KSSFCL Recruitment 2024 : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರಲ್ಲಿ ಒಟ್ಟು 40 ಹುದ್ದೆಗಳಿಗೆ ವಿವಿಧ ವೃಂದಗಳಲ್ಲಿನ ಹುದ್ದೆಗಳ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿ ಮಾಡಲಾಗುವುದು
ಹುದ್ದೆಗಳು ಮತ್ತು ಅದರ ವಿವರ
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಸನ್ನದು ಲೆಕ್ಕಪರಿಶೋಧಕರು | 1 |
ಕಾನೂನು ಅಧಿಕಾರಿ | 2 |
ಮಾನವ ಸಂಪನ್ಮೂಲ ಅಧಿಕಾರಿ(ಎಂಬಿಎ, ಹೆಚ್‌ಆರ್) | 1 |
ತರಬೇತಿ ಅಧಿಕಾರಿ | 1 |
ಕಿರಿಯ ಅಧಿಕಾರಿ / ಸೌಹಾರ್ದ ಅಭಿವೃದ್ಧಿ ಅಧಿಕಾರಿ | 11 |
ಸಹಾಯಕ | 8 |
ಬೆರಳಚ್ಚುಗಾರರು (ಸ್ಟೆನೊಗ್ರಾಪರ್)(ಸಹಾಯಕ ಶ್ರೇಣಿ) | 2 |
ಕಿರಿಯ ಸಹಾಯಕ | 11 |
ಉಪಸಿಬ್ಬಂದಿ ಕಂ ವಾಹನಚಾಲಕ | 2 |
ವಯೋಮಿತಿ
ಸನ್ನದು ಲೆಕ್ಕಪರಿಶೋಧಕರು | ಗರಿಷ್ಠ 35 ವರ್ಷಗಳು |
ಕಾನೂನು ಅಧಿಕಾರಿ | ಗರಿಷ್ಠ 35 ವರ್ಷಗಳು |
ಮಾನವ ಸಂಪನ್ಮೂಲ ಅಧಿಕಾರಿ(ಎಂಬಿಎ, ಹೆಚ್‌ಆರ್) | ಗರಿಷ್ಠ 35 ವರ್ಷಗಳು |
ತರಬೇತಿ ಅಧಿಕಾರಿ | ಗರಿಷ್ಠ 35 ವರ್ಷಗಳು. |
ಕಿರಿಯ ಅಧಿಕಾರಿ/ಸೌಹಾರ್ದ ಅಭಿವೃದ್ಧಿ ಅಧಿಕಾರಿ | ಗರಿಷ್ಠ 30 ವರ್ಷಗಳು. |
ಸಹಾಯಕ | ಗರಿಷ್ಠ 30 ವರ್ಷಗಳು. |
ಬೆರಳಚ್ಚುಗಾರರು (ಸ್ಟೆನೊಗ್ರಾಪರ್)(ಸಹಾಯಕ ಶ್ರೇಣಿ) | ಗರಿಷ್ಠ 30 ವರ್ಷಗಳು. |
ಕಿರಿಯ ಸಹಾಯಕ | ಗರಿಷ್ಠ 25 ವರ್ಷಗಳು. |
ಉಪಸಿಬ್ಬಂದಿ ಕಂ ವಾಹನಚಾಲಕ | ಗರಿಷ್ಠ 25 ವರ್ಷಗಳು. |
ಶೈಕ್ಷಣಿಕ ಅರ್ಹತೆ :
- ಸನ್ನದು ಲೆಕ್ಕಪರಿಶೋಧಕರು – ಸಿಎ/ಸಿಎಸ್/ಐಸಿಡಬ್ಲ್ಯುಎ.
- ಕಾನೂನು ಅಧಿಕಾರಿ – ಕಾನೂನು ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
- ಮಾನವ ಸಂಪನ್ಮೂಲ ಅಧಿಕಾರಿ – ಎಂ.ಬಿ.ಎ, ಹೆಚ್.ಆರ್ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
- ತರಬೇತಿ ಅಧಿಕಾರಿ – ಎಂ.ಎ. ಕನ್ನಡ ಅಥವಾ ಎಂ.ಎಸ್.ಡಬ್ಲ್ಯೂ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
- ಸೌಹಾರ್ದ ಅಭಿವೃದ್ಧಿ ಅಧಿಕಾರಿ – ಯಾವುದೇ ವಿಷಯದಲ್ಲಿ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
- ಸಹಾಯಕರು – ಯಾವುದೇ ವಿಷಯದಲ್ಲಿ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
- ಟೈಪಿಸ್ಟ್ ಕಂ ಸ್ಟೆನೋ – ಯಾವುದೇ ವಿಷಯದಲ್ಲಿ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ. ಶೀಘ್ರಲಿಪಿಯನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರೌಢದರ್ಜೆಯಲ್ಲಿ ತೇರ್ಗಡೆಯಾಗಿರಬೇಕು. ಬೆರಳಚ್ಚಿನಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರೌಢದರ್ಜೆಯಲ್ಲಿ ತೇರ್ಗಡೆಯಾಗಿರಬೇಕು.
- ಕಿರಿಯ ಸಹಾಯಕರು – ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಪರಿಣಿತಿ ಕಡ್ಡಾಯ.
- ಉಪ ಸಿಬ್ಬಂದಿ ಕಮ್ ವಾಹನ ಚಾಲಕ – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮೋಟಾರು ವಾಹನ ಚಾಲನಾ ಪರವಾನಿಗೆ ಪಡೆದು ಮೂರು ವರ್ಷಗಳಾಗಿರತಕ್ಕದ್ದು.
ಆಯ್ಕೆ ವಿಧಾನ :
- ಎಲ್ಲಾ ಹುದ್ದೆಗಳಿಗೂ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುತ್ತದೆ.
- ಬೆರಳಚ್ಚುಗಾರ/ಸ್ಪೇನೂಗ್ರಾಪರ್‌ಗೆ ಬೆರಳಚ್ಚು ಪರೀಕ್ಷೆ & ಉಪಸಿಬ್ಬಂದಿ ಕಂ ವಾಹನ ಚಾಲಕ ಸಿಬ್ಬಂದಿಗಳಿಗೆ ವಾಹನ ಚಾಲನಾ ಪ್ರಾಯೋಗಿಕ ಪರೀಕ್ಷೆ ಇರುತ್ತದೆ.
- ಲಿಖಿತ ಹಾಗೂ ಸಂದರ್ಶನ/ಕೌಶಲ್ಯ ಪರೀಕ್ಷೆಗೆ ಕರೆಯಲ್ಪಟ್ಟ ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಹಾಜರಾಗಬೇಕು. ಯಾವುದೇ ಪ್ರಯಾಣ ಭತ್ಯೆ/ದಿನ ಭತ್ಯೆಗಳನ್ನು ನೀಡಲಾಗುವುದಿಲ್ಲ.
- ಎಲ್ಲಾ ಹುದ್ದೆಗಳಿಗೂ ಪರೀಕ್ಷಾ ಕೇಂದ್ರ ಬೆಂಗಳೂರು ಆಗಿರುತ್ತದೆ.
ಅರ್ಜಿಯ ಜೊತೆ ಸಲ್ಲಿಸಬೇಕಾದ ದಾಖಲಾತಿಗಳು :
- ಹುದ್ದೆಗೆ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಪೂರ್ಣವಾಗಿ ಭರ್ತಿ ಮಾಡಿರುವ ಅರ್ಜಿ
- ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯನ್ನು ರುಜುವಾತು ಪಡಿಸುವ ದಾಖಲಾತಿಗಳು.
(ಎಲ್ಲಾ ವರ್ಷಗಳ/ಸೆಮಿಸ್ಟರ್‌ಗಳ ಅಂಕಪಟ್ಟಿಗಳು ಹಾಗೂ ಘಟಿಕೋತ್ಸವದ ಪ್ರಮಾಣ ಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಬೇಕು.) - ಸೇವೆಯಲ್ಲಿರುವ ಅಭ್ಯರ್ಥಿಗಳಿಂದ ತಾವು ಸೇವೆ ಸಲ್ಲಿಸುತ್ತಿರುವ ಪ್ರಾಧಿಕಾರ/ಸಂಸ್ಥೆಯಿಂದ ಅರ್ಜಿ ಸಲ್ಲಿಕೆಗೆ ಅನುಮತಿಪತ್ರ, (ಮಾದರಿ ನೀಡಲಾಗಿದೆ)
- ಕಂಪ್ಯೂಟರ್ ಜ್ಞಾನವನ್ನು ಹೊಂದಿರುವ ಕುರಿತು ಸ್ವಯಂ ದೃಢೀಕರಿಸಿದ ದಾಖಲಾತಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಪ್ರಾರಂಭ ದಿನಾಂಕ :25-06-2024
ಕೊನೆಯ ದಿನಾಂಕ : 26-07-2024
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ನಮೂನೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ