Karnataka Residential School Teacher Recruitment 2026 140 Post || ಕರ್ನಾಟಕ ವಸತಿ ಶಾಲಾ ಶಿಕ್ಷಕರ ನೇಮಕಾತಿ 2026: 140 ಹುದ್ದೆಗಳು

Karnataka Residential School Teacher Recruitment 2026 140 Post  : ಸಮಾಜ ಕಲ್ಯಾಣ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ವೃಂದ (HK) ಹಾಗೂ ಉಳಿಕೆ ಮೂಲ ವೃಂದ (RPC)ದಲ್ಲಿ ಖಾಲಿಯಿರುವ ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಅರ್ಹ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.




ನೇಮಕಾತಿಯ ಪ್ರಮುಖ ವಿವರಗಳು

ವಿವರ ಮಾಹಿತಿ
ನೇಮಕಾತಿ ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಇಲಾಖೆ ಸಮಾಜ ಕಲ್ಯಾಣ ಇಲಾಖೆ
ಹುದ್ದೆ ವಸತಿ ಶಾಲಾ ಶಿಕ್ಷಕರು
ಕಲ್ಯಾಣ ಕರ್ನಾಟಕ ಹುದ್ದೆಗಳು 40
ಉಳಿಕೆ ಮೂಲ ವೃಂದ ಹುದ್ದೆಗಳು 100
ಒಟ್ಟು ಹುದ್ದೆಗಳು 140
ವೇತನ ಶ್ರೇಣಿ ₹41,300 – ₹81,800
ನೇಮಕಾತಿ ವಿಧಾನ ಸ್ಪರ್ಧಾತ್ಮಕ ಪರೀಕ್ಷೆ
ಅರ್ಜಿ ವಿಧಾನ ಆನ್‌ಲೈನ್

ಹುದ್ದೆಗಳ ವಿವರ

1. ಕಲ್ಯಾಣ ಕರ್ನಾಟಕ ವೃಂದ (HK)

  • ವಸತಿ ಶಾಲಾ ಶಿಕ್ಷಕರು – 40 ಹುದ್ದೆಗಳು
  • ವೇತನ ಶ್ರೇಣಿ: ₹41,300 – ₹81,800

2. ಉಳಿಕೆ ಮೂಲ ವೃಂದ (RPC)

  • ವಸತಿ ಶಾಲಾ ಶಿಕ್ಷಕರು – 100 ಹುದ್ದೆಗಳು
  • ವೇತನ ಶ್ರೇಣಿ: ₹41,300 – ₹81,800

ಒಟ್ಟು ಹುದ್ದೆಗಳು: 140



Karnataka Residential School Teacher Qualifications ಶೈಕ್ಷಣಿಕ ಅರ್ಹತೆ

1ವಸತಿ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳಲ್ಲಿ ಒಂದನ್ನು ಹೊಂದಿರಬೇಕು:
ಕನಿಷ್ಠ 50% ಅಂಕಗಳೊಂದಿಗೆ PUC ಮತ್ತು 2 ವರ್ಷಗಳ Diploma in Elementary Education (D.El.Ed).

ಅಥವಾ

ಕನಿಷ್ಠ 50% ಅಂಕಗಳೊಂದಿಗೆ PUC ಮತ್ತು 4 ವರ್ಷಗಳ Bachelor in Elementary Education (B.El.Ed).

ಅಥವಾ

ಕನಿಷ್ಠ 50% ಅಂಕಗಳೊಂದಿಗೆ PUC ಮತ್ತು 2 ವರ್ಷಗಳ Diploma in Education (Special Education).

ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1 ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ PUCನಲ್ಲಿ ಕನಿಷ್ಠ 45% ಅಂಕಗಳ ಅವಶ್ಯಕತೆ ಅನ್ವಯಿಸುತ್ತದೆ.

Karnataka Residential School Teacher Age limits ವಯೋಮಿತಿ

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಸರ್ಕಾರದ ಆದೇಶದಂತೆ ಒಂದು ಬಾರಿಗೆ ಅನ್ವಯವಾಗುವ ರೀತಿಯಲ್ಲಿ ಗರಿಷ್ಠ ವಯೋಮಿತಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

ಅಭ್ಯರ್ಥಿಗಳ ವರ್ಗ ಗರಿಷ್ಠ ವಯೋಮಿತಿ
ಸಾಮಾನ್ಯ ಅರ್ಹತೆ 40 ವರ್ಷ
ಪ್ರವರ್ಗ 2A, 2B, 3A, 3B 43 ವರ್ಷ
SC / ST / ಪ್ರವರ್ಗ-1  45 ವರ್ಷ

Karnataka Residential School Teacher Pay scale ವೇತನ ಶ್ರೇಣಿ

ವಸತಿ ಶಾಲಾ ಶಿಕ್ಷಕರ ಹುದ್ದೆಗೆ ಪರಿಷ್ಕೃತ ರಾಜ್ಯ ವೇತನ ಶ್ರೇಣಿ:   ₹41,300 – ₹81,800




ಅರ್ಜಿ ಶುಲ್ಕ

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಶುಲ್ಕ ಪಾವತಿಸಬೇಕು.

ಅಭ್ಯರ್ಥಿಗಳ ವರ್ಗ ಶುಲ್ಕ
ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು  ₹750
SC / ST / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗ ₹500
ವಿಶೇಷ ಚೇತನ ಅಭ್ಯರ್ಥಿಗಳು ₹250

ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಸೂಕ್ತ.

  • PUC ಅಂಕಪಟ್ಟಿ / ಪ್ರಮಾಣಪತ್ರ
  • D.El.Ed / B.El.Ed / ಸಂಬಂಧಿತ ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ
  • TET ಪ್ರಮಾಣಪತ್ರ
  • SSLC ಪ್ರಮಾಣಪತ್ರ / ಜನ್ಮ ದಿನಾಂಕದ ದಾಖಲೆ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ, ಅನ್ವಯಿಸಿದಲ್ಲಿ
  • ಪ್ರವರ್ಗ ಪ್ರಮಾಣಪತ್ರ, ಅನ್ವಯಿಸಿದಲ್ಲಿ
  • ಅಂಗವಿಕಲತೆ ಪ್ರಮಾಣಪತ್ರ, ಅನ್ವಯಿಸಿದಲ್ಲಿ
  • ಮಾಜಿ ಸೈನಿಕ ಪ್ರಮಾಣಪತ್ರ, ಅನ್ವಯಿಸಿದಲ್ಲಿ
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಅಭ್ಯರ್ಥಿಯ ಸಹಿ
  • ಮಾನ್ಯ ಮೊಬೈಲ್ ಸಂಖ್ಯೆ
  • ಇ-ಮೇಲ್ ವಿಳಾಸ
  • ಆನ್‌ಲೈನ್ ಶುಲ್ಕ ಪಾವತಿಗೆ ಅಗತ್ಯವಿರುವ ಬ್ಯಾಂಕ್/UPI/ಕಾರ್ಡ್ ವಿವರಗಳು

 

ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಪ್ರಾರಂಭ 21-08-2026
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ 18-09-2026
ಶುಲ್ಕ ಪಾವತಿಸಲು ಕೊನೆಯ ದಿನ 19-09-2026

ಪ್ರಮುಖ ಲಿಂಕ್‌ಗಳು

ಕಲ್ಯಾಣ ಕರ್ನಾಟಕ ವೃಂದ (HK) : ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ 

ಉಳಿಕೆ ಮೂಲ ವೃಂದ (RPC) : ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ 

KEA ಅಧಿಕೃತ ವೆಬ್‌ಸೈಟ್: https://cetonline.karnataka.gov.in/kea/

ಆನ್‌ಲೈನ್ ಅರ್ಜಿ: KEA ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿಗೆ ಸಂಬಂಧಿಸಿದ Apply Online ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು.




Leave a Reply

Your email address will not be published. Required fields are marked *