Shatavahanaru History in Kannada
ಶಾಂತವಾಹನರು ಇತಿಹಾಸ
Shatavahanaru History in Kannada ಶಾತವಾಹನರು ಹಿಂದೂ ಧರ್ಮಶಾಸ್ತ್ರದ ಅನುಗುಣವಾಗಿ ಆಡಳಿತವನ್ನು ನಡೆಸಿದರು. ರಾಜನನ್ನು ಪೌರಾಣಿಕ ನಾಯಕರಿಗೆ (ರಾಮ, ಭೀಮ, ಅರ್ಜುನ, ಕೃಷ್ಣ ಹೋಲಿಸಲಾಗುತ್ತಿತ್ತು. ಇವರು ಮೌರ್ಯರ ಆಡಳಿತ ಕ್ರಮವನ್ನು ಕೆಲಮಟ್ಟಿಗೆ ಅನುಸರಿಸಿದರು. ಜಿಲ್ಲೆಯನ್ನು ಆಹಾರಗಳೆಂದು ಕರೆಯುತ್ತಿದ್ದರು. ಅಧಿಕಾರಿಗಳನ್ನು ಅಮಾತ್ಯರು, ಮಹಾಮಾತ್ರರು ಎಂದು ಕರೆಯಲಾಗುತ್ತಿತ್ತು. ಸೇನಾಪತಿಯನ್ನು ಪ್ರಾಂತೀಯ ರಾಜ್ಯಪಾಲರನ್ನಾಗಿ ನೇಮಕ ಮಾಡುತ್ತಿದ್ದರು. ಗ್ರಾಮದ ಆಡಳಿತವನ್ನು ಗೌಳಮಿಕ ಎನ್ನುವ ಅಧಿಕಾರಿ ನಡೆಸುತ್ತಿದ್ದನು. ಇವನು ಸ್ವಲ್ಪ ಪ್ರಮಾಣದ ಸೈನ್ಯವನ್ನು ಹೊಂದಿರಬೇಕಾಗುತ್ತಿತ್ತು. ಕಟಕ ಮತ್ತು ಸ್ಕಂಧವಾರಗಳು ಸೈನಿಕ ನೆಲೆಗಳಾಗಿದ್ದವು. ಶಾತವಾಹನರು ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬ್ರಾಹ್ಮಣರಿಗೆ ಭೂದತ್ತಿಗಳನ್ನು ಕೊಡಲು ಆರಂಭಿಸಿದರು. ಇವರು ಮೂರು ಬಗೆಯ ಶ್ರೇಣೀಕೃತ ಸಾಮಂತರನ್ನು ಹೊಂದಿದ್ದರು. ಅವರೆಂದರೆ ರಾಜ, ಮಹಾಭೋಜ ಮತ್ತು ಸೇನಾಧಿಪತಿ
ನಾಣ್ಯಗಳು:
ದೀನಾರ್, ಕಾರ್ಷಪಣ, ಬ್ರಹ್ಮಪಣ, ಗದ್ಯಾಣ ಮುಂತಾದ ತಾಮ್ರ, ಸತು ಮತ್ತು ಪ್ರೋಟೀನ್ ನಾಣ್ಯಗಳು, ಅಲ್ಲದೆ ಶಕ. ಸತ್ರಪ ಮತ್ತು ನಹಪಾನರ ನಾಣ್ಯಗಳ ಮುದ್ರೆಯನ್ನೊತ್ತಿಕೊಂಡು ಚಲಾವಣೆಗೆ ತಂದರು
ಪ್ರಮುಖ ಅರಸರು:
ಎರಡನೇ ಶಾತಕರ್ಣಿ (ಕ್ರಿ.ಪೂ. 166-110). ಹಾಲ, ಗೌತಮೀ ಪುತ್ರ ಶಾತಕರ್ಣಿ (ಕ್ರಿ.ಶ. 106-130) .ವಾ ಸಿ ಪುತ್ರ, ಪುಲುಮಾಯಿ (ಕ್ರಿ.ಶ. 130-159) ಮತ್ತು ಶ್ರೀ ಯಜ್ಞಶ್ರೀ ಶಾತಕರ್ಣಿ ಕೊನೆಯ ಪ್ರಮುಖ ಅರಸು.
ಶಾಸನ/ದಾಖಲೆಗಳು
ನಾಸಿಕ್, ನಾನಾಘಾಟ್, ಬಡಗಾವ್,ಮಾಧವಪು (ಬೆಳಗಾವಿ), ಮ್ಯಾಕ್‌ಡೋನಿ, ಹಿರೇಹಡಗಲಿ (ಬಳ್ಳಾರಿ), ಬನವಾಸಿ, ತಾಳಗುಂಡ, ಸನ್ನತಿ (ಗುಲ್ಬರ್ಗ) ಮುಂತಾದ ಶಾಸನಗಳು ಮತ್ತು ಐತರೇಯ ಬ್ರಾಹ್ಮಣ.
ಮುಖ್ಯ ಕೇಂದ್ರಗಳು :
ನಾಸಿಕ್, ಕನ್ಹೇರಿ, ಕಾರ್ಲೆ, ಧಾನ್ಯಕಟಕ,ಅಮರಾವತಿ, ಸನ್ನತಿ, ಪನ್ನಾಳ, ಬಳ್ಳಾರಿ ಮುಂತಾದವು.
ಶಾತವಾಹನರ ಕೊಡುಗೆಗಳು
ಸಾಹಿತ್ಯ-ಸಂಸ್ಕೃತಿ:
ಶಾತವಾಹನ ರಾಜರು ತಮ್ಮನ್ನು ಏಕಮಾತ್ರ ಬ್ರಾಹ್ಮಣರೆಂದು ಕರೆದುಕೊಂಡಿದ್ದಾರೆ. ಇದು ವೈದಿಕ ಧರ್ಮಕ್ಕೆ ಭದ್ರ ಬುನಾದಿಯನ್ನು ಹಾಕಿತು. ಅಶ್ವಮೇಧ, ವಾಜಪೇಯ ಮುಂತಾದ ಯಜ್ಞಗಳನ್ನು ನೆರವೇರಿಸುತ್ತಿದ್ದರು. ಆದಾಗ್ಯೂ ಬೌದ್ಧ ಧರ್ಮಕ್ಕೆ ಹೆಚ್ಚಿನ ಆಶ್ರಯ ನೀಡಿದ್ದರು. ಹಾಲರಾಜನ ‘ಗಥಾಸಪ್ತಶತಿ’ (ಪ್ರಾಕೃತ), ಸರ್ವವರ್ಮನ ‘ಕಾತಂತ್ರ ವ್ಯಾಕರಣ’ (ಸಂಸ್ಕೃತ), ಗುಣಾಡ್ಯನ ‘ವಡ್ಡಕಥಾ’ (ಪ್ರಾಕೃತ), ನಾಗಾರ್ಜುನನ ‘ಶತ ಸಹಸ್ರಕಾ,’ ‘ಪ್ರಜ್ಞಾಪಾರಮಿತ’ ಮತ್ತು ‘ಮಧ್ಯಮಿಕ ಸೂತ್ರ’ ಗಳು ಸಂಸ್ಕೃತ ಗ್ರಂಥಗಳಾಗಿವೆ.
ಶಾತವಾಹನರ ಕಲೆ-ವಾಸ್ತು ಶಿಲ್ಪ:
ಶಾತವಾಹನರ ಕಾಲದಲ್ಲಿ ದೊಡ್ಡ ಬಂಡೆಗಲ್ಲುಗಳನ್ನು ಕೊರೆದು ಚೈತ್ಯ ಮತ್ತು ವಿಹಾರಗಳನ್ನು ನಿರ್ಮಿಸಲಾಯಿತು. ಚೈತ್ಯವು ಪ್ರಾರ್ಥನಾ ಮಂದಿರವಾಗಿದ್ದು ವಿಹಾರವು ಸನ್ಯಾಸಿಗಳ ವಾಸಸ್ಥಳವಾಗಿತ್ತು. ಅಜಂತಾದಲ್ಲಿನ ಗುಹಾಂತರ ದೇವಾಲಯಗಳ ನಿರ್ಮಾಣವು ಕಾಲದಲ್ಲಿ ಆರಂಭಗೊಂಡಿತು.
ಕಾಲದ ಅತ್ಯಂತ ಪ್ರಮುಖ ಚೈತ್ಯ ಈ ಗೃಹಗಳೆಂದರೆ, ಕಾರ್ಲೆ, ಕನ್ಹೇರಿ, ಅಜಂತಾ, ಜುನ್ನಾರ್, ಬೇಡ್ಸ್, ನಾಸಿಕ್, ಭಾಜಾ, ಪವ್ಹಾಳ, ಕೊಂಡಾಣ, ನಾಗಾರ್ಜುನ ಕೊಂಡ, ಅಮರಾವತಿ, ಜಗ್ಗಯ್ಯಪೇಟ ಮುಂತಾದವು. ಅತ್ಯಂತ ಸುಂದರವಾದ ಚೈತ್ಯವು ಕಾರ್ಲೆಯಲ್ಲಿದ್ದು ಇದು 40 ಮೀಟರ್ ಉದ್ದ, 15 ಮೀಟರ್ ಅಗಲ ಮತ್ತು 15 ಮೀಟರ್ ಎತ್ತರವಾಗಿದೆ.
ಶಾತವಾಹನರ ಪ್ರಾಮುಖ್ಯತೆ:
ಶಾತವಾಹನರು ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ರಾಜ್ಯವನ್ನು ಸ್ಥಾಪಿಸಿದವರಾಗಿದ್ದಾರೆ. ಉತ್ತರ ಭಾರತದ ವೈದಿಕ ಸಂಪ್ರದಾಯದ ದಕ್ಷಿಣ ಭಾರತಕ್ಕೆ ಹರಡಲು ಇವರು ಪ್ರಮುಖ ಕಾರಣರಾಗಿದ್ದಾರೆ.