Karnataka Geography ಕರ್ನಾಟಕ ರಾಜ್ಯವು ಭಾರತ ದೇಶದ ರಾಜ್ಯವಾಗಿದ್ದು. ಭಾರತ ದೇಶದ 29 ರಾಜ್ಯಗಳಲ್ಲಿ ಕರ್ನಾಟಕ ಒಂದು ರಾಜ್ಯವಾಗಿದೆ. ಇದು ಭಾರತದ ದಕ್ಷಿಣದಲ್ಲಿ ಲಕ್ಷದ್ವೀಪದ ಪಶ್ಚಿಮ ಮಧ್ಯದಲ್ಲಿ ಇದು ಕಂಡು ಬರುತ್ತದೆ. ಇದು 110-311 ಮತ್ತು 180-45ಉತ್ತರ ಅಕ್ಷಾಂಶ ಹಾಗೂ 740-121 ಮತ್ತು 780-40,1 ಪೂರ್ವ ರೇಖಾಂಶ ನಡುವೆ ವಿಸ್ತರಿಸಲಾಗಿದೆ. ಕರ್ನಾಟಕದ ಉತ್ತರ ಗಡಿಭಾಗಕ್ಕೆ ನೋಡುವುದಾದರೆ. ಬೀದರ್ ಜಿಲ್ಲೆಯ ಔರದ ತಾಲ್ಲೂಕು ಕರ್ನಾಟಕದ ಕೊನೆಯ ಗ್ರಾಮವಾಗಿದೆ. ಕರ್ನಾಟಕದ ದಕ್ಷಿಣದಲ್ಲಿ ಚಾಮರಾಜನಗರ ಕೊನೆಯ ಜಿಲ್ಲೆಯಾಗಿದೆ. ಒಟ್ಟಾರೆಯಾಗಿ ಉತ್ತರ ದಿಂದ ದಕ್ಷಿಣದವರೆಗೆ 750km ಉದ್ದವಿದ್ದು. ಪೂರ್ವದಿಂದ ಪಶ್ಚಿಮದವರಿಗೆ 400 ಕಿಲೋಮೀಟರ್ ಅಗಲವಾಗಿದೆ.  ಪಶ್ಚಿಮಕ್ಕೆ ಅರಬ್ಬಿ ಸಮುದ್ರವಿದ್ದು, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರಪ್ರದೇಶ, ದಕ್ಷಿಣ ಮತ್ತು ಆನ್ನೇಯಕ್ಕೆ ತಮಿಳುನಾಡು, ನೈಋತ್ಯಕ್ಕೆ ಕೇರಳ, ವಾಯವ್ಯಕ್ಕೆ ಗೋವಾ ರಾಜ್ಯಗಳು ಮೇರೆಗಳಾಗಿವೆ. ಆಕಾರದಲ್ಲಿ ಕರ್ನಾಟಕವು ಗೋಡಂಬಿಯನ್ನು ಹೋಲುತ್ತದೆ. ಕರ್ನಾಟಕ ರಾಜ್ಯವು 1,91,791 ಚದರ ಕಿ.ಮೀ. ವಿಸ್ತಾರವಾಗಿದೆ. ವಿಸ್ತೀರ್ಣದಲ್ಲಿ ಭಾರತದ ಎಂಟನೆಯ ದೊಡ್ಡ ರಾಜ್ಯ ಹಾಗೂ 2011 ರ ಜನಗಣತಿಯ ಪ್ರಕಾರ 6,11,30,704 ಜನಸಂಖ್ಯೆಯನ್ನು ಹೊಂದಿದ್ದು, ಜನಸಂಖ್ಯೆಯಲ್ಲಿ ಒಂಭತ್ತನೆಯ ಸ್ಥಾನವನ್ನು ಹೊಂದಿದೆ.




Karnataka Geography ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣವು ಶೇ. 5.83 ಭಾಗದಷ್ಟಿದೆ. 2011ರಲ್ಲಿದ್ದಂತೆ ನಮ್ಮ ರಾಜ್ಯದಲ್ಲಿ 30 ಜಿಲ್ಲೆಗಳಿವೆ. ಈ ಜಿಲ್ಲೆಗಳಲ್ಲಿ ಒಟ್ಟು 176 ತಾಲ್ಲೂಕುಗಳು, 769 ಹೋಬಳಿಗಳು, 347 ಪಟ್ಟಣ-ನಗರಗಳು, 29,340 ಹಳ್ಳಿಗಳಿವೆ. ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ ಅತಿ ದೊಡ್ಡದು ಹಾಗೂ ಬೆಂಗಳೂರು ನಗರ ಅತಿ ಚಿಕ್ಕ ಜಿಲ್ಲೆಯಾಗಿದೆ. ಬೆಂಗಳೂರು ಕರ್ನಾಟಕದ ರಾಜಧಾನಿ. ಆಡಳಿತ ನಿರ್ವಹಣೆಯ ದೃಷ್ಟಿಯಿಂದ ಕರ್ನಾಟಕವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ; ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳು.

Karnataka Subdivision list [ ಕರ್ನಾಟಕ ರಾಜ್ಯದ ವಿಭಾಗಗಳ ಪಟ್ಟಿ ]

  1. ಬೆಂಗಳೂರು
  2. ಮೈಸೂರು
  3. ಬೆಳಗಾವಿ
  4. ಕಲಬುರ್ಗಿ




 

Karnataka District list [ ಕರ್ನಾಟಕ ಜಿಲ್ಲೆಗಳ ಪಟ್ಟಿ]

ಕರ್ನಾಟಕ ರಾಜ್ಯಗಳಲ್ಲಿ 30 ಜಿಲ್ಲೆಗಳಿಗೆ ವಿವರವಾಗಿ ಈ ಕೆಳಗಡೆ ಕೊಡಲಾಗಿದೆ.

ಜಿಲ್ಲೆ ಹೆಸರುವಿಸ್ತೀರ್ಣ(ಚ.ಕಿ.ಮೀ)ಜನಸಂಖ್ಯೆ
ಬೆಳಗಾವಿ13.41547,78,439
ಬಿಜಾಪೂರ10,49421,75,102
ಬಳ್ಳಾರಿ8,45025,32,383
ಬಾಗಕೋಟೆ6,57518,90,826
ಬೀದರ5,44817,00,010
ಬೆಂಗಳೂರು ಗ್ರಾಮಾಂತರ22599,87,257
ಬೆಂಗಳೂರು ನಗರ2,19095,88,910
ಚಿತ್ರದುರ್ಗ8.44016,60,378
ಚಿಕ್ಕಮಗಳೂರು7.20111.37.753
ಚಾಮರಾಜ ನಗರ5.10110,20.962
ಚಿಕ್ಕಬಳ್ಳಾಪೂರ4.52412,54,377
ದಾವಣಗೆರೆ5,92419.46,905
ದಕ್ಷಿಣ ಕನ್ನಡ4,56020,83,625
ಧಾರವಾಡ4,26018.46.993
ಕಲಬುರ್ಗಿ10,95125,64,892
ಗದಗ4,65610,65,235
ಹಾಸನ6,81417.76,221
ಹಾವೇರಿ4,82315,98,506
ಕೋಲಾರ3,96915,40,231
ಕೊಪ್ಪಳ7,18913.91.292
ಕೋಡಗು4.1025,54.762
ಮೈಸೂರು6,85429,94,744
ಮಂಡ್ಯ4,96118,08,680
ರಾಯಚೂರು6,82719.24.773
ರಾಮನಗರ3,55610,82,739
ಶಿವಮೊಗ್ಗ8,47717,55,512
ತುಮಕೂರು10,59726.81.449
ಉತ್ತರ ಕನ್ನಡ10.29114.36,847
ಉಡುಪಿ3,88011,77,908
ಯಾದಗಿರಿ527311,72,985

 




Karnataka Board Last Village Name (ಕರ್ನಾಟಕ ರಾಜ್ಯದ ಕೊನೆಯ ಹಳ್ಳಿಗಳು)

  1. ಉತ್ತರ ತುದಿ : ಔರಾದ್ ತಾಲೂಕ ಮಳಖೇಡ (ಬೀದರ್)
  2. ದಕ್ಷಿಣ ತುದಿ : ಗುಂಡ್ಲುಪೇಟೆ (ಚಾಮರಾಜನಗರ)
  3. ಪೂರ್ವ ತುದಿ : ಮುಳಬಾಗಿಲು ತಾಲ್ಲೂಕ (ಕೋಲಾರ)
  4. ಪಶ್ಷಿಮ ತುದಿ : ಕಾರವರ

Karnataka Geography Imports Points

  1. ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ಜಿಲ್ಲೆ  : ಬೆಳಗಾವಿ (13,433 ಚ.ಕಿ.ಮೀ)
  2. ವಿಸ್ತೀರ್ಣದಲ್ಲಿ ಅತ್ಯಂತ ಚಿಕ್ಕ ಜಿಲ್ಲೆ   : ಬೆಂಗಳೂರು ನಗರ ( 2,190 ಚ.ಕಿ.ಮೀ)
  3. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ : ಬೆಂಗಳೂರು ನಗರ
  4. ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ : ಕೊಡಗು

 

2 Comments

Leave a Reply

Your email address will not be published. Required fields are marked *