bellagiruvudella halalla in kannadaಬೆಳ್ಳಗಿರುವುದೆಲ್ಲ ಹಾಲಲ್ಲ
ಹೊಳೆಯುವುದೆಲ್ಲ ಚಿನ್ನವಲ್ಲ
Bellagiruvudella Halalla In Kannada : ಗಾದೆಗಳು ಜೀವನದ ಅನುಭವಗಳಿಂದ ಜನಿತವಾದ ಜಾಣ್ನೆಯನ್ನು ಸ್ವಾರಸ್ಯವಾಗಿ ಬಹಳ ಕಡಿಮೆ ಪದಗಳಲ್ಲಿ ಅಡಕ ಮಾಡಿ ಹೇಳುತ್ತೇವೆ. ಮೇಲಿನ ಗಾದೆಗೆ ಸಮಾನಾಂತರವಾಗಿ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಗಾದೆಯೂ ಇದೆ. ಎರಡೂ ಗಾದೆಗಳು ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತದೆ.
ಮೇಲಿನ ಗಾದೆಯ ಅರ್ಥ ಚಿನ್ನ ಹೊಳೆಯುತ್ತದೆ, ಆದರೆ ಹೊಳೆಯುವುದೆಲ್ಲಾ ಚಿನ್ನವಲ್ಲ ಹಾಗೆಯೇ ಹಾಲು ಬೆಳ್ಳಗಿರುತ್ತದೆ. ಆದರೆ ಬೆಳ್ಳಗಿರುವುದೆಲ್ಲ ಹಾಲಲ್ಲ. ಈ ಗಾದೆಯ ಒಳ ಅರ್ಥ ಹೊರಗಿನ ರೂಪಕ್ಕೆ ಮರುಳಾಗದೆ, ಅಥವಾ ಹೊರರೂಪವನ್ನು ನೋಡಿ ಏನು ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಒಳಗಿನ ಸ್ವಭಾವ, ಗುಣಗಳನ್ನೂ ಸಹ ತಿಳಿದು ಕೊಳ್ಳಬೇಕು. ಹೊರ ರೂಪದಿಂದ ನಿರ್ಧಾರ ತಪ್ಪಾಗುವ ಸಾಧ್ಯತೆಗಳಿರುತ್ತದೆ. ಚಿನ್ನವೊಂದೇ ಅಲ್ಲ, ಕಾಗೆ ಬಂಗಾರವೂ, ಇತರ ಲೋಹಗಳೂ ಹೊಳೆಯುತ್ತದೆ. ಆದ್ದರಿಂದಲೇ ಜೀವನಾನುಭವಿಗಳು ಮೇಲಿನ ಗಾದೆಯನ್ನು ಸೃಷ್ಟಿಸಿರುವುದು.
ಚಿನ್ನ ಶುದ್ಧತೆಯ, ಒಳ್ಳೆಯ ಸಂಕೇತ, ಆದರೆ ಇತರ ವಸ್ತುಗಳು ಹಾಗಲ್ಲ, ಹಾಲಿನಂತೆ ಸುಣ್ಣದ ನೀರೂ ಸಹ ಬೆಳ್ಳಗಿರುತ್ತದೆ. ಹಾಲೆಂದು ತಿಳಿದು ಸುಣ್ಣದ ನೀರನ್ನು ಕುಡಿದರೆ ಏನಾಗ ಬಹುದು?
ಜೀವನದಲ್ಲಿ ಇಂತಹ ಗಾದೆಗಳು ಮನುಷ್ಯರನ್ನು ಎಚ್ಚರಿಸುವುದು. ನಮಗೆ ಗೊತ್ತಿಲ್ಲದೆ ಇದು ನೀತಿಯನ್ನೂ

