Lekhana Chinhegalu in Kannada : ಬರವಣಿಗೆಯಲ್ಲಿ ಉಪಯೋಗಿಸುವ ಚಿಹ್ನೆಗಳೇ ಲೇಖನ ಚಿಹ್ನೆಗಳು.. ಇವು ವಾಕ್ಯಗಳಲ್ಲಿರುವ ಬೇರೆ ಬೇರೆ ಭಾಗಗಳಿಗೆ ಇರುವ ಸಂಬಂಧವನ್ನು ಸೂಚಿಸುತ್ತವೆ. ಇದರಿಂದ ವಾಕ್ಯದ ಅರ್ಥ ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಹನ್ನೆರಡು ಬಗೆಯ ಲೇಖನ ಚಿಹ್ನೆಗಳಿವೆ.
ಚಿಹ್ನೆ ಗಳಹೆಸರು | ಚಿಹ್ನೆ |
ಪೂರ್ಣವಿರಾಮ | (.) |
ಅರ್ಧವಿರಾಮ | (;) |
ಗೀಟು | (–) |
ಭಾವಸೂಚಕ ಚಿಹ್ನೆ | (!) |
ಅಧಿಕ ಚಿಹ್ನೆ | (+) |
ಉದ್ಧರಣ ಚಿಹ್ನೆ | (” “) (‘ ‘) |
ವಿವರಣಾ ಚಿಹ್ನೆ | ( :-) |
ಅಲ್ಪವಿರಾಮ | (,) |
ವಿರಾಮ ಚಿಹ್ನೆ | (:) |
ಪ್ರಶ್ನಾರ್ಥಕ ಚಿಹ್ನೆ | (?) |
ಆವರಣ ಚಿಹ್ನೆ | () |
ಸಮಾನಾರ್ಥಕ ಚಿಹ್ನೆ | = |
Lekhana Chinhegalu in Kannada : ಲೇಖನಿ ಚಿಹ್ನೆಗಳನ್ನು ಉದಾಹರಣೆ ಮತ್ತು ವಿವರಗಳ ಮೂಲಕ ಕೆಳಗಡೆ ವಿಸ್ತಾರವಾಗಿ ಚರ್ಚಿಸಲಾಗಿದೆ.
ಪೂರ್ಣ ವಿರಾಮ [.] ಒಂದು ವಾಕ್ಯ ಮುಗಿದ ಮೇಲೆ ಮತ್ತು ಶಬ್ದಗಳ ” ಸಂಕ್ಷಿಪ್ತ ರೂಪ ಬರೆಯುವಾಗ ಇದನ್ನು ಬಳಸುತ್ತೇವೆ.
ಉದಾಹರಣೆ : ರಾಮನು ಒಳ್ಳೆಯ ಹುಡುಗ. ಲೋ.ಸೇ.ಆ. (ಲೋಕ ಸೇವಾ ಆಯೋಗ)
ಅಲ್ಪ ವಿರಾಮ [.]
ವಾಕ್ಯವನ್ನು ಓದುವಾಗ ಅರ್ಥವಾಗುವಂತೆ ಅಲ್ಲಲ್ಲಿ ನಿಲ್ಲಿಸಿ ಓದಬೇಕಾದಾಗ ಮತ್ತು ಸಂಬೋಧನೆಯ ಮುಂದೆ ಇದನ್ನು ಬಳಸುತ್ತೇವೆ.
ಉದಾಹರಣೆ : ಕೃಷ್ಣ, ಬಲರಾಮರು ಆದರ್ಶ ಸೋದರರು
ಅರ್ಧ ವಿರಾಮ [i] ವಾಕ್ಯದಲ್ಲಿ ಕ್ರಿಯಾಪದಗಳು ಒಂದಕ್ಕಿಂತ ಹೆಚ್ಚು ಇದ್ದಾಗ, ಈ ಹೆಚ್ಚಿರುವ ಕ್ರಿಯಾಪದಗಳನ್ನು ವಿಂಗಡಿಸುವಾಗ ಮತ್ತು ಪ್ರಧಾನ ವಾಕ್ಯಕ್ಕೆ ಅಧೀನವಾದ ಉಪವಾಕ್ಯಗಳು ಮುಗಿದಾಗಲೆಲ್ಲಾ ಈ ಚಿಹ್ನೆಯನ್ನು ಬಳಸುತ್ತೇವೆ.
ಉದಾಹರಣೆ : ಮನೆಯನ್ನು ಕಟ್ಟಬಹುದು; ಆದರೆ ಅದಕ್ಕೆ ಬೇಕಾದ ಮರಮುಟ್ಟುಗಳು ಸಿಕ್ಕುವುದು ಕಷ್ಟ; ಅಂತೆಯೇ ಗುಣವೂ ಸಹ.
ವಿವರಣ ಚಿಹ್ನೆ [:] ವಾಕ್ಯದ ಅರ್ಥವನ್ನು ವಿವರಿಸುವುದಕ್ಕೆ ಮೊದಲಿಗೆ ಇದನ್ನು ಬಳಸುತ್ತೇವೆ. ಒಂದು ಅಭಿಪ್ರಾಯದ ವಿವರಣೆ ಮುಂದಿನಂತೆ ಇದೆ ಎಂದು ತೋರಿಸುವಾಗ ಬಳಸುತ್ತೇವೆ.
ಗೀಟು ಚಿಹ್ನೆ [-] ವಾಕ್ಯವನ್ನು ಪೂರ್ಣಗೊಳಿಸುವ ಮೊದಲೇ ಹಠಾತ್ತಾಗಿ ನಿಲ್ಲಿಸಬೇಕಾದರೆ ಇದನ್ನು ಬಳಸುತ್ತೇವೆ.
ಉದಾಹರಣೆ :ಸಂತರು ಹೇಳುವುದು – ಅನುಕರಣೀಯ.
ವಿವರಣಾ ಚಿಹ್ನೆ [:-] ಉದಾಹರಣೆ ಕೊಡುವಾಗ ಮತ್ತು ವಿವರಣೆ ನೀಡುವಾಗ ಇದನ್ನು ಬಳಸುತ್ತೇವೆ.
ಉದಾಹರಣೆ : ನಾಲ್ಕು ಪುರುಷಾರ್ಥಗಳು:- ಧರ್ಮ, ಅರ್ಥ, ಕಾಮ, ಮೋಕ್ಷ.
ಪ್ರಶ್ನಾರ್ಥಕ ಚಿಹ್ನೆ [?] :ಪ್ರಶ್ನೆಯನ್ನು ಕೇಳುವ ಪದ ಮತ್ತು ವಾಕ್ಯದ ಕೊನೆಗೆ ಇದನ್ನು ಬಳಸುತ್ತೇವೆ.
ಉದಾಹರಣೆ : ಅವನು ಯಾರು?, ಪೆನ್ನು ಎಲ್ಲಿದೆ?, ಶಾಲೆಗೆ ಯಾಕೆ ಹೋಗಲಿಲ್ಲ?
ಉದ್ಧರಣ ಚಿಹ್ನೆ [(“”) (‘ ‘ )] : ಸಂಭಾಷಣೆಯ ಸಮಯದಲ್ಲಿ ಬೇರೆಡೆ ಉದ್ಭತ ವಾಕ್ಯವನ್ನು ಅಥವಾ ಶಬ್ದವನ್ನು ತೆಗೆದುಕೊಂಡಾಗ ಇದನ್ನು ಬಳಸುತ್ತೇವೆ. ಪಾರಿಭಾಷಿಕ ಶಬ್ದಗಳನ್ನು ಬಳಸುವಾಗ ಈ ಚಿಹ್ನೆಗಳನ್ನು ಬಳಸಬೇಕು
ಉದಾಹರಣೆ : ಬಸವಣ್ಣನವರು ಹೇಳಿದ ಮಾತೆಂದರೆ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ”.
ಆವರಣ ಚಿಹ್ನೆ [()] : ಒಂದು ಶಬ್ದ ಅಥವಾ ವಾಕ್ಯವನ್ನು ಹೇಳಿದ ಅದಕ್ಕೆ ಸಮನಾರ್ಥಕ ಶಬ್ದವನ್ನು, ವಾಕ್ಯವನ್ನು ಹೇಳುವಾಗ ಇದನ್ನು ಬಳಸುತ್ತಾರೆ.
ಉದಾಹರಣೆ : ಎಷ್ಟೇ ಪರಾಕ್ರಮಿ ತಂದೆ ಇದ್ದರೂ ತನ್ನ ಮಕ್ಕಳ ಮೇಲೆ ಅತಿಯಾದ ಕೋಪ ತೋರಿಸಲಾರ, (ವಾತ್ಸಲ್ಯಮಯಿ ತಂದೆ)
ಅಧಿಕ ಚಿಹ್ನೆ [+] : ಸಂಧಿ ಮಾಡಿ ಹೇಳುವಾಗ, ಸಮಾಸ ಮಾಡುವಾಗ, ಲೆಕ್ಕ ಮಾಡುವಾಗ ಈ ಚಿಹ್ನೆ ಬಳಸುವರು.
ಉದಾಹರಣೆ : ಗಿಡ + ಮರ +ಬಳ್ಳಿ =ಗಿಡ ಮರ ಬಳ್ಳಿ, ಕಾಲ + ಅನ್ನು = ಕಾಲವನ್ನು
ಸಮಾನಾರ್ಥಕ ಚಿಹ್ನೆ [=] : ಎರಡು ಪದಗಳ ಅರ್ಥ ಸಮಾನ ಎನ್ನುವಾಗ ಈ ಪದವನ್ನು ಬಳಸುತ್ತಾರೆ.
ಉದಾ : ಪ್ರಕಾಶ=ಬೆಳಕು, ಕಡಲು=ಜಲದಿ, ಐಶ್ವರ್ಯ=ಸಂಪತ್ತು.