Koppal Anganwadi Recruitment 2026 || ಕೊಪ್ಪಳ ಅಂಗನವಾಡಿ ನೇಮಕಾತಿ 215 ಹುದ್ದೆಗಳಿಗೆ ಅರ್ಜಿ ಆಹ್ವಾನ

Koppal Anganwadi Recruitment 2026 : ಕೊಪ್ಪಳ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿ 2026ಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲೆಯ 05 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 215 ಹುದ್ದೆಗಳನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಲಾಗುತ್ತದೆ.

ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

 





ಹುದ್ದೆಯ ವಿವರ

ವಿವರ ಮಾಹಿತಿ
ನೇಮಕಾತಿ ಇಲಾಖೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಜಿಲ್ಲೆ ಕೊಪ್ಪಳ
ಹುದ್ದೆಗಳು ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ
ಒಟ್ಟು ಹುದ್ದೆಗಳು 215
ಅಂಗನವಾಡಿ ಕಾರ್ಯಕರ್ತೆ 28
ಅಂಗನವಾಡಿ ಸಹಾಯಕಿ 187
ಅರ್ಜಿ ವಿಧಾನ ಆನ್‌ಲೈನ್

ಖಾಲಿ ಹುದ್ದೆಗಳ ವಿವರ

ಕ್ರ.ಸಂ ತಾಲೂಕ ಹೆಸರು ಕಾರ್ಯಕರ್ತೆ ಸಹಾಯಕಿ
1 ಯಲಬುರ್ಗಾ 07 24
2 ಗಂಗಾವತಿ 06 55
3 ಕನಕಗಿರಿ 04 35
4 ಕೊಪ್ಪಳ 08 51
5 ಕುಷ್ಟಗಿ 03 22
ಒಟ್ಟು 28 187

ವಿದ್ಯಾರ್ಹತೆ

 

1) ಅಂಗನವಾಡಿ ಕಾರ್ಯಕರ್ತೆ
ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು ಹತ್ತನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು

2) ಅಂಗನವಾಡಿ ಸಹಾಯಕಿ
ಹತ್ತನೇ ತರಗತಿ ಪಾಸಾಗಿರಬೇಕು (ಮಹಿಳೆಯಾಗಿರಬೇಕು ಮತ್ತು ಸ್ಥಳೀಯರಾಗಿರಬೇಕು)

ವಯಸ್ಸಿನ ಮಿತಿ : ಸಾಮಾನ್ಯ ವರ್ಗ 19 – 35 ವರ್ಷ ( ಮಿಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

 




ಅಗತ್ಯವಿರುವ ದಾಖಲೆಗಳು

ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಸೂಕ್ತ:

  1. ಆನ್‌ಲೈನ್ ಅರ್ಜಿ
  2. ಜನನ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕ ಇರುವ SSLC ಅಂಕಪಟ್ಟಿ
  3. ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ
  4. ತಹಶೀಲ್ದಾರ್/ಉಪ ತಹಶೀಲ್ದಾರ್ ನೀಡಿದ 3 ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ
  5. ಜಾತಿ ಪ್ರಮಾಣಪತ್ರ
  6. ಪತಿಯ ಮರಣ ಪ್ರಮಾಣಪತ್ರ ಹಾಗೂ ವಿಧವಾ ಪ್ರಮಾಣಪತ್ರ
  7. ಅಂಗವಿಕಲತೆ ಪ್ರಮಾಣಪತ್ರ
  8. ನ್ಯಾಯಾಲಯದಿಂದ ಪಡೆದ ವಿಚ್ಛೇದನ ಪ್ರಮಾಣಪತ್ರ
  9. ಮಾಜಿ ದೇವದಾಸಿಯರ ಮಕ್ಕಳಿಗೆ ಸಂಬಂಧಿಸಿದ ಪ್ರಮಾಣಪತ್ರ
  10. ಮಹಿಳಾ ನಿಲಯ/ಸುಧಾರಣಾ ಸಂಸ್ಥೆಯ ನಿವಾಸಿ ಪ್ರಮಾಣಪತ್ರ
  11. ಯೋಜನಾ ನಿರಾಶ್ರಿತರ ಬಗ್ಗೆ ತಹಶೀಲ್ದಾರ್ ನೀಡಿದ ಪ್ರಮಾಣಪತ್ರ
  12. ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ/ರೇಷನ್ ಕಾರ್ಡ್ ಅಥವಾ ಸಂಬಂಧಿಸಿದ ದೃಢೀಕರಣ ಪತ್ರ
  13. ಅಗತ್ಯವಿರುವ ಎಲ್ಲಾ ದಾಖಲೆಗಳ ದೃಢೀಕೃತ ಪ್ರತಿಗಳು




ಅಂಗನವಾಡಿ ನೇಮಕಾತಿಗೆ ಹೇಗೆ ಅರ್ಜಿ ಸಲ್ಲಿಸುವುದು?

ಅರ್ಹ ಅಭ್ಯರ್ಥಿಗಳು ಕೆಳಗಿನ ವಿಧಾನದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು:

ಹಂತ 1: ಕೊಪ್ಪಳ ಜಿಲ್ಲಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: Anganwadi Recruitment / ಅಂಗನವಾಡಿ ನೇಮಕಾತಿ ಸಂಬಂಧಿಸಿದ ಅಧಿಸೂಚನೆ ಅಥವಾ ಆನ್‌ಲೈನ್ ಅರ್ಜಿ ಲಿಂಕ್ ಹುಡುಕಿ.

ಹಂತ 3: ಅರ್ಜಿ ನಮೂನೆಯಲ್ಲಿ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ, ವಾಸಸ್ಥಳ ಮತ್ತು ಇತರ ಅಗತ್ಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

ಹಂತ 4: ಅಗತ್ಯವಿರುವ ದಾಖಲೆಗಳನ್ನು ಸೂಚಿಸಿರುವ ನಮೂನೆ ಮತ್ತು ಗಾತ್ರದಲ್ಲಿ ಅಪ್‌ಲೋಡ್ ಮಾಡಿ.

ಹಂತ 5: ಅರ್ಜಿ ಸಲ್ಲಿಸುವ ಮೊದಲು ನಮೂದಿಸಿರುವ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ.

ಹಂತ 6: ಅರ್ಜಿಯನ್ನು Submit ಮಾಡಿ.

ಹಂತ 7: ಸಲ್ಲಿಸಿದ ಅರ್ಜಿಯ ಪ್ರಿಂಟ್/ಸ್ವೀಕೃತಿ ಪ್ರತಿಯನ್ನು ಭವಿಷ್ಯದ ಬಳಕೆಗಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಅರ್ಜಿ ಆರಂಭ 25-08-2026
ಅರ್ಜಿ ಕೊನೆಯ ದಿನಾಂಕ 24-09-2026
ಅಧಿಕೃತ ವೆಬ್‌ಸೈಟ್ koppal.nic.in




ಪ್ರಮುಖ ಲಿಂಕ್‌ಗಳು (Important Links)

ಅಧಿಕೃತ ವೆಬ್‌ಸೈಟ್  : ಇಲ್ಲಿ ಕ್ಲಿಕ್ ಮಾಡಿ 
ಆನ್‌ಲೈನ್ ಅರ್ಜಿ : ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ಅಧಿಸೂಚನೆ :ಇಲ್ಲಿ ಕ್ಲಿಕ್ ಮಾಡಿ 

 

 

Telegram & WhatsApp Buttons

Leave a Reply

Your email address will not be published. Required fields are marked *