Suvrna Arogya Suraksha Trust Recruitment 2026 – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಸೇರಿದಂತೆ ವಿವಿಧ ಆರೋಗ್ಯ ಯೋಜನೆಗಳನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲಾತಿಗಳು
- ಅಭ್ಯರ್ಥಿಯ ಸ್ವಯಂ ವಿವರ (Resume / Bio-data)
- ಎಸ್.ಎಸ್.ಎಲ್.ಸಿ ಅಂಕಪಟ್ಟಿ – ಸ್ವಯಂ ದೃಢೀಕರಿಸಿದ ಪ್ರತಿಯೊಂದಿಗೆ
- ಪದವಿ ಹಾಗೂ ಸ್ನಾತಕೋತ್ತರ ಪದವಿಯ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿಗಳು – ಸ್ವಯಂ ದೃಢೀಕರಿಸಿದ ಪ್ರತಿಗಳು
- Karnataka Medical Council / Karnataka Dental Council ನೋಂದಣಿ ಪ್ರಮಾಣ ಪತ್ರ (ಅನ್ವಯಿಸುವ ಹುದ್ದೆಗಳಿಗೆ)
- ಸಂಬಂಧಿಸಿದ ಸಂಸ್ಥೆಗಳಿಂದ ಪಡೆದ ಅನುಭವ ಪ್ರಮಾಣ ಪತ್ರ – ಸ್ವಯಂ ದೃಢೀಕರಿಸಿದ ಪ್ರತಿಯೊಂದಿಗೆ
- ಅಭ್ಯರ್ಥಿಯ ಗುರುತಿನ ಪ್ರಮಾಣ ಪತ್ರ (ಆಧಾರ್ ಕಾರ್ಡ್ / ವೋಟರ್ ಐಡಿ / ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ)
- ಪಾಸ್ಪೋರ್ಟ್ ಸೈಸ್ ಭಾವಚಿತ್ರಗಳು ಹಾಗೂ ಎಲ್ಲಾ ಮೂಲ ದಾಖಲಾತಿಗಳು (Original Documents) ಪರಿಶೀಲನೆಗಾಗಿ ಸಲ್ಲಿಸಬೇಕು
- ಮೀಸಲಾತಿ ಸೌಲಭ್ಯ ಪಡೆಯಲು ಇಚ್ಚಿಸಿದಲ್ಲಿ, ಸಕ್ಷಮ ಪ್ರಾಧಿಕಾರದಿಂದ ನೀಡಿದ ಸಂಬಂಧಪಟ್ಟ ಮೀಸಲಾತಿ ಪ್ರಮಾಣ ಪತ್ರಗಳು
- ಸಮತಳ ಮೀಸಲಾತಿಯಲ್ಲಿ ಅರ್ಹ ಅಭ್ಯರ್ಥಿ ಲಭ್ಯವಿಲ್ಲದ ಸಂದರ್ಭದಲ್ಲಿ, ನಿಯಮಾನುಸಾರ ಅದೇ ವರ್ಗದ ಸಾಮಾನ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು
- ಹಾರ್ಡ್ ಕಾಪಿ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು
ಅರ್ಜಿ ಸಲ್ಲಿಕೆ ಮತ್ತು ದಾಖಲೆ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ, ಕಛೇರಿ ವೆಬ್ಸೈಟ್ನಲ್ಲಿ ಅಳವಡಿಸಿರುವ ನಿಗದಿತ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಭಾವಚಿತ್ರವನ್ನು ಲಗತ್ತಿಸಿ ಕೆಳಕಂಡ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಕಡ್ಡಾಯವಾಗಿ ಹಾರ್ಡ್ ಕಾಪಿ ಮೂಲಕ ಸಲ್ಲಿಸಬೇಕು. ಅಗತ್ಯ ದಾಖಲೆಗಳಿಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಸಂದರ್ಶನ ದಿನಾಂಕ ಮತ್ತು ಸಮಯ
ದಿನಾಂಕ: 30-01-2026 ಮತ್ತು 31-01-2026
ಸಮಯ: ಬೆಳಿಗ್ಗೆ 10.30 ಗಂಟೆಯಿಂದ
ಸಂದರ್ಶನ ಸ್ಥಳ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST)
ಆರೋಗ್ಯಸೌಧ, 7ನೇ ಮಹಡಿ,
ಬೆಂಗಳೂರು – 560023
ಅಧಿಸೂಚನೆ: ಅಧಿಕೃತ ವೆಬ್ಸೈಟ್
ಅಪ್ಲೈ ಆನ್ಲೈನ್: Online Application Link




