Chitradurga Civil servants Recruitment No Exam Direct Selection : ಚಿತ್ರದುರ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ನೇಮಕಾತಿಯಲ್ಲಿ ಖಾಲಿ ಉಳಿದಿರುವ ಪೌರಕಾರ್ಮಿಕರ ಒಟ್ಟು 26 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹತೆ ಅಭ್ಯರ್ಥಿಗಳು ಕೊನೆಯ ದಿನಾಂಕ 05-12-2024ರಂದು ಅರ್ಜಿಗಳನ್ನು ಸಲ್ಲಿಸಲಾಗುವುದು. ಸದರಿ ಹುದ್ದೆಯ ಪ್ರಮುಖ ಮಾಹಿತಿಯನ್ನು ತಿಳಿಯಲು ವಿಸ್ತಾರವಾಗಿ ಕೆಳಗೆ ಕೊಡಲಾಗಿದೆ.

Chitradurga Civil servants Recruitment No Exam Direct Selection

 

ಚಿತ್ರದುರ್ಗ ಜಿಲ್ಲೆ ಪೌರಕಾರ್ಮಿಕ ಹುದ್ದೆಗೆ ವಿದ್ಯಾರ್ಹತೆ, ವೇತನ, ವಯೋಮಿತಿ

  • ಪೌರಕಾರ್ಮಿಕರು ಹುದ್ದೆಯ ವೇತನ ಶ್ರೇಣಿ ರೂ.27,000 ರಿಂದ  47,675 /-
  • ವಿದ್ಯಾರ್ಹತೆ ಅವಶ್ಯಕತೆ ಇರುವುದಿಲ್ಲ. ಆದರೆ ಕನ್ನಡ ಮಾತನಾಡಲು ಗೊತ್ತಿರಬೇಕು.
  • ಮೀಸಲಾತಿ ಕೋರುವ ಅಭ್ಯರ್ಥಿಗಳು ಅರ್ಜಿಯ ಜತೆಗೆ, ಮೀಸಲಾತಿ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.
  • ಅರ್ಜಿ ಸಲ್ಲಿಸುವ ನೇರಪಾವತಿ ಪೌರಕಾರ್ಮಿಕರ ವಯೋಮಿತಿ ಕನಿಷ್ಠ 18 ವರ್ಷ ಗರಿಷ್ಠ 55 ವರ್ಷಗಳು ಮೀರಕೂಡದು.
  • ಅಭ್ಯರ್ಥಿಯ ವಯಸ್ಸನ್ನು ಶೈಕ್ಷಣಿಕ ವಿದ್ಯಾರ್ಹತೆ ದಾಖಲಾತಿಗಳು / ಆಧಾರ್ ಕಾರ್ಡ್‌ / ಪಡಿತರ ಚೀಟಿ / ಮತದಾರರ ಗುರುತಿನ ಚೀಟಿ / ದಾಖಲಾತಿಗಳನ್ನು ಆಧರಿಸಿ ನಿರ್ಧರಿಸಲಾಗುವುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು

  • ಇತ್ತೀಚಿನ 3 ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.
  • ಜನ್ಮ ದಿನಾಂಕದ ಧೃಢೀಕರಣಕ್ಕಾಗಿ ಶೈಕ್ಷಣಿಕ ದಾಖಲಾತಿಗಳು / ಆಧಾರ್ ಕಾರ್ಡ್‌ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ ಯಾವುದೇ ಆಗಬಹುದು.
  • ಚಿತ್ರದುರ್ಗ ಜಿಲ್ಲೆಯ ನಗರಸಭೆ / ಪುರಸಭೆ / ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಪ್ರಮಾಣ ಪತ್ರ.
  • ಜಾತಿ ಪ್ರಮಾಣ ಪತ್ರ.
  • ಈಗಾಗಲೇ ನೇರಪಾವತಿ ವಿಧಾನದಲ್ಲಿ ಕರ್ತವ್ಯ ನಿರ್ವಹಿಸುತ್ತ, ಸಂಬಳ ಪಡೆದ ಬಗ್ಗೆ ದಾಖಲೆಗಳು.
  • ಇತರೆ ಅನ್ವಯವಾಗುವ ದಾಖಲೆಗಳು.

ಚಿತ್ರದುರ್ಗ ಪೌರಕಾರ್ಮಿಕ ಅರ್ಜಿಯನ್ನು ಸಲ್ಲಿಸುವ ವಿಳಾಸ

ಸಂಬಂಧಿಸಿದ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿ ಇವರಿಂದ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ ರವರಿಗೆ ಸಲ್ಲಿಸುವುದು.

ಅರ್ಜಿ ಸಲ್ಲಿಸುವ ವಿಧಾನ:

ಅಧಿಸೂಚನೆಯ ಪ್ರತಿಯನ್ನು ಹಾಗೂ ನಿಗಧಿತ ಅರ್ಜಿ ನಮೂನೆಯನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು/ಮುಖ್ಯಾಧಿಕಾರಿಗಳಿಂದ ಪಡೆದು, ತಮಗೆ ಅನ್ವಯಿಸುವ ಎಲ್ಲಾ ಅಂಕಣಗಳನ್ನು ಭರ್ತಿ ಮಾಡುವುದು.

ಅಭ್ಯರ್ಥಿಯು ತನ್ನ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯ ಮೇಲೆ ಅಂಟಿಸಿ, ಅದರ ಮೇಲೆ ಸಹಿ/ಹೆಬ್ಬೆಟ್ಟಿನ ಗುರುತು ಮಾಡುವುದು ಹಾಗೂ ಅರ್ಜಿಯ ನಮೂನೆಯ ಕೊನೆಯಲ್ಲಿ ಘೋಷಣೆಯ ನಂತರ ಸಹಿ/ಹೆಬ್ಬೆಟ್ಟಿನ ಗುರುತು ಮಾಡುವುದು.

ವಯಸ್ಸು ಮತ್ತು ಕೋರಿರುವ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರಿಗಳಿಂದ ಪಡೆದು, ಅವುಗಳ ನಕಲು ಪ್ರತಿಗಳನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು/ಮುಖ್ಯಾಧಿಕಾರಿಗಳಿಂದ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ, ಅರ್ಜಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಪೌರಕಾರ್ಮಿಕರ ನೇಮಕಾತಿ ಆಯ್ಕೆ ಪ್ರಾಧಿಕಾರ ಚಿತ್ರದುರ್ಗ ಜಿಲ್ಲೆ ರವರ ಹೆಸರಿಗೆ ಕಛೇರಿ ವೇಳೆಯಲ್ಲಿ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ ಇವರಿಗೆ ನಿಗಧಿತ ಅವಧಿಯಲ್ಲಿ ಅರ್ಜಿಯನ್ನು ಸಲ್ಲಿಸುವುದು. ಅವಧಿ/ಸಮಯ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಚಿತ್ರದುರ್ಗ ಪೌರಕಾರ್ಮಿಕ ಅರ್ಜಿಯ ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಪ್ರಾರಂಭಿಕ ದಿನಾಂಕ06-11-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ05-12-2024

ಚಿತ್ರದುರ್ಗ ಪೌರಕಾರ್ಮಿಕ ಅರ್ಜಿಯ ಅಧಿಸೂಚನೆ

ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ




ರಾಜ್ಯ ಮತ್ತು ರಾಷ್ಟ್ರೀಯ ಉದ್ಯೋಗದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ

Leave a Reply

Your email address will not be published. Required fields are marked *