ್ಲಿ “ಅಯ್ಯೋ’ ಅನ್ನುವವರಿಂದ ಯಾವ ಲಾಭವೂ ಇಲ್ಲ ಎಂಬುದನ್ನು ‘ಅಣ್ಣ’ನವರು ಉದಾಹರಣೆಯ ಮೂಲಕ ಹೀಗೆ ವರ್ಣಿಸಿದ್ದಾರೆ ‘ಸತಿ ಆದವಳು ಹಸಿದು ಬಂದ ಗಂಡನಿಗೆ ಪ್ರೀತ್ಯಾದರದಿಂದ ಉಣಲಿಕ್ಕದೆ ಅಂದರೆ ಊಟಕೊಡದೆ, “ಅಯ್ಯೋ! ನನ್ನ ಗಂಡ ಯಾಕೋ ಬಡವಾಗುತ್ತಿದ್ದಾನೆ’ ಎಂದು ದಿನವೂ ನೆಪಮಾತ್ರಕ್ಕೆ ನಟಿಸುತ್ತಿದ್ದರೆ, ಆ ಪತಿಗೆ ಲಭ್ಯವಾಗಬಹುದಾದ ಸುಖ ತಾನೇ ಏನು ? ಅಂತರಂಗ ದುಃಖವೇ ಇಲ್ಲದೆ, ಹಾಗೆ ನಟನೆಯನ್ನು ತೋರಿಸುತ್ತಿದ್ದರೆ ಕೂಡಲಸಂಗಮದೇವ ಒಪ್ಪನು.”

”ತನು ಮನ ಧನ ಎಂಬ ಮೂರು ಕತ್ತಿಗಳಿವೆ ಸಲೆ ಮೂಗಿನ ಮೇಲಯ್ಯ,

ಲಿಂಗಜಂಗಮಕ್ಕೆ ಮಾಡಿದನೆಂಬವಂಗೆ !

ಇದು ಕಾರಣ ಕೂಡಲ ಸಂಗನ ಶರಣರಿಗೆ ಅಂಜಲೇಬೇಕು.”

ವಚನದ ಅರ್ಥ :

ಶಿವಶರಣರು ಸಂಗಮದೇವನಷ್ಟೇ ಶ್ರೇಷ್ಠರು, ಸಮಾನರು, ಶರಣರಿಗೆ ಮಾಡಿದ ಸೇವೆ ಶಿವನ ಸೇವೆಯೇ ಆಗಿರುತ್ತದಾದ್ದರಿಂದ ಶರಣಸೇವೆಯಲ್ಲಿ ಜಾಗೃತಿ ಇರಬೇಕು ಎಂಬುದನ್ನು ಈ ವಚನದಲ್ಲಿ “ಅಣ್ಣನವರು ಕಟುವಾಗಿಯೇ ತಿಳಿಸಿದ್ದಾರೆ

“ಲಿಂಗದೇವ ಹಾಗೂ ಅವನ ಶರಣರಿಗೆ ಎಲ್ಲವನ್ನೂ ಅಂದರೆ ಸಕಲ ವಿಧದ ಸೇವೆಯನ್ನೂ ಸಲ್ಲಿಸಿರುವೆವು ಎಂಬುವವರ ಮೂಗಿನ ಮೇಲೆ ದೇಹ, ಮನಸ್ಸು, ಧನ ಎಂಬ ಮೂರು ಬಗೆಯ ಕತ್ತಿಗಳು ಸದಾ ತೂಗಾಡುತ್ತಿರುತ್ತವೆ. ಆದ್ದರಿಂದ ಕೂಡಲಸಂಗಮ ದೇವನ ಶರಣರಿಗೆ ಸಕಲ ಜನರೂ ಭಯಪಡಲೇಬೇಕು.”

‘ನಾದಪ್ರಿಯ ಶಿವನೆಂಬರು

ನಾದಪ್ರಿಯ ಶಿವನಲ್ಲವಯ್ಯಾ.

ವೇದಪ್ರಿಯ ಶಿವನೆಂಬರು,

ವೇದಪ್ರಿಯ ಶಿವನಲ್ಲವಯ್ಯಾ,

ನಾದವಮಾಡಿದ ರಾವಣಂಗೆ ಅರೆ ಆಯುಷ್ಯವಾಯಿತ್ತು.

ವೇದವನೋದಿದಬ್ರಹ್ಮನ ಶಿರಹೋಯಿತ್ತು. ನಾದಪ್ರಿಯನೂ ಅಲ್ಲ,

ವೇದಪ್ರಿಯನೂ ಅಲ್ಲ, ಭಕ್ತಪ್ರಿಯ ನಮ್ಮ ಕೂಡಲಸಂಗಮದೇವ.”

ವಚನದ ಅರ್ಥ :

“ಭಗವದ್ಭಕ್ತಿ’ ಎಂಬುದು ವೇದ, ಶಾಸ್ತ್ರಾದಿಗಳಿಗಿಂತ ಹಿರಿದು ಎಂಬುದನ್ನು ಅಣ್ಣನವರು ಈ ವಚನದಲ್ಲಿ ದೃಷ್ಟಾಂತಗಳ ಮೂಲಕ ಸಮರ್ಥಿಸಿದ್ದಾರೆ. ಶಿವನನ್ನು ನಾದಪ್ರಿಯ ಅನ್ನುವರು. ಆದರೆ ಶಿವಭಕ್ತನಾದ ರಾವಣೇಶ್ವರನು ಸುಮಧುರ ಸಂಗೀತ ಶಾಸ್ತ್ರವನ್ನು ಬಲ್ಲವನಾಗಿದ್ದು, ನಾದನವ ಮಾಡಿದರೂ, ಅವನಿಗೆ ಅದರ ಫಲವಾಗಿ ಪ್ರಾಪ್ತವಾದುದು ಅರೆ ಆಯಸ್ಸು, ದೀರ್ಘಾಯಸ್ಸು ಅಲ್ಲ. ಇನ್ನು ಕೆಲವರು ಶಿವನನ್ನು ವೇದಪ್ರಿಯ ಎನ್ನುವರು. ಇದೂ ಸಹ ಮಿಥ್ಯವೇ, ಕಾರಣ ವೇದಪಾರಂಗತನೆನಿಸಿದ್ದ ಬ್ರಹ್ಮದೇವನ ಶಿರಸ್ತೇ ಕತ್ತರಿಸಿ ಹೋಗಿತ್ತು.

ಆದ್ದರಿಂದ ನಮ್ಮ ಕೂಡಲ ಸಂಗಮದೇವನು ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಪ್ರಿಯ. ಕೇವಲ ಪರಿಶುದ್ಧ ಭಕ್ತಿಯ ಮುಂದೆ ಮಾತ್ರ ಮಗು ಆಗಿ ಹೋಗುವನು.”

”ಗೀತವ ಹಾಡಿದರೇನು ?
ಶಾಸ್ತ್ರ ಪುರಾಣವ ಕೇಳಿದೊಡೇನು ?
ವೇದವೇದಾಂತವನೋದಿದೊಡೇನು ?
ಲಿಂಗ-ಜಂಗಮದ ಮನವೊಲಿದು
ಪೂಜಿಸಲರಿಯದವರು ಎಲ್ಲ ಬಲ್ಲ
ಅನುಭವಿಯಾದೊಡೇನು ?
ಕೂಡಲಸಂಗಮದೇವ.”ಭಕ್ತಿ ಇಲ್ಲದವರನೊಲ್ಲ

ವಚನದ ಅರ್ಥ : ಭಕ್ತಿ ಇಲ್ಲದೆ ಯಾವುದೇ ವಿಧಾನವೂ ಭಗವದರ್ಶನಕ್ಕೆ ಮಾರ್ಗ – ಆಗಲಾರದೆಂಬುದನ್ನು ಅಣ್ಣ ನವರು ಈ ವಚನದಲ್ಲಿ ನಿರೂಪಿಸಿದ್ದಾರೆ. “ಭಕ್ತಿ ಇಲ್ಲದೆ ರಾಗವಾಗಿ ಹಾಡಿದರೆ ಕಂಠಶೋಷಣೆಯೇ ವಿನಃ ಶಿವನ ಮೆಚ್ಚುಗೆ ಪಡೆದಂತಾಗದು. ಪಡ್ಡರ್ಶನಗಳಲ್ಲೊಂದಾದ ವೇದವನ್ನೂ, ವೇದದ ಕೊನೆಯ ಭಾಗವನ್ನೂ ವೃಥಾ ಭಕ್ತಿರಹಿತವಾಗಿ ಓದಿದರೆ ಯಾವ ದೈವಿಕ ಫಲವೂ ಲಭಿಸದು.

ಮನಃಪೂರ್ತಿ ಲಿಂಗ, ಜಂಗಮ ಇವರನ್ನು ಭಕ್ತಿಯಿಂದ ಪೂಜಿಸುವ ವಿಧಾನವನ್ನೇ ಅರಿಯದವರು ಅನುಭವಿ ಆದರೇನು ? ನಿರಾನುಭವಿ ಆದರೇನು ? ನಿಜವಾದ ಭಕ್ತಿಯನ್ನು ಮಾತ್ರ ಕೂಡಲಸಂಗಮದೇವನು ಮೆಚ್ಚುವನ್ನು, ಸ್ವೀಕರಿಸುವನು ಎಂಬುದನ್ನು ಶಿವಭಕ್ತಿ ಮರೆಯಬಾರದು.”

“ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುಪೋಗದ ಮುನ್ನ,
ಹಲ್ಲು ಹೋಗಿ ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,
ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,
ಮುಪ್ಪಿಂದಪ್ಪವಳಿಯದ ಮುನ್ನ ಮತ್ತು ಮುಟ್ಟದ ಮುನ್ನ,
ಪೂಜಿಸು ನಮ್ಮ ಕೂಡಲಸಂಗಮ ದೇವನ.”

ವಚನದ ಅರ್ಥ

ಕಷ್ಟ ಬಂದಾಗ ವೆಂಕಟರಮಣ ಎನ್ನದೆ, ಯೌವನದ ಸಮಯದಲ್ಲಿ ಮೋಹಪಾಶಕ್ಕೆ ಬಲಿ ಆಗದೆ, ಮುಪ್ಪಡರುವ ಮೊದಲೇ ಅಂದರೆ ದೃಢಕಾಯರಾಗಿರುವಂದಿನಿಂದಲೇ ಸ್ಮರಿಸುತ್ತಿದ್ದರೆ ಎಂದೆಂದಿಗೂ ಯಾವ ಹಾನಿಯೂ ತಟ್ಟದು ಎಂಬುದನ್ನು ಅಣ್ಣ ನವರು ಈ ವಚನದಲ್ಲಿ ಮಾಡಬಾರದ ತಿಳಿಸಿದ್ದಾರೆ. “ಮುಪ್ಪಡರುವವರೆಗೂ ಪಾಪಕೃತ್ಯಗಳನ್ನೆಸಗಿ, ಮುಪ್ಪಡರಿದಾಗ ಶಿವನಾಮಸ್ಮರಣೆಯನ್ನು ಮಾಡುವುದು ಸಾರ್ಥಕ ಇಲ್ಲದ ಕೆಲಸ, ಆದ್ದರಿಂದ ಮುಪ್ಪಿನ ಕಾರಣ ಗಲ್ಲಗಳಿಗೆ ಗುಳಿಬೀಳುವ ಮೊದಲೇ, ಕೆನ್ನೆಗಳಲ್ಲಿ ಚರ್ಮ ಸುಕ್ಕುಬೀಳುವ ಮೊದಲೇ, ಬೆನ್ನು ಬಾಗಿ ಪರರಿಗೆ ಭಾರವಾಗುವ ಮೊದಲೇ, ಕಾಲುಗಳ ಮೇಲೆ ಕೈಯೂರಿ, ಕೈಯಲ್ಲಿ ಆಸರೆಗಾಗಿ ಕೋಲೂರುವ ಮೊದಲೇ, ಅಂದರೆ ಮುಪ್ಪಿನ ಕಾರಣ ದೇಹ, ಮುಖಕಾಂತಿ, ಕುಂದುವ ಮೊದಲೇ ಕೂಡಲಸಂಗಮದೇವನನ್ನು ಭಕ್ತಯಿಂದ ಪೂಜಿಸಿದರೆ, ಅವನ ಕೃಪಾಕಟಾಕ್ಷ ಉಂಟಾಗಿ ನೆಮ್ಮ ದಿಯ ಉಸಿರು ಬಿಡಬಹುದು ಅಂದರೆ ಶಿವೈಕ್ಯರಾಗಬಹುದು.

Leave a Reply

Your email address will not be published. Required fields are marked *