Savidhanda Vidhigalu in kannada PDF ಭಾರತೀಯ ಸಂವಿಧಾನ, ಒಂದು ಸ್ಮಾರಕ ದಾಖಲೆ, ವೈವಿಧ್ಯಮಯ ರಾಷ್ಟ್ರದ ಆಶಯಗಳನ್ನು ಒಳಗೊಂಡಿದೆ. ನಿಖರವಾದ ಕಾಳಜಿಯೊಂದಿಗೆ ರಚಿಸಲಾಗಿದೆ, ಇದು ದೇಶದ ಸರ್ವೋಚ್ಚ ಕಾನೂನಾಗಿ ಕಾರ್ಯನಿರ್ವಹಿಸುತ್ತದೆ, ಆಡಳಿತ, ಹಕ್ಕುಗಳು ಮತ್ತು ನಾಗರಿಕರ ಕರ್ತವ್ಯಗಳ ಚೌಕಟ್ಟನ್ನು ವಿವರಿಸುತ್ತದೆ.

ಇದರ ಪೀಠಿಕೆಯು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ನಿರರ್ಗಳವಾಗಿ ನಿರೂಪಿಸುತ್ತದೆ, ಇದು ಪ್ರಜಾಪ್ರಭುತ್ವ ಗಣರಾಜ್ಯಕ್ಕೆ ಅಡಿಪಾಯವನ್ನು ಹಾಕುತ್ತದೆ. ಅದರ ಲೇಖನಗಳ ಮೂಲಕ, ಸಂವಿಧಾನವು ಫೆಡರಲ್ ರಚನೆಯನ್ನು ಸ್ಥಾಪಿಸುತ್ತದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಿವರಿಸುತ್ತದೆ.

ಭಾಗ III ರಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳು ಸಮಾನತೆ, ವಾಕ್ ಸ್ವಾತಂತ್ರ್ಯ ಮತ್ತು ಧರ್ಮದ ಹಕ್ಕುಗಳನ್ನು ಒಳಗೊಂಡಂತೆ ವೈಯಕ್ತಿಕ ಸ್ವಾತಂತ್ರ್ಯಗಳನ್ನು ಖಾತರಿಪಡಿಸುತ್ತದೆ, ಬಹುತ್ವದ ಸಮಾಜವನ್ನು ಬೆಳೆಸುತ್ತದೆ. ಏಕಕಾಲದಲ್ಲಿ, ಭಾಗ IV ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು ವಿವರಿಸುತ್ತದೆ, ಸಾಮಾಜಿಕ ನ್ಯಾಯ, ಆರ್ಥಿಕ ಕಲ್ಯಾಣ ಮತ್ತು ಪರಿಸರ ಸುಸ್ಥಿರತೆಯನ್ನು ಖಾತರಿಪಡಿಸುವಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತದೆ.

Savidhanda Vidhigalu in kannada PDF  ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಪಾತ್ರಗಳು ಮತ್ತು ಅಧಿಕಾರಗಳನ್ನು ವಿವರಿಸುತ್ತದೆ, ಪ್ರಜಾಪ್ರಭುತ್ವದ ಆಡಳಿತಕ್ಕೆ ಅಗತ್ಯವಾದ ತಪಾಸಣೆ ಮತ್ತು ಸಮತೋಲನಗಳನ್ನು ಖಾತ್ರಿಪಡಿಸುತ್ತದೆ. ಹೆಚ್ಚುವರಿಯಾಗಿ, ಇದು ಚುನಾವಣಾ ಆಯೋಗದಂತಹ ಸಂಸ್ಥೆಗಳ ಸ್ಥಾಪನೆಗೆ ಒದಗಿಸುತ್ತದೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿಪಡಿಸುತ್ತದೆ.ತಿದ್ದುಪಡಿ ಮಾಡಬಹುದಾದ ಆದರೆ ಸ್ಥಿತಿಸ್ಥಾಪಕತ್ವ, (Savidhanda Vidhigalu in kannada PDF) ಭಾರತೀಯ ಸಂವಿಧಾನವು ಕಾಲಾನಂತರದಲ್ಲಿ ವಿಕಸನಗೊಂಡಿತು, ಅದರ ಜನರ ಬದಲಾಗುತ್ತಿರುವ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಅದರ ನಿರಂತರ ಪರಂಪರೆಯು ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯುವ, ವೈಯಕ್ತಿಕ ಸ್ವಾತಂತ್ರ್ಯಗಳನ್ನು ರಕ್ಷಿಸುವ ಮತ್ತು ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವ ಸಾಮರ್ಥ್ಯದಲ್ಲಿದೆ, ಇದು ಪ್ರಪಂಚದಾದ್ಯಂತದ ರಾಷ್ಟ್ರಗಳಿಗೆ ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದೆ.

Savidhanda Vidhigalu in kannada PDF

ಭಾರತ ಸಂವಿಧಾನದ ವಿಧಿಗಳು Indian constitution Articles Kannada

ಭಾಗ -I ಸಂಘ ಮತ್ತು ಸಂಘ ಕ್ಷೇತ್ರಗಳು

ಅನುಚ್ಛೇದ – 1

ಸಂಘದ (ರಾಜ್ಯದ) ಹೆಸರು ಮತ್ತು ರಾಜ್ಯದ ಕ್ಷೇತ್ರ

ಅನುಚ್ಛೇದ – 2

ನೂತನ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ

ಅನುಚ್ಛೇದ – 3

ನೂತನ ರಾಜ್ಯಗಳ ರಚನೆ ಮತ್ತು ಈಗಿರುವ ರಾಜ್ಯಗಳ ಪ್ರದೇಶಗಳ, ಸರಹದ್ದುಗಳ  ಅಥವಾ ಹೆಸರುಗಳ ಬದಲಾವಣೆ

ಅನುಚ್ಛೇದ – 4

2ನೇ ಮತ್ತು 3ನೇ ಅನುಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು ತಿದ್ದು ಪಡಿಯ ಬಗ್ಗೆ ಮತ್ತು ಪೂರಕ, ಪ್ರಾಸಂಗಿಕ ಮತ್ತು ಅನುಷಂಗಿ ವಿಷುಯಗಳ ಬಗ್ಗೆ ಉಪಬಂಧವನ್ನು ಕಲ್ಪಿಸುವುದು.

ಭಾಗ -II ನಾಗರಿಕತ್ವ

ಅನುಚ್ಛೇದ – 5

ಸಂವಿಧಾನದ ಪ್ರಾರಂಭದಲ್ಲಿ ನಾಗರಿಕತ್ವ

ಅನುಚ್ಛೇದ – 6

ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

ಅನುಚ್ಛೇದ – 7

ಪಾಕಿಸ್ತಾನಕ್ಕೆ ವಲಸೆ ಹೋದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

ಅನುಚ್ಛೇದ – 8

ಭಾರತದ ಹೊರಗೆ ವಾಸಿಸುತ್ತಿರುವ ಭಾರತೀಯ ಮೂಲದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

ಅನುಚ್ಛೇದ – 9

ಸ್ವಯಿಚ್ಛೆಯಿಂದ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದವರು ಭಾರತದ ನಾಗರಿಕರಲ್ಲ

ಅನುಚ್ಛೇದ – 10

ನಾಗರಿಕತ್ವದ ಹಕ್ಕುಗಳ ಮುಂದುವರಿಕೆ

ಅನುಚ್ಛೇದ – 11

ಸಂಸತ್ತು ನಾಗರಿಕತ್ವದ ಹಕ್ಕನ್ನು ಕಾನೂನಿನ ಮೂಲಕ ವಿನಿಯಮಿಸುವುದು

ಭಾಗ -III ಮೂಲಭೂತ ಹಕ್ಕುಗಳು

ಅನುಚ್ಛೇದ – 12

ಪರಿಭಾಷೆ

ಅನುಚ್ಛೇದ – 13

ಮೂಲಭೂತ ಹಕ್ಕುಗಳಿಗೆ ಅಸಂಗವಾದ ಅಥವಾ ಅವುಗಳನ್ನು ಅಲ್ಪೀಕರಿಸುವಂಥ ಕಾನೂನುಗಳು

ಸಮಾನತೆಯ ಹಕ್ಕು

ಅನುಚ್ಛೇದ – 14

ಕಾನೂನಿನ ಮುಂದೆ ಸಮಾನತೆ

ಅನುಚ್ಛೇದ – 15

ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯದ ನಿಷೇಧ

ಅನುಚ್ಛೇದ – 16

ಸಾರ್ವಜನಿಕ ನಿಯೋಜನೆಯ ವಿಷಯದಲ್ಲಿ ಸಮಾನಾವಕಾಶ

ಅನುಚ್ಛೇದ – 17

ಅಸ್ಪೃಶ್ಯತೆಯ ನಿರ್ಮೂಲನ

ಅನುಚ್ಛೇದ – 18

ಬಿರುದುಗಳ ರದ್ಧತಿ

ಸ್ವಾತಂತ್ರ್ಯದ ಹಕ್ಕು

ಅನುಚ್ಛೇದ – 19

ವಾಕ್ ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ ಕೆಲವು ಹಕ್ಕುಗಳ ಸಂರಕ್ಷಣೆ

ಅನುಚ್ಛೇದ – 19 (ಎ)

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಅನುಚ್ಛೇದ – 19 (ಬಿ)

ಸಭೆ ಸೇರುವ ಸ್ವಾತಂತ್ರ್ಯ

ಅನುಚ್ಛೇದ – 19 (ಸಿ)

ಸಂಘಗಳನ್ನು ರೂಪಿಸುವ ಸ್ವಾತಂತ್ರ್ಯ

ಅನುಚ್ಛೇದ – 19 (ಡಿ)

ಸಂಚರಿಸುವ ಸ್ವಾತಂತ್ರ್ಯ

ಅನುಚ್ಛೇದ – 19 (ಇ)

ವಾಸ ಮಾಡುವ ಅಥವಾ ನೆಲೆಸುವ ಸ್ವಾತಂತ್ರ್ಯ

ಅನುಚ್ಛೇದ – 19 (ಎಫ್)

ಸ್ವತ್ತಿನ ಸ್ವಾತಂತ್ರ್ಯ (ಇದನ್ನು 1978 ರಲ್ಲಿ ರದ್ದುಪಡಿಸಲಾಗಿದೆ)

ಅನುಚ್ಛೇದ – 19 (ಜಿ)

ವೃತ್ತಿ ಕಸಬು ವ್ಯಾಪಾರ ಮತ್ತು ವ್ಯವಹಾರದ ಸ್ವಾತಂತ್ರ್ಯ

ಅನುಚ್ಛೇದ – 20

ಅಪರಾಧಗಳ ಬಗ್ಗೆ ಅಪರಾಧಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ಸಂರಕ್ಷಣೆ.

ಅನುಚ್ಛೇದ – 21

ಜೀವದ ಸಂರಕ್ಷಣೆ  ಮತ್ತು ವ್ಯಕ್ತಿಸ್ವಾತಂತ್ರ್ಯದ ಸಂರಕ್ಷಣೆ

ಅನುಚ್ಛೇದ – 21(ಎ)

ಶಿಕ್ಷಣದ ಹಕ್ಕು

ಅನುಚ್ಛೇದ – 22

ಕೆಲವು ಸಂದರ್ಭಗಳಲ್ಲಿ ದಸ್ತಗಿರಿಯಿಂದ ಮತ್ತು ಸ್ಥಾನಬದ್ಧತೆಯಿಂದ ಸಂರಕ್ಷಣೆ

ಶೋಷಣೆಯ ವಿರುದ್ಧ ಹಕ್ಕು

ಅನುಚ್ಛೇದ – 23

ಮಾನವ ದುರ್ವ್ಯವಹಾರ ಮತ್ತು ಬಲಾತ್ಕಾರದ ದುಡಿಮೆಯ ನಿಷೇಧ

ಅನುಚ್ಛೇದ – 24

ಕಾರ್ಖಾನೆಗಳು, ಮುಂತಾದವುಗಳಲ್ಲಿ ಮಕ್ಕಳ ನಿಯೋಜನೆಗೆ ನಿಷೇಧ

ಧರ್ಮ ಸ್ವಾತಂತ್ರ್ಯದ ಹಕ್ಕು

ಅನುಚ್ಛೇದ – 25

ಅಂತಃಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಬಾಧಿತ ಅವಲಂಬನೆ, ಆಚರಣೆ ಮತ್ತು ಪ್ರಚಾರ

ಅನುಚ್ಛೇದ – 26

ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸ್ವಾತಂತ್ರ್ಯ

ಅನುಚ್ಛೇದ – 27

ಯಾವುದೇ ನಿರ್ದಿಷ್ಟ ಧರ್ಮದ ಉನ್ನತಿಗಾಗಿ ತೆರಿಗೆಗಳ ಸಂದಾಯದ ಬಗ್ಗೆ ಸ್ವಾತಂತ್ರ್ಯ

ಅನುಚ್ಛೇದ – 28

ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ಧಾರ್ಮಿಕ ಶಿಕ್ಷಣದಲ್ಲಿ ಅಥವಾ ಧಾರ್ಮಿಕ ಉಪಾಸನೆಯಲ್ಲಿ ಹಾಜರಾಗುವ ಸ್ವಾತಂತ್ರ್ಯ

ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು

ಅನುಚ್ಛೇದ – 29

ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ

ಅನುಚ್ಛೇದ – 30

ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಮತ್ತು ಅವುಗಳ ಆಡಳಿತ ನಡೆಸುವುದಕ್ಕೆ ಅಲ್ಪಸಂಖ್ಯಾತರ ಹಕ್ಕು

ಕೆಲವು ಕಾನೂನುಗಳನ್ನು ಉಳಿಸುವುದು

ಅನುಚ್ಛೇದ – 31

ಸ್ವತ್ತಿನ ಹಕ್ಕು (44ನೇ ತಿದ್ದುಪಡಿ ಪ್ರಕಾರ ನಿರಸಗೊಳಿಸಲಾಗಿದೆ)

ಅನುಚ್ಛೇದ – 31 (ಎ)

ಎಸ್ಟೇಟು, ಮುಂತಾದವುಗಳ ಆರ್ಜನೆಗೆ ಉಪಬಂಧಿಸುವ ಕಾನೂನುಗಳನ್ನು ಉಳಿಸುವುದು

ಅನುಚ್ಛೇದ – 31 (ಬಿ)

ಕೆಲವು ಅಧಿನಿಯಮಗಳನ್ನು ಮತ್ತು ರೆಗ್ಯುಲೇಷನ್‌ಗಳನ್ನು ಮಾನ್ಯಮಾಡುವುದು

ಅನುಚ್ಛೇದ – 31 (ಸಿ)

ಕೆಲವು ನಿರ್ದೇಶಕ ತತ್ವಗಳನ್ನು ಜಾರಿಗೆ ತರುವ ಕಾನೂನು ಉಳಿಸುವಿಕೆ

ಅನುಚ್ಛೇದ – 31 (ಡಿ)

(ನಿರಸಿತ)

ಸಂವಿಧಾನಾತ್ಮಕ ಪರಿಹಾರೋಪಾಯಗಳ ಹಕ್ಕು

ಅನುಚ್ಛೇದ – 32 (ಡಿ)

ಈ ಭಾಗದಿಂದ ಪ್ರದತ್ತವಾಗಿರುವ ಹಕ್ಕುಗಳ ಜಾರಿಗಾಗಿ ಪರಿಹಾರೋಪಾಯಗಳು

ಅನುಚ್ಛೇದ – 32 (ಎ)

(ನಿರಸಿತ)

ಅನುಚ್ಛೇದ – 33

ಈ ಭಾಗದಿಂದ ಪ್ರದತ್ತವಾದ ಹಕ್ಕುಗಳನ್ನು ಸಶಸ್ತ್ರ ಬಲಗಳು, ಮುಂತಾದವುಗಳಿಗೆ ಅನ್ವಯಿಸುವಲ್ಲಿ ಅವುಗಳನ್ನು ಮಾರ್ಪಡಿಸಲು ಸಂಸತ್ತಿಗಿರುವ ಅಧಿಕಾರ

ಅನುಚ್ಛೇದ – 34

ಯಾವುದೇ ಪ್ರದೇಶದಲ್ಲಿ ಲಷ್ಕರಿ ಕಾನೂನು ಜಾರಿಯಲ್ಲಿರುವಾಗ ಈ ಭಾಗದಿಂದ ಪ್ರದತ್ತವಾದ ಹಕ್ಕುಗಳ ಮೇಲೆ ನಿರ್ಬಂಧ

ಅನುಚ್ಛೇದ – 35

ಈ ಭಾಗದ ಉಪಬಂಧಗಳನ್ನು ಚಾರಿಗೆ ತರುವುದಕ್ಕಾಗಿ ಕಾನೂನು ರಚನೆ ..

ಭಾಗ -IV ರಾಜ್ಯನೀತಿಯ ನಿರ್ದೇಶಕ ತತ್ವಗಳು

ಅನುಚ್ಛೇದ – 36

ಪರಿಭಾಷೆ

ಅನುಚ್ಛೇದ – 36

ಪರಿಭಾಷೆ

ಅನುಚ್ಛೇದ – 37

ಈ ಭಾಗದಲ್ಲಿ  ನಿರ್ದೇಶಕ ತತ್ವಗಳನ್ನು ತತ್ವಗಳ ಅನ್ವಯ

ಅನುಚ್ಛೇದ – 38

ಜನತೆಯ ಕಲ್ಯಾಣೋನ್ನತಿಗಾಗಿ ರಾಜ್ಯವು ಸುನಿಶ್ಚಿತಗೊಳಿಸುವುದು ಸಾಮಾಜಿಕ ವ್ಯವಸ್ಥೆಯನ್ನು ಭದ್ರಗೊಳಸುವುದು

ಅನುಚ್ಛೇದ – 39

ರಾಜ್ಯವು ಅನುಸರಿಸಬೇಕಾದ ಕೆಲವು ತತ್ವಗಳು

ಅನುಚ್ಛೇದ – 39 (ಎ)

ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು

ಅನುಚ್ಛೇದ – 39 (ಬಿ)

ಆರ್ಥಿಕ ಹಂಚಿಕೆಗೆ ಅವಕಾಶ

ಅನುಚ್ಛೇದ – 39 (ಸಿ)

ಸಂಪತ್ತು ಕೇಂದ್ರೀಕೃತವಾಗಿರಬಾರದು

ಅನುಚ್ಛೇದ – 39 (ಡಿ)

ಸಮಾನ ಕೆಲಸಕ್ಕೆ ಸಮಾನ ವೇತನ

ಅನುಚ್ಛೇದ – 39 (ಇ)

ಕೆಲಸದ ಸ್ಥಳದಲ್ಲಿ ನ್ಯಾಯಯುತ ಮತ್ತು ಮಾನವೀಯ ಪರಿಸರ

ಅನುಚ್ಛೇದ – 39 (ಎಫ್)

ಮಕ್ಕಳ ಕಲ್ಯಾಣೋನ್ನತಿ

ಅನುಚ್ಛೇದ – 40

ಗ್ರಾಮಪಂಚಾಯಿತಿಗಳ ಸಂಘಟನೆ

ಅನುಚ್ಛೇದ – 41

ಕೆಲವು ಸಂದರ್ಭಗಳಲ್ಲಿ ಕೆಲಸ ಮಾಡುವ, ಶಿಕ್ಷಣ ಪಡೆಯುವ ಮತ್ತು ಸರ್ಕಾರದ ಸಹಾಯ ಪಡೆಯುವ ಹಕ್ಕು

ಅನುಚ್ಛೇದ – 42

ಕೆಲಸ ಮಾಡಲು ನ್ಯಾಯಯುತ ಮತ್ತು ಮಾನವೋಚಿತ ಪರಿಸ್ಥಿತಿಗಳಿರುವಂತೆ ಮತ್ತು ಪ್ರಸೂತಿ ಪ್ರಯೋಜನ ದೊರೆಯುವಂತೆ ಉಪಬಂಧಿಸುವುದು

ಅನುಚ್ಛೇದ – 43

43. ಕೆಲಸಗಾರರಿಗೆ ಜೀವನ ನಿರ್ವಹಣಾ ಮಜೂರಿ, ಇತ್ಯಾದಿ

ಅನುಚ್ಛೇದ – 43 (ಎ)

ಕೈಗಾರಿಕೆಗಳ ಆಡಳಿತದಲ್ಲಿ ಕೆಲಸಗಾರರು ಭಾಗವಹಿಸುವುದು

ಅನುಚ್ಛೇದ – 43 (ಬಿ)

ಸಹಕಾರ ಸಂಘಗಳ ಸಂವರ್ಧನೆ

ಅನುಚ್ಛೇದ – 44

ನಾಗರಿಕರಿಗೆ ಏಕರೂಪದ ಸಿವಿಲ್ ಸಂಹಿತೆ

ಅನುಚ್ಛೇದ – 45

ಆರು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಶೈಶವಾವಸ್ಥೆಯ ಮಕ್ಕಳ ಆರೈಕೆ ಮತ್ತು ಅವರಿಗೆ ಶಿಕ್ಷಣ ಒದಗಿಸುವುದು

ಅನುಚ್ಛೇದ – 46

ಅನುಸೂಚಿತ ಜಾತಿಗಳ, ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆ

ಅನುಚ್ಛೇದ – 47

ಪೌಷ್ಠಿಕತೆಯ ಮಟ್ಟ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಕರ್ತವ್ಯ

ಅನುಚ್ಛೇದ – 48

ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ

ಅನುಚ್ಛೇದ – 48(ಎ)

ಪರಿಸರ ಸಂರಕ್ಷಣೆ ಮತ್ತು ಸುಧಾರಣೆ ಮತ್ತು ಅರಣ್ಯಗಳ ಹಾಗೂ ವನ್ಯಜೀವಿಗಳ

ಅನುಚ್ಛೇದ – 49

ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳ, ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ

ಅನುಚ್ಛೇದ – 50

ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು

ಅನುಚ್ಛೇದ – 51

ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸಂವರ್ಧನೆ

ಭಾಗ -IV(ಎ) ಮೂಲಭೂತ ಕರ್ತವ್ಯಗಳು

ಅನುಚ್ಛೇದ – 51(ಎ)

ಮೂಲಭೂತ ಕರ್ತವ್ಯಗಳು

ಭಾಗ -V ಒಕ್ಕೂಟ ಕಾರ್ಯಂಗ

ಅನುಚ್ಛೇದ – 52

ಭಾರತದ ರಾಷ್ಟ್ರಪತಿ

ಅನುಚ್ಛೇದ – 53

ಒಕ್ಕೂಟದ ಕಾರ್ಯಂಗದ ಅಧಿಕಾರ

ಅನುಚ್ಛೇದ – 54

ರಾಷ್ಟ್ರಪತಿಯ ಚುನಾವಣೆ

ಅನುಚ್ಛೇದ – 55
ರಾಷ್ಟ್ರಪತಿಯ ಚುನಾವಣೆಯ ರೀತಿ

ಅನುಚ್ಛೇದ – 56

ರಾಷ್ಟ್ರಪತಿಯ ಪದಾವಧಿ

ಅನುಚ್ಛೇದ – 57

ಮರುಚುನಾವಣೆಗೆ ಅರ್ಹತೆ

ಅನುಚ್ಛೇದ – 58

ರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹತೆಗಳು

ಅನುಚ್ಛೇದ – 59

ರಾಷ್ಟ್ರಪತಿಯ ಪದದ ಷರತ್ತುಗಳು

ಅನುಚ್ಛೇದ – 60

ರಾಷ್ಟ್ರಪತಿಯಿಂದ ಪ್ರಮಾಣವಚನ ಅಥವಾ ಪ್ರತಿಜ್ಞಾ ವಚನ

ಅನುಚ್ಛೇದ – 61

ರಾಷ್ಟ್ರಪತಿಯ ಮಹಾಭಿಯೋಗದ ಬಗ್ಗೆ ಕಾರ್ಯವಿಧಾನ

ಅನುಚ್ಛೇದ – 62

ರಾಷ್ಟ್ರಪತಿಯ ಪದವು ಖಾಲಿಯಾದಲ್ಲಿ ಅದನ್ನು ಭರ್ತಿ ಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಚುನಾಯಿತನಾದ ವ್ಯಕ್ತಿಯ ಪದಾವಧಿ

ಅನುಚ್ಛೇದ – 63

ಭಾರತದ ಉಪರಾಷ್ಟ್ರಪತಿ

ಅನುಚ್ಛೇದ – 64

ಉಪರಾಷ್ಟ್ರಪತಿಯು ತನ್ನ ಪದನಿಮಿತ್ತ ರಾಜ್ಯಸಭೆಯ ಸಭಾಪತಿಯಾಗಿರತಕ್ಕದ್ದು…..

ಅನುಚ್ಛೇದ – 65

ರಾಷ್ಟ್ರಪತಿಯ ಪದವು ಆಕಸ್ಮಿಕವಾಗಿ ಖಾಲಿಯಾದಲ್ಲಿ ಅಥವಾ ರಾಷ್ಟ್ರಪತಿಯ ಗೈರುಹಾಜರಿಯಲ್ಲಿ ಉಪರಾಷ್ಟ್ರಪತಿಯು ರಾಷ್ಟ್ರಪತಿಯಾಗಿ ಕಾರ್ಯನಡೆಸುವುದು ಅಥವಾ ಅವನ ಪ್ರಕಾರ್ಯಗಳನ್ನು ನಿರ್ವಹಿಸುವುದು

ಅನುಚ್ಛೇದ – 66

ಉಪರಾಷ್ಟ್ರಪತಿಯ ಚುನಾವಣೆ

ಅನುಚ್ಛೇದ – 67

ಉಪರಾಷ್ಟ್ರಪತಿಯ ಪದಾವಧಿ

ಅನುಚ್ಛೇದ – 68

ಉಪರಾಷ್ಟ್ರಪತಿಯ ಪದವು ಖಾಲಿಯಾದಲ್ಲಿ ಅದನ್ನು ಭರ್ತಿ ಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಿಸ್ಥಾನವನ್ನು ಭರ್ತಿ ಮಾಡಲು ಚುನಾಯಿತನಾದ ವ್ಯಕ್ತಿಯ ಪದಾವಧಿ

ಅನುಚ್ಛೇದ – 69

ಉಪರಾಷ್ಟ್ರಪತಿಯಿಂದ ಪ್ರಮಾಣ ವಚನ ಅಥವಾ ಪ್ರತಿಜ್ಞಾವಚನ

ಅನುಚ್ಛೇದ – 70

ಇತರ ಆಕಸ್ಮಿಕ ಸಂದರ್ಭಗಳಲ್ಲಿ ರಾಷ್ಟ್ರಪತಿಯ ಪ್ರಕಾರ್ಯಗಳ ನಿರ್ವಹಣೆ

ಅನುಚ್ಛೇದ – 71

ರಾಷ್ಟ್ರಪತಿಯ ಅಥವಾ ಉಪರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ಅಥವಾ ಸೇರಿದ ವಿಷಯಗಳು

ಅನುಚ್ಛೇದ – 72

ಕೆಲವು ಪ್ರಕರಣಗಳಲ್ಲಿ ಕ್ಷಮಾದಾನ ಮುಂತಾದವುಗಳನ್ನು ಮಾಡಲು, ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು, ಮಾಫಿ ಮಾಡಲು ಅಥವಾ ಪರಿವರ್ತನೆ ಮಾಡಲು ರಾಷ್ಟ್ರಪತಿಯ ಅಧಿಕಾರ

ಅನುಚ್ಛೇದ – 73

ಒಕ್ಕೂಟದ ಕಾರ್ಯಾಂಗ ಅಧಿಕಾರ ವ್ಯಾಪ್ತಿ

ಮಂತ್ರಿಮಂಡಲ

ಅನುಚ್ಛೇದ – 74

ರಾಷ್ಟ್ರಪತಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿಮಂಡಲ

ಅನುಚ್ಛೇದ – 74(ಎ)

ರಾಷ್ಟ್ರಪತಿಯವರಿಗೆ  ನೆರವು ಮತ್ತು ಸಲಹೆ ನೀಡಲು ಪ್ರಧಾನ ಮಂತ್ರಿ ನೇತೃತ್ವದಲ್ಲಿ ಸಲಹೆ ನೀಡಹುದು

ಅನುಚ್ಛೇದ – 75

ರಾಷ್ಟ್ರಪತಿಯವರು ಪ್ರಧಾನಮಂತ್ರಿಯನ್ನು ನೇಮಕಾತಿ ಮಾಡುತ್ತಿದ್ದು

ಅನುಚ್ಛೇದ – 75 (2) 

ರಾಷ್ಟ್ರಮತಿಯವರು ಇವರು ಪರ್ಯಂತ ಪದವಿ ಧಾರಣೆ ಮಾಡತಕ್ಕದ್ದು

ಅನುಚ್ಛೇದ – 75 (3) 

ಮಂತ್ರಿಮಂಡಲವು ಲೋಕಸಭೆಗೆ ಸಮೂಹಿಕವಾಗಿ ಜವಾಬ್ದಾರಿಯಾಗಿರುತ್ತದೆ.

ಅನುಚ್ಛೇದ – 75 (4) 

ಯಾರೆ ಮಂತ್ರಿಯವರು ತನ್ನ ಪದವಿಯನ್ನು ಸ್ವೀಕರಿಸುವ ಮುಂಚೆ ರಾಷ್ಷ್ರಪತಿಯವರಿಂದ ಪದವಿ ಮತ್ತು ಗೋಪ್ಯಾತಾ ಪಾಲನೆಯ ಪ್ರಮಾಣ ವಚನ ಸ್ವೀಕರಿಸಬೇಕು

ಅನುಚ್ಛೇದ – 75 (5) 

ಯಾರೆ ಮಂತ್ರಿಯವರು ಆರು ತಿಂಗಗಳು ಅವಧಿಗೆ ಸಂಸತ್ತಿಗೆ ಯಾವುದೇ  ಸದನದ ಸದಸ್ಯರಾಗಿದಿದ್ದರೆ ಮಂತ್ರಿ ಪದವಿ ಕೆಳೆದಹೋಗುತ್ತದೆ.

ಅನುಚ್ಛೇದ – 75 (6) 

ಮಂತ್ರಿಗಳ ವೇತನ ಹಾಗೂ ಭತ್ಯಗಳು ಕಾಲಕಾಲಕ್ಕೆ ಸಂಸತ್ತು ಕಾನೂನು ಮೂಲಕ ನಿರ್ಧರಿಸುವುದು

ಭಾರತದ ಅಟಾರ್ನಿ ಜನರಲ್

ಅನುಚ್ಛೇದ – 76

ಭಾರತದ ಅಟಾರ್ನಿ ಜನರಲ್

ಸರ್ಕಾರಿ ವ್ಯವಹಾರ ನಡುವಳಿಕೆ

ಅನುಚ್ಛೇದ – 77

ಭಾರತ ಸರ್ಕಾರದ ವ್ಯವಹಾರ ನಿರ್ವಹಣೆ

ಅನುಚ್ಛೇದ – 77

ರಾಷ್ಟ್ರಪತಿಗೆ ಮಾಹಿತಿ, ಇತ್ಯಾದಿಗಳನ್ನು ಒದಗಿಸುವ ವಿಚಾರದಲ್ಲಿ ಪ್ರಧಾನಮಂತ್ರಿಯ ಕರ್ತವ್ಯಗಳು

ಭಾಗ -II – ಸಂಸತ್ತು

ಅನುಚ್ಛೇದ – 79

ಸಂಸತ್ತಿನ ರಚನೆ ಸಾಮಾನ್ಯ

ಅನುಚ್ಛೇದ – 80

ರಾಜ್ಯಸಭೆಯ ರಚನೆ

ಅನುಚ್ಛೇದ – 81

ಲೋಕಸಭೆಯ ರಚನೆ

ಅನುಚ್ಛೇದ – 82

ಪ್ರತಿಸಲದ ಜನಗಣತಿಯ ತರುವಾಯ ಮರುಹೊಂದಾಣಿಕೆ

ಅನುಚ್ಛೇದ – 83

ಸಂಸತ್ತಿನ ಸದನಗಳ ಅವಧಿ

ಅನುಚ್ಛೇದ – 84

ಸಂಸತ್ತಿನ ಸದಸ್ಯತ್ವಕ್ಕೆ ಅರ್ಹತೆ

ಅನುಚ್ಛೇದ – 85

ಸಂಸತ್ತಿನ ಅಧಿವೇಶನಗಳು. ಅಧಿವೇಶನದ ಮುಕ್ತಾಯ ಮತ್ತು ವಿಸರ್ಜನೆ

ಅನುಚ್ಛೇದ – 86

ಸದನಗಳನ್ನು ಸಂಭೋಧಿಸಿ ಭಾಷಣ ಮಾಡಲು ಮತ್ತು ಸದನಗಳಿಗೆ ಸಂದೇಶಗಳನ್ನು ಕಳುಹಿಸಲು ರಾಷ್ಟ್ರಪತಿಗಿರುವ ಹಕ್ಕು

ಅನುಚ್ಛೇದ – 87

ರಾಷ್ಟ್ರಪತಿಯಿಂದ ವಿಶೇಷ ಭಾಷಣ

ಅನುಚ್ಛೇದ – 88

ಸದನಗಳ ಸಂಬಂಧದಲ್ಲಿ ಮಂತ್ರಿಗಳ ಮತ್ತು ಆಟಾರ್ನಿ ಜನರಲ್‌ನ ಹಕ್ಕುಗಳು

ಸಂಸ್ತತಿನ ಅಧಿಕಾರಿಗಳು

ಅನುಚ್ಛೇದ – 89

ರಾಜ್ಯಸಭೆಯ ಸಭಾಪತಿ ಮತ್ತು ಉಪಸಭಾಪತಿ

ಅನುಚ್ಛೇದ – 90

ಉಪಸಭಾಪತಿಯು ಪದವನ್ನು ಖಾಲಿ ಮಾಡುವುದು ಮತ್ತು ಪದಕ್ಕೆ ರಾಜೀನಾಮೆ ನೀಡುವುದು ಮತ್ತು ಪದದಿಂದ ಅವನನ್ನು ತೆಗೆದುಹಾಕುವುದು

ಅನುಚ್ಛೇದ – 91

ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸಲು ಅಥವಾ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಉಪಸಭಾಪತಿಯ ಅಥವಾ ಇತರ ವ್ಯಕ್ತಿಯ ಅಧಿಕಾರ

ಅನುಚ್ಛೇದ – 92

ಸಭಾಪತಿಯನ್ನು ಅಥವಾ ಉಪಸಭಾಪತಿಯನ್ನು ಪದದಿಂದ ತೆಗೆದುಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕದ್ದಲ್ಲ

ಅನುಚ್ಛೇದ – 93

ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ

ಅನುಚ್ಛೇದ – 94

ಲೋಕಸಭೆಯ ಅಧ್ಯಕ್ಷನು ಮತ್ತು ಉಪಾಧ್ಯಕ್ಷನು ಪದಗಳನ್ನು ಖಾಲಿ ಮಾಡುವುದು, ಅವುಗಳಿಗೆ ರಾಜೀನಾಮೆ ನೀಡುವುದು ಮತ್ತು ಆ ಪದಗಳಿಂದ ಅವರನ್ನು ತೆಗೆದುಹಾಕುವುದು

ಅನುಚ್ಛೇದ – 95

ಅಧ್ಯಕ್ಷ ಪದದ ಕರ್ತವ್ಯಗಳನ್ನು ನೆರವೇರಿಸಲು ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಉಪಾಧ್ಯಕ್ಷನ ಅಥವಾ ಇತರ ವ್ಯಕ್ತಿಯ ಅಧಿಕಾರ

ಅನುಚ್ಛೇದ – 96

ಅಧ್ಯಕ್ಷನನ್ನು ಅಥವಾ ಉಪಾಧ್ಯಕ್ಷನನ್ನು ಪದದಿಂದ ತೆಗೆದುಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕದ್ದಲ್ಲ

ಅನುಚ್ಛೇದ – 97

ಸಭಾಪತಿಯ ಮತ್ತು ಉಪಸಭಾಪತಿಯ ಹಾಗೂ ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಸಂಬಳಗಳು ಮತ್ತು ಭತ್ಯಗಳು

ಅನುಚ್ಛೇದ – 98

ಸಂಸತ್ತಿನ ಸಚಿವಾಲಯ

ಕಾರ್ಯಕಲಾಪ ನಿರ್ವಹಣೆ

ಅನುಚ್ಛೇದ – 99
ಸದಸ್ಯರಿಂದ ಪ್ರಮಾಣವಚನ ಅಥವಾ ಪ್ರತಿಜ್ಞಾ ವಚನ

ಅನುಚ್ಛೇದ – 100

ಸದನಗಳಲ್ಲಿ ಮತದಾನ, ಖಾಲಿಸ್ಥಾನಗಳು ಏನೇ ಇದ್ದಾಗ್ಯೂ ಕಾರ್ಯನಿರ್ವಹಿಸಲು ಸದನಗಳ ಅಧಿಕಾರ

 

ಸದಸ್ಯರ ಅನರ್ಹತೆಗಳು

ಅನುಚ್ಛೇದ – 101

ಸ್ಥಾನಗಳನ್ನು ಖಾಲಿ ಮಾಡುವುದು

ಅನುಚ್ಛೇದ – 102

ಸದಸ್ಯತ್ವಕ್ಕೆ ಅನರ್ಹತೆಗಳು

ಅನುಚ್ಛೇದ – 103

ಸದಸ್ಯರ ಅನರ್ಹತೆಗಳನ್ನು ಕುರಿತ ಪ್ರಶ್ನೆಗಳ ತೀರ್ಮಾನ

ಅನುಚ್ಛೇದ – 104

99 ನೇಯ ಅನುಚ್ಛೇದದ ಮೇರೆಗೆ ಪ್ರಮಾಣ ಅಥವಾ ಪ್ರತಿಜ್ಞೆ ಮಾಡುವುದಕ್ಕೆ ಮುಂಚೆ ಅಥವಾ ಅರ್ಹನಾಗಿಲ್ಲದಿರುವಾಗ ಅಥವಾ ಆನರ್ಹತೆಗೊಳಿಸಿರುವಾಗ ಸದಸ್ಯನಾಗಿ ಕುಳಿತರೆ ಮತ್ತು ಮತ ಕೊಟ್ಟರೆ ದಂಡ

ಅನುಚ್ಛೇದ – 105

ಸಂಸತ್ತಿನ ಸದನಗಳ ಮತ್ತು ಅವುಗಳ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು, ವಿಶೇಷಾಧಿಕಾರಗಳು, ಇತ್ಯಾದಿ

ಅನುಚ್ಛೇದ – 106

ಸದಸ್ಯರ ಸಂಬಳಗಳು ಮತ್ತು ಭತ್ಯೆಗಳು

ವಿಧಾಯೀ ಪ್ರಕ್ರಿಯೆ

ಅನುಚ್ಛೇದ – 107

ವಿಧೇಯಕಗಳ ಮಂಡನೆಗೆ ಮತ್ತು ಆಂಗೀಕಾರಕ್ಕೆ ಸಂಬಂಧಿಸಿದ ಉಪಬಂಧಗಳು

ಅನುಚ್ಛೇದ – 108

ಕೆಲವು ಸಂದರ್ಭಗಳಲ್ಲಿ ಉಭಯ ಸದನಗಳ ಜಂಟಿ ಉಪವೇಶನ

ಅನುಚ್ಛೇದ – 109

ಧನ ವಿಧೇಯಕಗಳಿಗೆ ಸಂಬಂಧಿಸಿದಂತೆ ವಿಶೇಷ ಪ್ರಕ್ರಿಯೆ.

ಅನುಚ್ಛೇದ – 110

”ಧನ ವಿಧೇಯಕಗಳು” ಎಂಬುದರ ಪರಿಭಾಷೆ

ಅನುಚ್ಛೇದ – 111

ವಿದೇಯಕಗಳಿಗೆ ಅನುಮತಿ

ಹಣಕಾಸು ವಿಷಯಗಳ ಬಗ್ಗೆ ಪ್ರಕ್ರಿಯೆ

ಅನುಚ್ಛೇದ – 112

ವಾರ್ಷಿಕ ಹಣಕಾಸು ವಿವರ ಪತ್ರ

ಅನುಚ್ಛೇದ – 113

ಅಂದಾಜುಗಳಿಗೆ ಸಂಬಂಧಪಟ್ಟಂತೆ ಸಂಸತ್ತಿನಲ್ಲಿ ಪ್ರಕ್ರಿಯೆ

ಅನುಚ್ಛೇದ – 114

ಧನ ವಿನಿಯೋಗ ವಿದೇಯಕಗಳು

ಅನುಚ್ಛೇದ – 115

ಪೂರಕ, ಹೆಚ್ಚುವರಿ ಅಥವಾ ಅಧಿಕ ಅನುದಾನಗಳು

ಅನುಚ್ಛೇದ – 116

ಲೇಖಾನುದಾನಗಳು, ಪತ್ತಿನ ಅನುದಾನಗಳು ಮತ್ತು ಅಸಾಧಾರಣ ಅನುದಾನಗಳು

ಅನುಚ್ಛೇದ – 117

ಹಣಕಾಸು ವಿಧೇಯಕಗಳ ಬಗ್ಗೆ ವಿಶೇಷ ಉಪಬಂಧಗಳು

Leave a Reply

Your email address will not be published. Required fields are marked *