Rabindranath Tagore Biography in Kannada : ರವೀಂದ್ರನಾಥರು ಕಲ್ಕತ್ತಾ ನಗರದಲ್ಲಿ ಮೇ 6ನೆಯ ತಾರೀಖು 1861 ನೇಯ ಇಸ್ವಿಯಲ್ಲಿ ಜನಿಸಿದರು. ಇವರ ತಂದೆ ಮಹರ್ಷಿ ದೇವೇಂದ್ರನಾಥ ಟ್ಯಾಗೋರ್ ರವರು ಸದ್ಗುಣಗಳ ಆಗರವಾಗಿದ್ದರು. ರವೀಂದ್ರನಾಥರ ತಂದೆ ಆಗರ್ಭ ಶ್ರೀಮಂತರಾಗಿದ್ದರೂ ಸಹ ರವೀಂದ್ರರನ್ನು ತೀರ ಸರಳ ಹಾಗೂ ಸಾದಾ ಜೀವನದಲ್ಲಿ ಬೆಳೆಸಿದರು. ನೈತಿಕ ಹಾಗೂ ಆಧ್ಯಾತ್ಮಿಕ ಗುಣಗಳನ್ನು ರವೀಂದ್ರರರು ತಂದೆಯಿಂದ ಪಡೆದರು.

 

ಖಾಸಗಿ ಶಿಕ್ಷಕರು ಮನೆಯಲ್ಲಿ ರವೀಂದ್ರರಿಗೆ ಪಾಠಗಳನ್ನು ಹೇಳಿ ಕೊಡುತ್ತಿದ್ದರು. ಸ್ವತಃ ಇವರ ತಂದೆಯವರು ಇವರ ಶಿಕ್ಷಣದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಖಾಸಗಿ ಶಿಕ್ಷಕರಿಂದ ಇವರು ಮನೆಯಲ್ಲಿಯೇ ಮಾತೃಭಾಷೆ, ಸಂಸ್ಕೃತ, ಗಣಿತ, ಜೀವಶಾಸ್ತ್ರ ಮುಂತಾದ ವಿಷಯಗಳನ್ನು ಕಲಿತುಕೊಂಡರು. Rabindranath Tagore Biography in Kannada  ಆದರೆ ಇತರ ವಿಷಯಗಳ ಅಭ್ಯಾಸಕ್ಕಾಗಿ ಇವರು ಸೆಮಿನರಿ, ಹಾಗೂ ಬೆಂಗಾಲ ಅಕಾಡೆಮಿ ಶಾಲೆಗಳಿಗೆ ಕಲಿಯಲು ಹೋಗಬೇಕಾದ ಪ್ರಸಂಗ ಬಂದಿತು.




ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಶಿಕ್ಷಣ ರವೀಂದ್ರರಿಗೆ ಹಿಡಿಸದೇ ಮರಳಿದರು.ವರ್ಷದಲ್ಲಿಯೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ರವೀಂದ್ರರು ಕ್ರಿ.ಶ.1877 ರಲ್ಲಿ ಕಾನೂನು ಅಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿದರು. ಆದರೆ ಕಾನೂನು ಪದವಿ ಪಡೆಯದೇ ತಾಯ್ಯಾಡಿಗೆ ಹಿಂತಿರುಗಿದರು.

ಕ್ರಿ.ಶ.1883 ರಲ್ಲಿ ಇವರ ವಿವಾಹವಾಯಿತು. ಕೆಲವೇ ವರ್ಷಗಳ ನಂತರ ಇವರಿಗೆ ಶ್ರೇಷ್ಠ ಕವಿ ಬಂಕಿಮ್ ಚಂದ್ರ ಪರಿಚಯವಾಯಿತು. ಆಗ ಇವರು ಬರೆದ ಜನಗಣಮನ ಗೀತೆಯು ಇಂದು ನಮ್ಮ ರಾಷ್ಟ್ರಗೀತೆ ಆಗಿದೆ. ಇವರು ಬರೆದ ಗೀತಾಂಜಲಿ ಕವನ ಸಂಕಲನಕ್ಕೆ ಕ್ರಿ.ಶ.1913 ರಲ್ಲಿ ನೊಬೆಲ್ ಪಾರಿತೋಷಕ ದೊರೆಯಿತು. ಕ್ರಿ.ಶ.1915 ರಲ್ಲಿ ಭಾರತ ಸರ್ಕಾರವು ಇವರಿಗೆ “ನೈಟ” ಎಂಬ ಪದವಿಯನ್ನು ಕೊಟ್ಟು ಗೌರವಿಸಿತು. ಜೊತೆಗೆ ಕಲ್ಕತ್ತಾ ವಿಶ್ವವಿದ್ಯಾಲಯವು ಡಿ. ಲಿಟ್ ಪದವಿ ನೀಡಿ ಸನ್ಮಾನಿಸಿತು.




ರವೀಂದ್ರರು ಕ್ರಿ.ಶ. 1901 ರಲ್ಲಿ ಕಲ್ಕತ್ತಾ ನಗರದಿಂದ ಸುಮಾರು 90 ಮೈಲು ದೂರದಲ್ಲಿ ಬೋಲಪುರ ಎಂಬಲ್ಲಿ ಶಾಂತಿನಿಕೇತನ ಎಂಬ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಇದು “ವಿಶ್ವಭಾರತಿ” ಎಂಬ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ ಇಂತಹ ಮಹಾನ್ ವ್ಯಕ್ತಿಯು 1941 ಆಗಸ್ಟ್ 7ನೇ ತಾರೀಖಿನಂದು ಪರಮಾತ್ಮನಲ್ಲಿ ಐಕ್ಯರಾದರು.




ರವೀಂದ್ರನಾಥ ಟ್ಯಾಗೂರ್ ಕೃತಿಗಳು

ರವೀಂದ್ರನಾಥ ಟ್ಯಾಗೋರ್ ಚಿಕ್ಕ ವಯಸ್ಸಿನಲ್ಲಿಯೇ  ಬಂಗಾಲಿ ಭಾಷೆಯ ವಿವಿಧ ಪತ್ರಿಕೆಗಳಲ್ಲಿ ಲೇಖಕನವನ್ನು ಬರೆದು ಪ್ರಕಟಣೆಗಾಗಿ ಕಳಿಸಿದ್ದರು. ಇವರ ಸುಪ್ರಸಿದ್ದ ಹಾಗೂ ಕೀರ್ತಿಯನ್ನು ತಂದುಕೊಟ್ಟ ಕೃತಿಗಳು

  • ಶಾಲೆ ಹಾಗೂ ಸಮಾಜ (ಸ್ಕೂಲ್ ಆಂಡ್ ದ ಸೊಸೈಟಿ) ಇದು ಅವರ ಪ್ರಥಮ ಕೃತಿ. ಈ ಕೆಳಗಿನಂತಿವೆ.
  • ನಾಳಿನ ಶಾಲೆಗಳು (ಸ್ಕೂಲ್ ಆಫ್ ಟುಮಾರೋ)
  • ಪ್ರಜಾಪ್ರಭುತ್ವ ಮತ್ತು ಶಿಕ್ಷಣ (ಡೆಮಾಕ್ರಸಿ ಆಂಡ್ ಎಜುಕೇಷನ್)
  • ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಸ್ಕೃತಿ (ಫ್ರೀಡಮ್ ಆಂಡ್ ಕಲ್ಟರ್)
  • ಅಭಿರುಚಿ ಹಾಗೂ ಶಿಕ್ಷಣದಲ್ಲಿ ಸಾಧನೆ (ಇಂಟ್ರಸ್ಟ್ ಆಂಡ್ ಎಫೆಕ್ಟ್ ಇನ್ ಎಜುಕೇಷನ್)
  • ಗೀತಾಂಜಲಿ ಇದು ಕವನ ಸಂಕಲನ. ಇದಕ್ಕೆ ಅವರಿಗೆ 1913ರಲ್ಲಿ ನೊಬೆಲ್ ಪಾರಿತೋಷಕ ದೊರೆಯಿತು.

 

Leave a Reply

Your email address will not be published. Required fields are marked *