ನಿಮ್ಮನ್ನು ಬಸವಕಲ್ಯಾಣದ ಸರ್ಕಾರಿ ಪ್ರೌಢಶಾಲೆಯ ‘ಪ್ರವೀಣ’ ಎಂದು ಭಾವಿಸಿಕೊಂಡು ಧಾರವಾಡದ ಕಲ್ಯಾಣ ನಗರದಲ್ಲಿ ವಾಸವಾಗಿರುವ. ತಾಯಿ ಶ್ರೀದೇವಿ ಯವರಿಗೆ ವಿದ್ಯಾಭ್ಯಾಸದ ಪ್ರಗತಿಯನ್ನು ವಿವರಿಸಿ ಪತ್ರ ಬರೆಯಿರಿ.
ಕ್ಷಮೆ ಶ್ರೀ
ಬಸವಕಲ್ಯಾಣ
10ನೇ ಏಪ್ರಿಲ್ 2016
ಮಾತೃಶ್ರೀ ತಾಯಿಯವರಿಗೆ ಸಾಷ್ಟಾಂಗ ನಮಸ್ಕಾರಗಳು. ಅಮ್ಮ ನಾನು ಚೆನ್ನಾಗಿದ್ದೇನೆ. ನೀವೆಲ್ಲಾ ಹೇಗಿರುವಿರಿ? ನಿಮ್ಮೆಲ್ಲರ ನೆನಪು ಬಹಳವಾಗಿ ಕಾಡುತ್ತಿದೆ.
ಅಮ್ಮ ನಮ್ಮ ಶಾಲೆಯಲ್ಲಿ ಶಿಕ್ಷಕರು ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ, ನಾವೆಲ್ಲಾ ಚೆನ್ನಾಗಿ ಓದುವಂತೆ ಪ್ರೋತ್ಸಾಹಿ ಸುತ್ತಾರೆ. ನನಗೆ ಪಾಠಗಳೆಲ್ಲಾ ಚೆನ್ನಾಗಿ ಅರ್ಥವಾಗುತ್ತಿದೆ. ಗೆಳೆಯರೂ ಸಹ ಬಹಳ ಸ್ನೇಹದಿಂದ ಇರುತ್ತಾರೆ. ವಿದ್ಯಾಭ್ಯಾಸ ಬಹಳ ಚೆನ್ನಾಗಿದೆ.
ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸುವುದು. ತಂಗಿ ಕುಸುಮಾ ಹೇಗಿದ್ದಾಳೆ? ಅಪ್ಪನಿಗೆ ನನ್ನ ನಮಸ್ಕಾರಗಳನ್ನು ತಿಳಿಸುವುದು. ನಿಮ್ಮ ಪತ್ರಕ್ಕಾಗಿ ಕಾಯುತ್ತಿರುವೆನು.
ಇಂತಿ ನಿಮ್ಮ ಪ್ರೀತಿಯ ಮಗ,
ಪ್ರವೀಣ
ಸರ್ಕಾರಿ ಪ್ರೌಢಶಾಲೆ,
ಬಸವಕಲ್ಯಾಣ
ಗೆ ವಿಳಾಸ:
ಶ್ರೀಮತಿ ಶ್ರೀದೇವಿ,
W/o ಶರಣಪ್ಪ ಕಲ್ಯಾಣನಗರ
ಧಾರವಾಡ
