Kannada Nudigattugalu – All Competitive Exams| ಕನ್ನಡ ನುಡಿಗಟ್ಟುಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ
Kannada Nudigattugalu ನುಡಿಗಟ್ಟು ಎಂದರೆ ಒಂದು ವಿಶಿಷ್ಟಾರ್ಥ ನೀಡುವ ಸಂಕ್ಷಿಪ್ತ ಶಬ್ದ ನುಡಿಗಟ್ಟಿಗೆ ಪಡೆನುಡಿ, ವಾಗ್ಮೀತಿ, ವಾಗ್ಡಾರೆ, ಪ್ರಯುಕ್ತತೆ ಎಂಬ ಸಂವಾದಗಳಿಗೆ ಶಬ್ದಗಳಿವೆ. ನುಡಿಗಟ್ಟುಗಳು ಜನತೆಯ ಆಲೋಚನೆ ಮತ್ತು ಭಾವನೆಯ ಪ್ರತೀಕವಾಗಿ ನೀವು ಜನಸಾಮಾನ್ಯರ ಆಡುನುಡಿಯಲ್ಲಿ ಪರಂಪರೆಯಾಗಿ ಬಂದಿವೆ. ಭಾಷೆಯಲ್ಲಿ ಸಮಯೋಚಿತವಾಗಿ ಬಳಸುವ ನುಡಿಗಟ್ಟ, ನಾಣ್ಣುಡಿಗಳು ದೇವಗಂಗೆಯಂತೆ ಪಾವಿತ್ರ್ಯೆ, ಪರಿಶುದ್ಢತೆ ಕಾಯ್ದುಕೊಂಡು ಬಂದಿದೆ.
ಭಾಷೆಯಲ್ಲಿ ಸಮಯೋಚಿತವಾಗಿ ಬಳಸುವ ನುಡಿಗಟ್ಟು, ನಾಣ್ಣುಡಿಗಳು ದೇವಗಂಗೆಯಂತೆ ಪಾವಿತ್ರ್ಯ, ಪರಿಶುದ್ಧತೆ ಕಾಯ್ದುಕೊಂಡು ಬಂದಂತವುಗಳು. ಸುರಲೋಕದ ಕಲ್ಪವೃಕ್ಷ-ಕಾಮಧೇನುಗಳಂತೆ ಆಶಾಪೂರ್ತಿ ಆಗರಗಳು ಎಂದು ಸುನೀತಿಕುಮಾರ ಚಟರ್ಜಿಯವರು ಅಭಿಪ್ರಾಯಪಟ್ಟಿದ್ದಾರೆ.
ನುಡಿಗಟ್ಟುಗಳು ಮತ್ತು ಅದರ ಅರ್ಥಗಳು ಈ ಕೆಳಗೆ ಕೊಡಲಾಗಿದೆ
- ತಲೆಯ ಮೇಲೆ ಕಲ್ಲು ಹಾಕು – ನಾಶಮಾಡು, ತೊಂದರೆ ಉಂಟು ಮಾಡು
- ತಲೆಯಾಡಿಸುವ – ಸಮ್ಮತಿ ಸೂಚಿಸಿ, ಅಸಮ್ಮತಿ ಸೂಚಿಸ,
- ತಲೆಯಿಲ್ಲ – ಬುದ್ಧಿಯಿಲ್ಲ
- ಕಣ್ಣಿಗೆ ಹೊಡೆದು- ಸ್ಪಷ್ಟವಾಗಿ ಕಾಣಿಸಿಕೊಳ್ಳು
- ಕಣ್ಣಾಡಿಸು – ಸ್ಥೂಲವಾಗಿ ಪರಿಶೀಲಿಸು
- ಕಣ್ಣಿಗೆ ಮಣ್ಣೆರಚು – ಮೋಸ ಮಾಡು
- ಅಂತರ್ಲಾಗ ಹಾಕು – ಬಹಳ ಪ್ರಯತ್ನ ಪಡು
- ಅಗ್ರತಾಂಬೂಲ – ಮೊದಲ ಮರ್ಯಾದೆ
- ಅಜ್ಜಿ ಕಥೆ – ಕಟ್ಟುಕಥೆ
- ಅಡಕೆಲೆ ಕೊಡ – ಬೀಳ್ಕೊಡು
- ಅನ್ನ ಕಿತ್ತಿಕೋ – ಜೀವನಮಾರ್ಗವನ್ನು ಕೆಡಿಸು
- ಅವತಾರ ಮುಗಿ – ಶಕ್ತಿ ಪ್ರಭಾವ ಕುಂಠಿತಅಳೆದು ಸುರಿದು – ಹಿಂದೆ ಮುಂದೆ ಯೋಚಿಸಿ
- ಅರೆದು ಕುಡಿದು – ತಿಳಿಯುವಂತೆ ಹೇಳು
- ಅನ್ನದ ದಾರಿ – ಬದುಕುವ ಮಾರ್ಗ
- ಆಟ ನಡೆ – ಪ್ರಭಾವ ಬೀರು
- ಆಹುತಿಯಾಗಿ – ಬಲಿಯಾಗು
- ಆಕಾಶಕ್ಕೆ ಹಾರು – ಆತ್ಮಾನಂದ ಪಡು
- ಇಕ್ಕಳ ಹಾಕು- ಒತ್ತಾಯ ಪ್ರಚೋದನೆ ಮಾಡು
- ಉರಿ ಹೊತ್ತಿಸುವ – ತುಂಬಾ ರೇಗಿಸು
- ಅಂತರ್ಲಾಗ ಹಾಕು – ಬಹಳ ಪ್ರಯತ್ನ ಪಡು
- ಅಗ್ರ ತಾಂಬೂಲ – ಮೊದಲ ಮರಾದ
- ಅಜ್ಜಿ ಕತೆ – ಕಟ್ಟಕತೆ
- ಅಡಕಲೆ ಕೊಡು- ಬೀಳ್ಕೊಡು
- ಅನ್ನ ಕಿತ್ತುಕೋ – ಜೀವನ ಮಾರ್ಗವನ್ನು ಕೆಡಿಸು
- ಅವತಾರ ಮುಗಿ – ಶಕ್ತಿ ಪ್ರಭಾವ ಕುಂಠಿತ –
- ಅಳಲೆಕಾಯಿ ಪಂಡಿತ – ನಕಲಿ ವೈದ್ಯ
- ಅಳೆದು ಸುರಿದು – ಹಿಂದೆ, ಮುಂದೆ ಯೋಚಿಸಿ
- ಅರೆದು ಕುಡಿಸು – ತಿಳಿಯುವಂತೆ ಹೇಳು
- ಅನ್ನದ ದಾರಿ – ಬದುಕುವ ಮಾರ್ಗ
- ಆಟನಡೆ – ಪ್ರಭಾವ ಬೀರು
- ಆಹುತಿಯಾಗು – ಬಲಿಯಾಗು
- ಆಕಾಶಕ್ಕೆ ಹಾರು – ಆತ್ಮಾನಂದ ಪಡು
- ಇಕ್ಕಳ ಹಾಕು – ಒತ್ತಾಯದ ಪ್ರಚೋದನೆ ಮಾಡು
- ಇತಿಶ್ರೀ – ಮುಕ್ತಾಯ, ಕೊನೆ
- ಉರಿಹೊತ್ತಿಸು – ತುಂಬಾ ರೇಗಿಸು
- ಉಭಯ ಸಂಕಟ – ಸಂದಿಗ್ಧ ಸ್ಥಿತಿ
- ಉಪ್ಪಿಲ್ಲ ಹುಳಿಯಿಲ್ಲ – ನೀರಸವಾದುದು
- ಉಪ್ಪಿಟು – ಅನ್ನ ಹಾಕು
- ಎಂಜಲಿಗೆ ಕೈಯೊಡ್ಡು – ಹಂಗಿಗೆ ಒಳಗಾಗು
- ಎತ್ತಿದರೆ ಕೈಗೂಸು – ಸ್ವಬುದ್ಧಿಯಿಲ್ಲದವ
- ತಂಪು ಹೊತ್ತಿನಲ್ಲಿ ನೆನೆ – ಬಹಳ ಕೃತಜ್ಞತೆ ತೋರು
- ತಣ್ಣೀರೆರೆಚು – ಉತ್ಸಾಹಭಂಗ ಮಾಡು
- ತಲೆ ಎತ್ತಿ ತಿರುಗು – ಮರಾದೆಯಿಂದ ಬದುಕು
- ತಲೆಗೆ ತರು – ತೊಂದರೆಗೆ ಸಿಕ್ಕಿಸು
- ತಲೆ ತಿನ್ನು – ಕಾಡು-ಕಾಡಿಸು
- ತಲೆಭಾರ – ಹೊಣೆಗಾರಿಕೆ
- ತಲೆ ಮಾಸಿದವ – ವಯಸ್ಸಾದವ ಅನುಭವಿ
- ತಲೆಯಲ್ಲಿ ನಡೆ – ಅಹಂಕಾರ ಪಡು
- ಹೊಡೆಯುವ ಹಾಗಿರು – ಮೀರಿಸುವ ಹಾಗಿರು, ಮೇಲಾಗಿರು
- ತಲೆಯ ಮೇಲೆ ಹಾಕು – ಹೊಣೆ ಹೊರಿಸು
- ತಲೆಯ ಮೇಲೆ ಚಪ್ಪಡಿ ಎಳೆ – ನಾಶಮಾಡು, ತೊಂದರೆಯುಂಟು ಮಾಡು
- ತಲೆಯ ಮೇಲೆ ಕೈ ಹೊತ್ತು ಕುಳಿತುಕೊ- ಏನೂ ತೋಚದಂತಾಗು
- ತಲೆಯ ಮೇಲೆ ಕೂರಿಸಿಕೊ – ಅತಿ ಮುದ್ದು ಮಾಡು, ತುಂಬ ಸಲಿಗೆಕೊಡು
- ತಲೆಯ ಮೇಲೆ ಕಲ್ಲು ಹಾಕು – ನಾಶಮಾಡು, ತೊಂದರೆಯುಂಟು ಮಾಡು
- ತಲೆಯಾಡಿಸು – ಸಮ್ಮತಿ ಸೂಚಿಸು, ಅಸಮ್ಮತಿ ಸೂಚಿಸು
- ತಲೆಯುಳಿಸಿಕೊ – ಅಪಾಯದಿಂದ ಪಾರಾಗು
- ತಲೆಯೆತ್ತದಂತೆ ಮಾಡು – ಅಪಮಾನ ಮಾಡು, ಚೇತರಿಸಿಕೊಳ್ಳದಂತೆ ಮಾಡು
- ತಲೆಯೆತ್ತು – ಮೇಲಕ್ಕೆ ಬರು, ಕಾಣಿಸಿಕೊಳ್ಳು ಅಭಿವೃದ್ಧಿ ಹೊಂದು
- ತಲೆಯೊಡ್ಡು – ವಹಿಸಿಕೊ, ಜವಾಬ್ದಾರಿ ಹೊರು
- ತಲೆ ಹೋಗು – ಅಪಾಯವುದಿಸು
- ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕು – ಹೇಳಿದಂತೆ ಕೇಳು
- ತಾಳ ಮೇಳ ಇಲ್ಲದಿರು – ಹೊಂದಾಣಿಕೆ ಇಲ್ಲದಿರು
- ತುಂಬಿದ ಕೊಡ – ನಿಜವಾದ ಯೋಗ್ಯತೆ ಇದ್ದು ಜಂಬವಿಲ್ಲದ
- ತಿಲಾಂಜಲಿ ಬಿಡು – ಶಾಶ್ವತವಾಗಿ ಋಣವನ್ನು – ಕಳೆದುಕೊಳ್ಳು, ಕೈ ಬಿಡು
- ತಿಲೋದಕ ಬಿಡು – ಶಾಶ್ವತವಾಗಿ ಋಣವನ ಕಳೆದುಕೊಳ್ಳು
- ತಿರುಮಂತ್ರ ಹಾಕು – ಕಲಿತಿದ್ದನ್ನು ಹೇಳಿಕೊಟ್ಟವನಿಗೆ ತಿರುಗಿಸು
- ತಿರುಗಿ ಬೀಳು – ವಿರೋಧಿಸು
- ತಿರುಕನ ಕನಸು – ನನಸಾಗದ ಇಚ್ಚೆ
- ತಿಪ್ಪರಲಾಗ ಹಾಕು – ಶಕ್ತಿಮೀರಿ ಯತ್ನಿಸು
- ತಿಂದು ತೇಗು – ಬರಿದು ಮಾಡು
- ಬಾಯಿ ಸತ್ತು ಹೋಗು – ಮಾತನಾಡದ ಪರಿಸ್ಥಿತಿಯೊದಗು
- ಬಾದರಾಯಣ ಸಂಬಂಧ – ಸುತ್ತು ಬಳಸಿದ ಸಂಬಂಧ
- ಬಲವಂತದ ಮಾಘಸ್ನಾನ – ಒತ್ತಾಯದ ಕೆಲಸ
- ಪ್ರಪಂಚ ಕಾಣದವ – ಅನುಭವವಿಲ್ಲದವ
ತತ್ಸಮ ತದ್ಭವ ಸಂಪೂರ್ಣ ಮಾಹಿತಿ ಇಲ್ಲಿ ಕ್ಲಿಕ್ ಮಾಡಿ
FAQ
ನುಡಿಗಟ್ಟು ಎಂದರೇನು
ಉ : ನುಡಿಗಟ್ಟು ಎಂದರೆ ಒಂದು ವಿಶಿಷ್ಟಾರ್ಥ ನೀಡುವ ಸಂಕ್ಷಿಪ್ತ ಶಬ್ದ ನುಡಿಗಟ್ಟಿಗೆ ಪಡೆನುಡಿ, ವಾಗ್ಮೀತಿ, ವಾಗ್ಡಾರೆ, ಪ್ರಯುಕ್ತತೆ ಎಂಬ ಸಂವಾದಗಳಿಗೆ ಶಬ್ದಗಳಿವೆ.