Samasagalu in Kannada|ಕನ್ನಡ ಸಮಾಸಗಳು
ಸಮಸ್ಯೆ ಎಂದರೇನು?
Samasagalu in Kannada ಸಮಾಸ-ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದೇ ಸಮಾಸ ಎಂದು ಕರೆಯುತ್ತಾರೆ.
ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವಪದವೆಂದೂ, ಎರಡನೆಯ ಪದವು ಉತ್ತರಪದವೆಂದೂ ಕರೆಯಿಸಿಕೊಳ್ಳುವುದು. ಸಮಸ್ತ ಪದವನ್ನು ಬಿಡಿಸಿ ಬರೆಯು ವುದಕ್ಕೆ ವಿಗ್ರಹವಾಕ್ಯಗಳೆಂದು ಕರೆಯುತ್ತಾರೆ.
ಸಮಾಸದ ಉದಾಹರಣೆಗೆ
ಪೂರ್ವಪದ + ಉತ್ತರಪದ = ಸಮಸ್ತಪದ (ಸಮಾಸ)
ಮಳೆಯ + ಕಾಲ = ಮಳೆಗಾಲ
ಮರದ + ಕಾಲು = ಮರಗಾಲು
ಕಾಲಿನ + ಬಳೆ = ಕಾಲುಬಳೆ
ದೇವರ + ಮಂದಿರ = ದೇವಮಂದಿರ
ಹಿರಿದು + ತೊರೆ = ಹೆದ್ದೊರೆ
ಹಿರಿದು + ಜೇನು = ಹೆಜ್ಜೇನು
ದೊಡ್ಡದಾದ + ಕಲ್ಲು = ದೊಡ್ಡಕಲ್ಲು
ಕೈಯ + ಮುಂದು = ಮುಂಗೈ
ಕಾಲಿನ + ಹಿಂದು = ಹಿಂಗಾಲ್
ಚಕ್ರವು + ಪಾಣಿಯಲ್ಲಿ (ಆವಂಗೋ) = ಚಕ್ರಪಾಣಿ (ವಿಷ್ಣು)
ಮೂರು + ಕಣ್ಣು (ಉಳ್ಳವ) = ಮುಕ್ಕಣ್ಣ (ಶಿವ)
ಸಮಾಸದ ನಿಯಮಗಳು
1 ಸಮಾಸದಲ್ಲಿ ಪೂರ್ವ ಮತ್ತು ಉತ್ತರ ಪದಗಳೆರಡು ಒಂದೇ ಜಾತಿಗೆ ಸೇರಿದವುಗಳಾಗಿ ಬೇಕು.
ಕನ್ನಡ ಪದ + ಕನ್ನಡ ಪದ = ಕನ್ನಡ ಸಮಾಸ
ಸಂಸ್ಕೃತ ಪದ + ಸಂಸ್ಕೃತ ಪದ = ಸಂಸ್ಕೃತ ಸಮಾಸ
ಕನ್ನಡ ಪದ + ಸಂಸ್ಕೃತ ಪದ = ಅರಿಸಮಾಸ
ಸಂಸ್ಕೃತ ಪದ + ಕನ್ನಡ ಪದ = ಅರಿಸಮಾಸ
2.ಅರಿ ಸಮಾಸವನ್ನು ನಾವು ಮಾಡಲೇಬಾರದು
(ಅರಿ ಸಮಾಸ = ಸಮಾಸಕ್ಕೆ ವೈರತ್ವ)
3. ಹಿಂದಿನ ಕವಿಗಳು ಮಾಡಿದ ಅರಿ ಸಮಸ್ಯೆಗಳನ್ನು ದೋಷ ಎಂದು ತಿಳಿಯಬಾರದು
4. ಪ್ರಶಸ್ತಿ, ಬಿರುದು, ಭವಾನಿ ಮತ್ತು ಪದವಿಗಳನ್ನು ಪರಿಸಮಾಸ ಎಂದು ತಿಳಿಯಬಾರದು
ಅರಿಸಮಾಸ ಉದಾಹರಣೆಗಳು :
ಕಡಿದು + ರಾಗ = ಕಡುರಾಗ
ಮೊಗದ + ರಾಗ = ಮೊಗರಾಗ
ಕೂರಿತ್ತಾದ + ಅಸಿ = ಕೂರಸಿ
ಮಾರಾಂತ + ಬಲ = ಮಾರ್ಬಲ
ಪಿರಿದು + ಬಲ = ಪೆರ್ಬಲ
ಎರಡು + ಭಾಗ = ಇಬ್ಭಾಗ
ಪರಮ + ಬೊಮ್ಮ = ಪರಬೊಮ್ಮ
ಮಹಾ + ಕಾಳಿ = ಮಾಕಾಳಿ
ಪಂಚ + ಸರ = ಪಂಚಸರ
ಸಮಾಸದ ವಿಧಗಳು
ಸಮಸ್ಯೆಗಳಲ್ಲಿ ಎಂಟು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ
- ತತ್ಪುರುಷ ಸಮಾಸ
- ಕರ್ಮಧಾರಿ ಸಮಾಸ
- ದ್ವೀಗು ಸಮಾಸ
- ಅಂಶಿ ಸಮಾಸ
- ದ್ವಂದ್ವ ಸಮಾಸ
- ಬಹುವ್ರೀಹಿ ಸಮಾಸ
ಕ್ರೀಯಾ ಸಮಾಸ
ಗಮಕ ಸಮಾನ
ತತ್ಪುರುಷ ಸಮಾಸ (ನಾಮ + ನಾಮ = ಸಮಾಸ)
ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎನ್ನುವರು.
ಉದಾಹರಣೆಗೆ:- ಕನ್ನಡ-ಕನ್ನಡ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ
ಮರದ + ಕಾಲು = ಮರಗಾಲು (ಷಷ್ಠೀತತ್ಪುರುಷ)
ಬೆಟ್ಟದ + ತಾವರೆ = ಬೆಟ್ಟದಾವರೆ ( ” )
ಕಲ್ಲಿನ + ಹಾಸಿಗೆ = ಕಲ್ಲುಹಾಸಿಗೆ ( ” )
ತಲೆಯಲ್ಲಿ + ನೋವು = ತಲೆನೋವು (ಸಪ್ತಮೀತತ್ಪುರುಷ)
ಹಗಲಿನಲ್ಲಿ + ಕನಸು = ಹಗಲುಗನಸು ( ” )
ತೇರಿಗೆ + ಮರ = ತೇರುಮರ (ಚತುರ್ಥೀತತ್ಪುರುಷ)
ಕಣ್ಣಿನಿಂದ + ಕುರುಡ = ಕಣ್ಣುಕುರುಡ (ತೃತೀಯಾತತ್ಪುರುಷ)
ಸಂಸ್ಕೃತ – ಸಂಸ್ಕೃತಶಬ್ದಗಳು ಸೇರಿ ಸಮಾಸ
ಕವಿಗಳಿಂದ + ವಂದಿತ = ಕವಿವಂದಿತ (ತೃತೀಯಾತತ್ಪುರುಷ)
ವ್ಯಾಘ್ರದೆಸೆಯಿಂದ + ಭಯ = ವ್ಯಾಘ್ರಭಯ (ಪಂಚಮೀತತ್ಪುರುಷ)
ಉತ್ತಮರಲ್ಲಿ + ಉತ್ತಮ = ಉತ್ತಮೋತ್ತಮ (ಸಪ್ತಮೀತತ್ಪುರುಷ)
ದೇವರ + ಮಂದಿರ = ದೇವಮಂದಿರ (ಷಷ್ಠೀತತ್ಪುರುಷ)
ಧನದ + ರಕ್ಷಣೆ = ಧನರಕ್ಷಣೆ (ಷಷ್ಠೀತತ್ಪುರುಷ)
ವಯಸ್ಸಿನಿಂದ + ವೃದ್ಧ = ವಯೋವೃದ್ಧ (ತೃತೀಯಾತತ್ಪುರುಷ)
ಕರ್ಮಧಾರಯ ಸಮಾಸ (ವಿಶೇಷಣ + ನಾಮ)
ಪೂರ್ವಪದದಲ್ಲಿ ಇರುವ ವಿಶೇಷಣವು ಉತ್ತರಾದಲ್ಲಿ ಇರುವ ನಾಮದೊಡನೆ ಸೇರಿ ಈ ಸಮಾಸವಾಗುತ್ತದೆ. ಪೂರ್ವ ಪದದಲ್ಲಿ ಇರುವ ವಿಶೇಷಣವು ಉತ್ತರದಲ್ಲಿ ಇರುವ ನಾಮದೊಡನೆ ಸೇರಿ ಸಮಾ ‘ಆದ’ ಎನ್ನುವ ಸಹಾಯಕ ಪ್ರತ್ಯಾವನ್ನು ಲೋಪ ಮಾಡಿಕೊಳ್ಳತ್ತದೆ.
ಇಲ್ಲಿ ಪೂರ್ವ ಪದದಲ್ಲಿ ಇರುವ ವಿಶೇಷಣವು ‘ಆದ’ ಎನ್ನುವ ಸಹಾಯಕ ಪದವನ್ನು ಹೊಂದಿರುತ್ತದೆ.
ಕರ್ಮಧಾರಯ ಸಮಾಸ ಉದಾಹರಣೆ
ಹಳೆಯದು + ಕನ್ನಡ = ಹಳೆಗನ್ನಡ (ಕಕಾರಕ್ಕೆ ಗಕಾರಾದೇಶ)
ಹೊಸದು + ಕನ್ನಡ = ಹೊಸಗನ್ನಡ ( ” )
ಇನಿದು + ಸರ = ಇಂಚರ (ಸಕಾರಕ್ಕೆ ಚಕಾರಾದೇಶ)
ಹಿರಿದು + ಮರ = ಹೆಮ್ಮರ
ಇನಿದು + ಮಾವು = ಇಮ್ಮಾವು
ಹಿರಿದು + ಬಾಗಿಲು = ಹೆಬ್ಬಾಗಿಲು
ಚಿಕ್ಕವಳು + ಹುಡುಗಿ = ಚಿಕ್ಕಹುಡುಗಿ
ಚಿಕ್ಕದು + ಮಗು = ಚಿಕ್ಕಮಗು
ಹಳೆಯದು + ಬಟ್ಟೆ = ಹಳೆಯಬಟ್ಟೆ
ಮೆಲ್ಲಿತು + ಮಾತು = ಮೆಲ್ವಾತು (ಮಕಾರಕ್ಕೆ ವಕಾರಾದೇಶ)
ಮೆಲ್ಲಿತು + ನುಡಿ = ಮೆಲ್ನುಡಿ
ಮೆಲ್ಲಿತು + ಪಾಸು = ಮೆಲ್ವಾಸು (ಪಕಾರಕ್ಕೆ ವಕಾರಾದೇಶ)
ಬಿಳಿದು + ಕೊಡೆ = ಬೆಳ್ಗೊಡೆ (ಕಕಾರಕ್ಕೆ ಗಕಾರಾದೇಶ)
ಸಂಸ್ಕೃತ – ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ
ನೀಲವಾದ + ಉತ್ಪಲ = ನೀಲೋತ್ಪಲ೬೫ (ನೀಲಕಮಲ)
ಶ್ವೇತವಾದ + ವಸ್ತ್ರ = ಶ್ವೇತವಸ್ತ್ರ (ಬಿಳಿಯವಸ್ತ್ರ)
ಶ್ವೇತವಾದ + ಛತ್ರ = ಶ್ವೇತಛತ್ರ (ಬಿಳಿಯಕೊಡೆ)
ನೀಲವಾದ + ಶರಧಿ = ನೀಲಶರಧಿ
ನೀಲವಾದ + ಸಮುದ್ರ = ನೀಲಸಮುದ್ರ
ಶ್ವೇತವಾದ + ವರ್ಣ = ಶ್ವೇತವರ್ಣ
ಮತ್ತವಾದ + ವಾರಣ = ಮತ್ತವಾರಣ (ಮದ್ದಾನೆ)
ಪೀತವಾದ + ವಸ್ತ್ರ = ಪೀತವಸ್ತ್ರ
ಪೀತವಾದ + ಅಂಬರ = ಪೀತಾಂಬರ
ದಿವ್ಯವಾದ + ಪ್ರಕಾಶ = ದಿವ್ಯಪ್ರಕಾಶ
ಕ್ರಿಯಾ ಸಮಾಸ (ನಾಮ + ಕ್ರಿಯ)
ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾಸಮಾಸವೆನ್ನುವರು.
ಕನ್ನಡ – ಕನ್ನಡ ಶಬ್ದಗಳು ಸೇರಿ ಆಗುವ ಸಮಾಸಕ್ಕೆ
ಕ್ರಿಯಾ ಸಮಾಸ ಉದಾಹರಣೆ
ಮೈಯನ್ನು + ತಡವಿ = ಮೈದಡವಿ (ತಕಾರಕ್ಕೆ ದಕಾರಾದೇಶ)
ಕೈಯನ್ನು + ಮುಟ್ಟಿ = ಕೈಮುಟ್ಟಿ
ಕಣ್ಣನ್ನು + ಮುಚ್ಚಿ = ಕಣ್ಣುಮುಚ್ಚಿ
ತಲೆಯನ್ನು + ಕೊಡವಿ = ತಲೆಗೊಡವಿ (ಕಕಾರಕ್ಕೆ ಗಕಾರಾದೇಶ) (ತಲೆಕೊಡವಿ)
ಮೈಯನ್ನು + ಮುಚ್ಚಿ = ಮೈಮುಚ್ಚಿ
ತಲೆಯನ್ನು + ತೆಗೆದನು = ತಲೆದೆಗೆದನು (ತಕಾರಕ್ಕೆ ದಕಾರಾದೇಶ)
ಕಣ್ಣನ್ನು + ತೆರೆದನು = ಕಣ್ಣು ತೆರೆದನು ಕಣ್ಣಂ + ತೆರೆ = ಕಣ್ದೆರೆ (ಹ.ಗ. ರೂಪ) (ತಕಾರಕ್ಕೆ ದಕಾರಾದೇಶ)
ಕೈಯನ್ನು + ಪಿಡಿದು = ಕೈವಿಡಿದು (ಪಕಾರಕ್ಕೆ ವಕಾರಾದೇಶ)
ಮಣೆಯನ್ನು + ಇತ್ತು = ಮಣೆಯಿತ್ತು
ಬಟ್ಟೆಯನ್ನು + ತೋರು = ಬಟ್ಟೆದೋರು (ತಕಾರಕ್ಕೆ ದಕಾರಾದೇಶ)
ಕೈಯನ್ನು + ಕೊಟ್ಟನು = ಕೈಕೊಟ್ಟನು
ದಾರಿಯನ್ನು + ಕಾಣನು = ದಾರಿಗಾಣನು (ಕಕಾರಕ್ಕೆ ಗಕಾರಾದೇಶ)
ಪೂರ್ವಪದವು ಬೇರೆ ವಿಭಕ್ತ್ಯಂತ ರುವುದಕ್ಕೆ
ನೀರಿನಿಂದ + ಕೂಡಿ = ನೀರ್ಗೂಡಿ (ಕಕಾರಕ್ಕೆ ಗಕಾರ)
ಬೇರಿನಿಂದ + ಬೆರಸಿ = ಬೇರುವೆರಸಿ (ಬಕಾರಕ್ಕೆ ವಕಾರ)
ಕಣ್ಣಿನಿಂದ + ಕೆಡು = ಕೆಂಗೆಡು (ಕಕಾರಕ್ಕೆ ಗಕಾರ)
ಬೇರಿನಿಂ + ಬೆರಸಿ = ಬರ್ವೆರಸಿ (ಬಕಾರಕ್ಕೆ ವಕಾರ)
ನೀರಿನಲ್ಲಿ + ಮಿಂದು = ನೀರುಮಿಂದು
ಮೈಯಂ + ತೊಳೆದು = ಮೈದೊಳೆದು
ಒಳ್ಳುಣಿಸಂ + ಇಕ್ಕಿ = ಒಳ್ಳುಣಿಸಿಕ್ಕಿ
ಮುದ್ದಂ + ಗೈದು = ಮುದ್ದುಗೈದು
ವಿಳಾಸಮಂ + ಮೆರೆದು = ವಿಳಾಸಂಮೆರೆದು
ಬೇರಿನಂ + ಬೆರೆಸಿ = ಬರ್ವೆರಸಿ
ಕೈಯಂ + ತೊಳೆದು = ಕೈದೊಳೆದು
ಸಂಸ್ಕೃತ ನಾಮಪದದೊಡನೆ ಕನ್ನಡದ ಕ್ರಿಯೆಯು ಸೇರಿ ಆಗುವ ಕ್ರಿಯಾಸಮಾಸದ ಉದಾಹರಣೆಗಳು
ಕರ್ಯವನ್ನು + ಮಾಡಿದನು = ಕರ್ಯಮಾಡಿದನು
ಸತ್ಯವನ್ನು + ನುಡಿದನು = ಸತ್ಯನುಡಿದನು
ಮಾನ್ಯವನ್ನು + ಮಾಡಿದನು = ಮಾನ್ಯಮಾಡಿದನು
ಕಾವ್ಯವನ್ನು + ಬರೆದನು = ಕಾವ್ಯಬರೆದನು
ದ್ವಿಗುಸಮಾಸ (ಸಂಖ್ಯೆ + ನಾಮ )
ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು
ದ್ವಿಗುಸಮಾಸ ಉದಾರಹಣೆಗೆ
ಒಂದು + ಕಟ್ಟು = ಒಗ್ಗಟ್ಟು (ಕಕಾರಕ್ಕೆ ಗಕಾರಾದೇಶ)
ಎರಡು + ಮಡಿ = ಇಮ್ಮಡಿ
ಮೂರು + ಮಡಿ = ಮುಮ್ಮಡಿ
ನಾಲ್ಕು + ಮಡಿ = ನಾಲ್ವಡಿ (ಮಕಾರಕ್ಕೆ ವಕಾರಾದೇಶ)
ಐದು + ಮಡಿ = ಐವಡಿ (ಐದುಮಡಿ) ( ” )
ಎರಡು + ಬಾಳ್ = ಇರ್ವಾಳ್
ಎರಡು + ತೆರ = ಎರಳ್ತೆರ (ರ್ತೆರ)
ಎರಡು + ಪೆಂಡಿರ್ = ರ್ವೆಂಡಿರ್ (ರ್ಪೆಂಡಿರ್)
ಎರಡು + ಮಾತು = ಎರಳ್ಮಾತು
ಮೂರು + ಗಾವುದ = ಮೂಗಾವುದ
ಮೂರು + ಕಣ್ಣು = ಮುಕ್ಕಣ್ಣು
ಒಂದು + ಕಣ್ಣು = ಒಕ್ಕಣ್ಣು
ಸಂಸ್ಕೃತ – ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ
ಪಂಚಗಳಾದ + ಇಂದ್ರಿಯಗಳು = ಪಂಚೇಂದ್ರಿಯಗಳು
ಸಪ್ತಗಳಾದ + ಅಂಗಗಳು = ಸಪ್ತಾಂಗಗಳು
ಪಂಚಗಳಾದ + ವಟಗಳು = ಪಂಚವಟಗಳು
ದಶಗಳಾದ + ವಾಯುಗಳು = ದಶವಾಯುಗಳು
ದಶಗಳಾದ + ಮುಖಗಳು = ದಶಮುಖಗಳು
ತ್ರಿಆದ + ನೇತ್ರಗಳು = ತ್ರಿನೇತ್ರಗಳು
ಸಪ್ತಗಳಾದ + ಲೋಕಗಳು = ಸಪ್ತಲೋಕಗಳು
ಅಷ್ಟಾದಶಗಳಾದ + ಪುರಾಣಗಳು = ಅಷ್ಟಾದಶಪುರಾಣಗಳು
ಸಪ್ತಗಳಾದ + ಸ್ವರಗಳು = ಸಪ್ತಸ್ವರಗಳು
ಏಕವಾದ + ಅಂಗ = ಏಕಾಂಗ
ದ್ವಿ ಆದ + ಶಿರ = ದ್ವಿಶಿರ
ಗಮಕಸಮಾಸ (ಸರ್ವನಾಮ + ನಾಮ)
ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವನ್ನು ಗಮಕಸಮಾಸವೆಂದು ಕರೆಯುವರು ಪೂರ್ವಪದವು ಸರ್ವನಾಮದಿಂದ ಕೂಡಿರುವುದು
ಗಮಕಸಮಾಸ ಉದಾರಹಣೆಗೆ
ಅವನು + ಹುಡುಗ = ಆ ಹುಡುಗ
ಅವಳು + ಹೆಂಗಸು = ಆ ಹೆಂಗಸು
ಅದು + ಕಲ್ಲು = ಆ ಕಲ್ಲು
ಇವನು + ಗಂಡಸು = ಈ ಗಂಡಸು
ಇವಳು + ಮುದುಕಿ = ಈ ಮುದುಕಿ
ಇದು + ನಾಯಿ = ಈ ನಾಯಿ
ಪೂರ್ವಪದ ಕೃದಂತವಾಗಿರುವುದಕ್ಕೆ
ಮಾಡಿದುದು + ಅಡಿಗೆ = ಮಾಡಿದಡಿಗೆ
ತಿಂದುದು + ಕೂಳು = ತಿಂದಕೂಳು
ಅರಳುವುದು + ಮೊಗ್ಗು = ಅರಳುಮೊಗ್ಗು
ಸೊಕ್ಕಿದುದು + ಆನೆ = ಸೊಕ್ಕಾನೆ
ಕಡೆಯುವುದು + ಕೋಲು = ಕಡೆಗೋಲು
ಉಡುವುದು + ದಾರ = ಉಡುದಾರ
ಬೆಂದುದು + ಅಡಿಗೆ = ಬೆಂದಡಿಗೆ
ಆರಿದುದು + ಅಡಿಗೆ = ಆರಿದಡಿಗೆ
ಸಿಡಿಯುವುದು + ಮದ್ದು = ಸಿಡಿಮದ್ದು
ಉತ್ತರದ ಸಂಸ್ಕೃತ ಪದದೊಡನೆ ಕೂಡಿರುವ ಸಮಾಸಕ್ಕೆ
ತಿಂದುದು + ಅನ್ನ = ತಿಂದಅನ್ನ
ಬೇಯಿಸುದುದು + ಪಕ್ವಾನ್ನ = ಬೇಯಿಸಿದ
ಪಕ್ವಾನ್ನ ಅವನು + ಮನುಷ್ಯ = ಆ ಮನುಷ್ಯ
ಮಾಡಿದುದು + ಕರ್ಯ = ಮಾಡಿದ ಕರ್ಯ
ಬೀಸುವುದು + ಚಾಮರ = ಬೀಸುವಚಾಮರ
ಪೊಡೆವುದು + ಭೇರಿ = ಪೊಡೆವಭೇರಿ
ಪೂಸಿದುದು + ಭಸ್ಮ = ಪೂಸಿದಭಸ್ಮ
ಕಂಡುದು + ವಿಚಾರ = ಕಂಡವಿಚಾರ
ನೋಡಿದುದು + ದೃಶ್ಯ = ನೋಡಿದ ದೃಶ್ಯ
ನೆಯ್ದುದು + ವಸ್ತ್ರ = ನೆಯ್ದ ವಸ್ತ್ರ
ತೆಯ್ದುದು + ಶ್ರೀಗಂಧ = ತೆಯ್ದ ಶ್ರೀಗಂಧ
ಅಂಶಿಸಮಾಸ ( ಅಂಶ + ಆಂಶಿ )
ಪೂರ್ಣಭಾಗ ಪೂರ್ವೋತ್ತರಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಆರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆನ್ನುವರು.
ಅಂಶಿಸಮಾಸ ಉದಾರಹಣೆಗೆ
ಕೈಯ + ಅಡಿ = ಅಂಗೈ – (ಅಡಿ ಶಬ್ದದಲ್ಲಿರುವ ‘ಡಿ’ ಅಕ್ಷರಕ್ಕೆ ಅನುಸ್ವಾರಾದೇಶ ಮತ್ತು ಕಕಾರಕ್ಕೆ ಗಕಾರಾದೇಶ)
ಕಾಲ + ಅಡಿ = ಅಂಗಾಲು – (ಅಡಿ ಶಬ್ದದಲ್ಲಿರುವ ‘ಡಿ’ ಕಾರಕ್ಕೆ ಅನುಸ್ವಾರ, ಕಕಾರಕ್ಕೆ ಗಕಾರಾದೇಶ)
ಕೈಯ + ಮುಂದು = ಮುಂಗೈ – (ಮುಂದು ಎಂಬುದರಲ್ಲಿನ ದುಕಾರ ಲೋಪ)
ಕಾಲು + ಮೇಲು = ಮೇಂಗಾಲ್ – (ಮೇಲು ಶಬ್ದದಲ್ಲಿರುವ ‘ಲು’ ಕಾರಕ್ಕೆ ಅನುಸ್ವಾರ, ಕಕಾರಕ್ಕೆ ಗಕಾರಾದೇಶ)
ಕೈಯ + ಮೇಲು = ಮೇಂಗೈ – ( ” )
ಕಾಲ + ಮುಂದು = ಮುಂಗಾಲ್
ಪಗಲಿನ + ಮುಂದು = ಮುಂಬಗಲ್
ಇಲ್ಲ + ಪಿಂತು = ಪಿತ್ತಿಲ್
ತಲೆಯ + ಹಿಂದು = ಹಿಂದಲೆ
ತಲೆಯ + ಮುಂದು = ಮುಂದಲೆ
ಮೂಗಿನ + ತುದಿ = ತುದಿಮೂಗು
ಹುಬ್ಬಿನ + ಕೊನೆ = ಕೊನೆಹುಬ್ಬು
ಹುಬ್ಬಿನ + ಕುಡಿ = ಕುಡಿಹುಬ್ಬು
ಕಣ್ಣ + ಕಡೆ = ಕಡೆಗಣ್ಣು
ಕೋಟೆಯ + ಕೆಳಗು = ಕೆಳಗೋಟೆ
ಕೆರೆಯ + ಕೆಳಗು = ಕೆಳಗೆರೆ (ಕಿಳ್ಕೆರೆ-ಹ.ಗ.)
ಕೋಟೆಯ + ಮೇಗು = ಮೇಗೋಟೆ
ಪೊಡೆಯ + ಕೆಳಗು = ಕಿಳ್ಪೊಡೆ (ಕೆಳಗು ಶಬ್ದಕ್ಕೆ ಕಿಳ್ ಆದೇಶ)
ಮೈಯ + ಹೊರಗು = ಹೊರಮೈ
ಮೈಯ + ಒಳಗು = ಒಳಮೈ
ತುಟಿಯ + ಕೆಳಗು = ಕೆಳದುಟಿ
ಸಂಸ್ಕೃತ ಅವ್ಯಯೀಭಾವಸಮಾಸಕ್ಕೆ
ಸಂಸ್ಕೃತ ಉದಾಹರಣೆ
ಕಾಲವು + ಅತಿಕ್ರಮಿಸದಂತೆ ಉಳ್ಳದ್ದು = ಯಥಾಕಾಲ
ಅರ್ಥವು + ಅತಿಕ್ರಮಿಸದಂತೆ
ಉಳ್ಳದ್ದು = ಯಥಾರ್ಥ
ಸ್ಥಿತಿಯನ್ನು + ಅತಿಕ್ರಮಿಸದಂತೆ
ಉಳ್ಳದ್ದು = ಯಥಾಸ್ಥಿತಿ
ನಿಮಿತ್ತವಲ್ಲದುದು = ನಿರ್ನಿಮಿತ್ತ
ದ್ವಂದ್ವಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವಸಮಾಸವೆಂದು
ಬಹುವ್ರೀಹಿ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ (ಅನ್ಯಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುವರು.
ಬಹುವ್ರೀಹಿ ಉದಾರಹಣೆಗೆ
ಕನ್ನಡ – ಕನ್ನಡ ಪದಗಳು ಸೇರಿ ಸಮಾಸವಾಗುವುದಕ್ಕೆ
ಮೂರು+ಕಣ್ಣು-ಉಳ್ಳವ=ಮುಕ್ಕಣ್ಣ (‘ಮೂರು’ ಪದಕ್ಕೆ ‘ಮುಕ್’ ಆದೇಶ)
ನಾಲ್ಕು+ಮೊಗ-ಉಳ್ಳವ=ನಾಲ್ಮೊಗ (‘ನಾಲ್ಕು’ ಪದಕ್ಕೆ ‘ನಾಲ್’ ಆದೇಶ)
ಕೆಂಪು(ಆದ) ಕಣ್ಣು-ಉಳ್ಳವ=ಕೆಂಗಣ್ಣ.
ಡೊಂಕು(ಆದ) ಕಾಲು-ಉಳ್ಳವ=ಡೊಂಕುಗಾಲ.
ಕಡಿದು(ಆದ) ಚಾಗ-ಉಳ್ಳವ-ಕಡುಚಾಗಿ.