G.S Shivarudrappa

G.S Shivarudrappa
G.S Shivarudrappa

ಡಾ. ಜಿ.ಎಸ್. ಶಿವರುದ್ರಪ್ಪ (1926)

G.S Shivarudrappa ಜಿ.ಎಸ್.ಎಸ್. ಕನ್ನಡದ ಶ್ರೇಷ್ಠ ಬರಹಗಾರರಲ್ಲೊಬ್ಬರು. ಇವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ೭-೨-೧೯೨೬ರಲ್ಲಿ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹೊನ್ನಾಳಿಯಲ್ಲಿ ದಾವಣಗೆರೆಯಲ್ಲಿ ಪ್ರೌಢಶಾಲೆಯ ಕಟ್ಟೆಯನ್ನು ಹತ್ತಿದರು.

ಅತ್ಯಂತ ಕಡುಬಡತನದಲ್ಲಿ ಬಂದಿದ್ದರಿ೦ದ ಕುಟುಂಬದ ನಿರ್ವಹಣೆಗಾಗಿ ಗುಬ್ಬಿಯಲ್ಲಿ ಸರಕಾರಿ ನವಕರಿಗೆ ಸೇರುತ್ತಾರೆ. ಆದರೆ ಮೇಲಾಧಿಕಾರಿಯ ಉಪಟಳವನ್ನು ತಾಳಲಾರದೆ ನವಕರಿಗೆ ರಾಜೀನಾಮೆ ಇತ್ತು ಹೊರಬಂದು ಶಿಕ್ಷಣವನ್ನು ಮುಂದುವರೆಸಿದರು. ೧೯೪೯ರಲ್ಲಿ ಬಿ.ಎ. ನಂತರ ಎಂ.ಎ. ಪದವಿಯನ್ನು ಮುಗಿಸಿ ಕನ್ನಡ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ರಾಷ್ಟ್ರಕವಿ ಕುವೆಂಪು ಅವರ ಒಡನಾಟ ಹಾಗೂ ಮಾರ್ಗದರ್ಶನದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ವಿವಿಧ ಕಾಲೇಜಿನಲ್ಲಿ ಅಧ್ಯಾಪಕರಾಗಿ ದುಡಿದು ೧೯೬೩ರಲ್ಲಿ ಹೈದ್ರಾಬಾದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ ಸೇರಿದರು. ನಂತರ ವಿಭಾಗದ ಮುಖ್ಯಸ್ಥರಾಗಿ ೧೯೭೦ರಲ್ಲಿ ಬೆಂಗಳೂರಿಗೆ ಬಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನಿವೃತ್ತಿ ಹೊಂದಿದರು. ದಕ್ಷತೆಗೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರೆಂಬಂತೆ ಸೇವೆಗೈದರು.

ಬಾಲ್ಯದಿಂದಲೇ ಸಾಹಿತ್ಯದ ಗೀಳು ಆವರಿಸಿತ್ತು, ಕಾವ್ಯ ರಚನೆ ಆಗಲೇ ಪ್ರಾರಂಭವಾಗಿತ್ತು ವಿಮರ್ಶೆ ಹಾಗೂ ಸಂಶೋಧನೆಯಲ್ಲೂ ಇವರು ಕೆಲಸ ಮಾಡಿದ್ದಾರೆ. ಸೌಂದರ್ಯ ಸಮೀಕ್ಷೆ ಎಂಬುದು ಅವರ ಪಿ.ಎಚ್.ಡಿ. ಪ್ರಬಂಧ.

ಇವರು ಬರೆದ ಕೃತಿಗಳ ಸಂಖ್ಯೆ ಸುಮಾರು ೨೫. ಸಾಮಗಾನ ಅವರ ಚೊಚ್ಚಲು ಕವನ ಸಂಕಲನ ೧೯೫೧ ರಿಂದ ನಿರಂತರವಾಗಿ ಅವರ ಕಾವ್ಯ ವಾಹಿನಿ ಹರಿದುಕೊಂಡು ಬಂದಿದೆ. ಇವರು ೧೦ ಕವನ ಸಂಕಲನ. ೪ ವಿಮರ್ಶಾ ಕೃತಿ, ೨ ಪ್ರವಾಸ ಕಥನ, ೨ ವ್ಯಕ್ತಿ ಚಿತ್ರಗಳು ಒಂದು ಮಹಾಪ್ರಬಂಧವನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ.

ಡಾ. ಜಿ.ಎಸ್. ಶಿವರುದ್ರಪ್ಪ ಬಂದ ಗೌರವ

  • ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ದಾವಣಗೆರಿಯಲ್ಲಿ ನಡೆದ ಅಖಿಲ ಭಾರತ ೬೧ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ.
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ೧೯೯೭ರ ಪಂಪ ಪ್ರಶಸ್ತಿ
  • ರಾಷ್ಟ್ರಕವಿ ಗೌರವ
  • ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ

ನವೋದಯ ಹಾಗೂ ನವ್ಯ ಕಾವ್ಯಗಳೆರಡನ್ನೂ ಮೇಳೆಸಿಕೊಂಡ ಇವರ ಕಾವ್ಯದ ಕಾಳಜಿ ಮನುಷ್ಯನಾಗಿದ್ದು ಆಶಯ ಎದೆ ಎದೆಗಳ ಕಂದರದ ಬೆಸುಗೆಯಾಗಿದೆ. ಇವರಿಗೆ ಭಾವಗೀತೆಗಳ ರಾಜ ಎಂದು ಕರೆದಿದ್ದಾರೆ. ಇವರ ಭಾವಗೀತೆಗಳನ್ನು ಚಲನಚಿತ್ರಗಳಿಗೂ ಅಳವಡಿಸಲಾಗಿದೆ. ಕುವೆಂಪು ಅವರ ಆತ್ಮೀಯತೆಯಲ್ಲಿ ಮಿಂದೆದ್ದ ಜಿ.ಎಸ್.ಎಸ್. ಅವರ ನಂತರ ಆ ಎತ್ತರದ ಸ್ಥಾನವನ್ನು ಅಲಂಕರಿಸಿದರು.

Leave a Reply

Your email address will not be published. Required fields are marked *