BBMP Recruitment 2024 : ಪಾಲಿಕೆ ವ್ಯಾಪ್ತಿಯ “ನಮ್ಮ ಕ್ಲಿನಿಕ್”ಗಳಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯಾಧಿಕಾರಿಗಳು, ಶುಶೂಷಕಿ / ಶುಶೂಷಕರು ಮತ್ತು ಪ್ರಯೋಗಶಾಲಾ ತಂತ್ರಜ್ಞರು ಹುದ್ದೆಗೆ 01 ವರ್ಷದ ಅವಧಿಗೆ ಸಂಪೂರ್ಣ ನೇರ ಗುತ್ತಿಗೆ ಆಧಾರದ ಮೇಲೆ ಈ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಖಾಲಿ ಇರುವಂತಹ ಸಂಖ್ಯೆಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ಖಾಲಿಯಾಗುವ ಹುದ್ದೆಗಳು ಭರ್ತಿಯಾಗುವವರೆಗೂ ನೇಮಕಾತಿ ಮಾಡಿಕೊಳ್ಳಲು ಆಸಕ್ತಿವುಳ್ಳ ಅಭ್ಯರ್ಥಿಗಳಿಂದ ಈ ಕೆಳಕಂಡ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ ಹೆಸರು
- ವೈದ್ಯಾಧಿಕಾರಿಗಳು
- ಶುಕ್ರೂಷಕಿ | ಶುಶೂಷಕರು
- ಪ್ರಯೋಗಶಾಲಾ ತಂತ್ರಜ್ಞರು
ವಿದ್ಯಾರ್ಹತೆ
ಹುದ್ದೆಯ ಹೆಸರು | ವಿದ್ಯಾರ್ಹತೆ |
ವೈದ್ಯಾಧಿಕಾರಿಗಳು | ಎಂಬಿಬಿಎಸ್ ಪದವಿಯೊಂದಿಗೆ ಕೆ.ಎಂ.ಸಿ. ನೋಂದಾವಣಿ. |
ಶುಕ್ರೂಷಕಿ | ಶುಶೂಷಕರು | ಬಿ.ಎಸ್.ಸಿ. / ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆಯೊಂದಿಗೆ ಮತ್ತು ಕೆ.ಎನ್.ಸಿ ಕೌನ್ಸಿಲ್ ನೋಂದಾವಣಿ ಹೊಂದಿರಬೇಕು. |
ಪ್ರಯೋಗಶಾಲಾ ತಂತ್ರಜ್ಞರು | ಡಿಪ್ಲೋಮಾ ಇನ್ ಪ್ರಯೋಗಶಾಲಾ ತಂತ್ರಜ್ಞಾನ (ಡಿ.ಎಂ.ಎಲ್.ಟಿ) / ಬಿಎಸ್ಸಿ ಲ್ಯಾಬ್ ಟೆಕ್ನಿಷಿಯನ್‌ನೊಂದಿಗೆ ಕರ್ನಾಟಕ ಸರ್ಕಾರ ಪ್ಯಾರಾಮೆಡಿಕಲ್ ಮಂಡಳಿಯ ನೋಂದಣಿ ಹೊಂದಿರಬೇಕು. |
ಅರ್ಜಿ ಸಲ್ಲಿಸುವ ವಿಳಾಸ
ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳು ಮತ್ತು ಒಂದು ಜೆರಾಕ್ಸ್ ಪ್ರತಿ, ಭಾವಚಿತ್ರದೊಂದಿಗೆ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ)ರವರ ಕಛೇರಿ, #304, ಅನೆಕ್ಸ್-3 ಕಟ್ಟಡ, 3ನೇ ಮಹಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿ, ಎನ್.ಆರ್. ಚೌಕ, ಬೆಂಗಳೂರು-560 002 ವಿಳಾಸಕ್ಕೆ ಖುದ್ದಾಗಿ ಅರ್ಜಿ ಸಲ್ಲಿಸಲು ಕೋರಿದೆ.