Siddayya Puranik

ಸಿದ್ದಯ್ಯ ಪುರಾಣಿಕ (೧೯೧೮-೧೯೯೪)

siddayya puranik ಯಲಬುರ್ಗಾ ತಾಲೂಕಿನ ದ್ಯಾಂಪುರವೆ೦ಬ ಚಿಕ್ಕಹಳ್ಳಿಯಲ್ಲಿ ಇವರು ಜನಿಸಿದರು ೧೮-೬-೧೯೧೮ ರಂದು. ತಂದೆ ಶ್ರೇಷ್ಠ ಪುರಾಣಿಕರಾದ ಕಲ್ಲಿನಾಥ ಶಾಸ್ತ್ರಿಗಳು; ತಾಯಿ ದಾನವ್ವ, ಪುರಾಣಿಕ ಎಂಬುದು ಇವರ ಮನೆತನದ ಹೆಸರಾಗಿದೆ. ತಮ್ಮ ಅಜ್ಜನ ಹೆಸರು ಸಿದ್ದಯ್ಯ ಅದನ್ನೇ ಇವರಿಗೂ ಇಡಲಾಯಿತು. ಇವರ ಮನೆ ದಾಸೋಹದ ಮನೆಯಾಗಿತ್ತು ವಿದ್ಯಾರ್ಥಿದೆಸೆಯಲ್ಲಿ ಬರೆದ ಬೆಳಗು ಎಂಬ ವಿಷಯದ ಮೇಲೆ ಬರೆದ ಕವನ ಮೊದಲನೆಯದು. ನವೋದಯದ ಸಂದರ್ಭದಲ್ಲಿ ಉಳಿದ ಕಿರಿಯ ಕವಿಗಳಂತೆ ಷಟ್ನದಿಯಲ್ಲಿ ಪದ್ಯ ಬರೆದರು. ‘ಮಿಂಚು’ ಎನ್ನುವ ಮಾಸಿಕ ಪತ್ರಿಕೆಯ ಸಂಪಾದಕರಾದರು.

ನಾಟಕ ಬರೆಯುವುದು ಅವುಗಳನ್ನು ಪ್ರದರ್ಶಿಸುವುದು ವಿಶೇಷವಾಗಿ ಕಿತ್ತೂರು ಚನ್ನಮ್ಮ ನಾಟಕದಲ್ಲಿ ಸ್ತ್ರೀಪಾತ್ರ ಮಾಡಿದ್ದರು. ಬೆಳವಡಿ ಮಲ್ಲಮ್ಮ ನಾಟಕ ರಚಿಸಿ ಅದರಲ್ಲಿ ಶಿವಾಜಿ ಪಾತ್ರವನ್ನು ಮಾಡಿದ್ದರು. ಕಲ್ಬುರ್ಗಿಯಲ್ಲಿ ನಡೆಯುತ್ತಿದ್ದ ಉರ್ದು ಭಾಷೆಯ ಗಜಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಚನ ಪಿತಾಮಹ ಫ.ಗು. ಹಳಕಟ್ಟಿಯವರೊಡನೆ ಒಡನಾಟ ಆಲಮಟ್ಟಿಯಲ್ಲಿದ ಹರ್ಡೆಕರ ಮಂಜಪ್ಪ ಮುಂತಾದವರೊಡನೆಯ ಸಂಪರ್ಕ ಇವರಲ್ಲಿನ ಜ್ಞಾನವನ್ನು ಇಮ್ಮಡಿಸಿತು. ಹರ್ಡೆಕರ ಮಂಜಪ್ಪನವರು ಸ್ಥಾಪಿಸಿದ್ದ ಗ್ರಂಥಾಲಯದಲ್ಲಿ ಓದುವ ಸಲುವಾಗಿ ಆಲಮಟ್ಟಿಗೆ ಹೋಗಿ ನೆಲೆಸಿ ಇಂಗ್ಲೀಷ, ವಚನ ಸಾಹಿತ್ಯ, ಪತ್ರಿಕೋದ್ಯಮ, ಅನುವಾದ, ಶಿಕ್ಷಣ ಪದ್ಧತಿ, ಗ್ರಾಮೋದ್ಯೋಗಗಳ ಪರಿಚಯ, ಆರೋಗ್ಯ ವಿಜ್ಞಾನ, ಎಲ್ಲಾ ವಿಷಯಗಳ ಬಗ್ಗೆ ಅಧ್ಯಯನ ಮಾಡಿದರು.

Siddayya Puranik
Siddayya Puranik

ಇಲ್ಲಿಯೇ ಅವರು ಕಾವ್ಯದೇವಿ ಎನ್ನುವ ಕವನ ಬರೆದರು.

ನಿನ್ನಾತ್ಮವಾನಂದ ನನ್ನಾತ್ಮ ಕಾವ್ಯ ಇಂತು ಕಾವ್ಯಾನಂದ ನಾಮ ಸುಶ್ರಾವ್ಯ

ಎಂದು ಬರೆದು ತಮ್ಮ ಕಾವ್ಯನಾಮವನ್ನು ಕಾವ್ಯಾನಂದ ಎಂದು ಇಟ್ಟುಕೊಂಡರು ಮುಂದಿನ ವ್ಯಾಸಂಗಕ್ಕಾಗಿ ಹೈದ್ರಾಬಾದಿಗೆ ಹೋದಾಗ ಅಲ್ಲಿ ಜೆ.ಪಿ. ರಾಜರತ್ನಂ, ತೀ.ನಂ.ಶ್ರೀ., ಬಿ.ಎಂ.ಶ್ರೀಯವರ ಪ್ರಭಾವವಾಯಿತು.

ಸಿದ್ಧಯ್ಯ ಪುರಾಣಿಕರು ಬಿ.ಎ. ಪರೀಕ್ಷೆಯಲ್ಲಿ ಕನ್ನಡ, ಇಂಗ್ಲೀಷ್, ಸಂಸ್ಕೃತ ಮೂರು ಭಾಷೆಯಲ್ಲಿ ವಿಶ್ವವಿದ್ಯಾಲಯಕ್ಕೇ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು.

ನಂತರ ಎಲ್.ಎಲ್.ಬಿ. ಮಾಡಿದರು. ತಹಶೀಲ್ದಾರರಾಗಿ ಕಾರ್ಯಾರಂಭ ಮಾಡಿದರು. ೧೯೪೫ರಲ್ಲಿ ಲ್ಯಾಂಡ್ ರಿಕಾರ್ಡ ವಿಭಾಗಕ್ಕೆ ಅಸಿಸ್ಟೆಂಟ್ ಕಲೆಕ್ಟರಾಗಿ ೧೯೪೫ರಲ್ಲಿ ಡೆಪ್ಯೂಟಿ ಕೆಲಕ್ಷರಾದರು. ದಕ್ಷತೆಗೆ ಪ್ರಾಮಾಣಿಕತೆಗೆ ಹೆಸರಾದ ಇವರನ್ನು ಸರಕಾರ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರನ್ನಾಗಿಸಿತು. ಮುಂದೆ ಐ.ಎ.ಎಸ್. ಅಧಿಕಾರಿಯಾಗಿ ೧೯೬೭ರಲ್ಲಿ ಸಾರಿಗೆ ಕಮೀಷನ್‌ ರಾಗಿ ಬೆಂಗಳೂರಿಗೆ ಬಂದರು. ೧೯೭೬ರಲ್ಲಿ ಸೇವಾ ಜೀವನದಿಂದ ನಿವೃತ್ತಿಯಾದರು.

ಸಿದ್ಧಯ್ಯ ಪುರಾಣಿಕರ ಕೃತಿಗಳು : ೮ ಕವನ ಸಂಕಲನ – ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ಕಲ್ಲೋಲ ಮಾಲೆ, ಮೊದಲು ಮಾನವನಾಗು, ಚರಗ, ಹಾಲೊನೆ ಮರುಳಿ ಸಿದ್ಧನ ಕಂತೆ. ಆಧುನಿಕ ವಚನಕಾರರಾಗಿ ವಚನೋದ್ಯಾನ, ವಚನ ನಂದನ, ವಚನರಾಮ ಇದರಲ್ಲಿ ೧೫೦೦ ವಚನಗಳ ಸಂಗ್ರಹವಿದೆ. ವಚನಾಂಕಿತ ಸ್ವತಂತ್ರ ಧೀರಸಿದ್ಧೇಶ್ವರ, ಕಥಾ ಸಂಕಲನ – ತ್ರಿಭುವನ ಮಲ್ಲ ಐತಿಹಾಸಿಕ ಕಾದಂಬರಿ, ೬ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.

ಇವರ ಸಾಹಿತ್ಯ ಕೃಷಿಗೆ ಸಂದ ಗೌರವ :

  • ‘ಮಾನಸ ಸರೋವರ’ ಕೃತಿಗೆ ರಾಜ್ಯ ಪ್ರಶಸ್ತಿ,
  • ೧೯೮೦ರಲ್ಲಿ ‘ವಚನೋದ್ಯಾನ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೧೯೮೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮಾಳವಾಡ ಪ್ರಶಸ್ತಿ,
  • ‘ವಚನಂದನ’ಕ್ಕೆ ಹುಬ್ಬಳ್ಳಿ ಮೂರು ಸಾವಿರಮಠ ಪ್ರಶಸ್ತಿ ಸಂದಿವೆ.

‘ನಾಡಗೀತೆ’ಯ ಸಾಲುಗಳು

ಹೊತ್ತಿತೋ ಹೊತ್ತಿತು ಮುಗಿಯಿತೋ ಮುಗಿತು ಕನ್ನಡದ ದೀಪ ಶತಮಾನಗಳ ಶಾಪ

ವಚನ

ಸರಕಾರ ದರೋಡೆಕಾರನಾದಾಗ

ನೌಕರರು ನರಭಕ್ಷಕರಾಗದಿರುವರೇನಯ್ಯ

ಸಚಿವರೇ ಸುಲಿಗೆಗಾರರಾದಾಗ

ಆಪ್ತಸಹಾಯಕರು ಪಸಾಯಿತರಾಗರೇನಯ್ಯ

ಶ್ರೇಷ್ಠ ಆಡಳಿತಗಾರರಾಗಿ, ಅಪ್ರತಿಮ ಸಮಾಜ ಸೇವಕರಾಗಿ, ಶ್ರೇಷ್ಠ ಸಾಹಿತಿ ಕವಿಯಾಗಿ ಬಾಳಿದ ಡಾ. ಸಿದ್ದಯ್ಯ ಪುರಾಣಿಕರು, ನಮ್ಮ ಕೊಪ್ಪಳ ಜಿಲ್ಲೆಯ ಅನರ್ಥ್ಯ ರತ್ನ, ಇವರು ನಿಧನರಾದದ್ದು ೧೯೯೪ರಲ್ಲಿ ತಮ್ಮ ೭೬ನೆಯ ವಯಸ್ಸಿನಲ್ಲಿ

Leave a Reply

Your email address will not be published. Required fields are marked *