Gangaru History in Kannada 

ಗಂಗರು ಇತಿಹಾಸ ಮೂಲಪುರುಷ ಮತ್ತು ಇತಿಹಾಸ

Gangaru History in Kannada : ಪ್ರಮುಖ ಅರಸರು: ಒಂದನೆಯ ಮಾಧವ (ಕ್ರಿ.ಶ. 400-440), ಹರಿವರ್ಮ : (ಕ್ರಿ.ಶ. 440-465)(ಕೋಲಾರದಿಂದ ತಲಕಾಡಿಗೆ ರಾಜಧಾನಿಯನ್ನು ಸ್ಥಳಾಂತರಿಸಿದನು); ದುರ್ವಿನೀತ (ಕ್ರಿ.ಶ.540- 600), ಒಂದನೆಯ ಶಿವಮಾರ (ಕ್ರಿ.ಶ. 679-726), ಶ್ರೀ ಪುರುಷ (ಕ್ರಿ.ಶ 726-788); ಎರಡನೆಯ ರಾಚಮಲ್ಲ (ಕ್ರಿ.ಶ. 870-907), ನಾಲ್ಕನೆಯ ರಾಚಮಲ್ಲ (ಕ್ರಿ.ಶ. 975 – 986 )

 

ಮೂಲಪುರುಷದಡಿಗ ಅಥವಾ ಕೊಂಗುಣಿವರ್ಮ ಕ್ರಿ.ಶ (350-400)
ರಾಜಧಾನಿಕೋಲಾರ, ತಲಕಾಡು ಮತ್ತು ಮನ್ನೆ
ಲಾಂಛನಮದಗಜ
ನಾಣ್ಯಗಳುಗದ್ಯಾಣ, ಸುವರ್ಣನಿಷ್ಠ ಇವು ಚಿನ್ನದ ನಾಣ್ಯಗಳಾಗಿವೆ. ಕೊಡೆವನ ಕಾಸು, ದ್ರಮ್ಮ ಇವು ಇತರೆ ನಾಣ್ಯಗಳು.
Gangaru History in Kannada
Gangaru History in Kannada

ಶಾಸನ ದಾಖಲೆಗಳು

ಹಳ್ಳಿಗೇರಿ, ಜಾವಳಿ, ದೇವರಹಳ್ಳಿ ಮುಂತಾದವು. ಬಹುತೇಕ ವಿದ್ವಾಂಸರ ಅಭಿಪ್ರಾಯದಂತೆ ಇವರ ಬಹುತೇಕ ಶಾಸನಗಳನ್ನು ‘ಕೂಟ’ ಶಾಸನಗಳೆಂದು ಪರಿಗಣಿಸಲಾಗಿದೆ. ಇವರಿಗೆ ಸಂಬಂಧಿಸಿದಂತೆ ಕನ್ನಡ, ಪ್ರಾಕೃತ, ತಮಿಳು, ಸಂಸ್ಕೃತ, ವಿದೇಶಿ ಸಾಹಿತ್ಯ ಹಾಗೂ ಶಾಸನಗಳು ಲಭ್ಯವಿದೆ.

ಪ್ರಮುಖ ಕೇಂದ್ರಗಳು :

ಕೋಲಾರ, ಮನೆ, ಶ್ರವಣಬೆಳಗೊಳ, ಬೇಲೂರು, ಗಂಗವಾಡಿ. ತಲಕಾಡು,

ಆಡಳಿತ:

ರಾಜನು ಕೇಂದ್ರೀಕೃತ ಸರ್ಕಾರದ ಮುಖ್ಯಸ್ಥನಾಗಿದ್ದನು. ಆಡಳಿತದ ಅನುಕೂಲಕ್ಕೆಂದು ರಾಜ್ಯವನ್ನು ಅನೇಕ ಮಂಡಳ ಅಥವಾ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರಾಂತ್ಯಗಳಲ್ಲಿ ನಾಡುಗಳು, ವಿಷಯಗಳು, ವೆಂತ್ಯ ಮತ್ತು ಕಂಪಣಗಳೆಂಬ ವಿಭಾಗಗಳನ್ನು ಮಾಡಲಾಗಿತ್ತು. ಪ್ರಾಂತ್ಯಗಳ ಆಡಳಿತಗಾರರನ್ನು ದಂಡನಾಯಕ ಅಥವಾ ಡಣ್ಣಾಯಕ ಎನ್ನುತ್ತಿದ್ದರು. ಗ್ರಾಮಗಳಲ್ಲಿಯ ಪ್ರತಿನಿಧಿಗಳ ಸಭೆಯನ್ನು ಮಹಾಜನ ಸಭೆ ಎನ್ನುತ್ತಿದ್ದರು. ಕರಣಿಕರು, ಗೌಡರು ಸೇನ ಭೋವರು ಇತರೆ ಅಧಿಕಾರಿಗಳಾಗಿದ್ದರು. ಪಟ್ಟಣದ ಆಡಳಿತವನ್ನು ನಿಗಮ ಸಭೆಗಳು ನಿರ್ವಹಿಸುತ್ತಿದ್ದವು. ಕಂದಾಯವು ಹುಟ್ಟುವಳಿಯ 1/6 ಭಾಗವಾಗಿತ್ತು, ಭೂಮಿಯನ್ನು ಅಳತೆ ಮಾಡಿ ಅದರ ಗುಣಮಟ್ಟದ ಆಧಾರದಲ್ಲಿ ಭೂ ಕಂದಾಯವನ್ನು ನಿಗದಿಪಡಿಸಲಾಗುತ್ತಿತ್ತು.

ಕೊಡುಗೆ

ಸಾಹಿತ್ಯ-ಸಂಸ್ಕೃತಿ:

ಹಲವಾರು ಅರಸರು ಸ್ವತಃ ಕವಿಗಳಾಗಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿತ್ತು. ಗುರುಕುಲ ಪದ್ಧತಿ ರೂಢಿಯಲ್ಲಿತ್ತು. ಘಟಕಗಳು, ವಿದ್ಯಾಪೀಠಗಳು, ಮಠಗಳು, ಅಗ್ರಹಾರಗಳು, ಬ್ರಹ್ಮಪುರಿಗಳು ಉಚ್ಚ ಶಿಕ್ಷಣ ಕೇಂದ್ರಗಳಾಗಿದ್ದವು. ಈ ಕಾಲದ ಪ್ರಮುಖ ಕವಿಗಳೆ೦ದರೆ ಶ್ರೀಪುರುಷ (ಗಜಶಾಸ್ತ್ರ), ನಾಗವರ್ಮ (ಚಂದೋಂಬುಧಿ), ಚಾವುಂಡರಾಯ (ಚಾವುಂಡರಾಯ ಪುರಾಣ), ಎರಡನೆಯ ಶಿವಮಾರ (ಸೇತುಬಂಧ), ದುರ್ವಿನೀತ (ಬೃಹತ್ಕಥ), ಹೇಮಸೇನ (ರಾಘವ ಪಾಂಡವೀಯ)

ಕಲೆ-ವಾಸ್ತುಶಿಲ್ಪ

ಗಂಗರ ಅನೇಕ ವಾಸ್ತುಶಿಲ್ಪಗಳು ಪಲ್ಲವರ ಶೈಲಿಯಿಂದ ಪ್ರಭಾವಿತವಾಗಿವೆ. ದೇವಾಲಯಗಳ ಕಂಬದ ಬುಡದಲ್ಲಿ ಇರುವ ಸಿಂಹವು ಪಲ್ಲವರ ದ್ರಾವಿಡ ಶೈಲಿಯ ಸಂಕೇತವಾಗಿದೆ. ಅನೇಕ ಅಂತಸ್ತುಗಳನ್ನುಳ್ಳ ವಿಮಾನಗಳು, ಗೋಪುರಗಳು, ಚೌಕಾಕಾರದ ಕಂಬಗಳು ವಿಶೇಷವಾಗಿವೆ. ಶ್ರವಣಬೆಳಗೊಳದಲ್ಲಿ ನಿರ್ಮಿಸಲ್ಪಟ್ಟ ಅನೇಕ ಜೈನ ಬಸದಿಗಳು ನಯನ ಮನೋಹರವಾಗಿವೆ. ಮಂತ್ರಿ ಚಾವುಂಡರಾಯನಿಂದ ನಿರ್ಮಿಸಲ್ಪಟ್ಟ 57 ಗೊಮ್ಮಟೇಶ್ವರ ಭವ್ಯಮೂರ್ತಿಯು ಇವರ එයි ಎತ್ತರದ ಅಮೂಲ್ಯ ಕೊಡುಗೆಯಾಗಿದೆ. ಪ್ರಮುಖ ದೇವಾಲಯಗಳೆಂದರೆ, ತಲಕಾಡಿನ ಅರ್ಕೇಶ್ವರ, ಪಾತಾಳೇಶ್ವರ ಮತ್ತು ಮರುಳೇಶ್ವರ ದೇವಾಲಯಗಳು, ಕೋಲಾರದ ಕೋಲಾರಮ್ಮ, ಬೇಗೂರಿನ ನಾಗೇಶ್ವರ, ಶ್ರವಣಬೆಳಗೊಳದ ಹಲವಾರು ಜೈನ ಬಸದಿಗಳು ಪ್ರಮುಖವಾಗಿವೆ.

Leave a Reply

Your email address will not be published. Required fields are marked *