ಇದೊಂದು ರಚನಾ ಶೈಲಿಗೆ ಸಂಬಂಧಿಸಿದ ಪರಿಭಾಷೆ. ‘ಚಂಪೂ’ ಎಂಬುವುದು ಒಂದು ವಿಶಿಷ್ಟವಾದ ಕಾವ್ಯ ಪ್ರಕಾರ. ಗದ್ಯ ಮತ್ತು ಪದ್ಯಗಳೆರಡನ್ನು ಒಳಗೊಂಡ ದೀರ್ಘವಾದ ಕಾವ್ಯವೇ ಚಂಪೂಕಾವ್ಯ. ಇದರಲ್ಲಿ ಗದ್ಯಕ್ಕಿಂತ ಪದ್ಯವೇ ಹೆಚ್ಚಾಗಿರುತ್ತದೆ. ಸುಮಾರು 10ನೇ ಶತಮಾನದಿಂದ 12ನೇ ಶತಮಾನದ ಮಧ್ಯಭಾಗವನ್ನು ಕನ್ನಡದ ಚಂಪೂ ಸಾಹಿತ್ಯದ ಸುವರ್ಣಯುಗ ಎಂದು ಕರೆಯುತ್ತಾರೆ.

‘ಗದ್ಯಪದ್ಯಮಯೀ ಕಾಂತ್ ಚಂಪೂರಿತ್ಯಭೀಯತೆ’ ಎಂದು ದಂಡಿಯು ಕಾವ್ಯಾದರ್ಶದಲ್ಲಿ ಹೇಳಿದರೆ, ‘ಗದ್ಯಪದ್ಯಮಯಂ ಕಾವ್ಯ ಚಂಪೂರಿತ್ಯ ಭಿಧಿಯತೇ’ ಎಂದು ವಿಶ್ವನಾಥನು ಸಾಹಿತ್ಯ ದರ್ಪಣದಲ್ಲಿ ಹೇಳಿದ್ದಾನೆ. ‘ಗದ್ಯ ಪದ್ಯಮಯಂ, ಮಿಶ್ರಂ ಎಂದು ಕಾಂತಿಚಂದ್ರನು ವಿದ್ಯಾರತ್ನ ಕಾವ್ಯ ಪೀಠಿಕೆಯಲ್ಲಿ ಹೇಳಿದರೆ, ಬೆರೆಸಿರೆ ಗದ್ಯಪದ್ಯವೆರಡುಂ ಕೃತಿ ಚಂಪೂವೆಂಬ ಪೆಸರಂ ಪಡೆಗುಂ ಎಂದು ನಾಗವರ್ಮನು ಕಾವಾವ್ಯಲೋಕನದಲ್ಲಿ ವ್ಯಾಖ್ಯಾನಿಸಿದ್ದಾನೆ.




ಕನ್ನಡದಲ್ಲಿ ಮೊದಲ ಚಂಪೂ ಕಾವ್ಯದ ಆದಿಕವಿ ಪಂಪನಿಂದ ರಚಿತವಾದುದು. ಇದಕ್ಕೂ ಮೊದಲು ನೃಪತುಂಗನ ಕವಿರಾಜಮಾರ್ಗವು ಚಂಪೂ ರೀತಿಯಲ್ಲಿ ರಚಿತವಾಗಿತ್ತು. ಆದರೂ ಅದು – ಲಾಕ್ಷಣಿಕ ಗ್ರಂಥವಾಗಿದ್ದು ಕಾವ್ಯಗಳ ಲಕ್ಷಣಗಳನ್ನೇ ಪ್ರಧಾನ ವಿಷಯವನ್ನಾಗಿಸಿಕೊಂಡು ರಚಿತವಾದ ವಿಚಾರ ಪರ ಗ್ರಂಥ. ಆದರೆ ಕನ್ನಡ ಚಂಪೂ ಕಾವ್ಯಗಳ ರಚನೆ ಪ್ರಾರಂಭವಾದುದ್ದು ಪಂಪನಿಂದಲೇ ಎನ್ನಬಹುದು. ಆದಿಕಾಲೀನ ಕನ್ನಡ ಸಾಹಿತ್ಯ ಪಂಪನ ಯುಗವೆಂದೂ ಖ್ಯಾತವಾಗಿದೆ. ಆದಿಕವಿ ಪಂಪನ ಪ್ರತಿಭೆಯ ಪ್ರಭಾವವು ಸುಮಾರು ಶತಮಾನಗಳವರೆಗೆ ಇತ್ತು. ಈ ಕಾಲದಲ್ಲಿ ಸೃಷ್ಟಿಯಾದ ಸಾಹಿತ್ಯವು ಅತ್ಯಂತ ಪ್ರೌಢವಾಗಿ, ಸತ್ವಯುತವಾಗಿ, ರಸಮಯವಾಗಿರುವುದರಿಂದ ಅದನ್ನು ಕನ್ನಡ ಸಾಹಿತ್ಯದ ಸುವರ್ಣಯುಗವೆಂದು ಕರೆಯುವರು. ಈ ಯುಗದಲ್ಲಿ ರಚಿಸಲ್ಪಟ್ಟ ಕಾವ್ಯಗಳು ಚಂಪೂರೂಪದಲ್ಲಿದ್ದುದರಿಂದ ಇದನ್ನು ಚಂಪೂ ಯುಗವೆಂದು ಕರೆಯುವ ವಾಡಿಕೆ.

 

Kannada Champu Kavigalu




Champu Kavigalu List ಕೃತಿಗಳ ಪಟ್ಟಿ

ಕನ್ನಡದ ಪ್ರಮುಖ ಚಂಪೂ ಕಾವ್ಯಗಳು ಹೆಸರು

ಕೃತಿಗಾರರ ಹೆಸರುಕೃತಿಯ ಹೆಸರು
ಪಂಪಆದಿಪುರಾಣ, ವಿಕ್ರಮಾರ್ಜುನ ವಿಜಯ
ಮೊನ್ನಶಾಂತಿಪುರಾಣ
ನಾಗವರ್ಮ 1ಕರ್ಣಾಟಕ ಕಾದಂಬರಿ
ನಾಗವರ್ಮ 2ವರ್ಧಮಾನಪುರಾಣ
ರನ್ನಅಜಿತಪುರಾಣ, ಗದಾಯುದ್ಧ .
ದುರ್ಗಸಿಂಹಪಂಚತಂತ್ರ
ನಾಗಚಂದ್ರಮಲ್ಲಿನಾಥಪುರಾಣ, ರಾಮಚಂದ್ರ ಚರಿತ ಪುರಾಣ
ಬ್ರಹ್ಮಶಿವಸಮಯ ಪರೀಕ್ಷೆ
ನಯಸೇನಧರ್ಮಾಮೃತ
ನೇಮಿಚಂದ್ರನೇಮಿನಾಥಪುರಾಣ, ಲೀಲಾವತಿ ಪ್ರಬಂಧ
 ಹರಿಹರಗಿರಿಜಾಕಲ್ಯಾಣ
ಜನ್ನಅನಂತಪುರಾಣ, ಯಶೋಧರಚರಿತ
ಅಂಡಯ್ಯಕಬ್ಬಿಗರ ಕಾವಂ
ನಾಗರಾಜಪುಣ್ಯಾಸ್ರವ
ಷಡಕ್ಷರರಾಜಶೇಖರ ವಿಳಾಸ, ಬಸವರಾಜವಿಜಯ
ತಿರುಮಲಾರ್ಯಚಿಕ್ಕದೇವರಾಜ ವಿಜಯ
ತಿಮ್ಮಕವಿಯಾದವಗಿರಿ ಮಹಾತ್ಮ ವಚನ ಸಾಹಿತ




FAQ

ಚಂಪೂ ಕಾವ್ಯ ಎಂದರೇನು ? 

ಚಂಪೂ ಕಾವ್ಯ  ಇದೊಂದು ರಚನಾ  ಶೈಲಿಗೆ ಸಂಬಂಧಿಸಿದ ಪರಿಭಾಷೆ. ‘ಚಂಪೂ’ ಎಂಬುವುದು ಒಂದು ವಿಶಿಷ್ಟವಾದ ಕಾವ್ಯ ಪ್ರಕಾರ. ಗದ್ಯ ಮತ್ತು ಪದ್ಯಗಳೆರಡನ್ನು ಒಳಗೊಂಡ ದೀರ್ಘವಾದ ಕಾವ್ಯವೇ ಚಂಪೂಕಾವ್ಯ.

ಚಂಪೂ ಕಾವ್ಯಗಳು ಕೃತಿಗಳು ಯಾವುವು 

ಚಂಪು ಕಾವ್ಯಗಳ ಕೃತಿಗಳು ಹೀಗಿವೆ . ಆದಿಪುರಾಣ, ವಿಕ್ರಮಾರ್ಜುನ ವಿಜಯ,ಶಾಂತಿಪುರಾಣ, ಕರ್ಣಾಟಕ ಕಾದಂಬರಿ, ಪಂಚತಂತ್ರ,ಧರ್ಮಾಮೃತ,ಗಿರಿಜಾಕಲ್ಯಾಣ ಇತ್ಯಾದಿ

One comment

Leave a Reply

Your email address will not be published. Required fields are marked *