Raichur Zilla Panchayat Recruitment 2026 : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ರಾಯಚೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಖಾಲಿ ಹುದ್ದೆಗಳ ಭರ್ತಿಗಾಗಿ ಮರು ಅಧಿಸೂಚನೆ ಪ್ರಕಟಿಸಲಾಗಿದೆ.
ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ದಿನಾಂಕ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ನೇಮಕಾತಿಯ ಪ್ರಮುಖ ಮಾಹಿತಿ
| ಇಲಾಖೆ | ರಾಯಚೂರು ಜಿಲ್ಲಾ ಪಂಚಾಯತ್ |
| ಒಟ್ಟು ಹುದ್ದೆಗಳು | 5 |
| ಉದ್ಯೋಗ ಸ್ಥಳ | ರಾಯಚೂರು ಜಿಲ್ಲಾ ಪಂಚಾಯತ್ |
| ಅರ್ಜಿ ವಿಧಾನ: | Online ಮೂಲಕ |
Raichur Zilla Panchayat jobs ಹುದ್ದೆಗಳ ವಿವರ
| ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು | 05 |
ಖಾಲಿ ಇರುವ ಗ್ರಾಮ ಪಂಚಾಯತಿಗಳು
| ದೇವದುರ್ಗ ತಾಲೂಕು | ಮಸರಕಲ್ |
| ಮಾನವಿ ತಾಲೂಕು | ಭೋಗಾವತಿ |
| ರಾಯಚೂರು ತಾಲೂಕು | ಮರ್ಚಟಾಳ |
| ಸಿರವಾರ ತಾಲೂಕು | ಗಣದಿನ್ನಿ |
| ದೇವದುರ್ಗ ತಾಲೂಕು | ಜೇರಬಂಡಿ |
Raichur Zilla Panchayat Qualification ಶೈಕ್ಷಣಿಕ ಅರ್ಹತೆ
ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು.
- ದ್ವಿತೀಯ ಪಿಯುಸಿ (PUC) ಉತ್ತೀರ್ಣರಾಗಿರಬೇಕು.
- Certificate Course in Library Science ಪ್ರಮಾಣಪತ್ರ ಹೊಂದಿರಬೇಕು.
- ಕನಿಷ್ಠ 3 ತಿಂಗಳ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿರಬೇಕು.
ಗಮನಿಸಿ: ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೂ ಅದು ಹೆಚ್ಚುವರಿ ಅರ್ಹತೆಯಾಗಿ ಪರಿಗಣಿಸುವುದಿಲ್ಲ.
Raichur Zilla Panchayat Age ವಯೋಮಿತಿ
10-06-2026ರ ಅನ್ವಯ ಅಭ್ಯರ್ಥಿಗಳು ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು.
| ವರ್ಗ | ವಯೋಮಿತಿ |
| ಕನಿಷ್ಠ ವಯಸ್ಸು | 18 ವರ್ಷ |
| ಗರಿಷ್ಠ ವಯಸ್ಸು | 45 ವರ್ಷ |
| ಸಾಮಾನ್ಯ ಅಭ್ಯರ್ಥಿಗಳು | 40 ವರ್ಷ |
| OBC ಅಭ್ಯರ್ಥಿಗಳು | 43 ವರ್ಷ |
| SC / ST / ಪ್ರವರ್ಗ-1 | 45 ವರ್ಷ |
Raichur Zilla Panchayat Fees ಅರ್ಜಿ ಶುಲ್ಕ
| ವರ್ಗ | ಶುಲ್ಕ |
| ಸಾಮಾನ್ಯ ಅಭ್ಯರ್ಥಿಗಳು | ₹500 |
| OBC (2A, 2B, 3A, 3B) | ₹300 |
| SC / ST / ಪ್ರವರ್ಗ-1 / ಮಾಜಿ ಸೈನಿಕರು | ₹200 |
| ವಿಶೇಷ ಚೇತನ ಅಭ್ಯರ್ಥಿಗಳು | ₹100 |
ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ
ಈ ನೇಮಕಾತಿಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
- ಸಂಬಂಧಿತ ಗ್ರಾಮ ಪಂಚಾಯತಿಯ ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.
- ಅದೇ ತಾಲೂಕಿನ ಇತರೆ ಗ್ರಾಮ ಪಂಚಾಯತಿಯ ಅಭ್ಯರ್ಥಿಗಳಿಗೆ ಎರಡನೇ ಆದ್ಯತೆ.
- ಅಗತ್ಯ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ PUC ವಿದ್ಯಾರ್ಹತೆ ಹೊಂದಿದ ಸ್ಥಳೀಯ ಅಭ್ಯರ್ಥಿಗಳಿಗೆ ಮೂರನೇ ಆದ್ಯತೆ.
ಅಗತ್ಯ ದಾಖಲೆಗಳು
- SSLC ಅಂಕಪಟ್ಟಿ
- PUC ಅಂಕಪಟ್ಟಿ
- Library Science Certificate
- Computer Course Certificate
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
- ನಿವಾಸ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಸಹಿ
Raichur Zilla Panchayat important Date ಅರ್ಜಿ ಸಲ್ಲಿಕೆ ದಿನಾಂಕ
| ಅರ್ಜಿ ಆರಂಭ | 15 ಜುಲೈ 2026 |
| ಕೊನೆಯ ದಿನಾಂಕ | 29 ಜುಲೈ 2026 |
Raichur Zilla Panchayat Apply ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ Online ಮೂಲಕ ಅರ್ಜಿ ಸಲ್ಲಿಸಬೇಕು.
ಅಧಿಕೃತ : ಅದಿಸೂಚನೆ
ಅಧಿಕೃತ ವೆಬ್‌ಸೈಟ್: https://zpraichur.karnataka.gov.in/kn

