Karnataka RTE Admission 2026 kannada – ಕರ್ನಾಟಕ RTE ಪ್ರವೇಶ 2026-27 – 25% ಉಚಿತ ಸೀಟುಗಳು ಆನ್‌ಲೈನ್ ಅರ್ಜಿ, ಅರ್ಹತೆ, ಕೊನೆಯ ದಿನಾಂಕ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ವತಿಯಿಂದ RTE (Right to Education) ಪ್ರವೇಶ 2026-27 ಪ್ರಕ್ರಿಯೆ ಆರಂಭವಾಗಿದೆ. ಈ ಯೋಜನೆಯಡಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 25% ಉಚಿತ ಸೀಟುಗಳು ದುರ್ಬಲ ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ನೀಡಲಾಗುತ್ತದೆ.

ಪೋಷಕರು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದೊಳಗೆ ನೋಂದಣಿ ಮಾಡುವುದು ಕಡ್ಡಾಯ.

Karnataka RTE Admission RTE ಪ್ರವೇಶ 2026-27 ಮುಖ್ಯ ಮಾಹಿತಿ

ಕಾರ್ಯಕ್ರಮ ದಿನಾಂಕ
ಟ್ರಯಲ್ (Mock) ಅರ್ಜಿ ಅವಧಿ  18 ಏಪ್ರಿಲ್ 2026 ರಿಂದ 19 ಏಪ್ರಿಲ್ 2026
ಆನ್‌ಲೈನ್ ಅರ್ಜಿ ಆರಂಭ 21 ಏಪ್ರಿಲ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  17 ಮೇ 2026
ಲಾಟರಿ ಅರ್ಹರ ಪಟ್ಟಿ ಪ್ರಕಟಣೆ 22 ಮೇ 2026
ಮೊದಲ ಹಂತ ಸೀಟು ಹಂಚಿಕೆ 25 ಮೇ 2026
ಶಾಲಾ ಪ್ರವೇಶ (ಮೊದಲ ಹಂತ)  26 ಮೇ 2026 ರಿಂದ 08 ಜೂನ್ 2026
ಎರಡನೇ ಹಂತ ಸೀಟು ಹಂಚಿಕೆ 12 ಜೂನ್ 2026
ಶಾಲಾ ಪ್ರವೇಶ (ಎರಡನೇ ಹಂತ) 13 ಜೂನ್ 2026 ರಿಂದ 19 ಜೂನ್ 2026




Karnataka RTE Admission 25% ಸೀಟು ಮೀಸಲಾತಿ ವಿವರ

RTE ಅಡಿಯಲ್ಲಿ ಸೀಟುಗಳನ್ನು ನೆರೆಹೊರೆ (Neighborhood) ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ:

  1. ಗ್ರಾಮೀಣ ಪ್ರದೇಶಗಳು: ಸಂಬಂಧಿತ ಗ್ರಾಮ ವ್ಯಾಪ್ತಿ
  2. ನಗರ ಪ್ರದೇಶಗಳು: ನಗರಸಭೆ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆ ವ್ಯಾಪ್ತಿ (ಬೆಂಗಳೂರು ಸೇರಿ)

ಗಮನಿಸಿ: LKG/UKG ಮಾತ್ರ ಇರುವ ಶಾಲೆಗಳು, ಅಲ್ಪಸಂಖ್ಯಾತ ಸಂಸ್ಥೆಗಳು ಹಾಗೂ ಕೋರ್ಟ್ ಪ್ರಕರಣ ಇರುವ ಶಾಲೆಗಳು ಈ ಯೋಜನೆಗೆ ಒಳಪಡುವುದಿಲ್ಲ.

ಅರ್ಹತೆ (Eligibility Criteria)

ವಯೋಮಿತಿ (16.04.2025 ಪ್ರಕಾರ)

  1. LKG: 4 ರಿಂದ 6 ವರ್ಷ
  2. 1ನೇ ತರಗತಿ: 6 ರಿಂದ 8 ವರ್ಷ




ಅರ್ಹ ವರ್ಗಗಳು

ಕೆಳಗಿನ ವರ್ಗದ ಮಕ್ಕಳಿಗೆ ಆದ್ಯತೆ:

  • ಅನಾಥ ಮಕ್ಕಳು
  • ವಿಶೇಷ ಅಗತ್ಯಗಳಿರುವ ಮಕ್ಕಳು (CWSN)
  • HIV ಪೀಡಿತ ಮಕ್ಕಳು
  • ವಲಸೆ ಮತ್ತು ಬೀದಿ ಮಕ್ಕಳು
  • ಟ್ರಾನ್ಸ್‌ಜೆಂಡರ್ ಮಕ್ಕಳು
  • ಆತ್ಮಹತ್ಯೆ ಮಾಡಿದ ರೈತರ ಮಕ್ಕಳು (01.04.2015 ನಂತರ)

RTE Admission fee ಅರ್ಜಿ ಶುಲ್ಕ

ಸ್ವಯಂ ಆನ್‌ಲೈನ್ ಅರ್ಜಿ – ಉಚಿತ
ಬೆಂಗಳೂರು-One / ಕರ್ನಾಟಕ-One ಕೇಂದ್ರಗಳಲ್ಲಿ – ಸಾಮಾನ್ಯ ಸೇವಾ ಶುಲ್ಕ ಇರಬಹುದು



RTE Admission Important Document ಅಗತ್ಯ ದಾಖಲೆಗಳು

ಮಕ್ಕಳ ಮತ್ತು ಪೋಷಕರ ಆಧಾರ್ ಕಾರ್ಡ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ RD ಸಂಖ್ಯೆ
ವಿಶೇಷ ವರ್ಗದ ಪ್ರಮಾಣ ಪತ್ರ (ಅಗತ್ಯವಿದ್ದರೆ)

ಗಮನಿಸಿ: RD ಸಂಖ್ಯೆಯನ್ನು ನಮೂದಿಸಿದರೆ ಸಾಕು, ದಾಖಲೆ ಅಪ್‌ಲೋಡ್ ಅಗತ್ಯವಿಲ್ಲ.

RTE How to Apply ಅರ್ಜಿ ಸಲ್ಲಿಸುವ ವಿಧಾನ (How to Apply)

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. “RTE Admission 2026-27 Online Application” ಮೇಲೆ ಕ್ಲಿಕ್ ಮಾಡಿ
  3. ಮಕ್ಕಳ ಮತ್ತು ಪೋಷಕರ ವಿವರಗಳನ್ನು ನಮೂದಿಸಿ
  4. ಜಾತಿ ಮತ್ತು ಆದಾಯ ಪ್ರಮಾಣ ಪತ್ರದ RD ಸಂಖ್ಯೆ ನಮೂದಿಸಿ
  5. ನೆರೆಹೊರೆಯ ಶಾಲೆಗಳನ್ನು ಆಯ್ಕೆ ಮಾಡಿ
  6. ವಿಶೇಷ ದಾಖಲೆಗಳನ್ನು (ಅಗತ್ಯವಿದ್ದರೆ) ಅಪ್‌ಲೋಡ್ ಮಾಡಿ
  7. ಅರ್ಜಿಯನ್ನು ಸಲ್ಲಿಸಿ ಮತ್ತು ರಸೀದಿ ಡೌನ್‌ಲೋಡ್ ಮಾಡಿ
  8. SMS ಮೂಲಕ ಅಪ್ಡೇಟ್‌ಗಳನ್ನು ಪರಿಶೀಲಿಸಿ




RTE Admission Important Links  ಪ್ರಮುಖ ಲಿಂಕ್‌ಗಳು

ಆನ್‌ಲೈನ್ ಅರ್ಜಿ – Click Here
ಅಧಿಕೃತ ವೆಬ್‌ಸೈಟ್ – Click Here
ಅಧಿಸೂಚನೆ PDF – Click Here





FAQ – ಸಾಮಾನ್ಯ ಪ್ರಶ್ನೆಗಳು

ಕೊನೆಯ ದಿನಾಂಕ ಯಾವುದು?

17 ಮೇ 2026

ಯಾರು ಅರ್ಜಿ ಹಾಕಬಹುದು?

ದುರ್ಬಲ ಮತ್ತು ಹಿಂದುಳಿದ ವರ್ಗದ ಮಕ್ಕಳು

ಸೀಟು ಹಂಚಿಕೆ ಹೇಗೆ?

ಆನ್‌ಲೈನ್ ಲಾಟರಿ ಮೂಲಕ

ದಾಖಲೆ ಅಪ್‌ಲೋಡ್ ಅಗತ್ಯವೇ?

ಇಲ್ಲ, RD ಸಂಖ್ಯೆ ಸಾಕು

Leave a Reply

Your email address will not be published. Required fields are marked *