ಬೆಂಗಳೂರು ದಕ್ಷಿಣ ಜಿಲ್ಲೆ ನಗರಸಭೆ ಪೌರಕಾರ್ಮಿಕರ ನೇಮಕಾತಿ 2026 ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ ನಗರಸಭೆಗಳಲ್ಲಿ ನೇರ ಪಾವತಿ (Direct Payment) ಆಧಾರದ ಮೇಲೆ ಒಟ್ಟು 102 ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೇಮಕಾತಿಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಸಂಬಂಧಪಟ್ಟ ನಗರಸಭೆ ಕಚೇರಿಗೆ ಅರ್ಜಿ ಸಲ್ಲಿಸಬಹುದು.
Bengaluru South District Municipality ಹುದ್ದೆಗಳ ವಿವರ
| ನಗರಸಭೆ | ಹುದ್ದೆಗಳ ಸಂಖ್ಯೆ |
| ರಾಮನಗರ ನಗರಸಭೆ | 45 |
| ಚನ್ನಪಟ್ಟಣ ನಗರಸಭೆ | 36 |
| ಕನಕಪುರ ನಗರಸಭೆ | 21 |
| ಒಟ್ಟು | 102 |
Bengaluru South District Municipality Qualification ವಿದ್ಯಾರ್ಹತೆ
ಯಾವುದೇ ಶೈಕ್ಷಣಿಕ ಅರ್ಹತೆ ಕಡ್ಡಾಯವಿಲ್ಲ.
- ಅಭ್ಯರ್ಥಿಗೆ ಕನ್ನಡ ಭಾಷೆಯಲ್ಲಿ ಮಾತನಾಡಲು ತಿಳಿದಿರಬೇಕು.
- ಕನ್ನಡ ಭಾಷೆ ತಿಳಿದಿರುವ ಬಗ್ಗೆ ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕು.
Bengaluru South District Municipality Age Limit ವಯೋಮಿತಿ
| ಕನಿಷ್ಠ ವಯಸ್ಸು | 18 ವರ್ಷ |
| ಗರಿಷ್ಠ ವಯಸ್ಸು: | 50 ವರ್ಷ |
ವಯೋಮಿತಿ ಪರಿಶೀಲನೆಗೆ ಮಾನ್ಯ ದಾಖಲೆಗಳು:
- ಜನನ ಪ್ರಮಾಣ ಪತ್ರ
- ಶಾಲಾ ದಾಖಲಾತಿ
- ಆಧಾರ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಪ್ಯಾನ್ ಕಾರ್ಡ್
- ESI/PF ದಾಖಲೆ (ಅನ್ವಯಿಸಿದರೆ)
ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆಗಳು
- ಭಾರತೀಯ ನಾಗರಿಕರಾಗಿರಬೇಕು.
- 18 ರಿಂದ 50 ವರ್ಷದೊಳಗಿನವರಾಗಿರಬೇಕು.
- ಸಂಬಂಧಪಟ್ಟ ನಗರಸಭೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
- ಸ್ಥಳೀಯ ಸ್ವಚ್ಛತಾ ಕಾರ್ಯದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ.
- ಹೊರಗುತ್ತಿಗೆ/ದಿನಗೂಲಿ/ಗುತ್ತಿಗೆ ಆಧಾರದ ಮೇಲೆ ಕನಿಷ್ಠ ಒಂದು ವರ್ಷದ ಸೇವೆ ಮಾಡಿದವರಿಗೆ ಮೊದಲ ಆದ್ಯತೆ.
- ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿ ಮೃತಪಟ್ಟ ಪೌರಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅವಕಾಶ.
- ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕುಟುಂಬಗಳಿಗೆ ಆದ್ಯತೆ.
Bengaluru South District Municipality Selection Process ಆಯ್ಕೆ ವಿಧಾನ
- ಅರ್ಜಿಗಳ ಪರಿಶೀಲನೆ
- ದಾಖಲೆಗಳ ಪರಿಶೀಲನೆ
- ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯಿಂದ ಅಂತಿಮ ಆಯ್ಕೆ
Bengaluru South District Municipality Qualification Salary ವೇತನ
- ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯ ಪ್ರಕಾರ ವೇತನ.
- PF ಹಾಗೂ ESI ಸೌಲಭ್ಯಗಳು ಲಭ್ಯ.
- ಈ ನೇಮಕಾತಿ ತಾತ್ಕಾಲಿಕ (Direct Payment) ಆಧಾರದ ಮೇಲೆ ನಡೆಯುತ್ತದೆ.
Bengaluru South District Municipality Qualification Salary Important Dates ಪ್ರಮುಖ ದಿನಾಂಕಗಳು
ಅರ್ಜಿ ಆರಂಭ ದಿನಾಂಕ: 03 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಸೆಪ್ಟೆಂಬರ್ 2026 (ಸಂಜೆ 5:00 ಗಂಟೆ)
ಅರ್ಜಿ ಸಲ್ಲಿಸುವ ಸ್ಥಳ: ಸಂಬಂಧಿಸಿದ ರಾಮನಗರ, ಚನ್ನಪಟ್ಟಣ ಅಥವಾ ಕನಕಪುರ ನಗರಸಭೆ ಕಚೇರಿ
Bengaluru South District Municipality Qualification Salary Important Links ಪ್ರಮುಖ ಲಿಂಕ್‌ಗಳು
ಅಧಿಕೃತ ವೆಬ್‌ಸೈಟ್ https://bengalurusouth.nic.in/
ಬೆಂಗಳೂರು ದಕ್ಷಿಣ ಜಿಲ್ಲೆ ವೆಬ್‌ಸೈಟ್ https://bengalurusouth.nic.in
ಅರ್ಜಿ ನಮೂನೆ ಸಂಬಂಧಿಸಿದ ನಗರಸಭೆ ಕಚೇರಿಯಲ್ಲಿ ಲಭ್ಯ

