Kriyapada in Kannada Explanation

ಕನ್ನಡ ಸಂಪೂರ್ಣ ಮಾಹಿತಿ ಕ್ರಿಯಾಪದ

Kriyapada in Kannada Explanation ಕ್ರಿಯೆಯ ಅರ್ಥವನ್ನು ಕೊಡುವ, ಪ್ರತ್ಯಯವನ್ನು ಹೊಂದದಿರುವ ಶಬ್ದಕ್ಕೆ ‘ಕ್ರಿಯಾಪ್ರಕೃತಿ’ ಅಥವಾ ‘ಧಾತು’ ಎಂದು ಕರೆಯುತ್ತಾರೆ. ಈ ಕ್ರಿಯಾ ಪ್ರಕೃತಿಗಳಿಗೆ ಕಾಲಸೂಚಕ ಮತ್ತು ಆಖ್ಯಾತ ಪ್ರತ್ಯಯಗಳು ಪ್ರತ್ಯಯಗಳು ಮತ್ತು ಆಖ್ಯಾತ ಸೇರಿ ಕ್ರಿಯಾಪದಗಳಾಗುತ್ತವೆ.

ಉದಾಃ ಧಾತು+ಕಾಲಸೂಚಕ ಪ್ರತ್ಯಯ+ಅಖ್ಯಾತಪ್ರತ್ಯಯ= ಕ್ರಿಯಾಪದ

  1. ಮಾಡು+ಉತ್ತ+ ಆನೆ =ಮಾಡುತ್ತಾನೆ.
  2. ಬರು + ಉತ್ತ + ಆನೆ = ಬರುತ್ತಾನೆ.

ಕ್ರಿಯಾಪದವು ಪ್ರಥಮ, ಮಧ್ಯಮ ಮತ್ತು ಉತ್ತಮ ಪುರುಷಗಳಲ್ಲಿ ಪ್ರಯೋಗ ಗೊಳ್ಳುವ ವಿಧಾನವನ್ನು ಗಮನಿಸಿ:

Kriyapada in Kannada Explanation
Kriyapada in Kannada Explanation

ಉದಾಃ

  1. ಪ್ರಥಮ ಪುರುಷಃ ಅವನು ಮಾಡುತ್ತಾನೆ/ ಅವಳು ಮಾಡುತ್ತಾಳೆ.
  2. ಮಧ್ಯಮ ಪುರುಷ: ನೀನು ಮಾಡುತ್ತೀಯೆ.
  3. ಉತ್ತಮ ಪುರುಷ: ನಾನು ಮಾಡುತ್ತೇನೆ.

ಧಾತುಗಳಿಗೆ ಅಖ್ಯಾತಪ್ರತ್ಯಯಗಳು ಸೇರುವಾಗ ಕಾಲಸೂಚಕ ಪ್ರತ್ಯಯಗಳು ಜೊತೆ ಜೊತೆಯಲ್ಲಿಯೇ ಸೇರುತ್ತವೆ ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ. ಇವು ಮೂರು ವಿಧವಾಗಿವೆ.

1. ಭೂತಕಾಲ 2.ವರ್ತಮಾನ ಕಾಲ 3.ಭವಿಷ್ಯತಕಾಲ

1. ಭೂತಕಾಲ :

ಧಾತು+ಕಾಲಸೂಚಕ+ಆಖ್ಯಾತ-ಪುಲ್ಲಿಂಗ/ಸ್ತ್ರೀಲಿಂಗ/ಬಹುವಚನ

ಪ್ರತ್ಯಯ ಪ್ರತ್ಯಯ

  1. ಪ್ರಥಮ ಪುರುಷ ಹೋಗು+ದ+ಅನು/ಳು/ರು-ಹೋದನು, ಹೋದಳು,ಹೋದರು.
  2. ಮಧ್ಯಮ ಪುರುಷ ಹೋಗು+ದ++ ಎ/ರಿ-ಹೋದೆ/ಹೋದೆ/ಹೋದಿರಿ.
  3. ಉತ್ತಮ ಪುರುಷ ಹೋಗು +ದ+ಎನು/ಎವು=ಹೋದೆನು/ಹೋದೆನು/ಹೋದೆವು

ವರ್ತಮಾನ ಕಾಲ :

  1. ಪ್ರಥಮ ಪುರುಷ ಹಾಡು+ಉತ್ತ+ ಅನೆ/ಳೆ/ರೆ=ಹಾಡುತ್ತಾನೆ/ಹಾಡುತ್ತಾಳೆ,ಹಾಡುತ್ತಾರೆ.
  2. ಮಧ್ಯಮ ಪುರುಷ ಹಾಡು+ಉತ್ತ+ಈಯೆ/ರಿ-ಹಾಡುತ್ತೀಯೆ/ಹಾಡುತ್ತೀಯೆ,ಹಾಡುತ್ತೀರಿ.
  3. ಉತ್ತಮ ಪುರುಷ ಮಾಡು+ವ-ಎನ್ನು/ಎವು-ಮಾಡುವೆನು ಮಾಡುವೆನು/ ಮಾಡುವೆವು.

Leave a Reply

Your email address will not be published. Required fields are marked *