GESCOM Recruitment New Notification-2024 : ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ, ಕೈಗಾರಿಕ ತರಬೇತಿ ಕೇಂದ್ರ, ಕಲಬುರಗಿ, ಇಲ್ಲಿ ನಡೆಸುವ 2024-25ನೇ ಸಾಲಿನ ಎಲೆಕ್ನಿಷಿಯನ್ ವೃತ್ತಿಯಲ್ಲಿ ಶಿಶಿಕ್ಷು (ಅಪ್ರೆಂಟಿಸ್) ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.

GESCOM Recruitment New Notification-2024

 

ಅಭ್ಯರ್ಥಿ ವಯಸ್ಸು

  • ದಿನಾಂಕ: 23.08.2024 ಕ್ಕೆ 16 ವರ್ಷ ಮೇಲ್ಪಟ್ಟು ಮತ್ತು ದಿನಾಂಕ: 13.09.2024 ಕ್ಕೆ 25, ವರ್ಷಕ್ಕಿಂತ ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳು ಮೀರಿರಬಾರದು.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ವಯಸ್ಸು 13.09.2024 ಕ್ಕೆ 30 ವರ್ಷಕ್ಕಿಂತ ಮೀರಿರಬಾರದು.




ಅಭ್ಯರ್ಥಿಯ ವಿದ್ಯಾರ್ಹತೆ

ಎಸ್.ಎಸ್.ಎಲ್.ಸಿ. ನಂತರ ಎರಡು ವರ್ಷ ಅವಧಿಯ ಐ.ಟಿ.ಐ. ತರಬೇತಿ ಹೊಂದಿ. ಕುಶಲಕರ್ಮಿ ತರಬೇತಿ ಯೋಜನೆಯಡಿ ನಡೆಸುವ ವೃತ್ತಿ ಪರೀಕ್ಷೆಯ ಎಲೆಕ್ನಿಷಿಯನ್ ವೃತ್ತಿಯಲ್ಲಿ ತೇರ್ಗಡೆಯಾಗಿ, ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (NCVT) ರಾಜ್ಯ ವೃತ್ತಿ ಪ್ರಮಾಣ ಪತ್ರ (SCVT) ಅಂಕಪಟ್ಟಿ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

ವೇತನ:

ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗಳಿಗೆ (NCVT) ಹಾಗೂ ರಾಜ್ಯ ವೃತ್ತಿ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗಳಿಗೆ (SCVT) ಒಂದು ವರ್ಷದ ತರಬೇತಿ ಅವಧಿ: ಮಾಸಿಕ ರೂ. 5500/-

ಅರ್ಜಿ ಸಲ್ಲಿಸುವ ವಿಧಾನ

  • ಪೂರ್ಣ ವಿವರವಿರುವ ಸ್ವಯಂ ಲಿಖಿತ ಅಥವಾ ಬೆರಳಚ್ಚು ಮಾಡಿದ ಅರ್ಜಿಗಳನ್ನು ಕೆಳಗೆ ಕಾಣಿಸಿರುವ ಅರ್ಜಿ ನಮೂನೆಯಂತೆ ಎಲ್ಲಾ ದಾಖಲೆಗಳೊಂದಿಗೆ “ಪ್ರಧಾನ ವ್ಯವಸ್ಥಾಪಕರು, (ಆ ಮತ್ತು ಮಾಸಂಅ), ನಿಗಮ ಕಛೇರಿ, ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ, (ಜೆಸ್ಕಾಂ) ಕಲಬುರಗಿ ರವರಿಗೆ ಸಲ್ಲಿಸತಕ್ಕದ್ದು.
  • ಅರ್ಜಿ ಕಳುಹಿಸುವ ಲಕೋಟೆಯ ಮೇಲೆ 2024-25ನೇ ಸಾಲಿನ ಶಿಶಿಕ್ಷು ಆಯ್ಕೆಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆದಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ಲಗತ್ತಿನೊಡನೆ ದಿನಾಂಕ: 23.08.2024 ರಿಂದ 13.09.2024 ರವರೆಗೆ ಸಾಯಂಕಾಲ 5.00 ಗಂಟೆಯೊಳಗೆ ನೇರವಾಗಿ ಅಥವಾ ಅಂಚೆಯ ಮೂಲಕ ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ) ನಿಗಮ ಕಛೇರಿ ಗು.ವಿ.ಸ.ಕಂ.ನಿ., ಸ್ಟೇಷನ್ ರೋಡ್ ಕಲಬುರಗಿ, 585102 ಇವರಿಗೆ ತಲುಪುವಂತೆ ಕಳುಹಿಸತಕ್ಕದ್ದು.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು




ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *