Avyayagalu In Kannada [ ಕನ್ನಡ ಅವ್ಯಗಳು]

Avyayagalu In Kannada  ಲಿಂಗ ಮತ್ತು ವಿಭಕ್ತಿಗಳೊಂದಿಗೆ ಸೇರಿ ಬದಲಾವಣೆ ಹೊಂದದೆ ಒಂದೇ ರೂಪದಲ್ಲಿರುವ ಪದಗಳು ಅವ್ಯಯಗಳು, ಅವ್ಯಯ ಪದಗಳಿಗೆ ಲಿಂಗ, ವಚನ ಮತ್ತು ವಿಭಕ್ತಿಗಳನ್ನು ಹಚ್ಚಲು ಬರುವುದಿಲ್ಲ. ಅವ್ಯಯ ಪದಗಳಿಗೆ ಲಿಂಗ, ವಚನ ಮತ್ತು ವಿಭಕ್ತಿಗಳನ್ನು ಹಚ್ಚಿದರೂ ಅವುಗಳಲ್ಲಿ ಬದಲಾವಣೆಯಾಗುವುದಿಲ್ಲ. ಉದಾ: ಮತ್ತು, ಹಾಗೂ, ಆದ್ದರಿಂದ, ಗೋಸ್ಕರ, ಅಲ್ಲಿ, ಇಲ್ಲಿ, ಎಲ್ಲಿ, ಜುಳುಜುಳು, ಗುಸುಗುಸು ಮುಂತಾದವು.

kannada vyakarana
kannada vyakarana



ಅವ್ಯಯಗಳಲ್ಲಿ 10 ಪ್ರಕಾರಳು (Avyayagalu Prakaragalu)

  1. ಸಾಮಾನ್ಯ ಅವ್ಯಯ
  2. ಅನುಕರಣ ಅವ್ಯಯ
  3. ಸಂಬಂಧಕ ಅಥವಾ ಸಮುಚ್ಚಯ ಅವ್ಯಯ
  4. ಕ್ರಿಯಾವಾಚಕ ಅವ್ಯಯ
  5. ಅವಧರಣಾರ್ಥಕ ಅವ್ಯಯ
  6. ಭಾವಸೂಚಕ ಅವ್ಯಯ
  7. ಕೃದಂತ ಅವ್ಯಯ
  8. ತದ್ಧಿತ ಅವ್ಯಯ
  9. ಪ್ರಶ್ನಾರ್ಥಕಾವ್ಯಯ
  10. ಸಂಬೋಧಕಾವ್ಯಯ




1. ಸಾಮಾನ್ಯ ಅವ್ಯಯ Samanya Avyaya

ಇವು ಸ್ಥಳ, ಕಾಲ ಮತ್ತು ರೀತಿಯನ್ನು ಹೇಳುವ ಪದಗಳಾಗಿರುತ್ತವೆ.

  •  ಸ್ಥಳ: ಅಲ್ಲಿ, ಇಲ್ಲಿ, ಎಲ್ಲಿ
  • ಕಾಲ: ತರುವಾಯ, ಕೂಡಲೇ, ಅಂದು, ಇಂದು, ಬಳಿಕ, ಒಡನೆ, ಬೇಗ
  • ರೀತಿ: ಹಾಗೆ, ಹೀಗೆ, ಮೆಲ್ಲಗೆ, ನುಣ್ಣಗೆ, ಬೆಳ್ಳಗೆ ಇತ್ಯಾದಿ2. ಅನುಕರಣ ಅವ್ಯಯ Anukaran Avyaya

ನಮಗೆ ಕೇಳಿಸಿದಂತಹ, ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕರಣೆ ಮಾಡಿ ಹೇಳುವ ಪದಗಳು ಇವಾಗಿರುತ್ತವೆ. ಅನುಕರಣ ಅವ್ಯಯಗಳಿಗೆ ಸಾಮಾನ್ಯವಾಗಿ ಅರ್ಥ ಇರುವುದಿಲ್ಲ. ಅರ್ಥ ಇದ್ದರೆ ಅವು ದ್ವಿರುಕ್ತಿಗಳಾಗುತ್ತವೆ.

ಉದಾ: ಜುಳುಜುಳು, ಬುಸುಬುಸು, ಭರಭರ, ಗಲಗಲ, ನಿಗಿನಿಗಿ, ಕಿಲಕಿಲ, ದಬದಬ ಇತ್ಯಾದಿ

3. ಸಂಬಂಧಕ ಅಥವಾ ಸಮುಚ್ಚಯ ಅವ್ಯಯ ( Sambandh Suchak Avyay Kannada)

ಇವು ಎರಡು ವಸ್ತುಗಳ ಅಥವಾ ಎರಡು ವಾಕ್ಯಗಳ ನಡುವಿನ ಸಂಬಂಧ ಹೇಳುವ ಪದಗಳಾಗಿರುತ್ತವೆ.

ಉದಾ: ಮತ್ತು, ಆದ್ದರಿಂದ, ಸಲುವಾಗಿ, ಕ್ರೋಸ್ಕರ, ಹಾಗೂ, ಏಕೆಂದರೆ, ಅಥವಾ ಇತ್ಯಾದಿ

4. ಕ್ರಿಯಾವಾಚಕ ಅವ್ಯಯ (Kriya Vachak Avyay Kannada)

ಒಂದು ವಾಕ್ಯದಲ್ಲಿ ಕ್ರಿಯಾಪದದ ಸ್ಥಾನದಲ್ಲಿ ಇದ್ದು ಆ ಕ್ರಿಯೆಯ ಅರ್ಥವನ್ನು ಪೂರ್ಣಗೊಳಿಸುವ ಪದಗಳು ಇವಾಗಿರುತ್ತವೆ.

ಉದಾ: ಉಂಟು, ಸಾಕು, ಬೇಕು, ಹೌದು, ಅಲ್ಲಿ, ಇಲ್ಲ, ಆಯ್ತು ಇತ್ಯಾದಿ




5. ಅವಧಾರಣಾರ್ಥಕ ಅವ್ಯಯ

ಅವಧಾರಣ ಎಂದರೆ ನಿಶ್ಚಯಿಸು ಅಥವಾ ನಿರ್ಧರಿಸು ಎಂದರ್ಥ. ಹಲವು ವಸ್ತುಗಳಲ್ಲಿ ಒಂದನ್ನೇ ನಿಶ್ಚಯಿಸಿ ಹೇಳುವಾಗ ಉಪಯೋಗಿಸುವ ಪದಗಳು ಇವಾಗಿರುತ್ತವೆ.

ಉದಾ: ಅದೇ, ಅವರೇ, ಅವಳೇ, ಅವನೇ ಇತ್ಯಾದಿ

6. ಭಾವಸೂಚಕ ಅವ್ಯಯ

ಸುಖ, ಸಂಭ್ರಮ, ಸಂತೋಷ, ಆಶ್ಚರ್ಯ, ದುಃಖ ಮೊದಲಾದ ಸಂದರ್ಭಗಳಲ್ಲಿ ನಮಗೆ ಅರಿವು – ಇಲ್ಲದಂತೆ ಅಪ್ರಯತ್ನ ಪೂರ್ವಕವಾಗಿ ಉಚ್ಚರಿಸುವ ಪದಗಳು ಇವಾಗಿರುತ್ತವೆ. ಉದಾ: ಅಯ್ಯೋ! ಆಹಾ, ಓಹೋ!, ಅಬ್ಬಾ, ಭಲೇ ಭಲೇ!, ಭೇಷ್‌ಭೇಷ್!, ಛೇ!, ಛೀ!

7. ಕೃದಂತಾವ್ಯಯ

ಕತ್ರ್ರು ಪ್ರತ್ಯಯ ಧಾತುಗಳಿಗೆ ಕ್ರಿಯಾ ವಿಭಕ್ತಿಪ್ರತ್ಯಯ ಅಥವಾ ಆಖ್ಯಾತ ಪ್ರತ್ಯಯ ಸೇರಿದರೆ ಕ್ರಿಯಾ ಪದಗಳಾಗುತ್ತವೆ. ಅದರಂತೆ ಧಾತುಗಳಿಗೆ ಕತ್ರ್ರು, ಪ್ರತ್ಯಯಗಳು ಪದಗಳಾಗುತ್ತವೆ. ಸೇರಿದರೆ ಕೃದಂತ

ಉದಾ: ಹೋಗುವ, ಬಂದು, ನೋಡಲು, ಹೊರಟ, ಬಿದ್ದ ಇತ್ಯಾದಿ

8. ತದ್ಧಿತಾಂತ ಅವ್ಯಯ

ನಾಮ ವಿಭಕ್ತಿ ಪ್ರತ್ಯಯಗಳು ಹಾಗೂ ತದ್ಧಿತ ಪ್ರತ್ಯಯಗಳು ಸೇರಿ ನಾಮಪದಗಳಾಗುವವು. ತದ್ಧಿತ ಪ್ರತ್ಯಯಗಳು ಸೇರಿದವುಗಳಿಗೆ ತದ್ದಿತ ಪದಗಳು ಅಥವಾ ತದ್ಧಿತಾಂತಗಳು ಎಂದು ಹೆಸರು.

ಉದಾ: : ಕನ್ನಡಿಗ, ಸಾಲಗಾರ, ಹಾವಾಡಿಗ, ಸಿರಿವಂತ, ಬುದ್ಧಿವಂತ, ಬೀಗತಿ ಇತ್ಯಾದಿ.

9. ಪ್ರಶ್ನಾರ್ಥಕಾವ್ಯಯ

ಪ್ರಶ್ನೆ ಮಾಡುವಾಗ ಉಪಯೋಗಿಸುವ ಅವ್ಯಯಗಳು ‘ಪ್ರಶ್ನಾರ್ಥಕಾವ್ಯಯ’ ಗಳೆನಿಸುವವು. ಈ ಪದಗಳಲ್ಲಿ ಎ, ಏ, ಓ, ಆ, ಏನು ಎಂಬ ಪ್ರತ್ಯಯಗಳು ಪ್ರಶ್ನಾರ್ಥಕವನ್ನು ಸೂಚಿಸುತ್ತವೆ.

ಉದಾ: ಅವಳು ಬಂದಳೇ?, ಏಕೆ ಬಂದಳು?, ಕೆಲಸ ಇತ್ತೇ?, ಯಾವಾಗ ಬರುತ್ತೀ?, ಎಲ್ಲಿ ಹೋಗೋಣ? ಇತ್ಯಾದಿ

10. ಸಂಬೋಧಕಾವ್ಯಯ

ಕರೆಯುವಾಗ ಉಪಯೋಗಿಸುವ ಶಬ್ದಗಳು ಸಂಬೋಧಕಾವ್ಯ- ಯಗಳೆನಿಸುವವು.

ಉದಾ: ಎಲೋ, ಎಲಾ, ಎಲೆ, ಓ ಇತ್ಯಾದಿ




Leave a Reply

Your email address will not be published. Required fields are marked *