Bidar DCC Bank Recruitment 2025 : ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ನೇಮಕಾತಿ 2025 – ಮುಖ್ಯ ಪ್ರಧಾನ ವ್ಯವಸ್ಥಾಪಕರು (CGM) ಹುದ್ದೆಗೆ ಅರ್ಜಿ ಆಹ್ವಾನ. ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. (Bidar District Central Cooperative Bank) ಮುಖ್ಯ ಪ್ರಧಾನ ವ್ಯವಸ್ಥಾಪಕರು (Chief General Manager – CGM) ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸುತ್ತಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇ-ಮೇಲ್, ಅಂಚೆ ಅಥವಾ ಖುದ್ದಾಗಿ ಹಾಜರಾಗಬಹುದು.

 

ಹುದ್ದೆಯ ವಿವರ:

ಹುದ್ದೆಯ ಹೆಸರು: ಮುಖ್ಯ ಪ್ರಧಾನ ವ್ಯವಸ್ಥಾಪಕರು (Chief General Manager – CGM)
ನೇಮಕಾತಿ ವಿಧಾನ: ಗುತ್ತಿಗೆ ಆಧಾರದ ಮೇಲೆ
ಅರ್ಜಿಗಳನ್ನು ಸಲ್ಲಿಸುವ ವಿಧಾನ:

ಹುದ್ದೆಯ ಜವಾಬ್ದಾರಿಗಳು:

  1. ಬ್ಯಾಂಕಿನ ಪ್ರಗತಿಗಾಗಿ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವುದು.
  2. ಆರ್ಥಿಕ ಯೋಜನೆ ಮತ್ತು ನಿರ್ವಹಣೆ ಕಾರ್ಯಗಳಲ್ಲಿ ಪರಿಣತಿ ಹೊಂದಿರುವುದು.
  3. ನಿಯಮಾವಳಿ ಪಾಲನೆ ಮತ್ತು ತಂಡ ನಿರ್ವಹಣೆಯಲ್ಲಿ ತಜ್ಞತೆ ಹೊಂದಿರುವುದು.
  4. ಬ್ಯಾಂಕಿಂಗ್ ವ್ಯವಸ್ಥೆಯ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳುವುದು

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು, ಅನುಭವ ಪ್ರಮಾಣ ಪತ್ರಗಳು ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಪಿಡಿಎಫ್ (PDF) ಸ್ವರೂಪದಲ್ಲಿ ಇ-ಮೇಲ್ ಮುಖಾಂತರ ಅಥವಾ ಅಂಚೆ ಮುಖಾಂತರ ಅಥವಾ ಖುದ್ದಾಗಿ ಸಲ್ಲಿಸಬೇಕು.




ಅರ್ಹತೆ ಮತ್ತು ಶೈಕ್ಷಣಿಕ ಅರ್ಹತೆ:

ಅನುಭವ : ಬ್ಯಾಂಕಿಂಗ್, ಹಣಕಾಸು ಅಥವಾ ಆಡಳಿತ ಕ್ಷೇತ್ರದಲ್ಲಿ ಕನಿಷ್ಠ 10 ರಿಂದ 15 ವರ್ಷಗಳ ಅನುಭವ ಅಗತ್ಯ.
ವಯೋಮಿತಿ: ಅಭ್ಯರ್ಥಿಯ ವಯಸ್ಸು 65 ವರ್ಷಕ್ಕಿಂತ ಕಡಿಮೆ ಇರಬೇಕು.

ಶೈಕ್ಷಣಿಕ ಅರ್ಹತೆ:

ಸ್ನಾತಕೋತ್ತರ ಪದವಿ (Post Graduate) – M.Com, MBA, MA (Economics)
ಆರ್ಥಿಕತೆ, ಹಣಕಾಸು ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆ ಅಗತ್ಯ.

 

ಅರ್ಜಿ ಶುಲ್ಕ

ವರ್ಗಅರ್ಜಿ ಶುಲ್ಕ
ಸಾಮಾನ್ಯ, ಪ್ರವರ್ಗ2 (ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ2000/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ1000/-

ಸೂಚನೆ:

  1. ಡಿಮ್ಯಾಂಡ ಡ್ರಾಫ್ಟ್ (ಡಿಡಿ) ಯನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬೀದರ ಇವರ ಹೆಸರಿನ ಮೇಲೆ ನೀಡಬೇಕು.
  2. ಅರ್ಜಿ ನಮೂನೆಯನ್ನು ನಮ್ಮ ಬ್ಯಾಂಕ್ ವೆಬ್ ಸೈಟ್ ಮುಖಾಂತರ ಡೌನಲೋಡ ಮಾಡಿಕೊಂಡು ಭರ್ತಿ ಮಾಡಿ ಕಳುಹಿಸಬೇಕು.

 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ದಿನಾಂಕ

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ19-02-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-03-2025




ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ

 




Leave a Reply

Your email address will not be published. Required fields are marked *