Karnataka District Kannada [ ಕರ್ನಾಟಕ ಹೊಸ ಜಿಲ್ಲೆಗಳು ಮತ್ತು ವಿಭಾಗಗಳು]

Karnataka District Kannada ಕರ್ನಾಟಕವು ಜಿಲ್ಲೆಯು [Karnataka Jillegalu Kannada]  ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯ ಭಾಗದಲ್ಲಿದೆ. ಇಲ್ಲಿಯ ಜನರು ಕನ್ನಡ ಭಾಷೆಯನ್ನು ಪ್ರಧಾನವಾಗಿ ಮಾತನಾಡುವರು. ಕರ್ನಾಟಕವು ತನ್ನದೇ ಆದ ಸನ್ನಿವೇಶ, ವಿವಿಧ ಭೂಸ್ವರೂಪ, ವಿವಿಧ ಪ್ರಾಣಿ ಸಂಕುಲ, ಉತ್ಕೃಷ್ಟವಾದಂತಹ ಮಣ್ಣುಗಳು, ಅದ್ವಿತೀಯವಾದ ಜಲಸಂಪನ್ಮೂಲಗಳು, ಸಾರಿಗೆ ಸಂಪರ್ಕ ಮುಂತಾದ ವೈವಿಧ್ಯತೆಯುಳ್ಳ ಭೌಗೋಳಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನೊಳಗೊಂಡಿದೆ. ಕರ್ನಾಟಕದಲ್ಲೇ ರೇಷ್ಮೆ ಕೃಷಿಯೂ ವಿಶ್ವವಿಖ್ಯಾತವಾಗಿದೆ. ಭಾರತದಲ್ಲೇ ಪ್ರಥಮ ಬಾರಿಗೆ ಜಲವಿದ್ಯುಚ್ಛಕ್ತಿಯನ್ನು ಉತ್ಪಾದನೆ ಮಾಡಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ.

Karnataka-District-Kannada
Karnataka District Kannada

ಕರ್ನಾಟಕ ಭೂಗೋಳಿಕ ವಿರ್ಸೀಣ

ಕರ್ನಾಟಕ ರಾಜ್ಯವು 1,91,791 ಚ.ಕಿ.ಮೀ. ವಿಸ್ತೀರ್ಣ ವಾಗಿದೆ. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರದಲ್ಲಿ ಕರ್ನಾಟಕವು ಶೇ. 5.84ರಷ್ಟನ್ನು ಹೊಂದಿದೆ.ಕರ್ನಾಟಕವು ಭಾರತ ಪರ್ಯಾಯ ದ್ವೀಪದ ಪಶ್ಚಿಮ, ಮಧ್ಯ ಭಾಗದಲ್ಲಿದ್ದು, 11-31′ ಮತ್ತು 18°-45′ ಉತ್ತರ ಅಕ್ಷಾಂಶಗಳು ಹಾಗೂ 74°-12′ ಮತ್ತು 78°-40′ ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ.

ಪೂರ್ವ-ಪಶ್ಚಿಮವಾಗಿ 400 ಕಿ.ಮೀ. ಅಗಲವಾಗಿದ್ದು, ಉತ್ತರ- ದಕ್ಷಿಣವಾಗಿ 700 ಕಿ.ಮೀ.ಗಳಷ್ಟು ಉದ್ದವಾಗಿದೆ. ಕರ್ನಾಟಕದ ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರಪ್ರದೇಶ, ದಕ್ಷಿಣ ಮತ್ತು ಆನ್ನೇಯಕ್ಕೆ ತಮಿಳುನಾಡು, ನೈರುತ್ಯಕ್ಕೆ ಕೇರಳ, ವಾಯವ್ಯಕ್ಕೆ ಗೋವಾ ರಾಜ್ಯಗಳು ಹಾಗೂ ಪಶ್ಚಿಮಕ್ಕೆ ಅರಬ್ಬಿ ಸಮುದ್ರಗಳು ಮೇರೆಗಳಾಗಿವೆ.

ಕರ್ನಾಟಕ ಆಡಳಿತ ವಿಭಾಗಗಳು

ಆಡಳಿತ ನಿರ್ವಹಣೆಯ ದೃಷ್ಟಿಯಿಂದ ಕರ್ನಾಟಕವನ್ನು 4 ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ.

  1. ಬೆಂಗಳೂರು ವಿಭಾಗ: ಆಡಳಿತ ಕೇಂದ್ರ-ಬೆಂಗಳೂರು.
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ರಾಮನಗರ
    • ಚಿಕ್ಕಬಳ್ಳಾಪುರ
    • ಕೋಲಾರ
    • ತುಮಕೂರು
    • ಚಿತ್ರದುರ್ಗ
    • ದಾವಣಗೆರೆ
    • ಶಿವಮೊಗ್ಗ
  2. ಮೈಸೂರು ವಿಭಾಗ: ಆಡಳಿತ ಕೇಂದ್ರ -ಮೈಸೂರು
    • ಮೈಸೂರು
    • ಮಂಡ್ಯ
    • ಹಾಸನ
    • ಚಿಕ್ಕಮಗಳೂರು
    • ದಕ್ಷಿಣ ಕನ್ನಡ,
    • ಉಡುಪಿ
    • ಚಾಮರಾಜನಗರ .
  3. ಬೆಳಗಾವಿ ವಿಭಾಗ: ಆಡಳಿತ ಕೇಂದ್ರ -ಬೆಳಗಾವಿ
    • ಬೆಳಗಾವಿ,
    • ವಿಜಾಪುರ,
    • ಬಾಗಲಕೋಟೆ,
    • ಗದಗ, ಹಾವೇರಿ,
    • ಧಾರವಾಡ
    • ಉತ್ತರ ಕನ್ನಡ
    •  
  4. ಗುಲ್ಬರ್ಗಾ ವಿಭಾಗ: ಆಡಳಿತ ಕೇಂದ್ರ -ಗುಲ್ಬರ್ಗಾ
    • ಗುಲ್ಬರ್ಗಾ
    • ರಾಯಚೂರು
    • ಕೊಪ್ಪಳ
    • ಬೀದರ್
    • ಯಾದಗಿರಿ
    • ಬಳ್ಳಾರಿ

Leave a Reply

Your email address will not be published. Required fields are marked *