GESCOM Apprenticeship Recruitment 2026- ಕರ್ನಾಟಕದ ಇಂಜಿನಿಯರಿಂಗ್ ಪದವೀಧರರು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಮತ್ತೊಂದು ದೊಡ್ಡ ಸರ್ಕಾರಿ ಅವಕಾಶ ಪ್ರಕಟವಾಗಿದೆ. ರಾಷ್ಟ್ರೀಯ ಶಿಶಿಕ್ಷು (ಆಪ್ರೆಂಟಿಸ್) ತರಬೇತಿ ಯೋಜನೆಯಡಿ Gulbarga Electricity Supply Company Limited (GESCOM) ವತಿಯಿಂದ 2026-27ನೇ ಸಾಲಿನ ಶಿಶಿಕ್ಷು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೇಮಕಾತಿಯಡಿ ಇಂಜಿನಿಯರಿಂಗ್ ಪದವಿ ಹಾಗೂ ಡಿಪ್ಲೋಮಾ ಹೊಂದಿರುವ ಅಭ್ಯರ್ಥಿಗಳಿಗೆ ಒಂದು ವರ್ಷದ ಅವಧಿಯ ತರಬೇತಿ ನೀಡಲಾಗುತ್ತದೆ. ವಿಶೇಷವಾಗಿ Electrical & Electronics Engineering ಮತ್ತು Electrical Engineering ವಿಭಾಗದ ವಿದ್ಯಾರ್ಥಿಗಳಿಗೆ ಈ ಅವಕಾಶ ಲಭ್ಯವಿದೆ.
ಈ ಉದ್ಯೋಗಾವಕಾಶವು ಸರ್ಕಾರಿ ಸಂಸ್ಥೆಯಲ್ಲಿ ಅನುಭವ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ.
GESCOM Recruitment 2026 ಮುಖ್ಯಾಂಶಗಳು
- ಸಂಸ್ಥೆ ಹೆಸರು GESCOM
- ಹುದ್ದೆ ಹೆಸರು Graduate Apprentice & Diploma Apprentice
- ಒಟ್ಟು ಹುದ್ದೆಗಳು : 275
- ಪದವಿಧರ Apprentice : 175 ಹುದ್ದೆಗಳು
- ಡಿಪ್ಲೋಮಾ Apprentice : 100 ಹುದ್ದೆಗಳು
- ಅರ್ಜಿ ವಿಧಾನ : Offline
- ಕೆಲಸದ ಸ್ಥಳ : ಕರ್ನಾಟಕ
- ತರಬೇತಿ ಅವಧಿ : 1 ವರ್ಷ
- ಅಧಿಕೃತ ವೆಬ್ಸೈಟ್ : gescom.karnataka.gov.in
GESCOM Recruitment ವಿದ್ಯಾರ್ಹತೆ ವಿವರಗಳು
- ಇಂಜಿನಿಯರಿಂಗ್ ಪದವೀಧರರು
- BE / B.Tech in Electrical & Electronics Engineering
- ಕರ್ನಾಟಕದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
- ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / AICTE ಮಾನ್ಯತೆ ಇರಬೇಕು
- January-2022 ನಂತರ ಉತ್ತೀರ್ಣರಾಗಿರಬೇಕು
- ಡಿಪ್ಲೋಮಾ ಅಭ್ಯರ್ಥಿಗಳು
- Electrical Engineering ನಲ್ಲಿ 3 ವರ್ಷದ Diploma
- ಕರ್ನಾಟಕದ Polytechnic ಕಾಲೇಜಿನಿಂದ ಡಿಪ್ಲೋಮಾ ಪಡೆದಿರಬೇಕು
- ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿರಬೇಕು
- January-2022 ನಂತರ ಪಾಸ್ ಆಗಿರಬೇಕು
- ಇಂಜಿನಿಯರಿಂಗ್ ಪದವೀಧರರು
ವೇತನ
GESCOM Apprenticeship Training ಅವಧಿಯಲ್ಲಿ ಅಭ್ಯರ್ಥಿಗಳಿಗೆ ಕೆಳಗಿನಂತೆ ಮಾಸಿಕ ವೇತನ ನೀಡಲಾಗುತ್ತದೆ.
- ಅಭ್ಯರ್ಥಿಗಳ ಪ್ರಕಾರ ಮಾಸಿಕ ವೇತನ
- Graduate Apprentice ₹9000
- Diploma Apprentice ₹8000
ಹುದ್ದೆಗಳ ವರ್ಗವಾರು ವಿವರ
- Graduate Apprentice – 175 ಹುದ್ದೆಗಳು
- ಸಾಮಾನ್ಯ ವರ್ಗ (General)
- ಮಹಿಳಾ ಅಭ್ಯರ್ಥಿಗಳು – 52
- ಮಹಿಳಾ ಅಭ್ಯರ್ಥಿಗಳು – 25
- SC / ST / OBC ಮೀಸಲಾತಿ
ವಿಭಿನ್ನ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ಮೀಸಲಾತಿ ನೀಡಲಾಗಿದೆ.
ಒಟ್ಟು Graduate Apprentice ಹುದ್ದೆಗಳು – 175
ಅಗತ್ಯ ದಾಖಲೆಗಳು
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು
ಅಭ್ಯರ್ಥಿಗಳು ಕೆಳಗಿನ ದಾಖಲೆಗಳ Self-Attested ಪ್ರತಿಗಳನ್ನು ಸಲ್ಲಿಸಬೇಕು.
- SSLC Marks Card
- PUC Marks Card
- Degree Certificate
- Diploma Certificate
- ಎಲ್ಲಾ Semester Marks Cards
- Aadhaar Card
- Caste Certificate
- Passport Size Photo
- PDC / Convocation Certificate
ಆಯ್ಕೆ ಪ್ರಕ್ರಿಯೆ ಹೇಗೆ?
GESCOM ನೇಮಕಾತಿಯಲ್ಲಿ ಯಾವುದೇ Written Exam ಅಥವಾ Interview ಇರುವುದಿಲ್ಲ.
ಆಯ್ಕೆ ಸಂಪೂರ್ಣವಾಗಿ ಕೆಳಗಿನ ಆಧಾರದ ಮೇಲೆ ನಡೆಯಲಿದೆ:
- Degree / Diploma ಅಂಕಗಳು
- Merit List
- ದಾಖಲೆ ಪರಿಶೀಲನೆ
ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ.
GESCOMಅರ್ಜಿ ಸಲ್ಲಿಸುವ ದಿನಾಂಕ
ಅರ್ಜಿ ಪ್ರಾರಂಭ ದಿನಾಂಕ: 18-05-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-06-2026 ಸಂಜೆ 5 ಗಂಟೆಯವರೆಗೆ
ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
GESCOM Apply ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು Offline ಮೂಲಕ ಅರ್ಜಿ ಸಲ್ಲಿಸಬೇಕು.
ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ:
ಮುಖ್ಯ ಪ್ರಶಾಸನಾಧಿಕಾರಿಗಳು (ಆಡಳಿತ ಮತ್ತು ಮಾನವ ಸಂಪನ್ಮೂಲ),
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ,
ಕೇಂದ್ರ ಕಚೇರಿ, ಕಲಬುರಗಿ – 585102
ಪ್ರಮುಖ ಲಿಂಕ್ ಗಳು
ಅಧಿಕೃತ ವೆಬ್ಸೈಟ್ : GESCOM Official Website
ಅಧಿಕೃತ ಅಧಿಸೂಚನೆ PDF : GESCOM Notification PDF




