India Post GDS Recruitment 2026 : ಭಾರತೀಯ ಅಂಚೆ ಇಲಾಖೆಯು Gramin Dak Sevak (GDS) ಹುದ್ದೆಗಳ ನೇಮಕಾತಿಗಾಗಿ Online Engagement Schedule-II, July-2026 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ Branch Postmaster (BPM), Assistant Branch Postmaster (ABPM) ಮತ್ತು Dak Sevak ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.10ನೇ ತರಗತಿ ಉತ್ತೀರ್ಣರಾಗಿರುವ ಮತ್ತು ನಿಗದಿತ ಸ್ಥಳೀಯ ಭಾಷೆಯನ್ನು 10ನೇ ತರಗತಿಯವರೆಗೆ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
India Post GDS Recruitment 2026 – ಪ್ರಮುಖ ಮಾಹಿತಿ
| ವಿವರ | ಮಾಹಿತಿ |
| ನೇಮಕಾತಿ ಸಂಸ್ಥೆ | ಭಾರತೀಯ ಅಂಚೆ ಇಲಾಖೆ |
| ಹುದ್ದೆಗಳು | BPM, ABPM, Dak Sevak |
| ನೇಮಕಾತಿ | Gramin Dak Sevak (GDS) |
| ವಿದ್ಯಾರ್ಹತೆ | 10ನೇ ತರಗತಿ ಪಾಸ್ |
| ಅರ್ಜಿ ವಿಧಾನ | ಆನ್‌ಲೈನ್ |
India Post GDS Jobs Detail ಹುದ್ದೆಗಳ ವಿವರ
ಈ ನೇಮಕಾತಿಯಲ್ಲಿ ಮುಖ್ಯವಾಗಿ ಕೆಳಗಿನ GDS ಹುದ್ದೆಗಳಿಗೆ ಅವಕಾಶವಿದೆ:
1. Branch Postmaster (BPM)
- BPM ಅವರು Branch Post Office-ನ ದೈನಂದಿನ ಅಂಚೆ ಕಾರ್ಯಾಚರಣೆಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ.
- India Post Payments Bank (IPPB) ಸೇವೆಗಳು, ಗ್ರಾಹಕ ಸೇವೆ ಮತ್ತು ಅಂಚೆ ಇಲಾಖೆಯ ಇತರ ಕಾರ್ಯಗಳನ್ನೂ ನಿರ್ವಹಿಸಬೇಕಾಗುತ್ತದೆ.
2. Assistant Branch Postmaster (ABPM)
- ABPM ಹುದ್ದೆಯಲ್ಲಿ ಅಂಚೆ ಚೀಟಿ ಮತ್ತು ಸ್ಟೇಷನರಿ ಮಾರಾಟ, ಅಂಚೆ ವಿತರಣೆ, IPPB ವ್ಯವಹಾರಗಳು ಹಾಗೂ BPM ಅವರಿಗೆ ಸಹಾಯ ಮಾಡುವಂತಹ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.
3. Dak Sevak
- Dak Sevak ಹುದ್ದೆಯಲ್ಲಿ ಅಂಚೆ, ಪಾರ್ಸೆಲ್ ಮತ್ತು ಮೇಲ್ ನಿರ್ವಹಣೆ, ವಿತರಣೆ, ಅಂಚೆ ಕಚೇರಿ ಕಾರ್ಯಗಳಲ್ಲಿ ಸಹಾಯ ಮತ್ತು ಗ್ರಾಹಕ ಸೇವೆ ಸೇರಿದಂತೆ ವಿವಿಧ ಜವಾಬ್ದಾರಿಗಳಿರುತ್ತವೆ.
ವಯೋಮಿತಿ
GDS ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು:
- ಕನಿಷ್ಠ: 18 ವರ್ಷ
- ಗರಿಷ್ಠ: 40 ವರ್ಷ
ವಯಸ್ಸನ್ನು ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದಂದು ಪರಿಗಣಿಸಲಾಗುತ್ತದೆ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು
- ಒಬ್ಬ ಅಭ್ಯರ್ಥಿಗೆ ಒಂದು Registration ಮಾತ್ರ ಅನುಮತಿಸಲಾಗಿದೆ.
- Duplicate ಅಥವಾ multiple applications ಸಲ್ಲಿಸುವುದು ನಿಷಿದ್ಧ.
- ತಪ್ಪಾದ ಮಾಹಿತಿ ಅಥವಾ ತಪ್ಪು ದಾಖಲೆಗಳನ್ನು ನೀಡಿದರೆ ಅರ್ಜಿ/ಅಭ್ಯರ್ಥಿತ್ವ ರದ್ದಾಗಬಹುದು.
- ಫೋಟೋ ಅಥವಾ ಸಹಿ ಸ್ಪಷ್ಟವಾಗಿರಬೇಕು.
- ಅರ್ಜಿಯಲ್ಲಿನ ಹೆಸರು, DOB ಮತ್ತು ಇತರ ವಿವರಗಳನ್ನು 10ನೇ ತರಗತಿ Mark Sheetನಂತೆ ನಮೂದಿಸಬೇಕು.
- ಶಾರ್ಟ್‌ಲಿಸ್ಟ್ ಆದ ನಂತರ Document Verificationಗೆ ನಿಗದಿತ ಅವಧಿಯಲ್ಲಿ ಹಾಜರಾಗಬೇಕು.
- ಅಭ್ಯರ್ಥಿಗಳು ಅಧಿಕೃತ GDS ಪೋರ್ಟಲ್ ಅನ್ನು ನಿಯಮಿತವಾಗಿ ಪರಿಶೀಲಿಸಬೇಕು.
India Post GDS ಪ್ರಮುಖ ದಿನಾಂಕಗಳು
| Online One-Time Registration | 31-08-2026 ರಿಂದ 19-09-2026 |
| Online Application & Fee Payment | 02-09-2026 ರಿಂದ 21-09-2026 |
| ಅರ್ಜಿ ತಿದ್ದುಪಡಿ/Correction | 23-09-2026 ರಿಂದ 24-09-2026 |
Important link ಪ್ರಮುಖ ಲಿಂಕ್‌ಗಳು
GDS Online Application / Registration: https://indiapost.gov.in/gdsonlineengagement
Department of Posts Official Website: https://indiapost.gov.in/

