Chhatrapati Shivaji Kannada

ಛತ್ರಪತಿ ಶಿವಾಜಿ ಜಿವನ, ಇತಿಹಾಸ, ತಂದೆ ಹೆಸರು , ತಾಯಿ ಹೆಸರು

Chhatrapati Shivaji Kannada ಶಿವಾಜಿಯು ಚತುರ ಆಡಳಿತಗಾರನಾಗಿದ್ದು, ಆಡಳಿತದ ಎಲ್ಲಾ ಭಾಗಗಳಲ್ಲಿಯೂ ನೇರವಾದ ಹತೋಟಿಯನ್ನು ಹೊಂದಿದ್ದನು. ಆಡಳಿತದಲ್ಲಿ ನೆರವಾಗಲು ಮಂತ್ರಿ ಪರಿಷತ್ತು ಇತ್ತು. ಇದರಲ್ಲಿ ಅಷ್ಟಪ್ರಧಾನ” ಎನ್ನುವ ಮಂತ್ರಿಗಳಿದ್ದರು. ಅವರೆಂದರೆ ಪೇಶ್ವ (ಪ್ರಧಾನ ಮಂತ್ರಿ), ಅಮಾತ್ಯ (ಹಣಕಾಸಿನ ಮಂತ್ರಿ), ಸಚಿವ (ಪತ್ರ-ವ್ಯವಹಾರ), ಸುಮಂತ (ವಿದೇಶಾಂಗ), ಮಂತ್ರಿ (ಆಸ್ಥಾನದ ದೈನಂದಿನ ವ್ಯವಹಾರ), ಸೇನಾಪತಿ (ಸೈನಿಕ), ಪಂಡಿತರಾವ್‌ (ಧಾರ್ಮಿಕ) ಮತ್ತು ನ್ಯಾಯಾಧೀಶ (ನ್ಯಾಯ ವಿತರಣೆ).

ಶಿವಾಜಿ (1627-1680)
ತಂದೆ: ತಂದೆ ಶಹಾಜಿ ಬೋಸ್ಲೆ ,
ತಾಯಿ-ಜೀಜಾಬಾಯಿ
ಹುಟ್ಟಿದ ಸ್ಥಳ: ಶಿವನೇರು (ಕ್ರಿ.ಶ. 1627)
ಗುರು: ದಾದಾಜಿ ಕೊಂಡದೇವ
ರಾಜಧಾನಿ: ರಾಯಘಡ

Chhatrapati Shivaji Kannada
Chhatrapati Shivaji Kannada

ಪ್ರಮುಖ ಘಟನೆಗಳು

  • ಕ್ರಿಶ 1546ರಲ್ಲಿ ತೋರಣದ ಮೇಲೆ ಶಿವಾಜಿಯ ಪ್ರಥಮ ಆಕ್ರಮಣ ಮತ್ತು ವಶ. • ಕ್ರಿ.ಶ 1648ರಲ್ಲಿ ಪುರಂದರ ವಶ
  • ಕ್ರಿ.ಶ 1650ರಲ್ಲಿ ಚಾವಳಿಯ ವಶ
  • ಕ್ರಿ.ಶ 1659ರಲ್ಲಿ ಬಿಜಾಪುರದ ಅಬ್ಬಲ್‌ಖಾನ್‌ನೊಡನೆ ಹೋರಾಟ ಹಾಗೂ ಅವರ ಕೊಲೆ
  • ಕ್ರಿ.ಶ 1663ರಲ್ಲಿ ಪೂನಾದಲ್ಲಿ ಮೊಘಲರ ಶಾಯಿಸ್ಥಾಖಾನ್ ಮೇಲೆ ಆಕ್ರಮನ.
  • ಕ್ರಿ.ಶ 1665ರಲ್ಲಿ ಮೊಘಲರ ಸೇನಾನಿ ಜಯಸಿಂಹನಿಂದ ಮರಾಠರ ಪುರಂದರ ಕೋಟೆಯ ವಶ. ಇದು ಕಾರಣವಾಯಿತು. ‘ಪುರಂದರ’ ಒಪ್ಪಂದಕ್ಕೆ
  • ಕ್ರಿ.ಶ. 1666ರಲ್ಲಿ ಆಗ್ರಾದಿಂದ ಶಿವಾಜಿಯ ಪಲಾಯನ
  • ಕ್ರಿ.ಶ 1666-70 ಪುರಂದರ ಒಪ್ಪಂದದ ಪ್ರಕಾರ ಮೊಘಲರಿಗೆ ಬಿಟ್ಟುಕೊಟ್ಟಿದ್ದ ಎಲ್ಲ ಕೋಟೆಗಳ ಮನಃ ವಶ.
  • ಕ್ರಿ.ಶ. 1674 ರಾಯಘಡದಲ್ಲಿ ಛತ್ರಪತಿ ಎಂಬ ಬಿರುದಿನೊಂದಿಗೆ ಶಿವಾಜಿಯ ಕಿರೀಟ ಧಾರಣೆ,
  • ಕ್ರಿ.ಶ. 1676 ದಕ್ಷಿಣ ಭಾರತದ ಮೇಲೆ ಶಿವಾಜಿಯ ದಾಳಿ.
  • ಕ್ರಿ.ಶ 1680 ಶಿವಾಜಿಯ ಮರಣ

ಆಡಳಿತ:

ಶಿವಾಜಿಯ ರಾಜ್ಯವನ್ನು ಸ್ವರಾಜ್ಯ ಎಂದು ಕರೆಯಲಾಗುತ್ತಿತ್ತು. ಸ್ವರಾಜ್ಯವನ್ನು ನಾಲ್ಕು ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರಾಂತ್ಯವನ್ನು ತರಫ್‌ಗಳಾಗಿ, ತರಫ್‌ಗಳನ್ನು ಗ್ರಾಮಗಳಾಗಿ ವಿಂಗಡಿಸಲಾಗಿತ್ತು. ಕಂದಾಯ ವ್ಯವಸ್ಥೆಯಲ್ಲಿ ಜಾಗೀರುದಾರೀ ಪದ್ಧತಿಯನ್ನು ಬಳಸಲಿಲ್ಲ. ರೈತರಿಂದ ನೇರವಾಗಿ ಕಂದಾಯವನ್ನು ವಸೂಲಿ ಮಾಡಲಾಗುತ್ತಿತ್ತು. ಇದು ಉತ್ಪಾದನೆಯ ಶೇ 40ರಷ್ಟಿತ್ತು. ಶಿವಾಜಿಯು ಬೇರೆ ಎಲ್ಲಾ ರೀತಿಯ ತೆರಿಗೆಗಳನ್ನು ರದ್ದುಗೊಳಿಸಿದನು. ಭೂಮಿಯನ್ನು ‘ಖಾತಿ’ ಎನ್ನುವ ಅಳೆಗೋಲಿನಿಂದ ಮೋಜಣಿ ಮಾಡಲಾಗುತ್ತಿತ್ತು. ರೈತರಿಗೆ ವ್ಯವಸಾಯಕ್ಕೆ ಅನುಕೂಲಕರವಾಗಲು ಸಾಲವನ್ನು ನೀಡಲಾಗುತ್ತಿತ್ತು. ಅಲ್ಲದೆ ‘ಚೌತ್’ ಮತ್ತು `ಸರ್‌ದೇಶ್‌ಮುಖಿ’ ಎಂಬ ತೆರಿಗೆಯನ್ನು ಹೇರಲಾಗುತ್ತಿತ್ತು.

Leave a Reply

Your email address will not be published. Required fields are marked *