Imagine yourself as Abhinav a student of Sri Sharanabasaveshwar High School Kalaburagi

Imagine yourself as Abhinav a student of Sri Sharanabasaveshwar High School Kalaburagi : ನಿಮ್ಮನ್ನು ಕಲಬುರಗಿಯ ಶ್ರೀ ಶರಣಬಸವೇಶ್ವರ ಪ್ರೌಢ ಶಾಲೆಯ ‘ಅಭಿನವ’ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ಆಚರಿಸಿದ ‘ಸಂವಿಧಾನದ ದಿನಾಚರಣೆ’ಯ ಕಾರ್ಯಕ್ರಮದ ವರದಿಯನ್ನು ಪ್ರಕಟಿಸುವಂತೆ ಕೋರಿ ‘ವಿಜಯವಾಣಿ’ ದಿನಪತ್ರಿಕೆಯ ಸಂಪಾದಕರಿಗೆ ಮನವಿ ಪತ್ರ ಬರೆಯಿರಿ.

ಕಲಬುರುಗಿ
10.04.2016

ಇಂದ
ಅಭಿನವ
ಶ್ರೀಶರಣ ಬಸವೇಶ್ವರ ಪ್ರೌಢಶಾಲೆ,
ಕಲಬುರುಗಿ

ಗೆ,

ಸಂಪಾದಕರು,
ವಿಜಯವಾಣಿ ದಿನಪತ್ರಿಕೆ
ಬೆಂಗಳೂರು

 

ಮಾನ್ಯರೇ,

ವಿಷಯ: ನಮ್ಮ ಶಾಲೆಯಲ್ಲಿ ಆಚರಿಸಿದ ‘ಸಂವಿಧಾನದ ದಿನಾಚರಣೆ’ಯ ವರದಿಯ ಪ್ರಕಟಣೆಯ ಬಗ್ಗೆ.

ಮೇಲೆ ಪ್ರಸ್ತಾಪಿಸಲ್ಪಟ್ಟ ವಿಷಯದ ಕುರಿತು ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ನಮ್ಮ ಶಾಲೆಯಲ್ಲಿ ವೈಭವದಿಂದ ಆಚರಿಸಿದ ‘ಸಂವಿಧಾನದ ದಿನಾಚರಣೆ’ಯ ವರದಿಯನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಮ್ರವಾಗಿ ಪ್ರಾರ್ಥಿಸುತ್ತಿದ್ದೇನೆ. ಈ ವರದಿಯು ಇಂದಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಉತ್ತೇಜನ ಕೊಟ್ಟು ಅವರನ್ನು ಸಜ್ಜನರಾಗಿ, ಜವಾಬ್ದಾರಿಯುತ ಯುವ ನಾಗರೀಕರನ್ನಾಗಿ ಮಾಡುವುದು. ಈ ಪತ್ರದ ಜೊತೆಯಲ್ಲಿ ‘ವರದಿ’ಯ ಪ್ರತಿಯನ್ನು ಲಗತ್ತಿಸಿದ್ದೇನೆ. ನಮ್ಮ ಕೋರಿಕೆಯನ್ನು ಈಡೇರಿಸುವರಾಗಿ ನಂಬಿದ್ದೇನೆ.

ಧನ್ಯವಾದಗಳು

ಇಂತಿ ತಮ್ಮ ವಿಶ್ವಾಸಿ
  ಅಭಿನವ
ವಿದ್ಯಾರ್ಥಿ ಕಾರ್ಯದರ್ಶಿ

 

Leave a Reply

Your email address will not be published. Required fields are marked *