ನಿಮ್ಮನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ

ನಿಮ್ಮನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ “ವೇದಾಂತ” ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಆಚರಿಸಿದ “ಭಾಷಾ ಮಾಸಾಚರಣೆ”ಯ ಕಾರ್ಯಕ್ರಮಗಳ ವರದಿಯನ್ನು ಪ್ರಕಟಿಸುವಂತೆ “ಪ್ರಜಾವಾಣಿ” ದಿನಪತ್ರಿಕೆಯ ಸಂಪಾದಿಕರಿಗೆ ಮನವಿ ಪತ್ರ ಬರೆಯಿರಿ

ಮೈಸೂರು
24.03.2015

ಇಂದ
ವೇದಾಂತ
ರಾಮಕೃಷ್ಣ ವಿದ್ಯಾಶಾಲೆ
ಮೈಸೂರು

ಗೆ,

ಸಂಪಾದಕರು
ಪ್ರಜಾವಾಣಿ ದಿನಪತ್ರಿಕೆ
ಬೆಂಗಳೂರು

ಮಾನ್ಯರೇ,

ವಿಷಯ: ‘ಭಾಷಾ ಮಾಸಾಚರಣೆ’ಯ ಕಾರ್ಯಕ್ರಮದ ವರದಿಯನ್ನು ಪ್ರಕಟಿಸುವ ಬಗ್ಗೆ.

ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿ ಸಂಘದ (ಸೆಕ್ರೆಟರಿ) ಕಾರ್ಯದರ್ಶಿಯಾದ ನಾನು ಈ ಮೂಲಕ ತಮ್ಮಲ್ಲಿ ಮೇಲ್ಕಂಡ ವಿಷಯದ ಬಗ್ಗೆ ಅರಿಕೆ ಮಾಡಿಕೊಳ್ಳು ತಿದ್ದೇನೆ. ಈ ತಿಂಗಳ 15ನೇ ದಿನಾಂಕದಂದು ನಮ್ಮ ಶಾಲೆ ಯಲ್ಲಿ ಅದ್ದೂರಿಯಾಗಿ ‘ಭಾಷಾ ಮಾಸಾಚರಣೆ’ಯನ್ನು ಹಮ್ಮಿ ಕೊಂಡಿದ್ದೆವು. ಕಾರ್ಯಕ್ರಮವು ವೈವಿಧ್ಯತೆಯಿಂದ ಕೂಡಿತ್ತು. ರಸಪ್ರಶ್ನೆ, ಒಗಟುಗಳು, ಚಮತ್ಕಾರದ ಕವಿತೆಗಳು, ಜಾನಪದ ಹಾಡು, ಕೋಲಾಟ, ನೃತ್ಯ ಹೀಗೆ ಹತ್ತು ಹಲವಾರು ಕಾರ್ಯ ಕ್ರಮಗಳು ಸಭಿಕರ ಮನವನ್ನು ಸೆಳೆಯಿತು. ಇದರ ವರದಿ ಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದೇನೆ. ತಾವು ಇದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಮ್ರ ಪ್ರಾರ್ಥನೆ.

ಇಂತಿ ತಮ್ಮ ವಿಶ್ವಾಸಿ
ವೇದಾಂತ
ವಿದ್ಯಾರ್ಥಿ ಕಾರ್ಯದರ್ಶಿ

ಅಡಕ: ವರದಿಯ ಕಾಪಿ

Leave a Reply

Your email address will not be published. Required fields are marked *