SDA Question Paper With Answer ಸ್ಪರ್ಧ ಮಿತ್ರಕೆ ಸ್ವಾಗತ, ಕೆಳಗೆ ಕೊಟ್ಟಿರುವ ಪ್ರಶ್ನೆ ಪತ್ರಿಕೆಯು 2019 ರಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಾಗಿದೆ. ಈ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಮತ್ತು ಉತ್ತರ ಸಹಿತ ಈ ಕೆಳಗಡೆ ನೀಡಲಾಗಿದೆ. ಈ ಪ್ರಶ್ನೆ ಪತ್ರಿಕೆಯು SDA Question Paper With Answer ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ಯಾಗಿದ್ದು. ಗರಿಷ್ಠ 100 ಅಂಕ ಒಟ್ಟು 100 ಪ್ರಶ್ನೆಗಳಿದ್ದು ಸಮಯ 1: 30 ಗಂಟೆಯಾಗಿದೆ.
SDA full form : is Second Division Assistant
FDA full form : is First Division Assistant
ಇಲ್ಲಿ ಕೊಟ್ಟಿರುವ ಪ್ರಶ್ನೆಗಳು ಎಸ್ ಡಿ ಎ SDA [ Second Division assistant] ಪ್ರಶ್ನೆ ಪತ್ರಿಕೆ ಯಾಗಿದ್ದು ಇಲ್ಲಿ ಉತ್ತರ ಮತ್ತು ಅದರ ಪ್ರಶ್ನೆಗಳನ್ನು ಸಹಿತ ಈ ಕೆಳಗಡೆ ಕೊಡಲಾಗಿದೆ
1) ಪ್ರತಿ ಆರು ಸೆಕೆಂಡಿಗೆ ಬೆಳಕು ಹೊಳೆಯುದಾದರೆ 3/4 ಗಂಟೆಯಲ್ಲಿ ಎಷ್ಟು ಬಾರಿ ಹೊಳೆಯುವುದು?
1) 255 2) 250 3) 450 4)480
ಸರಿಯಾದ ಉತ್ತರ : 3) 450
2) ರಾಮ & ಅರ್ಜುನರು ಕೆಲಸವೊಂದನ್ನು 10 ದಿನಗಳಲ್ಲಿ ಮಾಡುವರು. ಅರ್ಜುನ ಮತ್ತು ರಹೀಮ್ ರು ಅದನ್ನು 12 ದಿನಗಳಲ್ಲಿ ಮಾಡುವರು, ರಾಮ ಮತ್ತು ರಾಹಿಮ್ ರು 20 ದಿನಗಳಲ್ಲಿ ಮಾಡುವರು, ರಾಮ್ ಒಬ್ಬನೇ ಎಷ್ಟು ದಿನಗಳಲ್ಲಿ ಕೆಲಸ ಮಾಡಿ ಮುಗಿಸಬಲ್ಲ ?
1) 30 ದಿನಗಳು
2) 20 ದಿನಗಳು
3) 12 ದಿನಗಳು
4) 10 ದಿನಗಳು
ಸರಿಯಾದ ಉತ್ತರ : 1) 30 ದಿನಗಳು
3) ವ್ಯಕ್ತಿಯೊಬ್ಬನ ವೇತವನ್ನು ಶೇ.50 ತಗ್ಗಿಸಲಾಗಿದ್ದು ಮತ್ತು ಪುನಃ ತಗ್ಗಿಸಿದ ವೇತನವನ್ನು ಶೇ.50 ಹೆಚ್ಚಿಸಲಾಯಿತು. ಅವನ ನಷ್ಟವೇಷ್ಷು?
1) ನಷ್ಟವಿಲ್ಲ
2) ಶೇ.25
3) ಶೇ.40
4) ಶೇ.50
ಸರಿಯಾದ ಉತ್ತರ : 2) ಶೇ.25
4) ಯಾವ ಸಂಖ್ಯೆಯು ಶೇ.40 ರಷ್ಟು 1,200 ಕ್ಕೆ ಸಮವಾಗಿದೆ?
1) 4,000
2) 3,800
3) 4,800
4) 3,000
ಸರಿಯಾದ ಉತ್ತರ : 4) 3,000
5) ‘ಎ’ ಮತ್ತು ‘ಬಿ’ ವ್ಯಕ್ತಿಗಳ ಈಗಿನ ವಯಸ್ಸಿನ ಅನುಪಾತ 4:5 ಆಗಿದೆ. 18 ವರ್ಷಗಳ ಹಿಂದೆ ಅವರ ವಯಸ್ಸಿನ ಅನುಪಾತವು 11 : 16 ಆಗಿದ್ದರೆ, ಅವರಿಬ್ಬರ ಈಗಿನ ವಯಸ್ಸಿನ ಮೊತ್ತವೆಷ್ಟು?
1) 90 ವರ್ಷಗಳು
2) 80 ವರ್ಷಗಳು
3) 105 ವರ್ಷಗಳು
4) 110 ವರ್ಷಗಳು
ಸರಿಯಾದ ಉತ್ತರ : 1) 90 ವರ್ಷಗಳು
6) ‘A’ ಎಂಬ ವ್ಯಕ್ತಿಯು B ಎಂಬ ವ್ಯಕ್ತಿಯ ಉತ್ತರಕ್ಕೂ ಮತ್ತು C ಎಂಬ ವ್ಯಕ್ತಿಯು B ವ್ಯಕ್ತಿಯ ಪಶ್ಚಿಮಕ್ಕೂ ಇದ್ದರೆ, A ಯು c ಇಂದ ಯಾವ ದಿಕ್ಕಿನಲ್ಲಿ ದ್ದಾನೆ?
1) ಈಶಾನ್ಯ
2) ಪಶ್ಚಿಮ
3) ದಕ್ಷಿಣ
4) ನೈರುತ್ಯ
ಸರಿಯಾದ ಉತ್ತರ : 1) ಈಶಾನ್ಯ
7) ಗುರುಚಂದನ್ ಗಿಂತ ಉಮಾಳು ಚಾಣಾಕ್ಷತೆಯನ್ನು ಹೊಂದಿದವಳಾಗಿದ್ದು , ಗುರುಚಂದನ್ ನಾನ್ನಿಗಿಂತಲೂ ಚಾಣಾಕ್ಷತೆಯವನಾಗಿರುತ್ತಾನೆ. ಆದರೆ ನಾನ್ನಿಯು ಭಾರತಿಗಿಂತಲೂ ಚಾಣಾಕ್ಷತೆಯನ್ನು ಹೊಂದಿದವಳಾಗಿದ್ದಲ್ಲಿ ನಾಲ್ವರಲ್ಲಿ ಯಾರು ಅತಿ ಚಾಣಾಕ್ಷರು ?
1) ಗುರುಚಂದನ್
2) ಭಾರತೀ
3) ಉಮಾ
4) ನಾನ್ನಿ
ಸರಿಯಾದ ಉತ್ತರ : 3) ಉಮಾ
8) ಒಂದು ಪ್ರಸರಣ ಗ್ರಂಥಾಲಯದಲ್ಲಿ 480 ಜನ ಭೇಟಿ ನೀಡುವುದು ಭಾನುವಾರದಂದು ಮತ್ತು 240 ಜನ ಭೇಟಿ ನೀಡುವುದು ವಾರದ ಉಳಿದ ದಿನಗಳೆಂದು ಕಂಡು ಬಂದಿದೆ. 30 ದಿನಗಳ ಒಂದು ತಿಂಗಳಲ್ಲಿ ಆ ತಿಂಗಳು ಶನಿವಾರದಿಂದ ಮೊದಲಾದಾಗ ಭೇಟಿಯಾದವರ ಸರಾಸರಿ ಸಂಖ್ಯೆಯು ?
1) 280
2) 270
3) 272
4) 266
ಸರಿಯಾದ ಉತ್ತರ : 1) 280
9) ಒಬ್ಬ ಚುನಾವಣೆಯಲ್ಲಿ ಅಶೋಕ, ಮಹೇಶ್ & ಪ್ರಮೋದ್ ಮೂವರು ಒಟ್ಟಾಗಿ 150 ಮತಗಳನ್ನು ಗಳಿಸುತ್ತಾರೆ. ಅಶೋಕ್ & ಪ್ರಮೋದ್ ಒಟ್ಟಾಗಿ 94 ಮತಗಳನ್ನು ಹಾಗೂ ಮಹೇಶ್ & ಪ್ರಮೋದ್ ಒಟ್ಟಾಗಿ 76 ಮತಗಳನ್ನು ಗಳಿಸಿದರೆ ಪ್ರಮೋದ್ ಗಳಿಸಿದ ಮೊತ್ತಗಳೆಷ್ಟು ?
1) 56 ಮತಗಳು
2) 20 ಮತಗಳು
3) 74 ಮತಗಳು
4) 76 ಮತಗಳು
ಸರಿಯಾದ ಉತ್ತರ : 2) 20 ಮತಗಳು
10) ಭಾರತದ ಸ್ಥಳೀಯ ಕಾಲಮಾನ ನಿರ್ಧಾರವಾಗಿರುವುದು ಇದರ ಆಧಾರದ ಮೇಲೆ ?
1) 00 ರೆಖಾಂಶ
2) 23 ½ 0 ಉತ್ತರ ಅಕ್ಷಾಂಶ
3) 80 ಉತ್ತರ ಅಕ್ಷಾಂಶ
4) 82 ½0 ಪೂರ್ವ ರೇಖಾಂಶ
ಸರಿಯಾದ ಉತ್ತರ : 4) 82 ½0 ಪೂರ್ವ ರೇಖಾಂಶ
11) ಕೊಟ್ಟಿರುವ ಸಂಕೇತ ಬಳಸಿ ಕೈಗಾರಿಕೆಗಳಲ್ಲೂ ಅವುಗಳ ರಾಜ್ಯಗಳೊಂದಿಗೆ ಸರಿಯಾಗಿ ಹೊಂದಿಸಿ :
ಕೈಗಾರಿಕೆ | ರಾಜ್ಯ |
A) ಟಾಟಾ ಕಬ್ಬಿಣ & ಉಕ್ಕಿನ ಕಂಪನಿ | I) ಕರ್ನಾಟಕ |
B) ಭಾರತೀಯ ಕಬ್ಬಿಣ & ಉಕ್ಕಿನ ಸ್ಥಾವರ | II) ಒರಿಸ್ಸಾ |
C) ವಿಶ್ವೇಶ್ವರಯ್ಯ ಕಬ್ಬಿಣ & ಉಕ್ಕುಸ್ತಾಗರ | III) ಜಾರ್ಖಂಡ |
D) ಹಿಂದುಸ್ತಾನ್ ಸ್ಟೀಲ್ ಕಂಪನಿ ಲಿಮಿಟೆಡ್ | IV) ಪಶ್ಚಿಮ ಬಂಗಾಳ |
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
A | B | C | D | |
1) | III | IV | I | II |
2) | I | III | II | IV |
3) | II | III | I | IV |
4) | IV | I | II | III |
ಸರಿಯಾದ ಉತ್ತರ : 1) III, IV, I, II
12) ಕೊಟ್ಟಿರುವ ಸಂಕೇತ ಬಳಸಿ ರೈಲ್ವೆ ವಲಯಗಳನ್ನು ಅವುಗಳ ಕೇಂದ್ರ ಕಚೇರಿ ಇರುವ ನಗರಗಳೊಂದಿಗೆ ಸರಿಯಾಗಿ ಹೊಂದಿಸಿ
ರೈಲ್ವೆ ವಲಯ | ಕೇಂದ್ರ ಕಚೇರಿ |
A) ಉತ್ತರ ರೈಲ್ವೆ | I) ಮುಂಬೈ |
B) ಕೇಂದ್ರ ರೈಲ್ವೆ | II) ನವದೆಹಲಿ |
C) ಪೂರ್ವ ರೈಲ್ವೆ | III) ಚೆನ್ನೈ |
D) ದಕ್ಷಿಣ ರೈಲ್ವೆ | IV) ಗುಲ್ಕತ್ತಾ |
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
A | B | C | D | |
1) | I | IV | I | III |
2) | II | I | IV | III |
3) | II | III | I | IV |
4) | IV | I | II | III |
ಸರಿಯಾದ ಉತ್ತರ : 2) II, I, IV, III
13) ಕೊಟ್ಟಿರುವ ಸಂಕೇತ ಬಳಸಿ ಜಲಾಶಯಗಳನ್ನು ಅವುಗಳ ನದಿಗಳೊಂದಿಗೆ ಸರಿಯಾಗಿ ಹೊಂದಿಸಿ
ಜಲಾಶಯ | ನದಿ |
A) ಗೋವಿಂದ ಸಾಗರ | I) ಕೃಷ್ಣಾ |
B) ಪಂಪ ಸಾಗರ | II) ತುಂಗಭದ್ರಾ |
C) ಬಸವಸಾಗರ | III) ಕಾವೇರಿ |
D) ಕೃಷ್ಣರಾಜಸಾಗರ | IV) ಸಟ್ಲೆಜ್ |
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
A | B | C | D | |
1) | IV | II | I | III |
2) | II | I | IV | III |
3) | II | III | I | IV |
4) | IV | I | II | III |
ಸರಿಯಾದ ಉತ್ತರ : 1) IV, II, I, III
14) ಜೆಟ್ ವಿಮಾನದ ಕಾರ್ಯನಿರ್ವಹಣೆಯು ನ್ಯೂಟನ್ ರ ಈ ನಿಯಮಕ್ಕೆ ಸಂಬಂಧಿಸಿದ್ದು ?
1) ಚಲನೆಯ ಮೊದಲ ನಿಯಮ
2) ಚಲನೆಯ ಎರಡನೇ ನಿಯಮ
3) ಚಲನೆಯ ಮೂರನೇ ನಿಯಮ
4) ಗುರುತ್ವ ನಿಯಮ
ಸರಿಯಾದ ಉತ್ತರ : 3) ಚಲನೆಯ ಮೂರನೇ ನಿಯಮ
15) ತೆಳು ಸೊಪ್ಪಿನ ಪೊರೆಯಲ್ಲಿ ಬಣ್ಣವು ಹಗಲಿನಲ್ಲಿ ಕಾಣಲು ಕಾರಣ?
1) ಬೆಳಗಿನ ಪ್ರತಿಫಲನ
2) ಬೆಳಕಿನ ವಕ್ರೀಭವನ
3) ಬೆಳಗಿನ ವಿವರ್ತನ
4) ಬೆಳಕಿನ ವ್ಯತೀಕರಣ
ಸರಿಯಾದ ಉತ್ತರ : 4) ಬೆಳಕಿನ ವ್ಯತೀಕರಣ
16) ತೆಳು ಸೊಪ್ಪಿನ ಪೊರೆಯಲ್ಲಿ ಬಣ್ಣವು ಹಗಲಿನಲ್ಲಿ ಕಾಣಲು ಕಾರಣ?
1) ಬೆಳಗಿನ ಪ್ರತಿಫಲನ
2) ಬೆಳಕಿನ ವಕ್ರೀಭವನ
3) ಬೆಳಗಿನ ವಿವರ್ತನ
4) ಬೆಳಕಿನ ವ್ಯತೀಕರಣ
ಸರಿಯಾದ ಉತ್ತರ : 4) ಬೆಳಕಿನ ವ್ಯತೀಕರಣ
17) ವಾಯುವಿನಲ್ಲಿ ಶಬ್ದದ ವೇಗ ಇದನ್ನು ಅವಲಂಬಿಸಿಲ್ಲ (ಸ್ವಾತಂತ್ರ್ಯವಾಗಿದೆ) ?
1) ತಾಪ
2) ಸಾಂದ್ರತೆ
3) ಒತ್ತಡ
4) ಆರ್ದ್ರತೆ
ಸರಿಯಾದ ಉತ್ತರ : 3) ಒತ್ತಡ
18) ಒಂದು ಮಳೆ ಹನಿಯು ಮುಂಡಾಗಿರಲು ಕಾರಣವಾದ ಭೌತಿಕ ವಿದ್ಯಮಾನವು ಈ ಕೆಳಗಿನವುಗಳಲ್ಲಿ ಯಾವುದು ?
1) ಸ್ನಿಗ್ಥತೆ
2) ಘರ್ಷಣೆ
3) ಪ್ಲವನ
4) ಮೇಲ್ಮೈ ಸೆಳೆತ
ಸರಿಯಾದ ಉತ್ತರ : 4) ಮೇಲ್ಮೈ ಸೆಳೆತ
19) ಭೂಮಿಯ ಮೇಲಿನ ಗುರುತ್ವಾಕರ್ಷಣೆಯಿಂದುಂಟಾಗುದ ವೇಗೋತ್ಕರ್ಷ ‘g’ ಯು ಮೌಲ್ಯವು?
1) ಸಮಭಾಜಕದಲ್ಲಿ ಗರಿಷ್ಠವಾಗಿರುತ್ತದೆ
2) ಧ್ರುವಗಳಲ್ಲಿ ಗರಿಷ್ಠವಾಗಿರುತ್ತದೆ
3) ಭೂಮಿಯ ಮೇಲ್ಮೈಯಲ್ಲಿ ಬದಲಾಗದು
4) ಭೂಮಿಯ ಮೇಲ್ಮೈ ಮೇಲೆರಿಂದಂತೆಲ್ಲಾ ಅಧಿಕವಾಗುತ್ತದೆ
ಸರಿಯಾದ ಉತ್ತರ : 2) ಧ್ರುವಗಳಲ್ಲಿ ಗರಿಷ್ಠವಾಗಿರುತ್ತದೆ
20) ಚಂದ್ರಗ್ರಹಣ ಯಾವಾಗ ಉಂಟಾಗುವುದು ?
1) ಭೂಮಿ, ಸೂರ್ಯ & ಚಂದ್ರ ನಡುವೆ ಬರುವುದು
2) ಚಂದ್ರ, ಸೂರ್ಯ & ಭೂಮಿ ನಡುವೆ ಬರುವುದು
3) ಸೂರ್ಯ , ಭೂಮಿ & ಚಂದ್ರ ನಡುವೆ ಬರುವುದು
4) ಅಮಾವಾಸ್ಯೆ ದಿನ ಆಗುತ್ತದೆ
ಸರಿಯಾದ ಉತ್ತರ : 1) ಭೂಮಿ, ಸೂರ್ಯ & ಚಂದ್ರ ನಡುವೆ ಬರುವುದು
21) ಅಪಾದರ್ಶಕವಾದ ಒಂದು ಕಾಗದ ಹಾಳೆಯ ನಮಗೆ ಕೆಂಪಾಗಿ ಕಾರಣ ಕಾರಣವೆಂದರೆ.
1) ಅದು ಕೆಂಪು ಬೆಳಕನ್ನು ಹೀರುತ್ತದೆ
2) ಅದು ಕೆಂಪು ಬೆಳಕನ್ನು ಹಾಯಗೊಡುತ್ತದೆ / ಪ್ರಸರಿಸುತ್ತದೆ
3) ಅದು ಕೆಂಪು ಬೆಳಕನ್ನು ಪತಿಫಲಿಸುತ್ತದೆ
4) ಅದು ಕೆಂಫು ಬೆಳಕನ್ನು ವಕ್ರೀಭಸುತ್ತದೆ
ಸರಿಯಾದ ಉತ್ತರ : 3) ಅದು ಕೆಂಪು ಬೆಳಕನ್ನು ಪತಿಫಲಿಸುತ್ತದೆ
22) ಇದು ಕೀಟಹಾರಿ ಸಸ್ಯಕ್ಕೆ ಉದಾಹರಣೆ ?
1) ಪಿಚರ್ ಪ್ಲಾಂಟ್
2) ಕುಸ್ಕುಟಿ
3) ಅಗರಿಕಸ
4) ಲಿಜೆನ್
ಸರಿಯಾದ ಉತ್ತರ : 1) ಪಿಚರ್ ಪ್ಲಾಂಟ್
23) ಸಮೀಪ ದೃಷ್ಟಿ ಇರುವ ಒಬ್ಬ ವ್ಯಕ್ತಿಯಲ್ಲಿ ಬಿಂಬವು ಅವನ ಕಣ್ಣುಗಳಲ್ಲಿ.
1) ರೆಟಿನಾ ಮುಂಭಾಗದಲ್ಲಿ ಮೂಡುತ್ತದೆ
2) ರೆಟಿನಾ ಹಿಂಭಾಗದಲ್ಲಿ ಮೂಡುತ್ತದೆ
3) ರೆಟಿನಾ ಮೇಲೆಯೇ ಮೂಡುತ್ತದೆ.
4) ಬಿಂಬ ಮೂಡುವುದೇ ಇಲ್ಲ
ಸರಿಯಾದ ಉತ್ತರ : 1) ರೆಟಿನಾ ಮುಂಭಾಗದಲ್ಲಿ ಮೂಡುತ್ತದೆ
24) ಸಾಗರದ ಆಳವನ್ನು ಮಾಪನ ಮಾಡುವ ಉಪಕರಣ
1) ಸ್ಪೀಡೋಮೀಟರ
2) ಆಮ್ಮೀಟರ್
3) ಫ್ಲಕ್ಸ್ ಮೀಟರ್
4) ಗಹಣ ಮಾಪನ
ಸರಿಯಾದ ಉತ್ತರ : 4) ಗಹಣ ಮಾಪನ
25) ಬೇಸುಗೆಗಾರರು ಕನ್ನಡಕದ ಅಥವಾ ಮುಖವಾಡವನ್ನೇಕೆ ಧರಿಸುತ್ತಾರೆ ?
1) ಕಣ್ಣುಗಳನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸಲು
2) ಕಣ್ಣುಗಳನ್ನು ಅವಕೆಂಪು ಕಿರಣಗಳಿಂದ ರಕ್ಷಿಸಲು
3) ಕಣ್ಣುಗಳನ್ನು ಚುಚ್ಚುಮ ತರಂಗದಿಂದ ರಕ್ಷಿಸಲು
4) ಕಣ್ಣುಗಳನ್ನು ಗಾಮಾ ಕಿರಣಗಳಿಂದ ರಕ್ಷಿಸಲು
ಸರಿಯಾದ ಉತ್ತರ : 1) ಕಣ್ಣುಗಳನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸಲು
26) ಬಟ್ಟೆ ಒಗೆಯುವ ಸೊಪಿನಲ್ಲಿರುವುದು ?
1) ಕೊಬ್ಬಿನಾಮ್ಲದ ಪೋಟ್ಯಾಸಿಯಂ ಲವಣ
2) ಕೊಬ್ಬಿನಾಮ್ಲದ ಸೋಡಿಯಂ ಲವಣ
3) ಕೊಬ್ಬಿನಾಮ್ಲದ ಕ್ಯಾಲ್ಸಿಯಂ ಲವಣ
4) ಕೊಬ್ಬಿನಾಮ್ಲದ ಫೋಟೋಸಿಯಂ ಮತ್ತು ಕ್ಯಾಲ್ಸಿಯಂ ಲವಣಗಳು
ಸರಿಯಾದ ಉತ್ತರ : 3) ಕೊಬ್ಬಿನಾಮ್ಲದ ಕ್ಯಾಲ್ಸಿಯಂ ಲವಣ
27) ವಿಕಿರಣಶೀಲ ಸಮಸ್ಥಾನಿಯ ಅರ್ಧಾಯುಷ್ಯ 3 ದಿನಗಳಿದ್ದ, ಅದನ್ನು 12 ದಿನಗಳ ಅನಂತರ ಪಡೆಯಲಾಗಿದೆ. ಧಾರಕದಲ್ಲಿ 3 ಗ್ರಾಮ ಸಮಸ್ಥಾನಿಯ ದೊರೆತಿದೆ. ಸಮಸ್ಥಾನಿಯ ಪ್ರಾರಂಭಿಕ ಸಮಸ್ಥಾನ ಇದ್ದದ್ದು ?
1) 36 g
2) 48 g
3) 12 g
4) 24 g
ಸರಿಯಾದ ಉತ್ತರ : 2) 48 g
28) ಪ್ರತಿ – ಬ್ಯಾಕ್ಟೀರಿಯಾ ಔಷಧಿಗಳ ಪೈಕಿ ಪ್ರತಿಜೀವಕವಲ್ಲದ್ದು ಈ ಕೆಳಗಿನವುಗಳಲ್ಲಿ ಯಾವುದು?
1) ಸ್ಟ್ರೆಪ್ಟೋಮೈಸಿನ್
2) ಬ್ಯಾಕ್ಟ್ರಿಮ್ ಡಿ .ಎಸ್
3) ಪೆನಿಸಿಲಿನ್
4) ಜೆಂಟಮೈಸಿನ್
ಸರಿಯಾದ ಉತ್ತರ : 2) ಬ್ಯಾಕ್ಟ್ರಿಮ್ ಡಿ .ಎಸ್
29) ಸಸ್ಯಕಾಯದ ವಾಯುವಿಕೆ ಭಾಗಗಳಿಂದ ನೀರು ಹೆಚ್ಚಿಗೆ ಆವಿಯಾಗುವ ಕ್ರಿಯೆ?
1) ದ್ಯುತಿ ಸಂಶ್ಲೇಷಣೆ
2) ಭಾಷ್ಪವಿಸರ್ಜನೆ
3) ಸ್ಯಾಪ್ ನ ಏರಿಕೆ
4) ಈ ಯಾವುವೂ ಅಲ್ಲ
ಸರಿಯಾದ ಉತ್ತರ : 2) ಭಾಷ್ಪವಿಸರ್ಜನೆ
30) ಭಾರತ ಅತ್ಯಂತ ಹೆಚ್ಚು ಉದ್ದ ಕರಾವಳಿ ತೀರಗಳಲ್ಲಿರುವ ರಾಜ್ಯ..
1) ಗುಜರಾತ
2) ಕೇರಳ
3) ಕರ್ನಾಟಕ
4) ಆಂಧ್ರಪ್ರದೇಶ
ಸರಿಯಾದ ಉತ್ತರ :1) ಗುಜರಾತ
31) 2011 ಜನಗಣತಿಯಂತೆ ಭಾರತದ ಜನಸಾಂದ್ರತೆಯು ಪ್ರತಿ ಚ.ಕಿ.ಮೀ.ಗೆ…
1) 452
2) 332
3) 250
4) 382
ಸರಿಯಾದ ಉತ್ತರ :4) 382
32) ಇತ್ತೀಚಿನ ಸರ್ವೆ ಕ್ಷಣದಲ್ಲಿ ಭಾರತ ಸ್ವಚ್ಛ ನಗರ ಎಂದು ಮೊದಲ ಶ್ರೇಣಿ ಪಡೆದ ನಗರ
1) ರಾಜಕೋಟ್
2) ಇಂದೂರ್
3) ಅಂಬಿಕಾನಗರ
4) ಕೋಝಿಕೋಡ್
ಸರಿಯಾದ ಉತ್ತರ : 2) ಇಂದೂರ್
33) ಪ್ರಪಂಚದ ಅತ್ಯಂತ ದೊಡ್ಡ ಮರುಭೂಮಿ
1) ಅರೇಬಿಯಾ
2) ಕಲಹರಿ
3) ಗ್ರೇಟ್ ವಿಕ್ಟೋರಿಯಾ
4) ಸಹರಾ
ಸರಿಯಾದ ಉತ್ತರ : 4) ಸಹರಾ
34) ಕರ್ನಾಟಕ ಪ್ರಸಿದ್ಧ ದೋ – ಆಬ್ ಪ್ರದೇಶ ಯಾವ ನದಿಗಳ ನಡುವೆ ಇರುವುದೆಂದರೆ,
1) ಕೃಷ್ಣ & ಕಾವೇರಿ
2) ತುಂಗಭದ್ರ & ಕೃಷ್ಣ
3) ತುಂಗಭದ್ರ & ಕಾವೇರಿ
4) ನೇತ್ರಾವತಿ & ತದ್ರಿ
ಸರಿಯಾದ ಉತ್ತರ : 2) ತುಂಗಭದ್ರ & ಕೃಷ್ಣ
35) ಈ ಕೆಳಗಿನ ಯಾವ ಬೆಳೆಯನ್ನು ಹರಪ್ಪ ನಾಗರಿಕತೆಯಲ್ಲಿ ಬೆಳೆಯುತ್ತಿರಲಿಲ್ಲ ?
1) ಸಾಸಿವೆ
2) ಬಾರ್ಲಿ
3) ಕೊಬ್ಬು
4) ಎಳ್ಳು
ಸರಿಯಾದ ಉತ್ತರ : 3) ಕೊಬ್ಬು
36) ಭಾರತದಲ್ಲಿ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಜ್ಯ?
1) ಆಂಧ್ರ ಪ್ರದೇಶ
2) ತಮಿಳುನಾಡು
3) ಕರ್ನಾಟಕ
4) ಓಡಿಸಾ
ಸರಿಯಾದ ಉತ್ತರ : 3) ಕರ್ನಾಟಕ
37) ಸಂಸತ್ತು ಸದಸ್ಯರಿಗೆ …… ಅವಧಿಯ ನಂತರ ‘ಶೂನ್ಯ ವೇಳೆ’ಯಲ್ಲಿ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಡಲಾಗುತ್ತದೆ
1) ಪ್ರಶ್ನೋತ್ತರ ಅವಧಿ
2) ಚರ್ಚೆ ಅವಧಿ
3) ವಿಶೇಷ ಅವಧಿ
4) ಯಾವುದೇ ಅವಧಿ
ಸರಿಯಾದ ಉತ್ತರ : 1) ಪ್ರಶ್ನೋತ್ತರ ಅವಧಿ
38) ಸಂಸತ್ತು ಸದಸ್ಯರಿಗೆ …… ಅವಧಿಯ ನಂತರ ‘ಶೂನ್ಯ ವೇಳೆ’ಯಲ್ಲಿ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಡಲಾಗುತ್ತದೆ
1) ಪ್ರಶ್ನೋತ್ತರ ಅವಧಿ
2) ಚರ್ಚೆ ಅವಧಿ
3) ವಿಶೇಷ ಅವಧಿ
4) ಯಾವುದೇ ಅವಧಿ
ಸರಿಯಾದ ಉತ್ತರ : 1) ಪ್ರಶ್ನೋತ್ತರ ಅವಧಿ
39) ಪಟ್ಟಿ -I ಮತ್ತು ಪಟ್ಟಿ-II ಗಳನ್ನು ಹೊಂದಿಸಿರಿ
I (ರಾಜ್ಯ) | II (ಸರೋವರ) |
ಎ) ಜಮ್ಮು & ಕಾಶ್ಮೀರ್ | I ಅಷ್ಟಮುಡಿ |
ಬಿ) ಓಡಿಸಾ | II ನಾಲ್ ಸರೋವರ |
ಸಿ) ಗುಜರಾತ್ | III ಚಿಲ್ಕಾ |
ಡಿ) ಕೇರಳ | IV ವೊಲಾರ ಸರೋವರ |
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
ಎ | ಬಿ | ಸಿ | ಡಿ | |
1) | II | I | IV | III |
2) | IV | III | II | I |
3) | III | IV | I | II |
4) | I | II | III | IV |
ಸರಿಯಾದ ಉತ್ತರ : 2) IV, III, II, I
39) ಹಳದಿ ನಾಯಕ ರಾಜ ಲಾಂಛನವು ಏನಾಗಿತ್ತು?
1) ಆನೆ
2) ಸಿಂಹ
3) ಗಂಡಬೇರುಂಡ
4) ವರಾಹ
ಸರಿಯಾದ ಉತ್ತರ : 3) ಗಂಡಬೇರುಂಡ
40) ಹತ್ತನೇ ಶತಮಾನದ ಆಚಾರ್ಯ ನೇಮಿಚಂದ್ರನನ್ನು ಜನಪ್ರಿಯವಾಗಿ ಹೀಗೆ ಹೆಸರಿಸಲಾಗುತ್ತಿತ್ತು ?
1) ಸಿದ್ಧಾಂತ ಚಕ್ರವರ್ತಿ
2) ಕವಿ ತಿಲಕ
3) ಸಕಲಕಲಾ ಚಕ್ರವರ್ತಿ
4) ಜೈಲ ಕುಲ ತಿಲಕ
ಸರಿಯಾದ ಉತ್ತರ : 1) ಸಿದ್ಧಾಂತ ಚಕ್ರವರ್ತಿ
41) 11ನೇ ಶತಮಾನದಲ್ಲಿ ಬಿಲ್ಹಣ ರಚಿಸಿದ ಕೃತಿ ಯಾವುದು ?
1) ರಾಜ ತರಂಗಿಣಿ
2) ಮಿತಾಕ್ಷರ ಸಂಹಿತಾ
3) ವಿಕ್ರಮಮಾಂಕದೇವಚರಿತ
4) ಕೌಮುದಿ ಮಹೋತ್ಸವ
ಸರಿಯಾದ ಉತ್ತರ : 3) ವಿಕ್ರಮಮಾಂಕದೇವಚರಿತ
42) ಈ ಕೆಳಗೆ ತಿಳಿಸಿರುವ ಯಾರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗಿದೆ?
1) ಕನಕದಾಸರು
2) ಪುರಂದರದಾಸರು
3) ಭೀಮಸೇನ್ ಜೋಷಿ
4) ಗಂಗೂಬಾಯಿ ಹಾಲಗಲ್
ಸರಿಯಾದ ಉತ್ತರ : 2) ಪುರಂದರದಾಸರು
43) ಮೇಲುಕೋಟೆಯು ಯಾವ ಸೈದ್ಧಾಂತಿಕ ತತ್ವದ ಕೇಂದ್ರವಾಗಿದೆ.
1) ಅದ್ವೈತ ಸಿದ್ಧಾಂತ
2) ವಿಶಿಷ್ಠಾದ್ಯೈ ಸಿದ್ಧಾಂತ
3) ದ್ವೈತ ಸಿದ್ಧಾಂತ
4) ಶಕ್ತಿ ಸಿದ್ಧಾಂತ
ಸರಿಯಾದ ಉತ್ತರ : 2) ವಿಶಿಷ್ಠಾದ್ಯೈ ಸಿದ್ಧಾಂತ
44) ಬಂಗಾಳ ವಿಭಜನೆ ಜಾರಿಗೆ ಬಂದಿದ್ದು ?
1) 16ನೇಯ ಅಕ್ಟೋಬರ್ 1905
2) 26ನೇಯ ಅಕ್ಟೋಬರ್ 1905
3) 16ನೇಯ ನವೆಂಬರ್ 1905
4) 26ನೇಯ ನವೆಂಬರ್ 1905
ಸರಿಯಾದ ಉತ್ತರ : 1) 16ನೇಯ ಅಕ್ಟೋಬರ್ 1905
45) ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಈ ಕೆಳಗಿನ ಯಾವ ಸಂವಿಧಾನದಿಂದ ಎರವಲು ಮಾಡಲಾಗಿದೆ. ?
1) ಯು. ಎಸ್.ಎ
2) ಇಂಗ್ಲೆಂಡ್
3) ಫ್ರಾನ್ಸ್
4) ಐರ್ಲೆಡ್
ಸರಿಯಾದ ಉತ್ತರ : 4) ಐರ್ಲೆಡ್
46) ಕಾಗೋಡು ಸತ್ಯಾಗ್ರಹವು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
1) ಭೂ ಸುಧಾರಣಾ ಕಾಯ್ದೆ
2) ಅರಣ್ಯ ಕಾಯ್ದೆ
3) ಔದ್ಯೋಗಿಕ ಕಾಯ್ದೆ
4) ಪರಿಸರ ಕಾಯ್ದೆ
ಸರಿಯಾದ ಉತ್ತರ : 1) ಭೂ ಸುಧಾರಣಾ ಕಾಯ್ದೆ
47) ಪ್ರತಿ ವರ್ಷವೂ ಈ ದಿನವನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿನವವಾಗಿ ಆಚರಿಸಲಾಗುತ್ತದೆ.
1) 22ನೇ ಏಪ್ರಿಲ್
2) 24ನೇ ಏಪ್ರಿಲ್
3) 24ನೇ ಜುಲೈ
4) 24ನೇ ನವೆಂಬರ
ಸರಿಯಾದ ಉತ್ತರ : 2) 24ನೇ ಏಪ್ರಿಲ್
47) ಪ್ರತಿ ವರ್ಷವೂ ಈ ದಿನವನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿನವವಾಗಿ ಆಚರಿಸಲಾಗುತ್ತದೆ.
1) 22ನೇ ಏಪ್ರಿಲ್
2) 24ನೇ ಏಪ್ರಿಲ್
3) 24ನೇ ಜುಲೈ
4) 24ನೇ ನವೆಂಬರ
ಸರಿಯಾದ ಉತ್ತರ : 2) 24ನೇ ಏಪ್ರಿಲ್
48) 1972ರ ಶಿಮ್ಲಾ ಒಪ್ಪಂದ ಯಾವ ರಾಷ್ಟ್ರಗಳ ಮಧ್ಯೆ ನಡೆಯಿತು ?
1) ಭಾರತ & ಪಾಕಿಸ್ತಾನ
2) ಭಾರತ & ಚೀನಾ
3) ಭಾರತ & ನೇಪಾಳ
4) ಭಾರತ & ಶ್ರೀಲಂಕಾ
ಸರಿಯಾದ ಉತ್ತರ : 1) ಭಾರತ & ಪಾಕಿಸ್ತಾನ
49) ಎಲ್ಲೂರದಲ್ಲಿ ಕೈಲಾಸನಾಥ ದೇವಾಲಯ ನಿರ್ವಹಿಸಿದವರು ಯಾರು?
1) ಅಮೋಘ ವರ್ಷ
2) ಕೃಷ್ಣ-I
3) ಗೋವಿಂದ – II
4) ಧ್ರುವ
ಸರಿಯಾದ ಉತ್ತರ : 2) ಕೃಷ್ಣ-I
50) ‘ ಮಾಯುಗುಣ / ಹವಾಮಾನ ಬದಲಾವಣೆ ದೀರ್ಘ- ನಡೆಯುವ ಬೃಹತ್ ಅರ್ಥಶಾಸ್ತ್ರೀಯ ವಿಶ್ಲೇಷಣೆಯಾಗಿ ಸಂಘಟನೆಗೊಳಿಸಿದ್ದಕ್ಕಾಗಿ’ ಮತ್ತು ‘ ತಾಂತ್ರಿಕ ನಾವೀನ್ಯತೆಗಳನ್ನು ದೀರ್ಘ- ನಡೆ ಬೃಹತ್ ಅರ್ಥಶಾಸ್ತ್ರೀಯ ವಿಶ್ಲೇಷಣೆವಾಗಿ ಸಂಘಟನೆಗೊಳಿಸಿದಿಕ್ಕಾಗಿ’ ಯಾರಿಗೆ 2018 ಸಾಲಿನ ಅರ್ಥಶಾಸ್ತ್ರ ವಿಜ್ಞಾನದಲ್ಲಿ ನೋಬೆಲ್ ಪಾರಿತೋಷಕರವನ್ನು ನೀಡಲಾಯಿತು ?
1) ವಿಲಿಯಂ ಡಿ,ನಾರ್ ಢೌಸ್ & ಪಾಲ್ ಎಂ.ರೋಮರ್
2) ಡೆನಿಸ್ ಮುಕ್ವೆಜ್ & ನಾಡಿಯಾ ಮಯರಾದ್
3) ಜೇಮ್ಸ್ ಪಿ ಅಲ್ಲಿಸನ್ ಮತ್ತು ಟಾಸುಕು ಹೊಂಜೋ
4) ಫ್ರಾನಿಸ್ ಹೆಚ್. ಆರ್ನಾಲ್ಡ್, ಜಾರ್ಜ್ ಪಿ ಸ್ಮಿತ್ & ಸರ್ ಗ್ರೆಗರಿ ಇ. ವಿಂಟರ್
ಸರಿಯಾದ ಉತ್ತರ : 1) ವಿಲಿಯಂ ಡಿ,ನಾರ್ ಢೌಸ್ & ಪಾಲ್ ಎಂ.ರೋಮರ್
51) ಕರ್ನಾಟಕದ ಮೊದಲನೇ ಭೂ ಸುಧಾರಣೆ ಸಮಿತಿಯ ಮುಖ್ಯಸ್ಥರು ಯಾರಾಗಿದ್ದರು ?
1) ಶ್ರೀ ರಾಮಕೃಷ್ಣ ಹೆಗಡೆ
2) ಶ್ರೀ ಎಚ್. ಕೆ. ಪಾಟೀಲ್
3) ಶ್ರೀ ದಾಸಪ್ಪ
4) ಶ್ರೀ ಬಿ, ಡಿ ಜತ್ತಿ
ಸರಿಯಾದ ಉತ್ತರ : 4) ಶ್ರೀ ಬಿ, ಡಿ ಜತ್ತಿ
52) ಈ ಕೆಳಗಿನ ಯಾವ ಸ್ಥಳವು ‘ವಿಶ್ವ ಸಾಂಸ್ಕೃತಿಕ ಪರಂಪರಾತಾಣ’ಕ್ಕೆ ಸೇರಿರುದಿಲ್ಲ ?
1) ಹಂಪೆ
2) ಚಿತ್ರದುರ್ಗ
3) ಬಾದಮಿ
4) ಪಟ್ಟದ ಕಲ್ಲು
ಸರಿಯಾದ ಉತ್ತರ : 4) ……..
53) ಸಂವಿಧಾನದ ಈ ಕೆಳಗಿನ ಯಾವ ವಿಧಯು ಅಸ್ಪೃಶ್ಯತೆಯನ್ನು ರದ್ದುಪಡಿಸುತ್ತದೆ ?
1) ವಿಧಿ 14
2) ವಿಧಿ 19
3) ವಿಧಿ 17
4) ವಿಧಿ 21
ಸರಿಯಾದ ಉತ್ತರ : 3) ವಿಧಿ 17
54) ಭಾರತದ ರಾಷ್ಟ್ರಪತಿಯವರು ರಾಜೀನಾಮೆ ಸಲ್ಲಿಸುವುದಾದರೆ ರಾಜೀನಾಮೆ ಪತ್ರವನ್ನು ಯಾರಿಗೆ ನೀಡುತ್ತಾರೆ ?
1) ಸಭಾಪತಿ
2) ಭಾರತದ ಪ್ರಧಾನ ಮಂತ್ರಿ
3) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು
4) ಭಾರತದ ಉಪ ರಾಷ್ಟ್ರಪತಿ
ಸರಿಯಾದ ಉತ್ತರ : 4) ಭಾರತದ ಉಪ ರಾಷ್ಟ್ರಪತಿ
55) ಭಾರತದಲ್ಲಿ ಈಗ ಮುಂದಿನ ಯಾವ ಪ್ರಾಧಿಕಾರಕ್ಕೆ ಸಾರ್ವಜನಿಕ ಲೆಕ್ಕ ಸಮಿತಿಯು ಅದರ ವರದಿಯನ್ನು ಸಲ್ಲಿಸುತ್ತವೆ ?
1) ಪ್ರಧಾನ ಮಂತ್ರಿ
2) ಸಚಿವ ಸಂಪುಟ
3) ಸಂಸತ್ತು
4) ಕಂಟ್ರೋಲರ್ & ಆಡಿಟರ್ ಜನರಲ
ಸರಿಯಾದ ಉತ್ತರ : 3) ಸಂಸತ್ತು
56) ಈ ಕೆಳಗಿನವುಗಳಲ್ಲಿ ಯಾವುದು ಟೆನಿಸ್ ಗ್ರ್ಯಾಂಡ್ ಸ್ಲ್ಯಾಂ ಪಂದ್ಯಾವಳಿಯಲ್ಲಿ ಅತ್ಯಂತ ಹಳೆಯದಾದುದು ?
1) ಫ್ರೆಂಚ್ ಓಪನ
2) ಆಸ್ಟ್ರೇಲಿಯನ್ ಓಪನ್
3) ವಿಂಬಲ್ಡನ್
4) ಯು. ಎಸ್. ಒಪನ್
ಸರಿಯಾದ ಉತ್ತರ : 3) ವಿಂಬಲ್ಡನ್
57) 2018ರ ಫಿಫಾ ವಿಶ್ವಕಪ್ ಅನ್ನು ಗೆದ್ದವರು ಯಾರು?
1) ಅರ್ಜೆಂಟೀನಾ
2) ಪ್ರಾನ್ಸ್
3) ಕ್ರೋಯಷಿಯಾ
4) ಬ್ರೆಝಿಲ್
ಸರಿಯಾದ ಉತ್ತರ : 2) ಪ್ರಾನ್ಸ್
58) ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯರ ಸಂಖ್ಯೆ ಎಷ್ಟು ?
1) 3
2) 4
3) 5
4) 6
ಸರಿಯಾದ ಉತ್ತರ : 3) 5
59) ಮೂರನೇಯ ಪಾಣಿಪತ್ ಕದನದಲ್ಲಿ ಮರಾಠ ಸೈನ್ಯದ ನಾಯಕತ್ವವನ್ನು ವಹಿಸಿದವರು ಯಾರು?
1) ವಿಶ್ವನಾಥ ರಾವ್
2) ಸದಾಶಿವ ರಾವ್
3) ಮಾಧವ ರಾವ್
4) ದತ್ತಾಜಿ ರಾವ್ ಸಿಂಧ್ಯ
ಸರಿಯಾದ ಉತ್ತರ : 2) ಸದಾಶಿವ ರಾವ್
60) ಮೋಡ ಬಿತ್ತನೆಯಲ್ಲಿ ಬಳಕೆಯಾಗುವ ಮುಖ್ಯ ರಸಾಯನಿಕಗಳು ?
1) ಕಾರ್ಬನ್ ಅಲ್ಯೂಮಿನಿಯಂ ಆಕ್ಸೈಡ್, ಐರನ್ ಆಕ್ಸೈಡ್
2) ಸೋಡಿಯಂ ಕ್ಲೋರೈಡ್, ಪೊಟ್ಯಾಸಿಯಂ ಕ್ಲೋರೈಡ್, ಸಿಲ್ವರ್ ಅಯೋಡಿನ್
3) ಸೋಡಿಯಂ ಕ್ಲೋರೈಡ್, ಕ್ಯಾಲ್ಸಿಯಂ ಕಾರ್ಬೋನೇಟ್, ಫೋಟ್ಯಾಸಿಯಂ ಸೆಲ್ಫೇಟ್
4) ಐರನ್ ಆಕ್ಸೈಡ್, ಕಾರ್ಬನ್, ಮೆಗ್ನೀಷಿಯಂ
ಸರಿಯಾದ ಉತ್ತರ : 2) ಸೋಡಿಯಂ ಕ್ಲೋರೈಡ್, ಪೊಟ್ಯಾಸಿಯಂ ಕ್ಲೋರೈಡ್, ಸಿಲ್ವರ್ ಅಯೋಡಿನ್
61) ಭಾರತದ ಪ್ರಸ್ತುತ ಚುನಾವಣೆ ಆಯೋಗ ಕೇಂದ್ರ ಆಯುಕ್ತರು ಯಾರು ?
1) ಓಂ ಪ್ರಕಾಶ್ ರಾವತ್
2) ಸುನಿಲ್ ಅರೋರ
3) ಟಿ.ಎನ್ ಶೇಷನ್
4) ನಸೀಮ್ ಜೈದಿ
ಸರಿಯಾದ ಉತ್ತರ : 2) ಸುನಿಲ್ ಅರೋರ
62) ಪಕ್ಷಾಂತರ ನಿಷೇಧ ಕಾಯ್ದೆ ಯಾವ ವರ್ಷದಲ್ಲಿ ಜಾರಿಗೆ ಬಂದಿತ್ತು ?
1) 1975
2) 1985
3) 1987
4) 1990
ಸರಿಯಾದ ಉತ್ತರ : 2) 1985
63) ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಅತ್ಯಂತ ಬೃಹತ್ ಧಾರಕ ಬಂದರಾಗಿದೆ ?
1) ಜವಾಹರ್ಲಾಲ್ ನೆಹರು ಬಂದರ
2) ಕಾಂಡ್ಲಾ ಬಂದರ
3) ಮರ್ಮ ಗೋವಾ ಬಂದರ
4) ಚೆನ್ನೈ ಬಂದಾರ
ಸರಿಯಾದ ಉತ್ತರ : 1) ಜವಾಹರ್ಲಾಲ್ ನೆಹರು ಬಂದರ
64) ಖಗೋಳ ವಿಜ್ಞಾನ ಬೈಬಲ್ ಎಂದು ಪರಿಗಣಿಸಲಾಗಿರುವ ಪಂಚಸಿದ್ಧಾಂತಿಕವು ಇದರಿಂದ ರಚಿಸಲ್ಪಟ್ಟಿದೆ ?
1) ವರಾಹಮಿಹಿರ
2) ಆರ್ಯಭಟ್ಟ
3) ಸುಶ್ರುತ
4) ದನ್ವಂತರಿ
ಸರಿಯಾದ ಉತ್ತರ : 1) ವರಾಹಮಿಹಿರ
65) ಕೆಳಗಿನ ಯಾವ ಶಾಂತವಾಹನ ದೊರೆ ಗಾಥ ಸಪ್ತಸತಿ ಕೃತಿಯನ್ನು ರಚಿಸಿದನು ?
1) ಸಿಮುಖ
2) 12ನೆ ಶಾತಕರ್ಣಿ
3) ಹಾಲ
4) ಗೌತಮೀಪುತ್ರ ಶಾತಕರ್ಣಿ
ಸರಿಯಾದ ಉತ್ತರ : 3) ಹಾಲ
66) ಚಾಲುಕ್ಯ ವಂಶದ ಸ್ಥಾಪಕರು ಯಾರು
1) ರಾಜ ಜಯಸಿಂಹ
2) ಕೀರ್ತಿ ವರ್ಮನ್
3) ಎರಡನೇ ತೈಲಪ
4) ವಿಜಯಾಲಯ
ಸರಿಯಾದ ಉತ್ತರ : 1) ರಾಜ ಜಯಸಿಂಹ
67) ಈ ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿರಿ
I) . ಮದ್ರಾಸ್ ಒಪ್ಪಂದ
II) ಸಹಾಯಕ ಸೈನ್ಯ ಒಪ್ಪಂದ
III) ಮಂಗಳೂರು ಒಪ್ಪಂದ
IV) ಶ್ರೀರಂಗಪಟ್ಟಣ ಒಪ್ಪಂದ
1) I, III, IV, II
2) I, IV, III, II
3) II, I, III, IV
4) III, II, IV, I
ಸರಿಯಾದ ಉತ್ತರ : 1) I, III, IV, II
68) n- ಮಾದರಿ ಅರೆ ವಾಹಕದಲ್ಲಿ ಹೆಚ್ಚುವರಿಯಾಗಿ ಇರುವ ಕಣ?
1) ಧನ ಅಯಾನು
2) ರಂಧ್ರ
3) ಇಲೆಕ್ಟ್ರಾನು
4) ಶುಣ ಅಯಾನು
ಸರಿಯಾದ ಉತ್ತರ : 3) ಇಲೆಕ್ಟ್ರಾನು
69) ಚೇಳಿನಲ್ಲಿ ಉಸಿರಾಟವು ಈ ಮೂಲಕ
1) ಶ್ವಾಸಕೋಶಗಳು
2) ಕಿವಿರುಗಳ
3) ಬುಕ್ ಲಂಗ್ಸ
4) ಶ್ವಾನಾಳ
ಸರಿಯಾದ ಉತ್ತರ : 3) ಬುಕ್ ಲಂಗ್ಸ
70) ಈ ಕೆಳಗಿನವರಲ್ಲಿ ಯಾರು ‘ಕ್ಯಾಬಿನೆಟ್ ಮಿಷನ್’ನ ಸದಸ್ಯರಾಗಿಲಿಲ್ಲ ?
1) ಸರ್ ಸ್ಟಾಫರ್ಡ್ ಕ್ರಿಪ್ಸ
2) ಎ.ವಿ ಅಲೆಗ್ಸಾಂಡರ್
3) ಸಿರೀಲ್ ರಾಡ್ ಕ್ಲಿಫ್
4) ಪ್ಯಾಥಿಕ್ – ಲಾರೆನ್ಸ್
ಸರಿಯಾದ ಉತ್ತರ : 3) ಸಿರೀಲ್ ರಾಡ್ ಕ್ಲಿಫ್
71) ಭಾರತದ ಪ್ರಥಮ ಪ್ರಮುಖ ಮುಖ್ಯ ಚುನಾವಣಾ ಆಯುಕ್ತರು
1) ಕೆ ಆರ್ ತ್ರಿವೇದಿ
2) ಸುಕುಮಾರ್ ಸೇನ್
3) ಕೆವಿಕೆ ಸುಂದರಂ
4) ಟಿ ಎನ್ ಶೇಷನ್
ಸರಿಯಾದ ಉತ್ತರ : 2) ಸುಕುಮಾರ್ ಸೇನ್
72) ಯಾವ ಕೃತಿಯನ್ನು ಸಂಸ್ಕೃತ ಭಾಷೆಯ ‘ಪ್ರಥಮ ವಿಶ್ವಕೋಶ ‘ವೆಂದು ಪರಿಗಣಿಸಲಾಗಿದ.?
1) ಮಿತಾಕ್ಷ
2) ಜಾತಕತಿಲಕ
3) ಗೋವಿದ್ಯಾ
4) ಮಾನಸೋಲ್ಲಾಸ
ಸರಿಯಾದ ಉತ್ತರ : 4) ಮಾನಸೋಲ್ಲಾಸ
73) ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ಮಾನ್ಯತೆಯನ್ನು ನೀಡುವ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ.
1) ಸಂಸತ್ತು
2) ಚುನಾವಣೆ ಆಯೋಗ
3) ಭಾರತದ ರಾಷ್ಟ್ರಪತಿಗಳು
4) ಭಾರತದ ಮುಖ್ಯ ನ್ಯಾಯಾಧೀಶರು
ಸರಿಯಾದ ಉತ್ತರ : 2) ಚುನಾವಣೆ ಆಯೋಗ
74) ಭಾರತದ ಯಾವ ನಗರವು ದೊಡ್ಡ ಕಟ್ಟಡ ಮತ್ತು ಅಪಾರ್ಟ್ ಮೆಂಟ್ ಗಳಲ್ಲಿ ಸೋಲರ್ ಫಲಕಗಳು ಅಳವಡಿಸಿಕೆಯನ್ನು ಮೊಟ್ಟಮೊದಲು ಕಡ್ಡಾಯಗೊಳಿಸಿತು
1) ಚೆನ್ನೈ
2) ತಿರುವನಂತಪುರಂ
3) ಹೈದರಾಬಾದ
4) ಕರಿಮನಗರ
ಸರಿಯಾದ ಉತ್ತರ : 4) ಕರಿಮನಗರ
75) ಜಗತ್ತಿನ ಅತ್ಯಂತ ಆಳವಾದ ಸರೋವರ
1) ವೋಲಾರ್ ಸರೋವರ
2) ಸುಪೀರಿಯರ್ ಸರೋವರ
3) ವಿಕ್ಟೋರಿಯಾ ಸರೋವ
4) ಬೈಕಲ್ ಸರೋವ
ಸರಿಯಾದ ಉತ್ತರ : 4) ಬೈಕಲ್ ಸರೋವ
76) ಆಲಿವ್ ರೀಡ್ ಲೇ ಆಮೆಗಳು ಸಮೂಹಿಕ ಮೊಟ್ಟೆ ಇಡುವ ಸ್ಥಳ ಗಹಿರ ಮಾತಾ ಇರುವುದು ಈ ಕಡಲ ತೀರದಲ್ಲಿ ?
1) ದಕ್ಷಿಣ ಒಡಿಶಾ
2) ದಕ್ಷಿಣ ಕನ್ನಡಜಿಲ್ಲೆ
3) ಉತ್ತರ ಅಂಡಮಾನ್
4) ದಕ್ಷಿಣ ಕೇರಳ
ಸರಿಯಾದ ಉತ್ತರ : 1) ದಕ್ಷಿಣ ಒಡಿಶಾ
77) ಯಾವ ಪರ್ವತ ಶ್ರೇಣಿಗಳು ಥೆತೈಸ್ ಸಮುದ್ರವಿದ್ದಲ್ಲಿ ನಿರ್ಮಾಣವಾಗಿದೆ.
1) ಹಿಮಾಲಯ
2) ಅರಾವಳಿ
3) ಹಿಂದೂ – ಕುಶ
4) ನೀಲ ಗಿರಿ
ಸರಿಯಾದ ಉತ್ತರ : 1) ಹಿಮಾಲಯ
78) ವಾಯುಮಂಡಲದ ಯಾವ ವಲಯದಲ್ಲಿ ರೇಡಿಯೋ ತರಂಗಗಳು ಮರಳಿ ಭೂಮಿಗೆ ಪ್ರತಿಫಲಿಸುತ್ತವೆ ?
1) ಸಮೋಷ್ಣ ಮಂಡಲ
2) ಪರಿವರ್ತನ ವಿರಾಮ (ಹವಾಗೋಳ ಮತ್ತು ಸ್ತರಗೋಳಗಳ ನಡುವಿನ ಅಂತರಮುಖ)
3) ಆಯಾನು ಮಂಡಲ
4) ಹೊರವಲಯ
ಸರಿಯಾದ ಉತ್ತರ : 3) ಆಯಾನು ಮಂಡಲ
79) ಶ್ರೀ ಎಸ್. ರಾಮಕೃಷ್ಣನ್ ಇವರು 2018ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರ ಈ ಕಾರಂಬರಿಗಾಗಿ ಗಳಿಸಿದರು ?
1) ಸಂಚಾರಂ
2) ನಿಮಿತ್ತಂ
3) ಸರೋವರಂ
4) ವಾಷಕ ಪರ್ವಂ
ಸರಿಯಾದ ಉತ್ತರ : 1) ಸಂಚಾರಂ
80) ಈ ಕೆಳಗಿನ ಯಾವ ನದಿಯ ಜಲಾನಯನದಲ್ಲಿ ಭೂ ಜಲ ಮಟ್ಟದ ನೀರಿನ ಉಪಯುಕ್ತತೆಯು ಕನಿಷ್ಟವಾಗಿದೆ.
1) ಗಂಗಾ
2) ಬ್ರಹ್ಮಪುತ್ರ
3) ಕಾವೇರಿ
4) ಕೃಷ್ಣ
ಸರಿಯಾದ ಉತ್ತರ : 2) ಬ್ರಹ್ಮಪುತ್ರ
81) ಕೆಳಗಿನ ಘಟನೆಗಳನ್ನು ಗಮನಿಸಿ ಸರಿಯಾದ ಅನುಕ್ರಮವನ್ನು ಗುರುತಿಸಿ:
A) ಗಾಂಧಿ – ಇರ್ವಿನ್ ಒಪ್ಪಂದ
B) ಮೊದಲ ದುಂಡು ಮೇಜಿನ ಪರಿಷತು
C) ದಂಡಿ ಯಾತ್ರೆ
D) ಮತೀಯ ತೀರ್ಪು
1) A, B, C, D
2) A, C, B, D
3) B, A, C, D
4) C, B, A, D
ಸರಿಯಾದ ಉತ್ತರ : 4) C, B, A, D
82) ಕರ್ನಾಟಕದಲ್ಲಿ ಈ ಕೆಳಗಿನವುಗಳಲ್ಲಿ ಪಶ್ಚಿಮದ ಕಡೆಗೆ ಹರಿಯದಿರುವ ನದಿಯಾವುದು
1) ಕಾಳಿ
2) ಅಘನಾಶನಿ
3) ಶರಾವತಿ
4) ಲಕ್ಷ್ಮಣ ತಿರ್ಥ
ಸರಿಯಾದ ಉತ್ತರ : 4) ಲಕ್ಷ್ಮಣ ತಿರ್ಥ
83) ಯಾವ ತಂಡವು ICC ODI ರ‍್ಯಾಂಕಗಳಲ್ಲಿ ಅಗ್ರಗಣ್ಯವಾಯಿತು ?
1) ಭಾರತ
2) ಇಂಗ್ಲೆಂಡ
3) ನ್ಯೂಝಿಲ್ಯಾಂಡ್
4) ದಕ್ಷಿಣ ಆಫ್ರಿಕಾ
ಸರಿಯಾದ ಉತ್ತರ : 2) ಇಂಗ್ಲೆಂಡ
84) ಭಾರತ ಚೀನಾ & ಮೈನ್ಮಾರ್ ಮೂರೂ ದೇಶಗಳ ಸಂಧಿ ಸ್ಥಾನದಲ್ಲಿ ರೂಪಿತವಾದ ಪರ್ವತ ಕಣಿವೆ ?
1) ನಾಥೂಲಾ
2) ಬಿಲೀಫ್ ಲಾ
3) ಬೊಮ್ ಡಿಲಾ
4) ಡಿಫೂ
ಸರಿಯಾದ ಉತ್ತರ : 4) ಡಿಫೂ
85) ಕೃಷಿ ಉತ್ಪನ್ನಗಳ ಕಾಯ್ದೆ 1937(1986ರಲ್ಲಿನ ತಿದ್ದುಪಡಿ) ಗೆ ಅನುಗುಣವಾಗಿ ಕೃಷಿ ಉತ್ಪನ್ನಗಳಿಗೆ ನೀಡಲಾಗುವ ಪ್ರಯಾಣಿಕರಣ ಮುದ್ರೆಯು ?
1) ಐ. ಎಸ್. ಐ (ISI)
2) ಅಗ್ ಮಾರ್ಕ (AGMARK)
3) ಎ.ಪಿ.ಎಂ.ಸಿ. (APMC)
4) ಎರೀರಾ (AREERA)
ಸರಿಯಾದ ಉತ್ತರ : 2) ಅಗ್ ಮಾರ್ಕ (AGMARK)
86) ಪ್ರೊ. ಮಾಧವ್ ಗಾಡ್ಗೀಳ್ ವರಿದಿಯು ಇದಕ್ಕೆ ಸಂಬಧಿಸಿದೆ ?
1) ಪಶ್ಚಿಮ ಘಟ್ಟ ಸಂರಕ್ಷಣೆ
2) ಉತ್ತರ ಒಳನಾಡು ಜಲಾನಯನ ಸಂರಕ್ಷಣೆ
3) ಮಲೆನಾಡು ಸಂರಕ್ಷಣೆ
4) ಕರಾವಳಿ ಸಂರಕ್ಷಣೆ
ಸರಿಯಾದ ಉತ್ತರ : 1) ಪಶ್ಚಿಮ ಘಟ್ಟ ಸಂರಕ್ಷಣೆ
87) ಏಶಿಯಾನ್ (ಎ ಎಸ್. ಇ. ಎ, ಎನ್) ಸಂಸ್ಥಾಪಕ ಸದಸ್ಯವಲ್ಲದ ದೇಶ ಈ ಕೆಳಗಿನವುಗಳಲ್ಲಿ ಯಾವುದು ?
1) ಥೈಲ್ಯಾಂಡ್
2) ಮಲೇಷ್ಯಾ
3) ಇಂಡೋನೇಷಿಯಾ
4) ವಿಯೆಟ್ನಾಂ
ಸರಿಯಾದ ಉತ್ತರ : 4) ವಿಯೆಟ್ನಾಂ
88) FEMA (ಫೇಮಾ ) ಎಂದರೇನು ?
1) ಪ್ಯಾರಿನ್ ಎಕ್ಸ್ ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್
2) ಫೆಕ್ಸ್ ಡ್ ಎಕ್ಸ್ ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್
3) ಪ್ಯಾರಿನ್ ಎಕ್ಸ್ ಚೇಂಜ್ ಮಾನಿಟರಿಂಗ್ ಆಕ್ಟ್
4) ಫಿಕ್ಸ್ ಡ್ ಎಕ್ಸ್ ಚೇಂಜ್ ಮಾನಿಟರಿಂಗ್ ಆಕ್ಟ್
ಸರಿಯಾದ ಉತ್ತರ : 1) ಪ್ಯಾರಿನ್ ಎಕ್ಸ್ ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್
90) ಕರ್ನಾಟಕ ಭೂ ಪ್ರದೇಶದಲ್ಲಿ ಅರಣ್ಯ (ಪಾಲು) ಪ್ರದೇಶದ ಶೇಕಡವಾರು
1) 22.6%
2) 25.6%
3) 32.6%
4) 26.6%
ಸರಿಯಾದ ಉತ್ತರ : 1) 22.6%
91) ಕರ್ನಾಟಕ ಯಾವ ಸ್ಥಳವನ್ನು ಭಾರತ ದೇಶ ‘ಕಾಫಿ ಬೆಳೆಯ ಜನ್ಮ ಸ್ಥಳ ‘ಎಂದು ಕರೆಯುತ್ತಾರೆ?
1) ಚಿಕ್ಕಮಂಗಳೂರು
2) ಬೆಂಗಳೂರು
3) ಮೈಸೂರ
4) ಕಾರವಾರ
ಸರಿಯಾದ ಉತ್ತರ : 1) ಚಿಕ್ಕಮಂಗಳೂರು
92) ಈ ಕೆಳಗಿನ ಯಾವ ಸಮಾಜ ಸುಧಾರಕ ಮೊದಲ ಮಾಹಿಳೆಯು ಕರ್ನಾಟಕ ಬಾರ್ ಕೌನ್ಸಿಲ್ ಅಧ್ಯಕ್ಷಯಾಗಿ ಆಯ್ಕೆಯಾಗಿದ್ದರು ?
1) ಅರುಣ ರಾಯ್
2) ಮೇಧ ಪಟ್ಕರ
3) ಪ್ರಮೀಳಾ ನೇಸರ್ಗಿ
4) ಲಕ್ಷ್ಮಿ ಅಗರವಾಲ್
ಸರಿಯಾದ ಉತ್ತರ : 3) ಪ್ರಮೀಳಾ ನೇಸರ್ಗಿ
93) ನವಂಬರ್ 2018ರಲ್ಲಿ ಬಂಗಾಳಕೊಲ್ಲಿಯಿಂದ ಅರಬ್ಬೀ ಸಮುದ್ರದ ಕಡೆಗೆ ಧಾವಿಸಿದ ಚಂಡಮಾರುತ ?
1) ಮೆಕೂನು
2) ಗಜಾ
3) ಸಾಗರ್
4) ಲೂಬಾನ್
ಸರಿಯಾದ ಉತ್ತರ : 2) ಗಜಾ
94) ವಂಶವಾಹಿಯೊಂದು ಇನ್ನೊಂದು ವಂಶವಾಹಿಯ (ಅಭಿವ್ಯಕ್ತಿಯನ್ನು) ಕಾರ್ಯಮ ಮರೆಮಾಡುವುದನ್ನು ಹೀಗೆನ್ನುತ್ತಾರೆ ?
1) ಪ್ರಭಾವಿ ?ಪ್ರಧಾನ
2) ಎಪಿಸ್ಟಾಸಿಸ್
3) ಅಪ್ರಭಾವಿ
4) ವಿಂಗಡಿತ
ಸರಿಯಾದ ಉತ್ತರ : 2) ಎಪಿಸ್ಟಾಸಿಸ್
95) ನಿದ್ರಾ ರೋಗಕ್ಕೆ ವಾಹಕ
1) ಮನೆ ನೋಣ
2) ಟ್ಸಿ ಟ್ಸಿ ನೋಣ
3) ಮರಳು ನೋಣ
4) ಹಣ್ಣು ನೋಣ
ಸರಿಯಾದ ಉತ್ತರ : 2) ಟ್ಸಿ ಟ್ಸಿ ನೋಣ
96) ಢೌನ್ ಸಿಂಡ್ರೋಮ್ ಎಂಬುದು ಇದರ ಸ್ಥಾನಂತರ
1) ಟ್ರೈಸೊಮಿ 13
2) ಟ್ರೈಸೊಮಿ 21
3) ಟ್ರೈಸೊಮಿ 23
4) ಟ್ರೈಸೊಮಿ 18
ಸರಿಯಾದ ಉತ್ತರ : 2) ಟ್ರೈಸೊಮಿ 21
97) ಸರ್ಕಾರದ…. ಅಂಗವು ಸಾರ್ವಜನಿಕ ನೀತಿ / ಧೋರಣೆಯನ್ನು ಕಾರ್ಯಗತಗೊಳಿಸುತ್ತದೆ.
1) ಸಂಸತ್ತು
2) ನ್ಯಾಯಾಂಗ
3) ಮತದಾರ ವರ್ಗ
4) ಕಾರ್ಯಾಂಗ
ಸರಿಯಾದ ಉತ್ತರ : 4) ಕಾರ್ಯಾಂಗ
98) ವಾಟರ್ ಬ್ಲೂಮ್ ಗಳು ಇದರಿಂದಾವು ?
1) ಬ್ಯಾಕ್ಟೀರಿಯಾ
2) ಶಿಲೀಂದ್ರ
3) ಲಿಚೆನಗ
4) ಆಲ್ಗಿ
ಸರಿಯಾದ ಉತ್ತರ : 4) ಆಲ್ಗಿ
99) ಇದು ವಾತಾವರಣದಲ್ಲಿ ಸಾರಜನಕವನ್ನು ಸ್ಥಿರೀಕರಿಸುವುದಿಲ್ಲ ?
1) ನಾಸ್ಟೋಕ್
2) ರೈಸೋಬಿಯಂ
3) ಅನಬೀನಾ
4) ನೈಟ್ರೋಸೊಮೊನಾಸ್
ಸರಿಯಾದ ಉತ್ತರ : 4) ನೈಟ್ರೋಸೊಮೊನಾಸ್
100) ಒಂದು ಚೌಕದ ಸುತ್ತಳತೆ 64 ಮೀಟರ್ ಗಳು ಇದ್ದರೆ, ಅದರ ವಿಸ್ತೀರ್ಣವೆಷ್ಟು?
1) 128 ಚ ಮೀಟರ್ ಗಳು
2) 32 ಚ ಮೀಟರ್ ಗಳು
3) 256 ಚ ಮೀಟರ್ ಗಳು
4) ಮೇಲಿನ ಯಾವುದು ಅಲ್ಲ
ಸರಿಯಾದ ಉತ್ತರ : 3) 256 ಚ ಮೀಟರ್ ಗಳು