NamaVibhakti PratyayaGalu Kannada Example Meaning ಭಾಷೆಯಲ್ಲಿ ಯಾವುದೇ ನಾಮಪದ ಪೂರ್ಣ ಬಳಕೆಯಗಬೇಕಾದರೆ ವಿಭಕ್ತಿ ಪ್ರತ್ಯಯದ ಪಾತ್ರ ಬಹಳ ಮುಖ್ಯ. ಲಿಂಗ- ವಚನ ವ್ಯವಸ್ಥೆಗಾಗಿ ನಾಮಪದಗಳಿವೆ. ರೂಪಭೇದ ಕಲ್ಪಿಸಿರುವಂತೆಯೇ ವ್ಯಾಕ್ಯದಲ್ಲಿನ ಮತ್ತೊಂದು ಪದಕ್ಕೆ ಸಂಬಂಧ ಉಂಟು ಮಾಡಲು ರೂಪಭೇದದ ಪರಿಕಲ್ಪನೆಗಳನ್ನು ಸೃಷ್ಟಿಸಿವುದು ಭಾಷಾ ಸಹಜತೆ. ಹೀಗೆ ವ್ಯಾಕ್ಯದಲ್ಲಿರುವ ಯುಕ್ತ ಪದಗಳ ಸೂಕ್ತ ಸಂಬಂಧವನ್ನು ಖಚಿತಪಡಿಸುವ ರೂಪವೇ ವಿಭಕ್ತಿ ಹಾಗಯೇ ವ್ಯಾಕ್ಯದಲ್ಲಿಯ ನಾಮಪ್ರಕೃತಿಯೊಡನೆ ಸಂಬಂಧವನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ದೇಶಿಸಲು ಬಳಸುವ ಪ್ರತ್ಯಯ ರೂಪವೇ ವಿಭಕ್ತಿ ಪ್ರತ್ಯಯ.

NamaVibhakti PratyayaGalu Kannada Example Meaning

 

ಈ ಪ್ರತ್ಯಯವೇ ನಾಮ ಪ್ರಕೃತಿಯನ್ನು ಅರ್ಥಪೂರ್ಣವಾಗಿ ಉಪಯೋಗಿಸುವಾಗ ಅದಕ್ಕೂ ವ್ಯಾಕ್ಯದ ಉಳಿದ ಪದಗಳಿಗೂ ಇರುವ ಪೂರ್ಣಾರ್ಥ ಸಂಬಂಧವನ್ನು ತಿಳಿಸುತ್ತದೆ. ನಾಮ ವಿಭಕ್ತಿಗಳು ವಿಭಕ್ತಿಯನ್ನು ಕುರಿತು ಹೇಳುವಾಗ ಒಂದು ವ್ಯಾಕ್ಯದಲ್ಲಿ ನಾಮ ಪದಕ್ಕೂ ಮಿಕ್ಕ ಪದಗಳಿಗೂ ಇರುವ ಸಂಬಂಧವನ್ನು ತಿಳಿಸಲು ನಿಯೋಜಿತವಾದ ಪ್ರತ್ಯಯಗಳಿವು.

ವಿಭಕ್ತಿ ಪ್ರತ್ಯಯಗಳ ಪ್ರಾಯೋಗಿಕತೆಯನ್ನು ಗಮನಿಸಿದಾಗ ಏಕವಚನದಲ್ಲಿ ವಿಭಕ್ತಿ ಪ್ರತ್ಯಯಗಳಿಗೆ ನಾಮ ಪ್ರಕೃತಿ ನೇರವಾಗಿ ಹೊಂದಿಕೊಂಡು ಬರುವುದು. ಆದರೆ ಬಹುವಚನದಲ್ಲಿ ಬಹುವಚನದ ಪ್ರತ್ಯಯದ ನಂತರ ಬರುವುದು. ಸಂಸ್ಕೃತ ಭಾಷೆಯ ವಚನ ವ್ಯವಸ್ಥೆಯನ್ನು ಗಮನಿಸಿದಾಗ ಅಲ್ಲಿರುವಂತೆ ಪ್ರತ್ಯೇಕ ಪ್ರತ್ಯಯ ವ್ಯವಸ್ಥೆಗಳು ದ್ರಾವಿಡ ಭಾಷೆಯಲ್ಲಿ ಇಲ್ಲ.

ಸಂಬೋಧನೆಯು ಪ್ರಥಮಾ ವಿಭಕ್ತಿಯಲ್ಲಿ ಸೇರುವುದರಿಂದಲೂ ಅದಕ್ಕೆ ಕಾರಕಾರ್ಥ ಇಲ್ಲದಿರುವುದರಿಂದಲೂ ವಿಭಕ್ತಿಗಳು ಏಳು ಇರುತ್ತವೆ. ಪಂಚಮೀ ವಿಭಕ್ತಿಯ ಇಂದ ಪ್ರತ್ಯಯವು ತೃತೀಯಾ ವಿಭಕ್ತಿಯ ಕಾರ್ಯವನ್ನೇ ಮಾಡುತ್ತದೆ. ಕೆಲವರು ದೆಸೆಯಿಂದ ಎಂಬುದನ್ನು ಪಂಚಮೀ ವಿಭಕ್ತಿಯ ಪ್ರತ್ಯಯವೆಂದು ಹೇಳುತ್ತಾರೆ.

ಈ ರೀತಿ ಮಾತಿನಲ್ಲಾಗಲೀ, ಲಿಪಿಯಲ್ಲಾಗಲೀ ಬಳಸುವುದಿಲ್ಲ. ಅಲ್ಲದೇ ಈ ದೆಸೆಯಿಂದ ಎಂಬುದರಲ್ಲಿಯೇ ಇಂದ ಎಂಬ ಪ್ರತ್ಯಯ ಇದೆ. ಷಷ್ಠಿ ವಿಭಕ್ತಿಗೆ ಸಂಬಂಧಾನ್ವಯವಿದೆ. ಆದರೆ ಕಾರಕಾನ್ವಯವಿಲ್ಲ. ಕಾರಣ ಷಷ್ಠಿ ವಿಭಕ್ತಿಯ ಸಂಬಂಧವನ್ನು ಕಾರಕವೆಂದು ಪರಿಗಣಿಸುವುದಿಲ್ಲ. ಆದ್ದರಿಂದ ಕಾರಕಗಳು ಆರು ಇರುತ್ತವೆ. ತೃತೀಯಾ, ಪಂಚಮೀ ವಿಭಕ್ತಿಗಳ ಪ್ರತ್ಯಯಗಳು ಹೊಸಗನ್ನಡದಲ್ಲಿ ಇಂದ ಎಂದು ಒಂದೇ ಇವೆ. ಆದರೆ ಹಳಗನ್ನಡದಲ್ಲಿ ಅವು ಬೇರೆ ಬೇರೆಯಾಗಿರುವುದನ್ನು ಗಮನಿಸಿದರೆ ಅವುಗಳ ಕಾರಕಾರ್ಥ ಸಂಬಂಧ ಸ್ಪಷ್ಟವಾಗುವುದು.




ಸಂವಿಭಕ್ತಿಗಳುಕಾರಗಳುಹೋಸಗನ್ನಡ ಪ್ರತ್ಯಯಗಳುಹಳಗನ್ನಡ ಪ್ರತ್ಯಯಗಳು
1ಪ್ರಥಮಾಕರ್ತೃಮ್
2ದ್ವಿತೀಯಾಕರ್ಮಅ, ಅನ್ನುಅಮ್ (ಅಂ)
3ತೃತೀಯಾಕರಣಇಂದಇಂ, ಇಂದ, ಇಂದೆ
3ತೃತೀಯಾಕರಣಇಂದಇಂ, ಇಂದ, ಇಂದೆ
4ಚತುರ್ಥೀಸಂಪ್ರದಾನ (ಸಾಧನ) ಗೆ, ಇಗೆ, ಕ್ಕೆ, ಅಕ್ಕೆಗೆ, (ಇಗೆ) ಕ್ಕೆ
5ಪಂಚಮೀ ಅಪಾದಾನ (ಅಗಲುವಿಕೆ)ದೆಸೆಯಿಂದ ಅತ್ತಣಿಂ, ಅತ್ತಣಿಂದೆ, ಅತ್ತಣಿಂದಂ
6 ಷಷ್ಠೀ ಸಂಬಂಧ
7 ಸಪ್ತಮೀ ಅಧಿಕರಣ ಅಲ್ಲಿ ಒಳ್
8 ಸಂಬೋದನಾ ಕರೆಯೋಣ, ಅಭಿಮುಖೀಕರಣ ಆ, ಏ, ಇರಾ ಆ, ಏ, ಈ, ಇರಾ

Leave a Reply

Your email address will not be published. Required fields are marked *