Koppal Pourakarmika Recruitment 2026 : ಕೊಪ್ಪಳ ಮತ್ತು ಗಂಗಾವತಿ ನಗರಸಭೆಗಳಲ್ಲಿ ನೇರಪಾವತಿ ಪೌರಕಾರ್ಮಿಕರ ನೇಮಕಾತಿ 2026ಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೊಪ್ಪಳ ನಗರಸಭೆ ಹಾಗೂ ಗಂಗಾವತಿ ನಗರಸಭೆಗಳಲ್ಲಿ ಖಾಲಿ ಇರುವ ನೇರಪಾವತಿ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಈ ನೇಮಕಾತಿಯಲ್ಲಿ ಒಟ್ಟು 48 ಪೌರಕಾರ್ಮಿಕ ಹುದ್ದೆಗಳು ಲಭ್ಯವಿದ್ದು, ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

Qualification – ವಿದ್ಯಾರ್ಹತೆ
ಈ ಪೌರಕಾರ್ಮಿಕ ನೇಮಕಾತಿಗೆ ನಿರ್ದಿಷ್ಟ ಶೈಕ್ಷಣಿಕ ವಿದ್ಯಾರ್ಹತೆ ಅನ್ವಯಿಸುವುದಿಲ್ಲ.
ಆದರೆ ಅಭ್ಯರ್ಥಿಗಳು:
- ಕನ್ನಡ ಭಾಷೆಯಲ್ಲಿ ಮಾತನಾಡಲು ತಿಳಿದಿರಬೇಕು.
- ಭಾರತೀಯ ನಾಗರಿಕರಾಗಿರಬೇಕು.
- ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಇತರೆ ಅರ್ಹತಾ ಷರತ್ತುಗಳನ್ನು ಪೂರೈಸಿರಬೇಕು.
Age Limit – ವಯೋಮಿತಿ
ಅರ್ಜಿ ಸಲ್ಲಿಸಲು ಅಭ್ಯರ್ಥಿಯು:
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 50 ವರ್ಷ
ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ
| ವರ್ಗ | ಅರ್ಜಿ ಶುಲ್ಕ |
| ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1 ಹಾಗೂ ಮಹಿಳಾ ಅಭ್ಯರ್ಥಿಗಳು | ₹100 |
| ಸಾಮಾನ್ಯ ವರ್ಗ (GM), 2A, 2B, 3A, 3B ವರ್ಗದ ಅಭ್ಯರ್ಥಿಗಳು | ₹200 |
ಅಗತ್ಯವಿರುವ ದಾಖಲೆಗಳು (Required Documents)
- ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳ ದೃಢೀಕೃತ ನಕಲುಗಳನ್ನು (ಜೆರಾಕ್ಸ್) ಲಗತ್ತಿಸಬೇಕು:
- ನಿಗದಿತ ನಮೂನೆಯ ಭರ್ತಿ ಮಾಡಿದ ಅರ್ಜಿ.
- ವಯಸ್ಸಿನ ದೃಢೀಕರಣ ಪತ್ರ (ಶಾಲಾ ದಾಖಲಾತಿ / ಜನನ ಪ್ರಮಾಣ ಪತ್ರ / ಅಧಿಕೃತ ವೈದ್ಯಕೀಯ ದೃಢೀಕರಣ).
- ನಿಗದಿತ ಮೊತ್ತದ ಮೂಲ ಡಿಮ್ಯಾಂಡ್ ಡ್ರಾಫ್ಟ್ (DD).
- ಗುರುತಿನ ಹಾಗೂ ವಿಳಾಸ ಪುರಾವೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಡಿತರ ಚೀಟಿ).
- ಸೇವಾ ಅನುಭವಕ್ಕೆ ಪೂರಕವಾಗಿ ದೃಢೀಕೃತ ESI / PF ವೇತನ ವಿವರ ಅಥವಾ ಬ್ಯಾಂಕ್ ಪಾಸ್ ಬುಕ್ / ಹಾಜರಾತಿ ದಾಖಲೆ.
- ಕೋವಿಡ್-19 ಅಥವಾ ಇತರೆ ಕಾರಣದಿಂದ ಮೃತಪಟ್ಟ ಕುಟುಂಬಸ್ಥರಾಗಿದ್ದರೆ ಜಿಲ್ಲಾ ವೈದ್ಯಾಧಿಕಾರಿಗಳು (DHO) ಹಾಗೂ ಪೌರಾಯುಕ್ತರ ದೃಢೀಕರಣ ಪತ್ರ.
- ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ವ್ಯಾಪ್ತಿಗೆ ಒಳಪಟ್ಟಿದ್ದರೆ ಸಕ್ಷಮ ಪ್ರಾಧಿಕಾರ ನೀಡಿದ ಪ್ರಮಾಣಪತ್ರ.
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.
ಅರ್ಜಿ ಸಲ್ಲಿಸುವುದು ಹೇಗೆ?
- ಅರ್ಜಿ ಪಡೆಯುವುದು: ನಗರಸಭೆ ಕೊಪ್ಪಳ ಅಥವಾ ನಗರಸಭೆ ಗಂಗಾವತಿ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
- ವಿವರ ಭರ್ತಿ: ಅರ್ಜಿಯಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ಹಾಗೂ ಸೇವಾ ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ.
- ಡಿ.ಡಿ. ಲಗತ್ತಿಸುವುದು: ನಿಮ್ಮ ವರ್ಗಕ್ಕೆ ಅನ್ವಯಿಸುವ ಶುಲ್ಕದ ಡಿ.ಡಿ.ಯನ್ನು ಅರ್ಜಿಯೊಂದಿಗೆ ಇರಿಸಿ.
- ದಾಖಲೆ ಲಗತ್ತಿಸುವುದು: ಅಗತ್ಯವಿರುವ ಎಲ್ಲಾ ಅನುಭವ, ವಯಸ್ಸು ಮತ್ತು ಮೀಸಲಾತಿ ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಸೇರಿಸಿ.
- ಸಲ್ಲಿಕೆ: ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ನಗರಸಭೆ ಕಾರ್ಯಾಲಯಕ್ಕೆ 22-10-2026 ರ ಒಳಗಾಗಿ ಖುದ್ದಾಗಿ ಸಲ್ಲಿಸಿ ಸ್ವೀಕೃತಿ ಪಡೆಯಿರಿ.
Important Links – ಪ್ರಮುಖ ಲಿಂಕ್‌ಗಳು
| ಲಿಂಕ್ | ಮಾಹಿತಿ |
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
