Bidar Municipal Corporation Jobs 2026 | ಬೀದರ ಮಹಾನಗರ ಪಾಲಿಕೆ ಪೌರಕಾರ್ಮಿಕ ನೇಮಕಾತಿ 2026 – 264 ಹುದ್ದೆಗಳು ಅರ್ಜಿ ಆಹ್ವಾನ

 ಬೀದರ್ ಮಹಾನಗರ ಪಾಲಿಕೆ ಹಾಗೂ ಬಸವಕಲ್ಯಾಣ ನಗರಸಭೆಯಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಯಲ್ಲಿ ಹುದ್ದೆಗಳ ಸಂಖ್ಯೆ, ವಯೋಮಿತಿ, ವಿದ್ಯಾರ್ಹತೆ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಎಲ್ಲಾ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ಸರಳವಾಗಿ ಹಾಗೂ ವಿವರವಾಗಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಮಾಹಿತಿಯನ್ನು ಗಮನದಿಂದ ಓದಿ, ಸೂಚನೆಗಳಂತೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ

ನಗರ ಸ್ಥಳೀಯ ಸಂಸ್ಥೆ  ನೇರಪಾವತಿಯಲ್ಲಿ ಖಾಲಿ ಹುದ್ದೆಗಳು
ಬೀದರ ಮಹಾನಗರ ಪಾಲಿಕೆ 205
ಬಸವಕಲ್ಯಾಣ ನಗರಸಭೆ 59
ಒಟ್ಟು ಹುದ್ದೆಗಳು 264

Age Limit (ವಯೋಮಿತಿ)

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 50 ವರ್ಷ

Qualification (ವಿದ್ಯಾರ್ಹತೆ)

  • ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಕಡ್ಡಾಯವಿಲ್ಲ.
  • ಕನ್ನಡ ಭಾಷೆಯಲ್ಲಿ ಮಾತನಾಡಲು ತಿಳಿದಿರಬೇಕು.




Required Documents (ಅಗತ್ಯ ದಾಖಲೆಗಳು)

ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಲಗತ್ತಿಸಬೇಕು.

1. ಅರ್ಜಿ ನಮೂನೆ
ಸಂಪೂರ್ಣವಾಗಿ ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆ
2. ಭಾವಚಿತ್ರ
ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ

3. ವಯಸ್ಸಿನ ದಾಖಲೆ

ಈ ದಾಖಲೆಗಳಲ್ಲಿ ಯಾವುದಾದರೂ ಒಂದು:

  • ಆಧಾರ್ ಕಾರ್ಡ್
  • ಮತದಾರರ ಗುರುತಿನ ಚೀಟಿ (EPIC)
  • ಶಾಲಾ ದಾಖಲೆ
  • ರೇಷನ್ ಕಾರ್ಡ್
  • ಇತರೆ ಸರ್ಕಾರಿ ದಾಖಲೆ

4. ಅನುಭವದ ದಾಖಲೆ

ಕೆಳಗಿನ ಹುದ್ದೆಗಳಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಇದ್ದಲ್ಲಿ ದಾಖಲೆ ಸಲ್ಲಿಸಬೇಕು.

  • ಪೌರಕಾರ್ಮಿಕ
  • ಲೋಡರ್
  • UGD Helper
  • Cleaner
  • Helper
  • Zero Waste Unit
  • ಸಾರ್ವಜನಿಕ ಶೌಚಾಲಯ ಸಿಬ್ಬಂದಿ

ಅನುಭವ ದೃಢೀಕರಣಕ್ಕಾಗಿ:

  • ESI ದಾಖಲೆ
  • EPF ದಾಖಲೆ
  • ಬ್ಯಾಂಕ್ ಪಾಸ್‌ಬುಕ್
  • ಹಾಜರಾತಿ ದಾಖಲೆ

5. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪೌರಕಾರ್ಮಿಕರ ಕುಟುಂಬದ ಸದಸ್ಯರಿಗೆ

ಅರ್ಹ ದಾಖಲೆಗಳನ್ನು ಸಲ್ಲಿಸಬೇಕು.




How to Apply (ಅರ್ಜಿ ಸಲ್ಲಿಸುವ ವಿಧಾನ)

  1. ಬೀದರ ಮಹಾನಗರ ಪಾಲಿಕೆ ಕಾರ್ಯಾಲಯಕ್ಕೆ ಭೇಟಿ ನೀಡಿ.
  2. ನಿಗದಿತ ಅರ್ಜಿ ನಮೂನೆಯನ್ನು ಪಡೆಯಿರಿ.
  3. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
  4. ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  5. ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ.
  6. ಸಲ್ಲಿಸಿದ ಅರ್ಜಿಯ ಸ್ವೀಕೃತಿ ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ 

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಜುಲೈ 18, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 10, 2026

Bidar Municipal Corporation Important Links

ಅಧಿಕೃತ ಅಧಿಸೂಚನೆ :  ಶೀಘ್ರದಲ್ಲೇ / ಸಂಬಂಧಿತ ಕಚೇರಿಯಲ್ಲಿ ಲಭ್ಯ

ಅರ್ಜಿ ನಮೂನೆ :  ಬೀದರ ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಪಡೆಯಬಹುದು

Telegram & WhatsApp Buttons

Leave a Reply

Your email address will not be published. Required fields are marked *