Belagavi DCC Bank Recruitment 2026 || ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 104 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (BDCC Bank) ನೇಮಕಾತಿ 2026ಕ್ಕೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿವಿಧ ವೃಂದಗಳಲ್ಲಿ ಖಾಲಿ ಇರುವ ಒಟ್ಟು 104 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ.

ಈ ನೇಮಕಾತಿಯಲ್ಲಿ ದ್ವಿತೀಯ ದರ್ಜೆ ಗುಮಾಸರು, ಬಂದೂಕುಧಾರಿ (Gun Man) ಹಾಗೂ ಸಿಪಾಯಿ (Peons) ಹುದ್ದೆಗಳು ಸೇರಿವೆ. SSLC, ಪದವಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅನುಗುಣವಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರೆ ಅರ್ಹತೆಗಳನ್ನು ಪರಿಶೀಲಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

 




Belagavi DCC Bank  Job short information ಪ್ರಮುಖ ಮಾಹಿತಿ

ವಿವರ  ಮಾಹಿತಿ
ನೇಮಕಾತಿ ಸಂಸ್ಥೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬೆಳಗಾವಿ
ನೇಮಕಾತಿ ವರ್ಷ 2026
ಒಟ್ಟು ಹುದ್ದೆಗಳು 104
ನೇಮಕಾತಿ ವಿಧಾನ ನೇರ ನೇಮಕಾತಿ
ಅರ್ಜಿ ವಿಧಾನ ಆನ್‌ಲೈನ್
ಉದ್ಯೋಗ ಸ್ಥಳ ಬೆಳಗಾವಿ, ಕರ್ನಾಟಕ




Belagavi DCC Bank Job Details ಹುದ್ದೆಗಳ ವಿವರ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇಮಕಾತಿಯಲ್ಲಿ ಒಟ್ಟು 104 ಹುದ್ದೆಗಳು ಲಭ್ಯವಿವೆ.

1. ದ್ವಿತೀಯ ದರ್ಜೆ ಗುಮಾಸರು – 83 ಹುದ್ದೆಗಳು

ಹುದ್ದೆ: Second Division Clerks
ವೇತನ ಶ್ರೇಣಿ: ₹53,150 – ₹1,15,150
ಒಟ್ಟು ಹುದ್ದೆಗಳು: 83

ವಿದ್ಯಾರ್ಹತೆ
ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಳಗಿನ ಯಾವುದೇ ಪದವಿಯನ್ನು ಹೊಂದಿರಬೇಕು:

B.A,B.Sc,B.Com

ಅರ್ಜಿಯ ಕೊನೆಯ ದಿನಾಂಕದಂದು ಅಭ್ಯರ್ಥಿಯು ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರಬೇಕು.

2. ಬಂದೂಕುಧಾರಿ – 01 ಹುದ್ದೆ

ಹುದ್ದೆ: Gun Man
ವೇತನ ಶ್ರೇಣಿ: ₹47,650 – ₹1,05,650
ಒಟ್ಟು ಹುದ್ದೆ: 01

ವಿದ್ಯಾರ್ಹತೆ
SSLC / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಭಾರತೀಯ ಸಶಸ್ತ್ರ ಪಡೆಗಳಿಂದ ನಿವೃತ್ತರಾದ ಮಾಜಿ ಸೈನಿಕರಾಗಿರಬೇಕು.
ಚಾಲ್ತಿಯಲ್ಲಿರುವ Valid Arm License ಹೊಂದಿರಬೇಕು.

3. ಸಿಪಾಯಿ – 20 ಹುದ್ದೆಗಳು

ಹುದ್ದೆ: Peons
ವೇತನ ಶ್ರೇಣಿ: ₹42,650 – ₹96,650
ಒಟ್ಟು ಹುದ್ದೆಗಳು: 20

ವಿದ್ಯಾರ್ಹತೆ

ಅಭ್ಯರ್ಥಿಯು SSLC / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.




Belagavi DCC Bank Age Details ವಯೋಮಿತಿ – ಸಂಕ್ಷಿಪ್ತವಾಗಿ

ವಯೋಮಿತಿ: 27-08-2026ರಂತೆ

SC / ST / ಪ್ರವರ್ಗ-1 18–40 ವರ್ಷ
ಪ್ರವರ್ಗ-2A / 2B / 3A / 3B  18–38 ವರ್ಷ
ಸಾಮಾನ್ಯ ವರ್ಗ 18–35 ವರ್ಷ
ಕನಿಷ್ಠ ವಯಸ್ಸು 18 ವರ್ಷ
ಗರಿಷ್ಠ ವಯಸ್ಸು 35–40 ವರ್ಷ




ಬೆಳಗಾವಿ DCC ಬ್ಯಾಂಕ್ ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಖುದ್ದಾಗಿ, ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಲು ಅವಕಾಶವಿಲ್ಲ.

ಹಂತ 1

ಬೆಳಗಾವಿ DCC ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ತೆರೆಯಿರಿ.
BDCC Bank Recruitment 2026 ಆಯ್ಕೆ ಮಾಡಿ. ನೇಮಕಾತಿ ಅಧಿಸೂಚನೆ ಮತ್ತು ಸೂಚನೆಗಳನ್ನು ಸಂಪೂರ್ಣವಾಗಿ ಓದಿ.

ಹಂತ 2

ಅರ್ಜಿ ಸಲ್ಲಿಸಲು ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ Apply ಮೇಲೆ ಕ್ಲಿಕ್ ಮಾಡಿ.
ಅರ್ಜಿಯಲ್ಲಿ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ ಹಾಗೂ ಇತರೆ ವಿವರಗಳನ್ನು ಸರಿಯಾಗಿ ನಮೂದಿಸಿ.

ಹಂತ 3

ಎಲ್ಲಾ ವಿವರಗಳನ್ನು ಪರಿಶೀಲಿಸಿ Preview ಆಯ್ಕೆ ಮಾಡಿ.
ತಪ್ಪುಗಳಿದ್ದರೆ Edit ಮೂಲಕ ಸರಿಪಡಿಸಿ.

ಹಂತ 4

ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ಅಪ್‌ಲೋಡ್ ಮಾಡಿದ ನಂತರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ. Next ಒತ್ತಿದ ನಂತರ ಕೆಲವು ವಿವರಗಳನ್ನು ಬದಲಾಯಿಸಲು ಸಾಧ್ಯವಾಗದಿರುವುದರಿಂದ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಬೇಕು.

ಹಂತ 5

ಅಗತ್ಯವಿರುವ ಪ್ರಮಾಣ ಪತ್ರಗಳನ್ನು Self Attested ಮಾಡಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ಹಂತ 6

Pay Online ಆಯ್ಕೆ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.

ಹಂತ 7

ಅರ್ಜಿ ಪೂರ್ಣಗೊಂಡ ನಂತರ Print Application ಆಯ್ಕೆ ಮಾಡಿ ಅರ್ಜಿಯ ಪ್ರತಿಯನ್ನು Download ಮಾಡಿಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಭವಿಷ್ಯದಲ್ಲಿ ಬ್ಯಾಂಕ್ ಕೇಳಿದಲ್ಲಿ ಈ ಅರ್ಜಿಯ ಪ್ರತಿಯನ್ನು ಹಾಜರುಪಡಿಸಬೇಕಾಗಬಹುದು.




BDCC Bank  Date ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಪ್ರಾರಂಭ  27-07-2026
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-08-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 27-08-2026
ಪರೀಕ್ಷೆ ದಿನಾಂಕ ನಂತರ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಪ್ರವೇಶ ಪತ್ರ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ

BDCC Bank  link ಪ್ರಮುಖ ಲಿಂಕ್‌ಗಳು

ಅಧಿಕೃತ ವೆಬ್‌ಸೈಟ್:
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧಿಕೃತ ವೆಬ್‌ಸೈಟ್

ಅಧಿಕೃತ ನೇಮಕಾತಿ ಅಧಿಸೂಚನೆ PDF:
BDCC Bank Recruitment 2026 ಅಧಿಕೃತ ಅಧಿಸೂಚನೆ PDF

Telegram & WhatsApp Buttons

Leave a Reply

Your email address will not be published. Required fields are marked *