Lekhana Chinhegalu in Kannada : ಬರವಣಿಗೆಯಲ್ಲಿ ಉಪಯೋಗಿಸುವ ಚಿಹ್ನೆಗಳೇ ಲೇಖನ ಚಿಹ್ನೆಗಳು.. ಇವು ವಾಕ್ಯಗಳಲ್ಲಿರುವ ಬೇರೆ ಬೇರೆ ಭಾಗಗಳಿಗೆ ಇರುವ ಸಂಬಂಧವನ್ನು ಸೂಚಿಸುತ್ತವೆ. ಇದರಿಂದ ವಾಕ್ಯದ ಅರ್ಥ ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಹನ್ನೆರಡು ಬಗೆಯ ಲೇಖನ ಚಿಹ್ನೆಗಳಿವೆ.Lekhana Chinhegalu in Kannada




ಚಿಹ್ನೆ ಗಳಹೆಸರು  ಚಿಹ್ನೆ 
ಪೂರ್ಣವಿರಾಮ(.)
ಅರ್ಧವಿರಾಮ(;)
ಗೀಟು()
ಭಾವಸೂಚಕ ಚಿಹ್ನೆ(!)
ಅಧಿಕ ಚಿಹ್ನೆ(+)
ಉದ್ಧರಣ ಚಿಹ್ನೆ(” “) (‘ ‘)
ವಿವರಣಾ ಚಿಹ್ನೆ( :-)
ಅಲ್ಪವಿರಾಮ(,)
ವಿರಾಮ ಚಿಹ್ನೆ(:)
ಪ್ರಶ್ನಾರ್ಥಕ ಚಿಹ್ನೆ(?)
ಆವರಣ ಚಿಹ್ನೆ()
ಸಮಾನಾರ್ಥಕ ಚಿಹ್ನೆ=

Lekhana Chinhegalu in Kannada : ಲೇಖನಿ ಚಿಹ್ನೆಗಳನ್ನು ಉದಾಹರಣೆ ಮತ್ತು ವಿವರಗಳ ಮೂಲಕ ಕೆಳಗಡೆ ವಿಸ್ತಾರವಾಗಿ ಚರ್ಚಿಸಲಾಗಿದೆ.

ಪೂರ್ಣ ವಿರಾಮ [.]  ಒಂದು ವಾಕ್ಯ ಮುಗಿದ ಮೇಲೆ ಮತ್ತು ಶಬ್ದಗಳ ” ಸಂಕ್ಷಿಪ್ತ ರೂಪ ಬರೆಯುವಾಗ ಇದನ್ನು ಬಳಸುತ್ತೇವೆ.

ಉದಾಹರಣೆ : ರಾಮನು ಒಳ್ಳೆಯ ಹುಡುಗ. ಲೋ.ಸೇ.ಆ. (ಲೋಕ ಸೇವಾ ಆಯೋಗ)

ಅಲ್ಪ ವಿರಾಮ [.]

ವಾಕ್ಯವನ್ನು ಓದುವಾಗ ಅರ್ಥವಾಗುವಂತೆ ಅಲ್ಲಲ್ಲಿ ನಿಲ್ಲಿಸಿ ಓದಬೇಕಾದಾಗ ಮತ್ತು ಸಂಬೋಧನೆಯ ಮುಂದೆ ಇದನ್ನು ಬಳಸುತ್ತೇವೆ.

ಉದಾಹರಣೆ : ಕೃಷ್ಣ, ಬಲರಾಮರು ಆದರ್ಶ ಸೋದರರು

ಅರ್ಧ ವಿರಾಮ [i]  ವಾಕ್ಯದಲ್ಲಿ ಕ್ರಿಯಾಪದಗಳು ಒಂದಕ್ಕಿಂತ ಹೆಚ್ಚು ಇದ್ದಾಗ, ಈ ಹೆಚ್ಚಿರುವ ಕ್ರಿಯಾಪದಗಳನ್ನು ವಿಂಗಡಿಸುವಾಗ ಮತ್ತು ಪ್ರಧಾನ ವಾಕ್ಯಕ್ಕೆ ಅಧೀನವಾದ ಉಪವಾಕ್ಯಗಳು ಮುಗಿದಾಗಲೆಲ್ಲಾ ಈ ಚಿಹ್ನೆಯನ್ನು ಬಳಸುತ್ತೇವೆ.

ಉದಾಹರಣೆ : ಮನೆಯನ್ನು ಕಟ್ಟಬಹುದು; ಆದರೆ ಅದಕ್ಕೆ ಬೇಕಾದ ಮರಮುಟ್ಟುಗಳು ಸಿಕ್ಕುವುದು ಕಷ್ಟ; ಅಂತೆಯೇ ಗುಣವೂ ಸಹ.

ವಿವರಣ ಚಿಹ್ನೆ [:]  ವಾಕ್ಯದ ಅರ್ಥವನ್ನು ವಿವರಿಸುವುದಕ್ಕೆ ಮೊದಲಿಗೆ ಇದನ್ನು ಬಳಸುತ್ತೇವೆ. ಒಂದು ಅಭಿಪ್ರಾಯದ ವಿವರಣೆ ಮುಂದಿನಂತೆ ಇದೆ ಎಂದು ತೋರಿಸುವಾಗ ಬಳಸುತ್ತೇವೆ.

ಗೀಟು ಚಿಹ್ನೆ [-]  ವಾಕ್ಯವನ್ನು ಪೂರ್ಣಗೊಳಿಸುವ ಮೊದಲೇ ಹಠಾತ್ತಾಗಿ ನಿಲ್ಲಿಸಬೇಕಾದರೆ ಇದನ್ನು ಬಳಸುತ್ತೇವೆ.

ಉದಾಹರಣೆ :ಸಂತರು ಹೇಳುವುದು – ಅನುಕರಣೀಯ.

ವಿವರಣಾ ಚಿಹ್ನೆ [:-]  ಉದಾಹರಣೆ ಕೊಡುವಾಗ ಮತ್ತು ವಿವರಣೆ ನೀಡುವಾಗ ಇದನ್ನು ಬಳಸುತ್ತೇವೆ.

ಉದಾಹರಣೆ :   ನಾಲ್ಕು ಪುರುಷಾರ್ಥಗಳು:- ಧರ್ಮ, ಅರ್ಥ, ಕಾಮ, ಮೋಕ್ಷ.

ಪ್ರಶ್ನಾರ್ಥಕ ಚಿಹ್ನೆ [?] :ಪ್ರಶ್ನೆಯನ್ನು ಕೇಳುವ ಪದ ಮತ್ತು ವಾಕ್ಯದ ಕೊನೆಗೆ ಇದನ್ನು ಬಳಸುತ್ತೇವೆ.

ಉದಾಹರಣೆ : ಅವನು ಯಾರು?, ಪೆನ್ನು ಎಲ್ಲಿದೆ?, ಶಾಲೆಗೆ ಯಾಕೆ ಹೋಗಲಿಲ್ಲ?

ಉದ್ಧರಣ ಚಿಹ್ನೆ [(“”) (‘ ‘ )] : ಸಂಭಾಷಣೆಯ ಸಮಯದಲ್ಲಿ ಬೇರೆಡೆ ಉದ್ಭತ ವಾಕ್ಯವನ್ನು ಅಥವಾ ಶಬ್ದವನ್ನು ತೆಗೆದುಕೊಂಡಾಗ ಇದನ್ನು ಬಳಸುತ್ತೇವೆ. ಪಾರಿಭಾಷಿಕ ಶಬ್ದಗಳನ್ನು ಬಳಸುವಾಗ ಈ ಚಿಹ್ನೆಗಳನ್ನು ಬಳಸಬೇಕು

ಉದಾಹರಣೆ :  ಬಸವಣ್ಣನವರು ಹೇಳಿದ ಮಾತೆಂದರೆ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ”.

ಆವರಣ ಚಿಹ್ನೆ   [()] : ಒಂದು ಶಬ್ದ ಅಥವಾ ವಾಕ್ಯವನ್ನು ಹೇಳಿದ ಅದಕ್ಕೆ ಸಮನಾರ್ಥಕ ಶಬ್ದವನ್ನು, ವಾಕ್ಯವನ್ನು ಹೇಳುವಾಗ ಇದನ್ನು ಬಳಸುತ್ತಾರೆ.

ಉದಾಹರಣೆ :  ಎಷ್ಟೇ ಪರಾಕ್ರಮಿ ತಂದೆ ಇದ್ದರೂ ತನ್ನ ಮಕ್ಕಳ ಮೇಲೆ ಅತಿಯಾದ ಕೋಪ ತೋರಿಸಲಾರ, (ವಾತ್ಸಲ್ಯಮಯಿ ತಂದೆ)

ಅಧಿಕ ಚಿಹ್ನೆ [+] : ಸಂಧಿ ಮಾಡಿ ಹೇಳುವಾಗ, ಸಮಾಸ ಮಾಡುವಾಗ, ಲೆಕ್ಕ ಮಾಡುವಾಗ ಈ ಚಿಹ್ನೆ ಬಳಸುವರು.

ಉದಾಹರಣೆ :  ಗಿಡ + ಮರ +ಬಳ್ಳಿ =ಗಿಡ ಮರ ಬಳ್ಳಿ, ಕಾಲ + ಅನ್ನು = ಕಾಲವನ್ನು

ಸಮಾನಾರ್ಥಕ ಚಿಹ್ನೆ [=] : ಎರಡು ಪದಗಳ ಅರ್ಥ ಸಮಾನ ಎನ್ನುವಾಗ ಈ ಪದವನ್ನು ಬಳಸುತ್ತಾರೆ.

ಉದಾ : ಪ್ರಕಾಶ=ಬೆಳಕು, ಕಡಲು=ಜಲದಿ, ಐಶ್ವರ್ಯ=ಸಂಪತ್ತು.




 

Leave a Reply

Your email address will not be published. Required fields are marked *