FDA Question Paper With Answer 2018

[ KPSC FDA, SDA, Notes] ಕನ್ನಡ ಭಾಷೆ ಸಾಮಾನ್ಯ ಜ್ಞಾನ (ಪತ್ರಿಕೆ III)

FDA Question Paper With Answer 2018  ಸ್ಪರ್ಧ ಮಿತ್ರಕೆ ಸ್ವಾಗತ, ಕೆಳಗೆ ಕೊಟ್ಟಿರುವ ಪ್ರಶ್ನೆ ಪತ್ರಿಕೆಯು 2018 ರಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಾಗಿದೆ.  ಈ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಮತ್ತು ಉತ್ತರ ಸಹಿತ ಈ ಕೆಳಗಡೆ ನೀಡಲಾಗಿದೆ. ಈ ಪ್ರಶ್ನೆ ಪತ್ರಿಕೆಯು FDA Question Paper With Answer 2018 [ KPSC FDA, SDA, Notes] ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ಯಾಗಿದ್ದು. ಗರಿಷ್ಠ 100 ಅಂಕ ಒಟ್ಟು 100 ಪ್ರಶ್ನೆಗಳಿದ್ದು ಸಮಯ 1: 30 ಗಂಟೆಯಾಗಿದೆ.

 

FDA Question Paper With Answer-2018
FDA Question Paper With Answer-2018.jpg

1) 1940 ರಲ್ಲಿ ಮಹಾತ್ಮ ಗಾಂಧೀಜಿಯವರು ಪರಿಮಿತ ಸತ್ಯಾಗ್ರಹವನ್ನು ವೈಯಕ್ತಿಕ ನೆಲೆಯಲ್ಲಿ ಪ್ರಾರಂಭಿಸಿದುದು ಏಕೆಂದರೆ,

1)  ರಾಷ್ಟ್ರೀಯ ಚಳುವಳಿಯ  ಅವಧಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ  ಎಡ ಮತ್ತು  ಬಲ ಪಂಥಗಳೆರಡನ್ನು ಒಟ್ಟು ಗೂಡಿಸಲು ಬಯಸಿದರು

2)  ಅವರು ಬ್ರಿಟಿಷ್ ಆಳ್ವಿಕೆಗೆ ಸಂಕೇತಿಕವಾಗಿ ವಿರುದ್ಧವನ್ನು ವ್ಯಕ್ತಪಡಿಸಲು ಬಯಸಿದ್ದು,  ಅದು  ಯುರೋಪಿನಲ್ಲಿ   ಫ್ಯಾಸಿಸ್  ಶಕ್ತಿ ಬಣಗಳನ್ನು ಶಮನ ಮಾಡುತ್ತಿದ್ದುದರಿಂದ.

3)  ಭಾರತದ ಸ್ವಾತಂತ್ರ್ಯ ಬೇಡಿಕೆಯನ್ನು ಶಾಂತಿಯುತವಾಗಿ ಒಪ್ಪಿಕೊಳ್ಳಲಿಕ್ಕಾಗಿ ಮತ್ತು ತಕ್ಷಣವೇ ಮಧ್ಯಂತರ ಭಾರತೀಯ ಸರ್ಕಾರವನ್ನು ರಚಿಸಿಲಿಕ್ಕಾಗಿ, ಬ್ರಿಟಿಷ ಆಳ್ವಿಕೆಗೆ  ಒಂದು ಅವಕಾಶವನ್ನು ನೀಡಿ ಬೆಳೆಸಿದರು 

4)  ಯುರೋಪಿನಲ್ಲಿ ಫ್ಯಾಸಿಸ್ಟ ಶಕ್ತಿ ಬಣಗಳನ್ನು ವಿರೋಧಿಸಿ ಬ್ರಿಟಿಷ್ ಆಳ್ವಿಕೆಗೆ ಅವರ ಸಕ್ರಿಯ ಬೆಂಬಲವನ್ನು ನೀಡಲು ಬಯಸಿದರು

 ಸರಿಯಾದ ಉತ್ತರ : 3)  ಭಾರತದ ಸ್ವಾತಂತ್ರ್ಯ ಬೇಡಿಕೆಯನ್ನು ಶಾಂತಿಯುತವಾಗಿ ಒಪ್ಪಿಕೊಳ್ಳಲಿಕ್ಕಾಗಿ ಮತ್ತು ತಕ್ಷಣವೇ ಮಧ್ಯಂತರ ಭಾರತೀಯ ಸರ್ಕಾರವನ್ನು ರಚಿಸಿಲಿಕ್ಕಾಗಿ, ಬ್ರಿಟಿಷ ಆಳ್ವಿಕೆಗೆ  ಒಂದು ಅವಕಾಶವನ್ನು ನೀಡಿ ಬೆಳೆಸಿದರು 

2)  ಈ ಕೆಳಗಿನ ಒಂದು ಕಂಡಿತರಲ್ಲಿ ಯಾರನ್ನು ಎರಡನೇ ಮತ್ತು ಮೂರನೇ ದುಂಡುಮೇಜಿನ ಸಮಾವೇಶಕ್ಕೆ ಪರಿಸ್ಥಿತಿಗೆ ಆಹ್ವಾನಿಸಲಾಗಿದೆ. 

1)  ಫಯಾಜ್ ಅಹಮದ್ ಫಯಾಜ್

2) ಜೋಷ್ ಮಲಿಹಾಬಾದಿ

3) ಮೊಹಮ್ಮದ್ ಇಕ್ಬಾಲ್

4) ಫಿರಾಖ ಗೋರಕ್ಪುರಿ

 ಸರಿಯಾದ ಉತ್ತರ :  3) ಮೊಹಮ್ಮದ್ ಇಕ್ಬಾಲ್

3)  ಈ ಕೆಳಗಿನವುಗಳಲ್ಲಿ ಯಾವುದು ಯಾದ್ದಾವಧಿಯಲ್ಲಿ ಶೌರ್ಯ ಪುರಸ್ಕಾರವಾಗಿದೆ. 

1) ಅಶೋಕ ಚಕ್ರ

2) ಕೀರ್ತಿ ಚಕ್ರ

3) ವೀರ ಚಕ್ರ

4) ಶೌರ್ಯ ಚಕ್ರ

 ಸರಿಯಾದ ಉತ್ತರ :  3) ವೀರ ಚಕ್ರ

4) ಈ ಕೆಳಗಿನ ಯಾವ ಕಾಯ್ದೆಯನ್ನು ಜವಾಹರ್ ಲಾಲ್ ನೆಹರೂರವರು “ದಾಸ್ಯತ್ವ ಸನ್ನದು (ಚಾರ್ಟರ್)” ಎಂಬುದಾಗಿ ವಿವರಿಸಿದರು?

1) ಭಾರತ ಸರ್ಕಾರದ 1919 ಕಾಯ್ದೆ 

2) ಭಾರತ ಸರ್ಕಾರದ 1935 ಕಾಯ್ದೆ 

3) ಪಿಟ್ಸ್ ಇಂಡಿಯಾ 1784ರ ಕಾಯ್ದೆ

4) ರೆಗ್ಯುಲೇಂಟಿಗ್ 1773ರ ಕಾಯ್ದೆ

 ಸರಿಯಾದ ಉತ್ತರ :  2) ಭಾರತ ಸರ್ಕಾರದ 1935 ಕಾಯ್ದೆ 

5) “ಪೋಲೋ ಕಾರ್ಯಚರಣೆ” ಯು ಈ ಕೆಳಗಿನ ಯಾವುದುಕ್ಕೆ ಸಂಬಂಧಿಸಿದೆ?

1) ಕ್ವಿಟ್ ಇಂಡಿಯಾ ಚಳುವಳಿಯ ಅವಧಿಯಲ್ಲಿ ಜವರಹರಲಾಲ್ ನೆಹರೂ ಅವರ ಬಂಧನ

2) ಬ್ರಿಟಿಷ್ ಭಾರತದ ಮೇಲೆ ಭಾರತೀಯ ರಾಷ್ಟ್ರೀಯ ಸೈನ್ಯದ ಅಕ್ರಮಣ

3) ಭಾರತ  ಸರ್ಕಾರಿ ದಿಂದ  ಹೈದರಾಬಾದ್ ಮಾಂಡಳಿಕ  ರಾಜ್ಯದ ಸ್ವಾಧೀನಪಡೆಸಿಕೊಳ್ಳುವಿಕೆ

4) ಪೋರ್ಚುಗೀಸರ ವಿರುದ್ಧ ಗೋವಾ ಸ್ವತಂತ್ರ ಹೋರಾಟ

 ಸರಿಯಾದ ಉತ್ತರ :  3)  ಭಾರತ  ಸರ್ಕಾರಿ ದಿಂದ  ಹೈದರಾಬಾದ್ ಮಾಂಡಳಿಕ  ರಾಜ್ಯದ ಸ್ವಾಧೀನಪಡೆಸಿಕೊಳ್ಳುವಿಕೆ

6) 1927ರ  ಬಟ್ಲರ್ ಸಮಿತಿಯ  ಧೈಯವು

1) ಭಾರತೀಯ ಸೈನ್ಯದ ಆಧುನೀಕರಣ

2) ಭಾರತೀ ಕೃಷಿಯ ಆಧುನೀಕರಣ

3) ಭಾರತ  ಸರ್ಕಾರಿ ದಿಂದ  ಹೈದರಾಬಾದ್ ಮಾಂಡಳಿಕ  ರಾಜ್ಯದ ಸ್ವಾಧೀನಪಡೆಸಿಕೊಳ್ಳುವಿಕೆ

4) ಭಾರತ ಸರ್ಕಾರ ಮತ್ತು ಭಾರತೀಯ ಮಾಂಡಲೀಕ ರಾಜ್ಯಗಳ ನಡುವಣ ಸಂಬಧವನ್ನು ಸುಧಾರಿಸುವುದು

 ಸರಿಯಾದ ಉತ್ತರ :  4) ಭಾರತ ಸರ್ಕಾರ ಮತ್ತು ಭಾರತೀಯ ಮಾಂಡಲೀಕ ರಾಜ್ಯಗಳ ನಡುವಣ ಸಂಬಧವನ್ನು ಸುಧಾರಿಸುವುದು

7) ಪಟ್ಟಿ -I ರಲ್ಲಿನ ಪ್ರಮುಖ ದಿನಗಳನ್ನು ಪಟ್ಟಿ-II ರಲ್ಲಿನ ದಿನಾಂಕಗಳಂದಿಗೆ ಸರಿಹೊಂದಿಸಿ:

ಪಟ್ಟಿ ಎ (ಪ್ರಮುಖ ದಿನಗಲು)ಪಟ್ಟಿ  ಬಿ  (ದಿನಾಂಕಗಳು)
A) ವಿಶ್ವ ರೆಡ್ ಕ್ರಾಸ್ ದಿನI)  21ನೇ ಜೂನ್
B) ಅಂತರಾಷ್ಟ್ರೀಯ ಯೋಗ ದಿನ II) 8ನೇ ಮೇ
C) ಭಾರತದ ವಾಯುದಳ ದಿನ III) 8ನೇ ಸೆಪ್ಟಂಬರ್
D) ಅಂತರಾಷ್ಟ್ರೀಯ ಸಾಕ್ಷರತೆ ದಿನIV) 8ನೇ ಅಕ್ಟೋಬರ್
V) 7ನೇ ಅಕ್ಟೋಬರ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ

ABCD
1)IIIIVV
2)IIIIIIII
3)IIIIVIII
4)IIIIVV

ಸರಿಯಾದ ಉತ್ತರ  : 1) II,  I, IV, III

8) ಈಕೆಳಗಿನ ಸಮಸ್ಯೆಯ ಚಿತ್ರದಲ್ಲಿ ಪ್ರಶ್ನಾರ್ಥಕ ಚಿಹ್ಬೆಯುಳ್ಳ (?) ಸ್ಥಳಕ್ಕೆ ಹೊಂದಿಕೆಯಾಗಬಲ್ಲ ಸರಿ ಚಿತ್ರವನ್ನು ಉತ್ತರದ ಚಿತ್ರಗಳಿಂದ ಆರಿಸಿ. 

FDA Question Paper With Answer 2018
FDA Question Paper With Answer 2018

ಸರಿಯಾದ ಉತ್ತರ  : 3) 

9) ಈ ಕೆಳಗಿನ ಚಿತ್ರದಲ್ಲಿ ಎಷ್ಟು ಸರಳ ರೇಖೆಗಳಿವೆ ?

FDA Question Paper With Answer 2018
FDA Question Paper With Answer 2018

ಸರಿಯಾದ ಉತ್ತರ  : 2) 12

10) ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :

ಎ) ಅಜಯನ್ನು ರಾಹುಲ್ ಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದ್ದಾನೆ

ಬಿ) ರಾಹುಲ್ ನು ಮನೀಶ್ ಗಿಂತಲೂ ಕಡಿಮೆ ಅಂಕಗಳನ್ನು ಗಳಿಸಿದ್ದಾನೆ

ಸಿ) ಮನೀಶ್ ನು ಅಜಯ್ ಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದ್ದಾನೆ 

ಡಿ) ವಿಜಯ್ ನು ಅಜಯ್ ಗಿಂತಲೂ ಹೆಚ್ಚು ಅಂಕಗಳನ್ನು ಕಡಿಮೆ ಅಂಕಗಳನ್ನು ಗಳಿಸಿದ್ದಾನೆ.

ಮೇಲಿನ ಹೇಳಿಕೆಗಳ ಮೇರೆಗೆ ಯಾರು ಅತ್ಯಧಿಕ ಅಂಕಗಳನ್ನು ಗಳಿಸಿದ್ದಾರೆ ?

1) ಅಜಯ್          2) ರಾಹುಲ್         3) ಮನೀಶ್        4) ವಿಜಯ್

 ಸರಿಯಾದ ಉತ್ತರ :  3) ಮನೀಶ್

11) ಪ್ರಕಾಶನಿಗೆ ಆಶೀಷನು ಹೇಳಿದನ್ನು “ಫುಟ್ ಬಾಲ್ ನೊಂದಿಗೆ ಆಡುತ್ತಿರುವ ಆ ಹುಡುಗನು ನನ್ನ ತಂದೆಯ ಪತ್ನಿಯ ಮಗಳ ಇಬ್ಬರು ಸೋದರರಲ್ಲಿ ಕಿರಿಯವನು” ಫುಟ್ ಬಾಲ್ ನ್ನು ಆಡುತ್ತಿರುವ ಹುಡುಗನ್ನು ಆಶೀಷಗೆ ಯಾವ ರೀತಿಯಲ್ಲಿ ಸಂಬಂಧ  ಹೊಂದಿದ್ದಾನೆ? 

ಎ) ಮಗ

ಬಿ) ಸಹೋದರ

ಸಿ) ಮೈದನ/ ಭಾವ ? ಸೋದರಿಯ ಗಂಡ 

ಡಿ) ಚಿಕ್ಕಪ್ಪನ ಮಗ

ಸರಿಯಾದ ಉತ್ತರ :  ಬಿ) ಸಹೋದರ

12) ಈ ಕೆಳಗಿನ ಪ್ರಶ್ನೆಯಲ್ಲಿ, ಒಂದು ಹೇಲಿಕೆಯನ್ನು A ಮತ್ತು B ಎಂಬ ಎಡಡು ಊಹೆಗಳು ಅನುಸರಿಸುತ್ತವೆ. ನೀವು ಹೇಳಿಕೆಯನ್ನು ಮತ್ತು ಅದನ್ನಸರಿಸುವ ಊಹೆಗಳನ್ನು ಪರಿಗಣಿಸಬೇಕು ಮತ್ತು ಯಾವ ಊಹೆಯು/ಗಳು ಹೇಳಿಕೆಯಲ್ಲಿ ಧ್ವನಿಸುತ್ತದೆ/ವೆ ಎಂಬುದನ್ನು ನಿರ್ಧರಿಸಿ. 

ಹೇಳಿಕೆ : ರಾಜ್ಯ ಸರ್ಕಾರವು ನಾಲ್ಕು ಸಾವಿರ ಪ್ರಾಥಮಿಕ ಶಾಲೆಗಳ  ಉಪಾಧ್ಯಾಯರನ್ನು ಮುಂದಿನ ಹಣಕಾಸಿನ ವರ್ಷದಲ್ಲಿ ನೇಮಕ ಮಾಡಲು ನಿರ್ಧರಿಸಿದೆ.

ಊಹೆ A : ನಾಲ್ಕು ಸಾವಿರ ಹೆಚ್ಚುವರಿ ಉಪಾಧ್ಯಾಯರನ್ನು ಒಳಗೊಳ್ಳಲು  ರಾಜ್ಯದಲ್ಲಿ ಸಾಕಷ್ಟು ಶಾಲೆಗಳಿವೆ.

ಊಹೆ B :  ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಆಸಕ್ತಿ ಹೊಂದದಿರಬಹುದು ಅಥವಾ ಅಂತಿಮವಾಗಿ ಸರ್ಕಾರದಿಂದ ಅಷ್ಟು ಹೆಚ್ಚಿನ ಸಂಖ್ಯೆಯ ಪ್ರಾಥಮಿಕ ಶಾಲಾ ಉಪಾಧ್ಯಾಯರನ್ನು ನೇಮಿಸುವುದಿಲ್ಲ.

1) A ಊಹನೆ ಮಾತ್ರ ಧ್ವನಿಸುತ್ತದೆ

2) B ಊಹನೆ ಮಾತ್ರ ಧ್ವನಿಸುತ್ತದೆ

3) A ಊಹನೆ & B ಊಹನೆಗಳೆರಡೂ ಧ್ವನಿಸುತ್ತವೆ. 

4) A ಊಹನೆ ಅಗಲೀ/ B ಊಹನೆ ಅಗಲೀ ಧ್ವನಿಸುವುದಿಲ್ಲ.

ಸರಿಯಾದ ಉತ್ತರ :  1) A ಊಹನೆ ಮಾತ್ರ ಧ್ವನಿಸುತ್ತದೆ

13) ಈ ಕೆಳಗಿನ ಪ್ರಶ್ನೆಯಲ್ಲಿ,  ನಿರ್ದಿಷ್ಟ ಸಂಖ್ಯೆಗಳನ್ನು ಉಳ್ಳ ಒಂದು ಚಿತ್ರವನ್ನು ನೀಡಿದೆ. ಈ ಚಿತ್ರದಲ್ಲಿನ ಸಂಖ್ಯೆಗಳು ಒಂದು ಸದೃಶ ನಮೂನೆಯನ್ನು ಅನುಸರಿಸುತ್ತವೆ ಎಂದು ಭಾವಿಸಿ ಬಿಟ್ಟು ಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ.

17

855

13

754
6126

3

1064

?

1) 4,  2) 5,   3) 6,   4) 2

ಸರಿಯಾದ ಉತ್ತರ :  1) 4

14) ಕೆಳಗಿನ ಯಾವ ರೇಖಾಚಿತ್ರಗಳು ಕರೆನ್ಸಿ, ರೂಪಯಿ ಮತ್ತು ಡಾಲರ್ ಗಳು ನಡುವಣ ಸರಿಯಾದ ಸಂಬಂಧವನ್ನು ಪ್ರತಿಧಿಸುತ್ತವೆ?

FDA Question Paper With Answer 2018

ಸರಿಯಾದ ಉತ್ತರ :  2) 

15)ಮೊಘಲರ ಆಸ್ಥಾನದಲ್ಲಿದ್ದ ಯಾರನ್ನು ತುರಾನೀಸ್ ಎಂದು ಕರೆಯಲಾಗುತ್ತಿತು?

1) ಇರಾಕ್ ನಿಂದ ಬಂದವರನ್ನು

2)  ಅಫ್ಘಾನಿಸ್ತಾನಕ್ಕೆ ಸೇರಿದವರನ್ನು

3)  ಮಧ್ಯ ಏಷ್ಯಾ ಪ್ರದೇಶಗಳ ಮೂಲದಿಂದ ಬಂದವರನ್ನು 

4)  ಇರಾನ್ ನಿಂದ ಬಂದವರನ್ನು

ಸರಿಯಾದ ಉತ್ತರ :  3)  ಮಧ್ಯ ಏಷ್ಯಾ ಪ್ರದೇಶಗಳ ಮೂಲದಿಂದ ಬಂದವರನ್ನು

16)  ಒಬ್ಬ ಬಾಲಕನು ಪ್ರತಃಕಾಲದಲ್ಲಿ ಮನೆಯಿಂದ  ಹೊರಡುತ್ತಾನೆ ಮತ್ತು ಸೂರ್ಯನಿಗಭಿಮುಖವಾಗಿ  ನೇರವಾಗಿ 8 ಕಿ.ಮೀ. ಗಳಷ್ಟು ನಡೆಯುತ್ತಾನೆ. ನಂತರ ಅವನು ಬಲಕ್ಕೆ ತಿಗುತ್ತಾನೆ ಮತ್ತು 3 ಕಿ.ಮೀಗಳಷ್ಷು ನಡೆಯುತ್ತಾನೆ ಪುನಃ ಬಲಕ್ಕೆ ತಿರುಗುತ್ತಾನೆ ಮತ್ತು 2 ಕಿ.ಮೀ ಗಳಷ್ಟು ನಡೆಯುತ್ತಾನೆ ಮತ್ತು ನಂತರ ಎಡೆಕ್ಕೆ ತಿರುಗುತ್ತಾನೆ ಹಾಗೂ 1 ಕಿ.ಮೀ. ನಡೆಯುತ್ತಾನೆ ಪುನಃ ಬಲಕ್ಕೆ ತಿರುಗುತ್ತಾನೆ ಮತ್ತು ನೇರವಾಗಿ 4 ಕಿ. ಮೀ ಗಳಷ್ಟು ನಡೆರಯುತ್ತಾನೆ ಪ್ರಾರಂಭಿರ ಬಿಂದುವಿನಿಂದ ಅವನು ಎಷ್ಟು ದೂರದಲ್ಲಿದ್ದಾನೆ?

1) 5 ಕಿ.ಮೀ   2) 6 ಕಿ.ಮೀ  3)  2 ಕಿ.ಮೀ  4) 4 ಕಿ.ಮೀ

ಸರಿಯಾದ ಉತ್ತರ :  1) 5 ಕಿ.ಮೀ 

17) ಒಂದು ದಾಳವನ್ನು ದಾಳದ ಮೂರು ಸ್ಥಾನಗಳನ್ನು ಕಳೆಗೆ ನೀಡಲಾಗಿದೆ 

FDA Question Paper With Answer 2018

1) 1         2) 4            3)5          4) 7

ಸರಿಯಾದ ಉತ್ತರ :  2) 4 

18) ಕೆಳಗಿನ ಬದಲಾವಣೆಯನ್ನು ಪರಿಗಣಿಸಿ 

ಎ) ಹಾಲು ಎಪ್ಪುಗಟ್ಟುವುದು

ಬಿ) ಬಣ್ಣವು ಶುಷ್ಕಗೊಳ್ಳುವುದು (ಒಣಗುವುದು)

ಸಿ) ಕರ್ಪೂರದ ಉತ್ಪತನ

ಡಿ) SO2 ನಿಂದ SO3 ಗೆ ಆಕ್ಸಿಡೀಕರಣಗೋಳ್ಳು ವುದು

ಮೇಲಿನವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆಯಾಗಿದೆ?

1) A, B ಮತ್ತು D ಮಾತ್ರ

2) A, C ಮತ್ತು D ಮಾತ್ರ

3) A, B,C ಮತ್ತು D

4) A, B ಮತ್ತು C

ಸರಿಯಾದ ಉತ್ತರ :  1) A, B ಮತ್ತು D ಮಾತ್ರ 

19) ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯು 1977-78 ರಲ್ಲಿ ಜನತಾ ಪಕ್ಷದ ಸರ್ಕಾರದಿಂದ ಅಂತ್ಯಗೊಳಿಸಲ್ಪಟ್ಟಿತ್ತು?

1) 4ನೇ ಪಂಚವಾರ್ಷಿಕ ಯೋಜನೆ

2) 5ನೇ ಪಂಚವಾರ್ಷಿಕ ಯೋಜನೆ

3) 7ನೇ ಪಂಚವಾರ್ಷಿಕ ಯೋಜನೆ

4) 8ನೇ ಪಂಚವಾರ್ಷಿಕ ಯೋಜನೆ

ಸರಿಯಾದ ಉತ್ತರ :  2) 5ನೇ ಪಂಚವಾರ್ಷಿಕ ಯೋಜನೆ

20) ಈ ಕಳಗಿನ ಯಾವುದರ ನಡುವೆ ಪಾಕ್ ಕೊಲ್ಲಿಯು ನೆಲೆಸಿದೆ? 

1) ಗಲ್ಫ್ ಆಫ್ ಕಚ್ ಮತ್ತು ಗಲ್ಫ್ ಆಫ್ ಖಂಭಾಟ್

2) ಗಲ್ಫ್ ಆಫ್ ಮನ್ನಾರ್ ಮತ್ತು ಬೇ ಆಫ್ ಬೆಂಗಾಲ್

3) ಲಕ್ಷದ್ವೀಪ್ ಮತ್ತು ಮಾಲ್ಡೀವ್ಸ್ ದ್ವೀಪಗಳು

4) ಅಂಡಮಾನ್ ಮತ್ತು ನಿಕೋಬಾರ ದ್ವೀಪಗಳು

ಸರಿಯಾದ ಉತ್ತರ : 2) ಗಲ್ಫ್ ಆಫ್ ಮನ್ನಾರ್ ಮತ್ತು ಬೇ ಆಫ್ ಬೆಂಗಾಲ್

21) ಈ ಕಳಗಿನ ಯಾವ ಸ್ಥಳದಲ್ಲಿ ನವಿಲು ಅಭಯಧಾಮವು ಸ್ಥಾಪಿತವಾಗಿದೆ?

1) ಮಂಡಗದ್ದೆ

2) ಮಾಗಡ

3) ಬೊನಾಳ

4) ಬಂಕಾಪುರ

ಸರಿಯಾದ ಉತ್ತರ : 4) ಬಂಕಾಪುರ

22) ಈ ಕಳಗಿನ ಯಾವ ನದಿ ಮುಖಜ ಭೂಮಿಯಲ್ಲಿ ಭಟ್ಟಳ ಬಂದರು ನೆಲೆಯಾಗಿದೆ ?

1) ಸೀತಾ ನದಿ    2) ಶರಬಿ      3) ತಾಡ್ರಿ     4) ಶರಾವತಿ

ಸರಿಯಾದ ಉತ್ತರ : 2) ಶರಬಿ  

23) ಹಣದುಬ್ಬರಕ್ಕೆ ಕೆಳಗಿನ ಯಾವುದು ಹೊಣೆಯಾಗುವುದಿಲ್ಲ?

1) ಆರ್ಥಿಕತೆಯಲ್ಲಿ ಹೆಚ್ಚುವರಿ ದ್ರವ್ಯ

2) ಜನರಿಂದ  ಉಳಿತಾಯದಲ್ಲಿನ ಹೆಚ್ಚಳ

3) ಬ್ಯಾಂಕ್ ಸಾಲಗಳಲ್ಲಿನ ತೀವ್ರಗತಿಯ ವಿಸ್ತರಣೆ

4) ಸರ್ಕಾರದಿಂದ ಹೆಚ್ಚುವರಿಯಾಗಿ  ಆದ ವೆಚ್ಚ

ಸರಿಯಾದ ಉತ್ತರ : 2) ಜನರಿಂದ  ಉಳಿತಾಯದಲ್ಲಿನ ಹೆಚ್ಚಳ

24) ವಿದ್ಯುತ್ ಉಪಕರಣವನ್ನು ಭೂ ಅಂತರ್ಗತ/ ಸಂಪರ್ಕ (ಅರ್ತ್ಡ್) ಗೊಳಿಸುವುದು ಇದಕ್ಕಾಗಿ

ಎ) ಉಪಕರಣವನ್ನು ಯಾವುದೇ ಹಾನಿಗೋಳಗಾದಂತೆ ರಕ್ಷಿಸಲಿಕ್ಕಾಗಿ

ಬಿ) ವಿದ್ಯುತ್ ಅಪಘಾತವನ್ನು ತಡೆಯಲು

ಸಿ) ಶಾರ್ಟ್ ಸರ್ಕೂಟ್ ಆಗುವುದನ್ನು ತಡೆಯಲು

ಡಿ) ಶಕ್ತಿಯ ಉಳಿತಾಯಕ್ಕಾಗಿ

ಮೇಲಿನ ಹೇಳಿಕೆಗಳಲ್ಲಿ ಯಾವುದು/ ವು ಸರಿ?

ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾಧರಿಸಿ

1) ಎ ಮಾತ್ರ

2) ಬಿ ಮಾತ್ರ

3) ಬಿ ಮತ್ತು ಸಿ ಮಾತ್ರ

4) ಸಿ ಮತ್ತು ಡಿ ಮಾತ್ರ

ಸರಿಯಾದ ಉತ್ತರ : 2) ಬಿ ಮಾತ್ರ

25) ಪಟ್ಟಿ -1 ರಲ್ಲಿನ ಪ್ರಸಿದ್ಧ ಸ್ಥಳಗಳನ್ನು ನಗಳನ್ನು ಪಟ್ಟಿ-2 ರಲ್ಲಿನ ಅವುಗಳ ಸಂಬಂಧ ಹೊಂದಿರುವ ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸರಿ ಹೊಂದಿಸಿ:

ಪಟ್ಟಿ ಎ (ಪ್ರಸಿದ್ಧ ಸ್ಥಳಗಳು)ಪಟ್ಟಿ  ಬಿ  (ಪ್ರಖ್ಯಾತ ವ್ಯಕ್ತಿಗಳು)
A) ಕೊರ್ಸಿಕಾI) ಅಲೆಗ್ಸಾಂಡರ್ ಮಹಾಶಯ
B) ಮ್ಯಾಸಿಡೋನಿಯಾII) ನೆಪೋಲಿಯನ್ ಬೋನೊಪಾರ್ಟೆ
C) ಟ್ರಫಾಲ್ಗರ್ III) ನೆಲ್ಸನ್
D) ಮೆಕ್ಕಾIV) ಪ್ರವಾದಿ ಮೊಹಮ್ಮದ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ

ABCD
1)IIIIIIIV
2)IIIIIIIV
3)IIIIVIII
4)IIIIIIIV

ಸರಿಯಾದ ಉತ್ತರ  : 2) II, I, III, IV

26) ಈ ಕೆಳಗಿನವರಲ್ಲಿ ಯಾರು ಪ್ರತಿ ವರ್ಷವೂ ಅಧಿಕೃತವಾಗಿ ಭಾರತದ ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸುವವರು?

1) ಭಾರತದ ರಿಸರ್ವ್ ಬ್ಯಾಂಕ

2) ಭಾರತದ ಯೋಜನಾ ಆಯೋಗ

3) ಭಾರತ ಸರ್ಕಾರದ ಹಣಕಾಸು ಮಂತ್ರಿಮಂಡಲ

4) ಭಾರತ ಸರ್ಕಾರದ ಕೈಗಾರಿಕಾ ಮಂತ್ರಿ ಮಂಡಳ

ಸರಿಯಾದ ಉತ್ತರ : 4) ಭಾರತ ಸರ್ಕಾರದ ಕೈಗಾರಿಕಾ ಮಂತ್ರಿ ಮಂಡಳ

27) ಪಟ್ಟಿ -1 ರಲ್ಲಿನ ಸ್ಮಾರಕಗಳನ್ನು ಪಟ್ಟಿ-2 ರಲ್ಲಿನ ಮನೆತನಗಳೊಂದಿಗೆ ಸರಿ ಹೊಂದಿಸಿ:

ಪಟ್ಟಿ ಎ (ಸ್ಮಾರಕಗಳು)ಪಟ್ಟಿ  ಬಿ  (ಮನೆತನ)
A) ಅಲಾಯ ದರ್ವಾಜI) ಗುಲಾಬಿ ಮನೆತನ
B) ಹಾಜ್ ಖಾಸ್II) ಮೊಘಲ್ ಮನೆತನ
C) ಶಾಲೀಮಾರ್ ಬಾಗ್ III) ಖಿಲ್ಜಿ ಮನೆತನ
D) ಅಡಾಯಿ ದಿನ್ ಕಾ ಝೋಪ್ಡಾIV) ತುಘಲಕ್ ಮನೆತನ
V) ಲೋದಿ ಮನೆತನ

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ

ABCD
1)IIIIIIV
2)IIIIVIII
3)IVIIIIII
4)IIIIVVI

ಸರಿಯಾದ ಉತ್ತರ  : 2) III, IV, II, I

28) ಕೆಳಗಿನ ಕಾರ್ಯಕಾರಿಗಳನ್ನು ಪರಿಗಣಿಸಿ

ಎ) ಕ್ಯಾಬಿನೆಟ್ ಕಾರ್ಯದರ್ಶಿ

ಬಿ) ಮುಖ್ಯ ಚುನಾವಣಾ ಆಯುಕ್ತರು

ಸಿ) ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು

ಡಿ) ಭಾರತದ ಮುಖ್ಯ ನ್ಯಾಯಾಧೀಶರು

ಇವರುಗಳ ಅಗ್ರತೆಯ ಕ್ರಮದಲ್ಲಿ ಸರಿಯಾದ ಶ್ರೇಣಿಯು

1) ಸಿ,ಡಿ,ಬಿ,ಎ       2) ಡಿ,ಸಿ,ಎ,ಬಿ         3) ಡಿ,ಸಿ,ಬಿ,ಎ           4) ಸಿ,ಡಿ,ಎ,ಬಿ

ಸರಿಯಾದ ಉತ್ತರ : 3) ಡಿ,ಸಿ,ಬಿ,ಎ

29) ಮುಖ್ಯ ಮಾಹಿತಿ ಆಯುಕ್ತರು / ಮಾಹಿತಿ ಆಯುಕ್ತರ ಅಧಿಕಾರಾವಧಿಯು ಎಷ್ಟು ?

1) ನಿಶ್ಚಿತವಾದ ಅವಧಿಯು ಇಲ್ಲ, ರಾಷ್ಟ್ರಾಧ್ಯಕ್ಷರು ಬಯಸುವವರಿಗೆ ಆಯುಕ್ತರು

2) 5 ವರ್ಷಗಳ ಅವಧಿ ಅಥವಾ 65 ವರ್ಷ ವಯಸ್ಸಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗಿನ ಅವಧಿ

3) 3 ವರ್ಷಗಳ ಅವಧಿ ಅಥವಾ 65 ವರ್ಷ ವಯೋಮಿತಿಯವರೆಗೆ ಯಾವುದು ಮೊದಲೋ ಅಲ್ಲಿವರೆಗಿನ ಅವಧಿಗೆ ನೇಮಿಸಲಾಗುವುದು

4) ಆಯುಕ್ತರು 70 ವರ್ಷಗಳ ವಯಸ್ಸನ್ನು ಮುಟ್ಟುವವರೆಗೂ ನೇಮಿಸಲಾಗುವುದು.

ಸರಿಯಾದ ಉತ್ತರ : 2) 5 ವರ್ಷಗಳ ಅವಧಿ ಅಥವಾ 65 ವರ್ಷ ವಯಸ್ಸಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗಿನ ಅವಧಿ

30) ಭಾರತದ ಪ್ರಥಮ ಗವರ್ನರ್ ಜನರಲ್ ನಾದ ವಾರನ್ ಹೇಸ್ಟಿಂಗ್ ನು ದುರ್ನಡತೆಯ ಆಪಾದಿತನಾಗಿದ್ದು ,ಅವನ ವಿರುದ್ಧವಾಗಿ ಕೈಗೊಳ್ಳಲಾದ ಕ್ರಮವೇನು ?

1) ಅವನನ್ನು ಬ್ರಿಟನ್ ಗೆ ಹಿಂತಿರುಗಿಸುವಂತೆ ಹೇಳಲಾಯಿತು

2) ಅವನ ವಿರುದ್ಧವಾಗಿ ಖಂಡಿಸುವ ವ್ಯವಹರಣೆಗಳನ್ನು ಪ್ರಾರಂಭಿಸಲಾಯಿತು

3) ಅವನು ಅಧಿಕ ಮೊತ್ತಡದ ದಂಡವನ್ನು ಪಾವತಿಸಲು ಹೇಳಲಾಯಿತು

4) ಬ್ರಿಟಿಷ್ ಸಾಮ್ರಾಜ್ಯದಿಂದ ಕ್ಷಮೆಯಾಚಿಸಲು ಅವನಿಗೆ ಹೇಳಲಾಯಿತು

ಸರಿಯಾದ ಉತ್ತರ : 2) ಅವನ ವಿರುದ್ಧವಾಗಿ ಖಂಡಿಸುವ ವ್ಯವಹರಣೆಗಳನ್ನು ಪ್ರಾರಂಭಿಸಲಾಯಿತು

31) ಸಾಮಾನ್ಯವಾಗಿ ಮೊಬೈಲ್ ಫೋನ್ ಹ್ಯಾಂಡ್ ಸೆಟ್ ಗಳಲ್ಲಿ ಬಳಸುವ ಪುನಃ ವಿದ್ಯುದಾವಿಷ್ಟಗೊಳಿಸಬಹುದಾದ (ರೀ ಚಾರ್ಜಬಲ್ ) ಬ್ಯಾಟರಿಗಳು

1) ಲಿಥಿಯಂ ಅಯಾನ್ ಬ್ಯಾಟರಿ

2) ಸತುವಿನ ಅಯಾನು ಬ್ಯಾಟರಿ

3) ಮ್ಯಾಗ್ನಿಸಿಯಂ ಅಯಾನು ಬ್ಯಾಟರಿ

4) ತಾಮ್ರಾ ಆಯಾನು ಬ್ಯಾಟರಿ

ಸರಿಯಾದ ಉತ್ತರ : 1) ಲಿಥಿಯಂ ಅಯಾನ್ ಬ್ಯಾಟರಿ

32) ಗಣರಾಜ್ಯೋತ್ಸವ ದಿನದ ಪರೇಡ್ ನಲ್ಲಿ ಮುಖ್ಯ ಅತಿಥಿಯಾಗಿ 2015ನೇ ಜನವರಿ 26ರಂದು ಭಾರತಕ್ಕೆ ಅಮೆರಿಕದ ಹಿಂದಿನ ಅಧ್ಯಕ್ಷರಾದ ಬರಕ ಒಬಾಮರವರು ಭೇಟಿಯಿತ್ತರು ಭಾರತಕ್ಕೆ ಭೇಟಿ ನೀಡಿದ ಭಾರತಕ್ಕೆ ಭೇಟಿ ನೀಡಿದ ಪ್ರಥಮ ಅಮೆರಿಕ ಅಧ್ಯಕ್ಷರು ಯಾರು?

1) ರಿಚರ್ಡ್ ಸಿಕ್ಸನ್

2) ಜಿಮ್ಮಿ ಕಾರ್ಟರ್

3) ಡ್ವೈಟ್ ಡಿ. ಐಸೆನ್ ಹೋವರ್

4) ಜಾರ್ಜ್ ಡಬ್ಲ್ಯೂ ಬುಷ್

ಸರಿಯಾದ ಉತ್ತರ : 3) ಡ್ವೈಟ್ ಡಿ. ಐಸೆನ್ ಹೋವರ್